• search

ಜೂ. 16ರಂದು ರೆಡಿಂಗ್‌ನಲ್ಲಿ ರಘು ದೀಕ್ಷಿತ್ ಲೈವ್

By * ವಿನಯ ಚಂದ್ರ
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  2010 ಮೇ 15ರ ಶನಿವಾರ ಲಂಡನ್ನಿನ ಹ್ಯಾರೊನಲ್ಲಿ ನೆರೆದಿದ್ದ ಪ್ರೇಕ್ಷಕರಲ್ಲಿ ವಿದ್ಯುತ್ಸಂಚಾರವಾದಂತೆ ಅನುಭವವಾಗಿತ್ತು. ’ನಿನ್ನ ಪೂಜೆಗೆ ಬಂದೆ ಮಹದೇಶ್ವರ’ ಹಾಡು ಕಂಚಿನ ಕಂಠದಿಂದ ಮೊಳಗುತ್ತಿದ್ದರೆ, ಸಭಿಕರು ಹುಚ್ಚೆದ್ದು ಕುಣಿದಿದ್ದರು. ಅಂದು ಸಂಜೆ ಕನ್ನಡಿಗರು ಯುಕೆಯ ವಸಂತೋತ್ಸವದಲ್ಲಿ ಹರಿದಿದ್ದ ಗಾನಸುಧೆ ಕನ್ನಡಿಗರನ್ನೆಲ್ಲ ಮನರಂಜಿಸಿ, ಮರೆಯಲಾರದ ಅನುಭವ ನೀಡಿತ್ತು. ಆ ಒಂದು ರೋಮಾಂಚನೀಯ ಸಂಜೆಯ ಗುಂಗಿನಿಂದ ಹೊರಬರಲು ಒಂದು ವಾರವೇ ಬೇಕಾಗಿತ್ತು. ಯಾಕೀಗ ಆ ಸಂದರ್ಭದ ಅವಲೋಕನ, ಮೆಲುಕಾಟ ಅಂತೀರ? ಕಾರಣವಿಷ್ಟೆ ಮತ್ತೊಮ್ಮೆ ಲಂಡನ್ನಿಗೆ ಲಗ್ಗೆ ಹಾಕಿದ್ದಾರೆ ಸಮಕಾಲೀನ ಅಧುನಿಕ ಸಂಗೀತ ಶೈಲಿಯ ಮಾಂತ್ರಿಕ ಮೋಡಿಗಾರ ರಘು ದೀಕ್ಷಿತ್.

  ಹೌದು, ಕನ್ನಡಿಗರು ಯುಕೆ ಅರ್ಪಿಸುತ್ತಿರುವ 'ರಘು ದೀಕ್ಷಿತ್ ಲೈವ್' ಕಾರ್ಯಕ್ರಮ ಜೂನ್ 16, ಶನಿವಾರದಂದು ದಿ ಗ್ರೇಟ್ ಹಾಲ್, ಲಂಡನ್ ರೋಡ್, ರೆಡಿಂಗ್, RG1 5ATನಲ್ಲಿ ಸಂಜೆ 4ರಿಂದ 7ರವರೆಗೆ ನಡೆಯಲಿದೆ. ಕನ್ನಡೇತರ ಭಾಷೆಯ ಜನರ ಬೇಡಿಕೆಯ ಮೇರೆಗೆ ಎಲ್ಲಾ ಭಾಷೆಯ ಜನರಿಗೂ ಪ್ರವೇಶ ತೆರೆದಿಡಲಾಗಿದೆ, ರಘು ಕನ್ನಡವಲ್ಲದೆ ತಮ್ಮ ಹಿಂದಿ ಹಾಡುಗಳನ್ನೂ ಹಾಡಲಿದ್ದಾರೆ. ಟಿಕೆಟ್ : 10 ಪೌಂಡ್ (ಸದಸ್ಯರಿಗೆ 9 ಪೌಂಡ್).

