• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕದ ಅಸಾಧ್ಯ ಚಳಿಗಾಳಿಯನ್ನು ತಡೆಯಲು 10 ಉಪಯುಕ್ತ ಟಿಪ್ಸ್

By ರಾಮ್ ಪ್ರಸಾದ್
|

ಇನ್ನೆರಡು ದಿನ ಅಮೆರಿಕಾದ ಮಧ್ಯ ಪಶ್ಚಿಮ ಭಾಗವಾದ ಇಲಿನಾಯ್, ಓಹಿಯೋ ಮುಂತಾದ ಕಡೆ ಚಳಿ ಮಾರುತ ಬೀಸಿದ್ದು, ಸುಮಾರು ಇಪ್ಪತ್ತು ವರುಷಗಳಿಂದ ಕಾಣದ ಕನಿಷ್ಠ ತಾಪಮಾನ ಎದುರಾಗುವ ಬಗ್ಗೆ ಅಮೆರಿಕಾದ ವಾತಾವರಣ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಶರದ್ ಋತು ಆಗಮನ, ದೇಶದ 10 ಅತಿ ಹೆಚ್ಚು ಶೀತ ಪ್ರದೇಶಗಳಿವು

ಕೆಲವು ಕಡೆಗಳಲ್ಲಿ ತಾಪಮಾನ -40ಕ್ಕೆ ತಗ್ಗುವ ಸಂಭವ ಇದೆ. ಇಂತಹ ವಿಪರೀತ ಚಳಿಯಿಂದ ಸರಿಯಾಗಿ ರಕ್ಷಣೆ ಪಡೆಯದಿದ್ದರೆ, ಕ್ಷಣಗಳಲ್ಲಿ ಫ್ರಾಸ್ಟ್ ಬೈಟ್ ಆಗುವ ಸಂಭವ ಇದೆ ಎಂದು ಸಿಎನ್ಏನ್ ಸಂಸ್ಥೆಯ ವಾತಾವರಣ ತಜ್ಞರು ಎಚ್ಚರಿಸಿದ್ದಾರೆ.

ಅಮೆರಿಕಾದ ಈ ಭಾಗದ ಮನೆಗಳನ್ನು ಕಟ್ಟುವಾಗ ಅಸಾದ್ಯ ಛಳಿಯ ಕೊರೆತವನ್ನು ತಡೆಯುವಂತೆ ನಿರ್ಮಿಸಲಾಗಿದೆ. ಆದರೂ, ಈಗ ಎದುರಾಗಿರುವ ಕೇಳರಿಯದ ಚಳಿಯನ್ನು ಎದುರಿಸುವುದು ಕಷ್ಟವಾಗಬಹುದೆಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಉತ್ತರ ಧ್ರುವದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಇಂಥ ತೀವ್ರತರ ವಾತಾವರಣ ಸೃಷ್ಟಿಯಾಗಿದೆ.

ಆರು ವರ್ಷಗಳಲ್ಲೇ ಜನವರಿಯಲ್ಲಿ ಅಧಿಕ ಚಳಿ ಕಂಡ ಬೆಂಗಳೂರು

ಎಲ್ಲೆಡೆ ವಿಪರೀತ ಹಿಮ ಸುರಿಯುತ್ತಿದ್ದು, ಮನೆ, ರಸ್ತೆ, ವಾಹನಗಳನ್ನೆಲ್ಲ ಹಿಮ ಮುಚ್ಚಿಹಾಕಿದೆ. ಇಲಿನಾಯ್, ಮಿಷಿಗನ್ ಮುಂತಾದೆಡೆಗಳಲ್ಲೆಲ್ಲ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಒಟ್ಟಾರೆ 5.5 ಕೋಟಿಗೂ ಹೆಚ್ಚು ಜನ ಈ ಚಳಿಗಾಳಿಯಿಂದ ಬಾಧಿತರಾಗಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಈ ಚಳಿಯ ದುಷ್ಪರಿಣಾಮವನ್ನು ಆದಷ್ಟು ಕಡಿಮೆಗೊಳಿಸಲು ಈ ಕೆಳಗಿನ ಮುಂಜಾಗ್ರತಾ ಕ್ರಮಗಳು ಸಹಾಯ ಆಗಬಹುದು.

