'ಮಿತ್ತಬೈಲು ಯಮುನಕ್ಕ' ಕಾದಂಬರಿ ಕುವೈತ್ ನಲ್ಲಿ ಲೋಕಾರ್ಪಣೆ
ಡಾ. ಡಿ. ಕೆ. ಚೌಟ ಅವರ ತುಳು ಕಾದಂಬರಿ, ಡಾ. ಬಿ. ಸುರೇಂದ್ರ ರಾವ್ ಮತ್ತು ಪ್ರೊ. ಕೆ. ಚಿನ್ನಪ್ಪ ಗೌಡ ಅವರು ಅನುವಾದಿಸಿರುವ 'ಮಿತ್ತಬೈಲು ಯಮುನಕ್ಕ' ಇಂಗ್ಲಿಷ್ ಕಾದಂಬರಿಯು 2018ರ ಮಾರ್ಚ್ 16, ಶುಕ್ರವಾರ ಸಂಜೆ ಕುವೈಟ್ ನ ಮಿಶ್ರೇಪ್ ಗಾರ್ಡನ್ ನಲ್ಲಿ ಲೋಕಾರ್ಪಣೆಗೊಂಡಿತು.
ತುಳು ಕೂಟ ಕುವೈತ್ ಈ ಪುಸ್ತಕ ಬಿಡುಗಡೆಯ ಕಾರ್ಯಕ್ರಮವನ್ನು ಆಯೋಜಿಸಿತ್ತು. ಬಂಟರ ಸಂಘ ಕುವೈತ್, ಜಿ. ಎಸ್ .ಬಿ. ಸಭಾ, ಕುವೈತ್, ಕುವೈತ್ ಸಾಹಿತ್ಯ ಸಂಪದ, ಭಾರತೀಯ ಪ್ರವಾಸಿ ಪರಿಷತ್ ಇವರು ಸಹಯೋಗ ನೀಡಿದ್ದರು.
ತುಳುಕೂಟದ ಅಧ್ಯಕ್ಷ ವಿಲ್ಸನ್ ಡಿಸೋಜ ಮತ್ತು ಕುವೈತ್ ಜಿ.ಎಸ್.ಬಿ. ಸಭಾದ ಮಂಜೇಶ್ವರ ಮೋಹನದಾಸ್ ಕಾಮತ್ ಈ ಕಾರ್ಯಕ್ರಮ ಆಯೋಜಿಸುವಲ್ಲಿ ತುಂಬಾ ಶ್ರಮವಹಿಸಿದ್ದಾರೆ. ಅವರಿಗೆ ಮತ್ತು ಸಹಯೋಗ ನೀಡಿದ ಕುವೈತ್ ನ ಸಂಸ್ಥೆಗಳಿಗೆ ಆಕೃತಿ ಆಶಯ ಪಬ್ಲಿಕೇಷನ್ಸ್ ನ ಪರವಾಗಿ ತುಂಬು ಹೃದಯದ ಕೃತಜ್ಞತೆಗಳು.

ಕುವೈತ್ ತುಳು ಕೂಟದ ಪ್ರವಾಸಿ ದಿನಾಚರಣೆಯ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು ನಾಲ್ಕು ನೂರಕ್ಕೂ ಮಿಕ್ಕು ಕುವೈತ್ ವಾಸಿ ಭಾರತೀಯರು ಭಾಗವಹಿಸಿದ್ದರು.












Click it and Unblock the Notifications