  ರಘು ದೀಕ್ಷಿತ್ ಬಗ್ಗೆ ಗೊತ್ತಿಲ್ಲದಿದ್ದರೆ : ರಘು ದೀಕ್ಷಿತ್ ಕರ್ನಾಟಕದಲ್ಲಿ ಮನೆ ಮಾತಾಗಿ, ಭಾರತೀಯ ಸಂಗೀತ ಕ್ಷೇತ್ರದಲ್ಲೂ ಖ್ಯಾತಿ ಪಡೆದು, ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಲ್ಪಟ್ಟ ಕನ್ನಡದ ಕಲಾವಿದ folk rock ಸಂಗೀತ ಶೈಲಿಯ ಗಾರುಡಿಗಾರ. ’ಕಂಟೆಂಪರರಿ’ ಸಂಗೀತ ಶೈಲಿಯ ಹರಿಕಾರ. ಭಾರತದಲ್ಲಲ್ಲದೆ ವಿಶ್ವದಾದ್ಯಂತ ಅನೇಕ ಪ್ರದರ್ಶನಗಳನ್ನು (300ಕ್ಕೂ ಮಿಗಿಲಾಗಿ) ನೀಡಿದ ರಘು, ಸಂಗೀತ ಪ್ರೇಮಿಗಳಿಗೆ ತಮ್ಮ ಸಂಗೀತ ಪ್ರಕಾರವನ್ನು ಸವಿಯುವ ಅವಕಾಶವನ್ನು ಒದಗಿಸಿಕೊಟ್ಟಿದ್ದಾರೆ.

  Musician Raghu Dixit to rock Reading, London

  ಇವರು ಮೈಕ್ರೊಬಯಾಲಜಿನಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರಾಂಕ್ ಗಳಿಸಿದ್ದು, ಭರತನಾಟ್ಯದಲ್ಲಿ ಕೂಡ ಪರಿಣತ. ರಘು ದೀಕ್ಷಿತ್ ಅವರು ಶಾಸ್ತ್ರೀಯ ಸಂಗೀತದಲ್ಲಾಗಲಿ ಬೇರೆ ಸಂಗೀತ ಪ್ರಕಾರದಲ್ಲಾಗಲಿ ವೃತ್ತಿಪರ ಶಿಕ್ಷಣ/ತರಬೇತಿ ಪಡೆಯದಿದ್ದರು ಅವರ ಹಾಡಿನಲ್ಲೆಲ್ಲ ಶಾಸ್ತ್ರೀಯ ಸಂಗೀತದ ಕಂಪು, ಜಾನಪದ ಶೈಲಿಯ ಸೊಗಡು ಹುದುಗಿರುತ್ತದೆ. ಇವರು folk rockಗೆ ತುಂಬ ಹೆಸರುವಾಸಿ. ಸಂತ ಶಿಶುನಾಳ ಶರೀಫ಼ರ ಗೀತೆಗಳನ್ನು ತಮ್ಮ ಹಾಡುಗಳಲ್ಲಿ ಅಳವಡಿಸಿಕೊಂಡು ಪಾಶ್ಚಾತ್ಯ ಸಂಗೀತ ಮತ್ತು ಜನಪದ ಶೈಲಿಯ ಸಮ್ಮಿಶ್ರಣದೊಂದಿಗೆ ಹೊಸ ಪ್ರಕಾರವನ್ನೆ ಸೃಷ್ಟಿ ಹಾಕಿದ್ದಾರೆ.

  ಪ್ರೇಕ್ಷಕರ ಕಣ್ ಸೆಳೆಯುವ ರಂಗು ರಂಗಿನ ಲುಂಗಿಯಲ್ಲಿ ವೇದಿಕೆಯ ಮೇಲೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವುದು ಅವರ ಒಂದು ರೂಪವಾದರೆ, ಗಿಟಾರ್ ವಾದಕರಾಗಿ, ಗೀತ ಲೇಖಕರಾಗಿ, ಸಂಗೀತ ನಿರ್ಮಾಪಕರಾಗಿ, ಚಲನಚಿತ್ರ ಸಂಗೀತ ಸಂಯೋಜಕರಾಗಿ (ಸೈಕೋ ಮತ್ತು ಜಸ್ಟ್ ಮಾತ್ ಮಾತಲ್ಲಿ) ಹೆಸರು ಗಳಿಸಿದ್ದಾರೆ. ಕಂಚಿನ ಕಂಠದ ರಘು ತಮ್ಮ ವಿಶಿಷ್ಟ ಪ್ರಬಲವಾದ ಧ್ವನಿಯಿಂದಾಗಿ powerhouse ಅನ್ವರ್ಥನಾಮ ಗಳಿಸಿದ್ದು ಸಮರ್ಪಕವೆ ಸರಿ. ಜನ ಸಾಮಾನ್ಯರ ಭಾವನೆ ಮತ್ತು ಅನುಭವಗಳೇ ಅವರ ಹಾಡುಗಳಲ್ಲಿ ಹೆಚ್ಚಾಗಿ ಕಾಣಬರುತ್ತದೆ. ಕನ್ನಡವಲ್ಲದೆ ಹಿಂದಿ ಭಾಷೆಯಲ್ಲೂ ರಘು ತಮ್ಮ ಚಮತ್ಕಾರವನ್ನು ತೋರಿಸಿದ್ದಾರೆ.

