ಲಾಸ್ ಏಂಜಲಿಸ್‌ನಲ್ಲಿ ನ.3ರಂದು ನಾಟಕ 'ಸಪ್ತಮುಖಿ'

ಬದುಕೇ ಒಂದು ನಾಟಕವೆಂಬ ಮಾತೊಂದಿದೆ. ಬದುಕಿನಲ್ಲಿ ನಡೆದುಕೊಂಡು ಬಂದ ಪರಂಪರೆಗಳು ನಾಟಕಗಳಲ್ಲಿ, ಅದರಲ್ಲೂ ಇತ್ತೀಚೆಗಿನ ಸಮಕಾಲೀನ ನಾಟಕ ಪ್ರದರ್ಶನಗಳಲ್ಲಿ ಅಭಿವ್ಯಕ್ತಗೊಂಡಿರುವುದನ್ನು ಗಮನಿಸಬಹುದು. ನಮ್ಮ ಒಡಲೊಳಗಿನ ಪಿಸು ಮಾತುಗಳಿಗೆ ಅರ್ಥ ಕಲ್ಪಿಸಿಸಲು, ಈ ಪರಂಪರೆಗಳನ್ನು ಆಗಾಗ ಒರೆಗಿಟ್ಟು ನೋಡಬೇಕಾಗುತ್ತದೆ. ನಮ್ಮ ಧಾರ್ಮಿಕ ಪರಂಪರೆ, ರಾಜಕೀಯ ಪರಂಪರೆ, ಪೌರಾಣಿಕ ಪರಂಪರೆ ಹಾಗೂ ನಂಬಿಕೆಗಳನ್ನು ಒರೆಗಿಟ್ಟಾಗ, ಅವು ಒಂದು ಬಗೆಯ ತರ್ಕಬದ್ಧ ವ್ಯಾಖ್ಯಾನಗಳಿಗೆ ದಾರಿ ಮಾಡಿಕೊಡುತ್ತವೆ. ಇದೇ ಅಸೀಮ ಪ್ರಸ್ತುತಪಡಿಸುತ್ತಿರುವ 'ಸಪ್ತಮುಖಿ' ಸಾರುವ ಮುಖ್ಯ ಸಂದೇಶವಾಗಿದೆ. ಈ ನಾಟಕದಲ್ಲಿ ನಾಟಕಕಾರರ ಚಮತ್ಕಾರವೂ, ಸಾಹಿತ್ಯಕ ಸೃಜನಶೀಲತೆಯೂ ಎದ್ದು ತೋರುತ್ತದೆ.
ಪ್ರಸ್ತುತ, 'ಸಪ್ತಮುಖಿ'ಯಲ್ಲಿ, "ಅರಹಂತ" (ರಾಮನಾಥ), "ಗಾಳಿ ಎಂಬ ಕುದುರೆ ಏರಿ" (ಪ್ರಭುಶಂಕರ), "ಯುದ್ಧ", (ಜಯಂತ ಕಾಯ್ಕಿಣಿ ಪ್ರಬಂಧದ ಮೇಲೆ ಆಧಾರಿತ), "ಪರಂಪರೆ" (ಜಯಂತ ಕಾಯ್ಕಿಣಿ - ಜತೆಗಿರುವನು ಚಂದಿರ ನಾಟಕದಿಂದ), "ಪರಿತ್ಯಕ್ತ" (ಅಂಬಾತನಯ ಮುದ್ರಾಡಿ), "ಕೊಡೆಗಳು" (ಚಂದ್ರಶೇಖರ ಪಾಟೀಲ) ಮತ್ತು "ಉಳ್ಳವರ ನೆರಳು" (ಎಸ್. ವಿಜಯ) - ಎಂಬ ಏಳು ನಾಟಕಗಳ ದೃಶ್ಯಗಳನ್ನು ಅಳವಡಿಸಿಕೊಳ್ಳಲಾಗಿದೆ. ಇವುಗಳನ್ನು ಒಂದು ವಿಶಿಷ್ಟ ಕೊಂಡಿಗಳಿಂದ ಚಂದ್ರ ಐತಾಳರು ಜೋಡಿಸಿದ್ದಾರೆ. ಸೂತ್ರಧಾರರ ಪಾತ್ರಗಳು ಮತ್ತು ಅವರ ಹಾಡುಗಳು ಇಲ್ಲಿ ಪ್ರಮುಖವಾಗಿವೆ. ಹಿಮ್ಮೇಳದ ಸಂಗೀತ ನಾಟಕಗಳ ಒಳಗೇ ಇರುವ ಹಾಡುಗಳು ಮತ್ತು ನಾಟಕಗಳನ್ನು ಒಂದಕ್ಕೊಂದು ಜೋಡಿಸುವ ಹಾಡುಗಳನ್ನು ಹಿಮ್ಮೇಳದವರು ಒದಗಿಸಲಿದ್ದಾರೆ. ಸಪ್ತಸ್ವರಗಳು ಸೇರಿ ಉತ್ತಮ ಗಾಯನವಾಗುವಂತೆ, ಈ ಸಪ್ತ ನಾಟಕಗಳು ಇಲ್ಲಿ ಜೋಡಣೆಯಾಗಿವೆ. ಹೀಗೆ ಜೋಡಿಸುವಲ್ಲಿ, ಮಾನವನ ಮೂರು ಮುಖಗಳಾದ ಮಾನವತೆ, ದಾನವತೆ ಮತ್ತು ದೈವತ್ವಗಳಿಗೆ ಪ್ರಾಮುಖ್ಯತೆ ಕೊಡಲಾಗಿದೆ. ಇದೊಂದು ಅನನ್ಯ ಪ್ರಯೋಗವೆಂದೇ ಹೇಳಬಹುದು. ನಾಟಕದ ನಿರ್ದೇಶಕರೂ, ಸಂಗೀತ ನಿರ್ದೇಶಕರೂ ಚಂದ್ರ ಐತಾಳರು. ಅಸೀಮ ತಂಡದವರು ಪ್ರಸ್ತುತಪಡಿಸುತ್ತಿರುವ ಈ ಅನನ್ಯ ಕೊಡುಗೆಯ ಪ್ರಾಯೋಜಕರು ದಕ್ಷಿಣ ಕ್ಯಾಲಿಫೋರ್ನಿಯದ ಸಾಂಸ್ಕೃತಿಕ ಸಂಘದವರು. ಈ ಪ್ರದೇಶದ ಕನ್ನಡಿಗರೇ ಪ್ರಸ್ತುತಪಡಿಸುವ ಕಾರ್ಯಕ್ರಮ ಇದು.
ನಾಟಕ ಪ್ರದರ್ಶನದ ವಿವರಗಳು ಹೀಗಿವೆ:
ನಾಟಕ : 'ಸಪ್ತಮುಖಿ'
ರಚನೆ : ಸಮಕಾಲೀನ ಕನ್ನಡ ನಾಟಕಕಾರರು
ಪ್ರದರ್ಶನ ದಿನಾಂಕ ಮತ್ತು ವೇಳೆ : ಶನಿವಾರ, ನವೆಂಬರ್ 3, 2012; ಅಪರಾಹ್ನ - 5.30ಕ್ಕೆ
ಸ್ಥಳ : Baldwin Park Performing Arts CenteBaldwin Park Performing center, 4640, Maine St, Baldwin Park, CACA 91706
ಪ್ರವೇಶ ಧನ : 15.00 ಡಾಲರುಗಳು
ಕಾರ್ಯಕ್ರಮ ಮುಗಿದ ಮೇಲೆ ಲಘು ಭೋಜನದ ವ್ಯವಸ್ಥೆ ಮಾಡಲಾಗಿದೆ.
ಈ ಕಾರ್ಯಕ್ರಮವನ್ನು ಸಹಪ್ರಾಯೋಜಿಸಲು ಉದಾರೀ ದಾನಿಗಳನ್ನು ನಮ್ರತೆಯಿಂದ ಕೋರಿಕೊಳ್ಳುತ್ತಿದ್ದೇವೆ. ಸಹಪ್ರಾಯೋಜಿಕ ವಿವರಗಳು:
Platinum Co-sponsors : $ 500.00 and above (4 complimentary tickets provided)
Gold Co-sponsors : 250.00 (4 complimentary tickets provided)
Silver Co-sponsors : 100.00 (2 complimentary tickets provided)
ಹೆಚ್ಚಿನ ವಿವರಗಳಿಗೆ ಈ ಕೆಳಗಿನವರನ್ನು ಸಂಪರ್ಕಿಸಿರಿ:
ಶ್ರೀನಿವಾಸ ಭಟ್ - 909-623-3185
ಅಮೃತ ಬಸವಾಪಟ್ನ - 562-556-6198
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications