ದುಬೈನಲ್ಲಿ ಕನ್ನಡ ಸಂಗೀತ ಸೌರಭ, ಸಂಗೀತ ಕಟ್ಟಿ ಸುಮಧುರ ಗಾಯನ
ಬೆಂಗಳೂರು, ಮಾರ್ಚ್ 27: ಕನ್ನಡಿಗರು ದುಬೈ ಸಂಘವು ದುಬೈನಲ್ಲಿ ಮಾರ್ಚ್ 29ರಂದು ಸಂಗೀತ ಸೌರಭ ಕಾರ್ಯಕ್ರಮವನ್ನು ಏರ್ಪಡಿಸಿದೆ.
ಕ್ರೆಡೆನ್ಸ್ ಹೈಸ್ಕೂಲ್ ಅಲ್ಕೂಝ್ ನಲ್ಲಿ ಕಾರ್ಯಕ್ರಮ ನಡೆಯಲಿದೆ. ಗಾನ ಕೋಗಿಲೆ ಸಂಗೀತ ಕಟ್ಟಿಯವರಿಂದ ಗಾಯನ, ಮೈಸೂರಿನ ಮಿಮಿಕ್ರಿ ರಮೇಶ್ ಬಾಬು ಅವರಿಂದ ಮಿಮಿಕ್ರಿ ಕಾರ್ಯಕ್ರಮ ನಡೆಯಲಿದೆ.

ಪ್ರವೇಶ ಶುಲ್ಕ 30 ರೂ ಇರಲಿದ್ದು ಮಕ್ಕಳಿಗೆ ಪ್ರವೇಶ ಉಚಿತವಾಗಿರಲಿದೆ. ಮಾರ್ಚ್ 29ರಂದು ಸಂಜೆ 6 ಗಂಟೆಯಿಂದ ಕಾರ್ಯಕ್ರಮ ಆರಂಭವಾಗಲಿದ್ದು, ರಾತ್ರಿ 10ರವರೆಗೆ ನಡೆಯಲಿದೆ.












Click it and Unblock the Notifications