ಸಿಂಚನ ಸಾಹಿತ್ಯಸ್ಪರ್ಧೆ - 2012ರ ಫಲಿತಾಂಶಗಳು

Sinchana literary competition results
ಕನ್ನಡ ಸಂಘ (ಸಿಂಗಪುರ)ದ ಹೆಮ್ಮೆಯ ಮಾಸ ಪತ್ರಿಕೆ "ಸಿಂಚನ"ಕ್ಕೆ ಆಗಸ್ಟ್ 2012ರಲ್ಲಿ ಒಂದು ವರುಷ ತುಂಬಿತು. ಒಂದು ವರುಷದ ಸಂಭ್ರಮವನ್ನು ಆಚರಿಸಲು ಸಾಹಿತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. kannada.oneindia.com ಮೂಲಕ ಪ್ರಚಾರ ನೀಡಿದ್ದ ಈ ಸ್ಪರ್ಧೆಯ ವಿವರಗಳು ವಿಶ್ವದ ನಾನಾ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರಿಗೆಲ್ಲ ತಲುಪಿತ್ತು. ಹದಿಹರೆಯದ ಯುವಕರಿಂದ 75ರ ಹರೆಯದವರೂ ಉತ್ಸಾಹದಿಂದ ಈ ಸ್ಪರ್ಧೆಯಲ್ಲಿ ಭಾಗವಹಿಸಿ, ಈ ಸ್ಪರ್ಧೆಗೆ ಲೇಖನ, ಕವನ ಮತ್ತು ಸಣ್ಣಕಥೆಗಳನ್ನು ಬಹಳ ಅಭಿಮಾನದಿಂದ ಕಳಿಸಿದ್ದರು. ಈ ಸ್ಪರ್ಧೆಯ ಫಲಿತಾಂಶಗಳು ಹೀಗಿವೆ.

ವಿಷಯಾಧಾರಿತ ಲೇಖನಗಳು

ವಿಷಯ : 1) ಸ್ಥಳೀಯ ಕನ್ನಡ ಸಂಘ ಮತ್ತು ನಾನು ಅಥವಾ 2) ಹೊರದೇಶದಲ್ಲಿ ನಾನು ಕಂಡದ್ದು, ಕಲಿತದ್ದು.

ಈ ವರ್ಗದ ಏಕೈಕ ಬಹುಮಾನ ಪಡೆದ ಲೇಖನ : 'ಚಹಾ ಚಟಭಯಂಕರರೇ ಈ ಆಂಗ್ಲರು'. ಲೇಖಕಿ: ಡಾ|| ಉಮಾ ವೆಂಕಟೇಶ್, ಯು.ಕೆ. (ವಿಷಯ : ಹೊರದೇಶದಲ್ಲಿ ನಾನು ಕಂಡದ್ದು, ಕಲಿತದ್ದು). ಹೊರದೇಶದಲ್ಲಿ ನಾನು ಕಂಡದ್ದು, ಕಲಿತದ್ದು (ಸೀತಾ ಕೇಶವ, ಆಸ್ಟ್ರೇಲಿಯ) ಮತ್ತು ಸಿಂಗಪುರವೆಂಬ ವಿಸ್ಮಯ (ಭಾರ್ಗವಿ ಆನಂದ್, ಬೆಂಗಳೂರು) ಲೇಖನಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.

ಸಣ್ಣ ಕಥೆಗಳು

ಮೊದಲನೇ ಬಹುಮಾನ : ಮೊಹರಂ, ಲೇಖಕ: ಹನುಮಂತ ಹಾಲಿಗೇರಿ, ಬೆಂಗಳೂರು.
ಎರಡನೇ ಬಹುಮಾನ : ತೆರೆಯಿರದ ಕಿಟಕಿ, ಲೇಖಕ: ನವೀನ್ ಭಟ್, ಶೃಂಗೇರಿ.
ಮೂರನೇ ಬಹುಮಾನ : ನೆನೆದಷ್ಟೂ ನೋವು, ಲೇಖಕ: ವಿಜಯ್ ಕುಮಾರ್ ಹೂಗಾರ್, ಬೆಂಗಳೂರು.

ಪೂತನಿ (ಅನಿತಾ ನರೇಶ್ ಮಂಚಿ), ಬಸ್ ಸ್ಟಾಪ್ (ನಾಗರಾಜ್ ಎಮ್.), ಮತ್ತೆ ಮೂಡಿತು ಹೊಂಬಿಸಿಲು (ಜಯಶ್ರೀ ಭಟ್), ದೊಡ್ಡೆತ್ತು (ಮಂಜುನಾಥ ಹಿರೇಚೌಟಿ) ಮತ್ತು ಬಣ್ಣದ ಕನಸು (ಮಾಲಿನಿ ಭಟ್) ಕತೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.

ಕವನಗಳು

ಮೊದಲನೇ ಬಹುಮಾನ : ತಾಯಿ, ಲೇಖಕ : ವಿನಯ್ ಸಿಂಹ, ಸಿಂಗಪುರ.
ಎರಡನೇ ಬಹುಮಾನ : ಸೃಷ್ಟಿಯ ರಹಸ್ಯ, ಲೇಖಕ: ನಾಗೇಶ್ ಮೈಸೂರು, ಸಿಂಗಪುರ.
ಮೂರನೆಯ ಬಹುಮಾನ : ಶಿಲ್ಪಿ, ಲೇಖಕ: ಗಣೇಶ್ ಹೆಗ್ಡೆ, ಚಿಕ್ಕಮಗಳೂರು.

ಅಣುಶಕ್ತಿ (ಡಾ||ನಾಗಭೂಷಣ ಮುಲ್ಕಿ), ಅಂಟಿಯೂ ಅಂಟದ ಮೆರಗು (ನರಹರಿ ಭಟ್), ತೈಲವಿದ್ದಂತೆ ಹಣ (ಸುಗುಣ ಮಹೇಶ್), ಸುಳಿದು ಬಾ ಪ್ರೇಮ (ಸಾವಿತ್ರಿ ಹಟ್ಟಿ) ಮತ್ತು ಅಮ್ಮನ ನೆನಪು (ಸಂದೀಪ್ ಕೆ.ಸಿ.) ಕವನಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.

ಕನ್ನಡ ಸಂಘ (ಸಿಂಗಪುರ)ದ ಕೋರಿಕೆಯನ್ನು ಮನ್ನಿಸಿ ಸಾಹಿತ್ಯ ಹಾಗೂ ಪತ್ರಿಕಾರಂಗದ ಹೆಸರಾಂತ ವ್ಯಕ್ತಿಗಳಾದ ವಾಣಿ ರಾಮದಾಸ್, ಕೃಷ್ಣ ಸುಬ್ಬರಾವ್, ನಾಗ ಐತಾಳ್ (ಅಹಿತಾನಲ), ಹನೀಫ್ ಬಿ.ಎಮ್, ರಾಮನಾಥ್ ಎಮ್., ಬಿ.ಆರ್. ಕಮಲ ಅವರು ತೀರ್ಪುಗಾರರಾಗಿ ಸಕಾಲದಲ್ಲಿ ತೀರ್ಪು ನೀಡಿ ಸಹಕರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+