• search

ಅರಬರ ಸುಂದರ ಮರುಭೂಮಿಯಲ್ಲಿ ಕನ್ನಡದ ತಂಪಾದ ಗಾಳಿ

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಕನ್ನಡಿಗರು ದುಬೈ ವತಿಯಿಂದ ಈ ಬಾರಿಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು 9ನೇ ನವೆಂಬರ್ 2018ರಂದು ದುಬಾಯಿಯ ಆಲ್ಕೂಝಿನಲ್ಲಿರುವ ಕ್ರೆಡೆನ್ಸ್ ಹೈ ಸ್ಕೂಲ್ ಸಭಾಂಗಣದಲ್ಲಿ ಪ್ರೇಷಿಯಸ್ ಪಾರ್ಟೀಸ್ ಅಂಡ್ ಎಂಟರ್ಟೈನ್ಮೆಂಟ್ ಸಹಯೋಗದೊಂದಿಗೆ ಆಯೋಜಿಸಲಾಗಿದೆ.

  ದೀಪಾವಳಿ ವಿಶೇಷ ಪುರವಣಿ

  ಕನ್ನಡದ ಹೆಸರಾಂತ ಕವಿಗಳು, ಬರಹಗಾರರು, ವಾಗ್ಮಿಗಳು ಹಾಗೂ ಕರ್ನಾಟದ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಅನೇಕ ಗಣ್ಯರು ಈ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

  ದುಬೈಯಲ್ಲಿ ಅದ್ದೂರಿಯಾಗಿ ನಡೆದ ಯುಎಇ ದಸರಾ ಕ್ರೀಡಾಕೂಟ

  ಕನ್ನಡಿಗರು ದುಬೈ ನಡೆಸಿಕೊಡುತ್ತಿರುವ ಈ 63ನೇ ಕನ್ನಡ ರಾಜ್ಯೋತ್ಸವ, ಕನ್ನಡಿಗರು ದುಬೈ ಸಂಘದ ಅಧ್ಯಕ್ಷರಾದ ಸದನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಮೇಲೆ ತಿಳಿಸಿದ ದಿನಾಂಕದಂದು ಸಂಜೆ 5:30ಕ್ಕೆ ಪ್ರಾರಂಭವಾಗಲಿದೆ.

  Actor Ravichandran to be felicitated at Kannada Rajyotsava in Dubai

  ಮುಖ್ಯ ಅತಿಥಿಗಳಾದ 'ತಾಂಬೂಲ ಜ್ಯೋತಿಷಿ' ಎಂದು ಪ್ರಖ್ಯಾತರಾಗಿರುವ ಶ್ರೀ ಶ್ರೀ ರವಿಶಂಕರ ಗುರೂಜಿ ಅವರಿಂದ ದೀಪ ಮೊಳಗಿಸುವ ಶುಭ ಕಾರ್ಯದೊಂದಿಗೆ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ತದನಂತರ ಯುನೈಟೆಡ್ ಅರಬ್ ಎಮಿರೇಟ್ಸ್ ರಾಷ್ಟ್ರಗೀತೆ, ಭಾರತೀಯ ರಾಷ್ಟ್ರಗೀತೆ ಹಾಗೆ ಕರ್ನಾಟಕದ ನಾಡಗೀತೆ, ಮುಖ್ಯ ಅತಿಥಿಗಳಿಂದ ಹಿತವಚನ ಹಾಗೂ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

  ಅಬುಧಾಬಿಯಲ್ಲಿ ವಿಜೃಂಭಿಸಿದ ಕನ್ನಡ ರಾಜ್ಯೋತ್ಸವ

  ಪ್ರತೀ ವರ್ಷವೂ ಕನ್ನಡಿಗರು ದುಬೈ ಸಂಸ್ಥೆಯು ಕನ್ನಡ ಹಾಗೂ ಕರ್ನಾಟಕದ ಸಾಹಿತ್ಯ ಶಿಕ್ಷಣ, ಕ್ರೀಡೆ, ಕಲೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮಹನೀಯರನ್ನು ಗುರುತಿಸಿ ಅವರಿಗೆ 'ಕನ್ನಡ ರತ್ನ' ಪ್ರಶಸ್ತಿ ಪ್ರದಾನ ಮಾಡಿ ಗೌರವಿಸುವ ಪರಂಪರೆಯನ್ನು ಪಾಲಿಸಿಕೊಂಡು ಬಂದಿದೆ.

  ಈ ಬಾರಿ ಆಳ್ವಾಸ್ ಎಜುಕೇಶನ್ ಸಂಸ್ಥೆಯ ಸ್ಥಾಪಕ ಹಾಗೂ ಚೇರ್ಮನ್ ಡಾ. ಮೋಹನ್ ಆಳ್ವ ಅವರಿಗೆ 'ಕನ್ನಡ ರತ್ನ' ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಕಳೆದ ವರ್ಷಗಳಲ್ಲಿ ದ್ವಾರಕೀಶ್, ಪ್ರೊಫೆಸರ್ ಕೆ ಎಸ್ ನಿಸಾರ್ ಅಹಮದ್, ಡಾ. ಶಾಮನೂರು ಶಿವಶಂಕರಪ್ಪ ಮುಂತಾದ ಮಹನೀಯರಿಗೆ 'ಕನ್ನಡ ರತ್ನ' ಪ್ರಶಸ್ತಿ ನೀಡಿ ಗೌರವಿಸಿದ್ದನ್ನು ಇಲ್ಲಿ ನೆನೆಯಬಹುದು.

  Actor Ravichandran to be felicitated at Kannada Rajyotsava in Dubai

  ಕನ್ನಡ ಚಿತ್ರ ರಂಗದ ಹಿರಿಯ ನಟ, 'ರಸಿಕ' ರವಿಚಂದ್ರನ್ ಅವರಿಗೆ 'ಕನ್ನಡ ಕಲಾ ರತ್ನ' ಗೌರವ ಪ್ರಶಸ್ತಿಯನ್ನು ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕಾಣಿಕೆಯನ್ನು ಗುರುತಿಸಿ ನೀಡಲಿದ್ದೇವೆ. ಚಂದನವನದ ತಾರೆ ಹಾಗೂ ತಮ್ಮ ಅಚ್ಚ ಕನ್ನಡದ ಅಚ್ಚುಕಟ್ಟಾದ ನಿರೂಪಣಾ ಶೈಲಿಗೆ ಹೆಸರುವಾಸಿಯಾಗಿರುವ ಅಪರ್ಣಾ, ತಮ್ಮ ಹಾಸ್ಯ ಕಲೆಯಿಂದ ಮನೆಮಾತಾಗಿರುವ ನಾಗರಾಜ್ ಕೋಟೆ ಅವರು ಈ ಸಮಾರಂಭದಲ್ಲಿ ಭಾಗವಹಿಸುತ್ತಿರುವ ಪ್ರಮುಖರು. ಈ ಸಂದರ್ಭದಲ್ಲಿ ಯುನೈಟೆಡ್ ಅರಬ್ ಎಮಿರೇಟಿನಲ್ಲಿ ನೆಲೆಸಿರುವ ಕನ್ನಡ ಶಾಲಾ ಮಕ್ಕಳು ನೃತ್ಯ ಹಾಗೂ ಸಂಗೀತಗಳಿಂದ ರಂಜಿಸಲಿದ್ದಾರೆ.

  ನವದೆಹಲಿಯ ಕರ್ನಾಟಕ ಭವನದಲ್ಲಿ 63ನೇ ಕರ್ನಾಟಕ ರಾಜ್ಯೋತ್ಸವ

  ಈ ಬಾರಿಯ ಮತ್ತೊಬ್ಬ ವಿಶೇಷ ಅತಿಥಿಯಾಗಿ 'ಅಕ್ಷರ ಸಂತ' ಎಂಬ ಬಿರುದು ಪಡೆದಿರುವ ಹರೇಕಲ ಹಾಜಬ್ಬನವರು. ಇವರು ಸಮಾಜ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದು ಕಿತ್ತಳೆ ಹಣ್ಣು ಮಾರಾಟ ಮಾಡಿ ಗ್ರಾಮಾಂತರ ವಿದ್ಯಾಭ್ಯಾಸಕ್ಕಾಗಿ ತಾನು ಸಂಪಾದಿಸಿದ ಹಣವನ್ನು ವ್ಯಯ ಮಾಡಿ, ತನ್ನ ಗ್ರಾಮದಲ್ಲಿ ಬಡ ವಿದ್ಯಾರ್ಥಿಗಳಿಗೆ ಶಾಲೆಯನ್ನು ಕಟ್ಟಿಸಿದ್ದಾರೆ. ಇವರಿಗೂ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಕನ್ನಡ ಸಂಘಟನೆಗಳಿಗೆ ನೀಡುವ ಪ್ರೋತ್ಸಾಹ ಸಹಾಯಕ್ಕಾಗಿ ದುಬೈಯಲ್ಲಿ ನೆಲೆಸಿರುವ ಪ್ರಖ್ಯಾತ ಉದ್ಯಮಿ ಎಮ್ ಸ್ಕ್ವೇರ್ ಎಂಜಿನೀರಿಂಗ್ ಸಂಸ್ಥೆಯ ಮಾಲಿಕರಾದ ನಮ್ಮ ಕನ್ನಡವರೇ ಆದ ಮುಸ್ತಫಾ ಮತ್ತು ಅವರ ಧರ್ಮ ಪತ್ನಿಗೆ 'ಕನ್ನಡ ಕೌಸ್ತುಭ' ಗೌರವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

  ಕನ್ನಡ ಭಾಷೆಯ ಗುಣಮಟ್ಟವನ್ನು ಹೆಚ್ಚಿಸುವುದೇ ಕನ್ನಡದ ಅಭಿವೃದ್ಧಿ

  ಕನ್ನಡಿಗರು ದುಬೈ ಸಂಘದ ವತಿಯಿಂದ ಯುಎಇ ಮಣ್ಣಲ್ಲಿ ಯುಎಇ ಸರ್ಕಾರದ ಆರೋಗ್ಯ ಇಲಾಖೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಕನ್ನಡ ನಾಡಿನ ಡಾಕ್ಟರುಗಳಿಗೆ ಸನ್ಮಾನ ಮಾಡುವ ಕಾರ್ಯಕ್ರಮವನ್ನು ಇಟ್ಟುಕೊಳ್ಳಲಾಗಿದೆ.

  Actor Ravichandran to be felicitated at Kannada Rajyotsava in Dubai

  ಯುಎಇಯಲ್ಲಿ ವಾಸಿಸುತ್ತಿರುವ ಎಲ್ಲಾ ಅನಿವಾಸಿ ಕನ್ನಡಿಗರಿಗೂ ಈ ಸಮಾರಂಭಕ್ಕೆ ಆಗಮಿಸಿ ಯಶಸ್ವಿಗೊಳಿಸಿಕೊಡಬೇಕಾಗಿ ಆಯೋಜಕರು ಕೋರಿದ್ದಾರೆ. ಕನ್ನಡಮ್ಮನ ಈ ಹಬ್ಬದ ಸಂಭ್ರಮ ಅರಬ್ಬಿ ಸಮುದ್ರ ಹಾಗೂ ಅರಬರ ಸುಂದರ ಮರುಭೂಮಿಯಲ್ಲಿ ಮಾರ್ದನಿಸಲಿ, ವಿಶ್ವ ವಿಖ್ಯಾತ ಗಗನಚುಂಬಿ ಕಟ್ಟಡಗಳ ದುಬೈ ಮಾಯಾನಗರಿಯಲ್ಲಿ ಕನ್ನಡ ತಂಪಾದ ಗಾಳಿ ಬೀಸಲಿದೆ.

