ದ.ಕ್ಯಾ ಕರ್ನಾಟಕ ಸಾಂಸ್ಕೃತಿಕ ಸಂಘದ ಹೊಸ ತಂಡ
ನವಲತ್ತೆರಡು ವರ್ಷಗಳ ಭವ್ಯ ಇತಿಹಾಸವಿರುವ ದಕ್ಷಿಣ ಕ್ಯಾಲಿಫೋರ್ನಿಯಾದ ಕರ್ನಾಟಕ ಸಾಂಸ್ಕೃತಿಕ ಸಂಘದ 2014-16ನೇ ಸಾಲಿಗೆ ವಲ್ಲೀಶ ಶಾಸ್ತ್ರಿ ಅವರ ನೇತೃತ್ವದ ಹೊಸ ಸಮಿತಿ ರಚಿತಗೊಂಡಿದೆ. ಕರ್ನಾಟಕ ಸಾಂಸ್ಕೃತಿಕ ಸಂಘ ಸ್ಥಾಪನೆಯಾಗಿದ್ದು 1972ರಲ್ಲಿ.
ಅಧ್ಯಕ್ಷರಾಗಿ ವಲ್ಲೀಶ ಶಾಸ್ತ್ರಿ, ಉಪಾಧ್ಯಕ್ಷರಾಗಿ ರವೀಶ್ ರಾಮಲಿಂಗಪ್ಪ, ಕಾರ್ಯದರ್ಶಿಯಾಗಿ ದೀಪಾ ಶ್ರೀನಿವಾಸ್, ಖಜಾಂಚಿಯಾಗಿ ಶಾಂತಳ ಅಹನ್ಯ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮುರಳಿ ಬಿ.ಎಲ್, ಯುವ ಸಂಚಾಲಕರಾಗಿ ಮುರಳಿ ನಾಡಿಗ್, ಧ್ವನಿ ಹಾಗೂ ಬೆಳಕು ಸಂಚಾಲಕರಾಗಿ ವೆಂಕಟೇಶ್ ಎಂ.ಸಿ. ಹಾಗೂ ದಾನಕಾರ್ಯಗಳ ಸಂಚಾಲಕರಾಗಿ ಶಲ್ವ ಕೃಷ್ಣಮೂರ್ತಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷರು ತಮ್ಮ ಒಪ್ಪಿಗೆ ಪತ್ರದಲ್ಲಿ, ದಕ್ಷಿಣ ಕನ್ನಡದ ಕನ್ನಡಿಗರ ಸೇವೆ ಮಾಡಲು ಅವಕಾಶ ಕೊಟ್ಟ ವಿಶಸ್ತ ಮಂಡಳಿಯವರಿಗೂ, ಹೊಸ ಕೆಲಸ ಮಾಡಲು ಮಾರ್ಗದರ್ಶನ ನೀಡುತ್ತಿರುವ ಮಾಜಿ ಪದಾಧಿಕಾರಿಗಳಿಗೂ ವಂದನೆಗಳನ್ನು ಅರ್ಪಿಸುತ್ತಾ, ಹೊಸ ತಂತ್ರಜ್ಞತೆಗಳನ್ನು ಉಪಯೋಗಕ್ಕೆ ತಂದು ಸಂಘವನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುವ ಯೋಜನೆ ಇದೆ ಎಂದು ತಿಳಿಸಿದ್ದಾರೆ.

ವಲ್ಲೀಶ ಶಾಸ್ತ್ರಿ
ಅಧ್ಯಕ್ಷರಾಗಿ ವಲ್ಲೀಶ ಶಾಸ್ತ್ರಿ

ರವೀಶ್ ರಾಮಲಿಂಗಪ್ಪ
ಉಪಾಧ್ಯಕ್ಷರಾಗಿ ರವೀಶ್ ರಾಮಲಿಂಗಪ್ಪ

ದೀಪಾ ಶ್ರೀನಿವಾಸ್
ಕಾರ್ಯದರ್ಶಿಯಾಗಿ ದೀಪಾ ಶ್ರೀನಿವಾಸ್

ಶಾಂತಳ ಅಹನ್ಯ
ಖಜಾಂಚಿಯಾಗಿ ಶಾಂತಳ ಅಹನ್ಯ

ಮುರಳಿ ಬಿ ಎಲ್
ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮುರಳಿ ಬಿ ಎಲ್

ಮುರಳಿ ನಾಡಿಗ್
ಯುವ ಸಂಚಾಲಕರಾಗಿ ಮುರಳಿ ನಾಡಿಗ್

ವೆಂಕಟೇಶ್ ಎಂ.ಸಿ
ಧ್ವನಿ ಹಾಗೂ ಬೆಳಕು ಸಂಚಾಲಕರಾಗಿ ವೆಂಕಟೇಶ್ ಎಂ.ಸಿ

ಶಲ್ವ ಕೃಷ್ಣಮೂರ್ತಿ
ದಾನಕಾರ್ಯಗಳ ಸಂಚಾಲಕರಾಗಿ ಶಲ್ವ ಕೃಷ್ಣಮೂರ್ತಿ











Click it and Unblock the Notifications