ಕ್ಯಾನ್ಸರ್ ಫೌಂಡೇಷನ್‌ಗಾಗಿ 'ರಾಗ'ದಿಂದ ಸಂಗೀತ ಸಂಜೆ

ಅಮೆರಿಕದಲ್ಲಿರುವ ಕನ್ನಡ ಕೂಟ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಈಗ ಸಂಗೀತದ ಸಮಯ. ಬೇ ಏರಿಯಾದ ಖ್ಯಾತ ಕನ್ನಡ ಬ್ಯಾಂಡ್ 'ರಾಗ' ಕೆಕೆಎನ್‌ಸಿ ಕನ್ನಡಿಗರನ್ನು ಮೇ 16ರ ಶುಕ್ರವಾರ ಸಂಜೆ 5 ಗಂಟೆಗೆ ಸಂಗೀತದ ಅಲೆಯಲ್ಲಿ ತೇಲಿಸಿಕೊಂಡು ಹೋಗಲಿದೆ.

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಈ ಸಂಗೀತ ಸಂಜೆಯಿಂದ ಬಂದ ಹಣವನ್ನು ಶ್ರೀ ಶಂಕರ್ ಕ್ಯಾನ್ಸರ್ ಫೌಂಡೇಷನ್ ಗೆ ನೀಡಲಾಗುತ್ತಿದೆ. ಸಂಗೀತ ಪ್ರೇಮಿಗಳು ಬಂದು ಸುಮಧುರವಾದ ಸಂಗೀತ ಆಲಿಸುವುದು ಮಾತ್ರವಲ್ಲ, ಸಮಾಜಸೇವೆಯ ಕಾರ್ಯದಲ್ಲಿಯೂ ಭಾಗಿಯಾಗಬಹುದು.

ಸಂಗೀತ ಸಂಜೆ ನಡೆಯುವ ಸ್ಥಳ : Sequoia High School - Carrington Hall, Brewster Ave, Redwood City CA 94062. ಟಿಕೆಟ್ಟಿಗಾಗಿ ಇಲ್ಲಿ ಕ್ಲಿಕ್ಕಿಸಿ. ಈ ಸಂಗೀತ ಸಂಜೆಗೆ ಈಗಾಗಲೆ 500ಕ್ಕೂ ಹೆಚ್ಚು ಟಿಕೆಟ್ಟುಗಳು ಮಾರಾಟವಾಗಿವೆ. ಬಾಲ್ಕನಿ ಟಿಕೆಟ್ ಗಳು ಬಿಕರಿಯಾಗಿವೆ.

KKNC presents Nenapina Doni by Raaga Kannada band

ಆಟೋ ತಜ್ಞರ ಜೊತೆ ಭೇಟಿ

ಹೊಸ ಕಾರು ಖರೀದಿ ಮಾಡಿದರೆ ಮೂರು ವರ್ಷ ಫ್ಯಾಕ್ಟರಿ ಗ್ಯಾರಂಟಿ ಇರುತ್ತದೆ. ಆಮೇಲೆ ರಿಪೇರಿಗೆ ಬಂದರೆ? ಹಳೆಯ ಸೆಕೆಂಡ್ ಹ್ಯಾಂಡ್ ಕಾರು/ವ್ಯಾನು ತೆಗೆದುಕೊಂಡಾಗ ಓಡುವಷ್ಟು ದಿನ ನಿಮ್ಮ ಪುಣ್ಯ. ರಿಪೇರಿಗೆ ಬಂದರೆ ಏನು ಮಾಡುವುದು? [ಅಮೆರಿಕಾದಲ್ಲೂ ಹೊಸ ಕಾರಿಗೆ ಭಾರಿ ಪೂಜೆ!]

ಕಾರು/ವ್ಯಾನುಗಳನ್ನೂ ಸಮಯಕ್ಕೆ ಸರಿಯಾಗಿ ನೋಡಿಕೊಂಡರೆ ದೊಡ್ಡ ರಿಪೇರಿಗೆ ಅವಕಾಶವಿರುವುದಿಲ್ಲಾ. ಇಂಟರ್ನೆಟ್ ನಲ್ಲಿ ಓದಿ ತಿಳಿದುಕೊಳ್ಳಬಹುದು. ಅದಕ್ಕಿಂತ ಹೆಚ್ಚಾಗಿ ಆಟೋ ತಜ್ಞರ ಬಳಿ ತಿಳಿದುಕೊಳ್ಳಬಹುದು.

ಕನ್ನಡ ಕೂಟ ತನ್ನ ಸದಸ್ಯರಿಗೆ "ಆಟೋ ತಜ್ಞರ ಜೊತೆ ಭೇಟಿ" ಕಾರ್ಯಕ್ರಮ ಹಮ್ಮಿಕೊಂಡಿದೆ. ನಿಮಗೆ ಇಷ್ಟವಿದ್ದಲ್ಲಿ ಈ ಗೂಗಲ್ ಫಾರ್ಮ್ನಲ್ಲಿ ನಿಮ್ಮ ಹೆಸರು ಕೊಡಿ. ಎಷ್ಟು ಜನ ಬರುವರು ಎಂದು ಗೊತ್ತಾದರೆ ಕಾರ್ಯಕ್ರಮಕ್ಕೆ ಅಣಿ ಮಾಡಿಕೊಳ್ಳುವುದು ಸುಲಭ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+