  ಈ ಕಾರ್ಯಕ್ರಮದ ಘೋಷಣೆಗಾಗಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಕನ್ನಡಿಗರು ದುಬೈ ಅಧ್ಯಕ್ಷರಾದ ಸದನ್ ದಾಸ್, ಮಾಜಿ ಅಧ್ಯಕ್ಷರುಗಳಾದ ವೀರೇಂದ್ರ ಬಾಬು, ಉಮಾ ವಿದ್ಯಾಧರ್, ಮಲ್ಲಿಕಾರ್ಜುನ ಗೌಡ ಅವರೊಂದಿಗೆ ದುಬೈ ಕನ್ನಡ ರಾಜ್ಯೋತ್ಸವದ ಮುಖ್ಯ ನಿರ್ವಹಣಾ ಸಂಯೋಜಕರಾದ ಅರುಣ್ ಕುಮಾರ್ ಎಂ ಕೆ ಬೆಂಗಳೂರು, ದೀಪಕ್ ಸೋಮಶೇಖರ್, ವಿಜಯ ಶಿವರುದ್ರಪ್ಪ, ಮತ್ತು ಕನ್ನಡಿಗರು ದುಬೈ ಸಮಿತಿ ಸದಸ್ಯರುಗಳಾದ ಮಮತಾ ರಾಘವೇಂದ್ರ, ಮಲ್ಲಿಕಾರ್ಜುನ ಅಂಗಡಿ, ಚಂದ್ರಕಾಂತ್, ಶ್ರೀನಿವಾಸ್ ಅರಸ್, ವೆಂಕಟರಮಣ ಕಾಮತ್, ರಫೀಕಲಿ ಕೊಡಗು, ವಿನೀತ್ ರಾಜ್ ಅವರುಗಳು ಹಾಜರಿದ್ದರು.

  ಕರ್ನಾಟಕ ಹೆಸರು ಬಂದಿದ್ದರ ಹಿಂದಿದೆ ರೋಚಕ ಇತಿಹಾಸ

  ದುಬೈ ಕನ್ನಡ ರಾಜ್ಯೋತ್ಸವ - 2018 ಇದರ ಉಪ ಸಮಿತಿ ಸದಸ್ಯರುಗಳಾದ ಮಧು ಬೆಂಗಳೂರು, ಮಮತಾ ಬೆಂಗಳೂರು, ಹಾದಿಯ ಮಂಡ್ಯ, ಅನಿತಾ ಶಾರ್ಜ, ಸಯಿದಾ ಬೆಂಗಳೂರು, ಸರೋಜಾ, ಪ್ರೀತಿ, ಸುಧಾ ಮುಂತಾದವರು ಈ ಕಾರ್ಯಕ್ರಮಕ್ಕೆ ಶುಭ ಕೋರಿದರು.

  ಏಳು ಸಮುದ್ರ ದಾಟಿ ಅರಬರ ನಾಡಲ್ಲಿ ವಿಶ್ವ ವಿಖ್ಯಾತ ಬುರ್ಜ್ ಖಲೀಫಾ ತರಹದ ಗಗನಚುಂಬಿ ಕಟ್ಟಡಗಳ ನಡುವೆ ಮತ್ತು ಮರುಭೂಮಿಯಲ್ಲಿ ವಾಸಿಸುತ್ತಿರುವ ಅನಿವಾಸಿ ಯುನೈಟೆಡ್ ಅರಬ್ ಎಮಿರೇಟ್ಸ್ ಕನ್ನಡಿಗರಿಗೆ ಸುಟ್ಟು ತಿನ್ನುವ ಬಿಸಿಯಾದ ಗಾಳಿ ಮಧ್ಯೆ ಕನ್ನಡದ ತಂಪಾದ ಗಾಳಿ ಬೀಸಲು ಇನ್ನೂ ಕೆಲವೇ ದಿನಗಳು ಬಾಕಿ. ಕನ್ನಡಮ್ಮನ ಹಬ್ಬ ಕನ್ನಡ ರಾಜ್ಯೋತ್ಸವ ದುಬೈಯಲ್ಲಿ ಇದೇ ಬರುವ ಶುಕ್ರವಾರ ಅಲ್ಕೂಸಿನಲ್ಲಿರು ಅಲ್ ಕೈಲ್ ಮಾಲ್ ಹತ್ತಿರವಿರುವ ಕ್ರೆಡೆನ್ಸ್ ಸ್ಕೂಲ್ ಆಡಿಟೋರಿಯಮಿನಲ್ಲಿ ನಡೆಯಲಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Actor Ravichandran to be felicitated at Kannada Rajyotsava in Dubai by Kannadigaru Dubai organization. Mohan Alva of Alvas Nudisiri will also be felicitated. Astrologer Ravishankar Guruji, Actress Aarna, comedian Nagaraj Kote will grace the function.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more