1. ನಿಮ್ಮ ಮನೆಯ ಒಳಗಿನ ತಾಪಮಾನವನ್ನು ಮುಂಚಿತವಾಗಿ 2 ಡಿಗ್ರಿಗಳಷ್ಟು ಹೆಚ್ಚಿಸಿಡಿ.

2. ಮನೆಯಲ್ಲಿರುವ ಫರ್ನೇಸೈನ ಫಿಲ್ಟರುಗಳನ್ನು ಬದಲಿಸಿ.

ಕರಾವಳಿಯಲ್ಲಿ ಮುಂಜಾನೆ ಮಂಜು, ತಂಪೆರೆದ ಇಬ್ಬನಿ

3. ಮನೆಯಲ್ಲಿರುವ ಎಲ್ಲ ಕಿಟಕಿ ಬಾಗಿಲುಗಳಲ್ಲಿ ಹೊರಗಿನ ಚಳಿ ಪ್ರವೇಶಿಸಬಹುದಾದ ಸಣ್ಣ ಪುಟ್ಟ ರಂದ್ರಗಳಿದ್ದರೆ ಅವುಗಳನ್ನು, ಅದಕ್ಕೆಂದೇ ದೊರೆಯುವ ಪ್ಲಾಸ್ಟಿಕ್ ಶೀಟುಗಳಿಂದ ಮುಚ್ಚಿರಿ.

4. ಗ್ಯಾರೇಜು ಬಾಗಿಲುಗಳನ್ನು ಆದಷ್ಟು ಮುಚ್ಚೇ ಇರಿ.

5. ಮನೆಯಿಂದ ಹೊರಗೆ ಹೋಗಿಬರವುದನ್ನು ಆದಷ್ಟು ನಿಯಂತ್ರಿಸಿ.

6. ವೆಂಟಿಲೇಟರ್ (ಗವಾಕ್ಷಿ) ಗಳಲ್ಲಿ ಯಾವುದೇ ಅದೇ ತಡೆ ಇಲ್ಲದಂತೆ ನೋಡಿಕೊಳ್ಳಿ.

7. ನಿಮ್ಮ ಮನೆಯ ತಾಪಮಾಪಕ ಸರಿ ಇದೆ ಎಂದು ಖಾತ್ರಿ ಮಾಡಿಕೊಳ್ಳಿ.

8. ಮನೆಯಲ್ಲಿ ಅಡುಗೆ ಮಾಡಲು ಇರುವ ಓವನ್ ಅಥವಾ ಒಲೆಯನ್ನು, ಮನೆಯ ತಾಪ ಹೆಚ್ಚಿಸಲು ಬಳಸಬೇಡಿ.

9. ಮನೆಯ ತಾಪ ಕಮ್ಮಿಯಾಗದಂತೆ ಮಾಡಲು ನೀರನ್ನು ಕುದಿಸುವುದು, ಸೂಪ್ ಮಾಡಿಕೊಳ್ಳುವುದು ಅಥವಾ ಹ್ಯುಮಿಡಿಫಯರ್ ಬಳಸುವುದು ಮಾಡುವುದರಿಂದ ಮನೆಯ ಆರ್ದ್ರತೆ ಹೆಚ್ಚಿ ಮನೆಯ ಉಷ್ಣಾಂಶ ತಕ್ಕಮಟ್ಟಿಗೆ ಹೆಚ್ಚಿಸುತ್ತದೆ.

10. ನೀರಿನ ಕೊಳವೆಗಳು ಹೆಪ್ಪುಗಟ್ಟಿ ಒಡೆಯದಂತೆ ಮಾಡಲು, ಮನೆಯಲ್ಲಿರುವ ಕೊಳಾಯಿಗಳಲ್ಲಿ ಸ್ವಲ್ಪ ಸ್ವಲ್ಪ ನೀರು ತೊಟ್ಟಿಕ್ಕುವಂತೆ ಮಾಡಿ.

ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ನೆರೆ ಹೊರೆಯಲ್ಲಿರುವ ವಯಸ್ಸಾದ ಹಿರಿಯರಿದ್ದರೆ, ಅವರು ಕ್ಷೇಮವಾಗಿದ್ದಾರೆ ಎಂದು ಖಾತ್ರಿಮಾಡಿಕೊಳ್ಳಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Extreme cold in USA due to low pressure in polar vortex : 10 tips by Ram Prasad to protect children, elders from this cold weather. Many places are witnessing minus degree temperature in America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more