ಸಿಂಚನ ಸಾಹಿತ್ಯಸ್ಪರ್ಧೆ : ತೀರ್ಪುಗಾರರ ಅನಿಸಿಕೆ
"ಸಾಹಿತ್ಯದ
ಅಜರಾಮರ ವಸ್ತುಗಳಲ್ಲಿ ತಾಯಿ ಕೂಡ ಒಬ್ಬಳು. ಇಲ್ಲಿನ ತಾಯಿ ಕವಿತೆ ಕೂಡ ಅಂಥ ಪ್ರೇರಣೆಯನ್ನು ಪಡೆದು ಬರೆದ ಕವಿತೆಯಾಗಿದ್ದು, ರಚನಾ ಪರಿಣಿತಿಯನ್ನೂ ಸಾಧಿಸಿದೆ. ಭಾವಗೀತಾತ್ಮಕ ಗುಣಗಳಿಂದ ತೀರ್ಪುಗಾರರ ಮನ ಸೆಳೆಯಿತು. ರಚನಾ ಪರಿಣಿತಿಯನ್ನೂ ಸಾಧಿಸಿದೆ. ಸೃಷ್ಟಿಯ ರಹಸ್ಯ (ಅಂಡ-ಪಿಂಡ ಬ್ರಹ್ಮಾಂಡ) ಕವಿತೆ ನವೋದಯದ ಭಾವಗೀತೆಯ ಬಂಧವನ್ನು ಅನುಸರಿಸಿದ್ದರೂ ವಸ್ತುವನ್ನು ಗ್ರಹಿಸಿರುವ ರೀತಿ ಆಧುನಿಕವಾಗಿದೆ. ಕವಿತೆ ಕಟ್ಟುವಲ್ಲಿ ತೋರಿದ ಪರಿಶ್ರಮ ಕೂಡ ಗಣನೀಯವಾಗಿದೆ. ಕವನದ ಸೂಕ್ಷ್ಮತೆಗಳನ್ನು ಅನುಸರಿಸಿದರೆ ಇವರು ಒಬ್ಬ ಕವಿಯಾಗುವುದರಲ್ಲಿ ಸಂದೇಹವಿಲ್ಲ. ಭಾಷಾ-ಪ್ರಾವೀಣ್ಯತೆ ಹಾಗೂ ನಿರೂಪಣೆಯಲ್ಲಿ ಅತ್ಯುತ್ತಮವಾಗಿರುವ; ಸಹಜ-ಸರಳ ಶೈಲಿಯಿಂದ ಆಕರ್ಷಿಸುವ ಗುಣವಿರುವ ಶಿಲ್ಪಿ ಉತ್ತಮ ಪ್ರಯೋಗವಾಗಿದೆ" ಎಂದು ತೀರ್ಪುಗಾರರು ಅಭಿಪ್ರಾಯಪಟ್ಟಿದ್ದಾರೆ. ಲೇಖನಗಳಲ್ಲಿ "ಚಹಾ ಚಟ ಭಯಂಕರರೇ ಈ ಆಂಗ್ಲರು?" ಲೇಖನವು ಮಾಹಿತಿಯುಕ್ತವಾಗಿದ್ದು ಉತ್ತಮವೆಂದು ತೀರ್ಪುಗಾರರ ಅನಿಸಿಕೆಯಾಗಿದೆ. id="toptextpromo">ಕಥೆಗಳ
ಬಗ್ಗೆ ತೀರ್ಪುಗಾರರ ಮಾತುಗಳಲ್ಲೇ ಹೇಳಬೇಕೆಂದರೆ "ಮೊಹರಂ ಒಂದು ಬಹಳ ಮಹತ್ವಾಕಾಂಕ್ಷಿ ಕಥೆ. ಪ್ರಭಾವಪೂರ್ಣ ಭಾಷೆ, ಘಟನೆಯ ದಟ್ಟ ವಿವರಗಳು, ಕಥನ ಮೂರನ್ನೂ ಮೇಳೈಸಿಕೊಂಡಿದೆ. ಹಬ್ಬಗಳ ಮೂಲಕ ಧಾರ್ಮಿಕವಾಗಿ ಇರುತ್ತಲೇ ಧರ್ಮಗಳ ಕಟ್ಟುಪಾಡುಗಳನ್ನು ಮೀರುವ ನಮ್ಮ ಹಳ್ಳಿಗರು, ಆಧುನಿಕ ರಾಜಕೀಯದ ಸುಳಿಗೆ ಸಿಕ್ಕಿ ಹೇಗೆ ಪತನಗೊಳ್ಳುತ್ತಾರೆನ್ನುವುದರ ಕಲಾತ್ಮಕ ಚಿತ್ರಣವಿರುವ ಇದು ಸಮಕಾಲೀನ ಸನ್ನಿವೇಶದ ಹಿನ್ನೆಲೆಯಲ್ಲಿ ಗಮನಾರ್ಹ ಕಥೆ". ತೆರೆಯಿರದ ಕಿಟಕಿ ಸರಳ ಕಥೆಯಾಗಿದ್ದು ತನ್ನ ಸರಳತೆಯಿಂದಲೇ ಮನಸ್ಸು ಗೆಲ್ಲುತ್ತದೆ. ನೆನೆದಷ್ಟೂ ನೋವು ಕಥೆಯಲ್ಲಿ ಬೆಂಕಿ ನಂದಿಸುವ ಅಣಕು ಪ್ರದರ್ಶನವೇ ಪ್ರಭಾವಶಾಲಿ ಪ್ರತಿಮೆಯಾಗಿ ಮೂಡಿಬಂದಿದೆ. ಹೃದಯಕ್ಕೆ ಬಿದ್ದ ಬೆಂಕಿ ಹೇಗೆ ಮನಸ್ಸುಗಳನ್ನು ಸುಡುತ್ತದೆ ಎನ್ನುವುದೂ, ಆ ಬೆಂಕಿಯಿಂದ ಹೊರಬರಲು ಯತ್ನಿಸುವ ನಾಯಕ-ನಾಯಕಿಗೆ ಬದುಕೇ ಹೇಗೆ ಅಣಕವಾಗಿದೆ ಎನ್ನುವುದೂ ಕಥೆಯ ಅಂದವನ್ನು ಹೆಚ್ಚಿಸುತ್ತದೆ. ಇಲ್ಲಿ ಭಾಷೆಯ ಬಳಕೆ ಮತ್ತು ಬರವಣಿಗೆಯ ಶೈಲಿ ಗಮನ ಸೆಳೆಯುತ್ತದೆ". id='are-slot-1' class='oiad oi-axt oiadv'> id='top-searched-articles'>ಈ
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಬರಹಗಾರರಿಗೂ, ತಮ್ಮ ಅಮೂಲ್ಯ ಸಮಯವನ್ನು ನೀಡಿದ ತೀರ್ಪುಗಾರರಿಗೂ ಮತ್ತು ಸ್ಪರ್ಧೆಗೆ ಅಂತರ್ಜಾಲ ತಾಣದಲ್ಲಿ ಪ್ರಚಾರ ನೀಡಿದ ಒನ್ಇಂಡಿಯಾ ಕನ್ನಡ ಸಂಪಾದಕ ವರ್ಗಕ್ಕೂ ಕನ್ನಡ ಸಂಘ(ಸಿಂಗಪುರ)ವು ಆಭಾರಿಯಾಗಿದೆ. ಕನ್ನಡ ಸಂಘ(ಸಿಂಗಪುರ)ದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ href="http://www.singara.org/" target="_blank"> www.singara.org ಅಂತರ್ಜಾಲ ಕೊಂಡಿಯನ್ನು ಕ್ಲಿಕ್ಕಿಸಿ. ವಿಜೇತ ಲೇಖನಗಳು ನವೆಂಬರ್ ತಿಂಗಳಿನ ಸಿಂಚನ ಪತ್ರಿಕೆಯಲ್ಲಿ ಪ್ರಕಟವಾಗಲಿವೆ. ಸಿಂಚನ ಪತ್ರಿಕೆಯ ಎಲ್ಲಾ ಸಂಚಿಕೆಗಳನ್ನು ಓದಲು http://singara.org/sinchana-newsletter/ ಅಂತರ್ಜಾಲ ತಾಣದಲ್ಲಿ ವಿಹರಿಸಿ.











Click it and Unblock the Notifications