  ರಘು ರಾಕ್ ಬ್ಯಾಂಡ್ : ’ಅಂತರಾಗ್ನಿ’ಯೊಂದಿಗೆ ಪ್ರಾರಂಭವಾಗಿ ’ರಘು ದೀಕ್ಷಿತ್ ಪ್ರೊಜೆಕ್ಟ್’ಗೆ ಮಾರ್ಪಾಡುಗೊಂಡ ಅವರ ರಾಕ್ ಬ್ಯಾಂಡ್ ಮೂಲಕ ದೇಶ ವಿದೇಶದಲ್ಲಿ ಜನಪ್ರಿಯ. ’ಗುಡು ಗುಡಿಯ ಸೇದಿ ನೋಡ’, ’ಸೋರುತಿದು ಮನಿಯ ಮಾಳಿಗಿ’, ’ನಿನ್ನ ಪೂಜೆಗೆ ಬಂದೆ ಮಹದೇಶ್ವರ’, ಸೈಕೊ ಚಿತ್ರದ ಅವರ ಸಂಗೀತ ನಿರ್ದೇಶನದ ಹಾಡುಗಳು ಕನ್ನಡಿಗ ಶೋತೃಗಳಲ್ಲಿ ಅತ್ಯಂತ ಪ್ರಸಿಧ್ಧ. ಅವರ ’ಮೈಸೂರ್ ಸೆ ಆಯಿ’, ’ಮುಂಬೈ’, ’ಅಂತರಾಗ್ನಿ’, ’ಹೇ ಭಗ್ವಾನ್’, ’ಹರ್ ಸಾನ್ಸ್ ಮೇ’, ’ಕಿಡ್ಕಿ’ ಹಿಂದಿ ಹಾಡುಗಳು ಕೂಡ ಅವರ ಅಭಿಮಾನಿಗಳಿಗೆ ಅಚ್ಚು ಮೆಚ್ಚು.

  ಇಂತಹ ಅತ್ಯಂತ ಪ್ರತಿಭಾಶಾಲಿ, ವಿನೂತನ ಶೈಲಿಯ ಸಂಗೀತ ಕಲಾವಿದನನ್ನು ನೊಡಲು, ಅವರ ಕಂಠಸಿರಿಯಿಂದ ಹರಿದು ಬರುವ ಜನಪದ ರಾಕ್ ಸಂಗೀತವನ್ನು ಸವಿಯಲು ರೆಡಿಂಗ್, ಲಂಡನ್ ಮತ್ತು ಸುತ್ತ ಮುತ್ತಲಿನ ನಗರವಾಸಿಗಳಿಗೆ ಇದೊಂದು ಅಪೂರ್ವ ಅವಕಾಶ. ಕನ್ನಡಿಗರುಯುಕೆ ಎಂದಿನಂತೆ ಕನ್ನಡ ಕಲಾವಿದರನ್ನು ಪ್ರೋತ್ಸಾಹಿಸುವ ಧ್ಯೇಯದನುಸಾರ, ಇಲ್ಲಿನ ಕನ್ನಡ ಸಮುದಾಯಕ್ಕೆ ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ನಿರಂತರ ಆಸ್ವಾದಿಸಲು ಅವಕಾಶ ಕಲ್ಪಿಸಿಕೊಡುವ ಯೋಜನೆ ಪ್ರಕಾರ, ನಿಮಗೋಸ್ಕರ ರಘು ದೀಕ್ಷಿತ್ ಅವರ ಸಂಗೀತ ಸಂಜೆಯನ್ನೊಂದು ಏರ್ಪಡಿಸಿದ್ದಾರೆ.

  ’ರಘು ದೀಕ್ಷಿತ್ ಲೈವ್’ನ ವಿವರ:

  ದಿನಾಂಕ : 16 ಜೂನ್ 2012, ಶನಿವಾರ
  ಸಮಯ : ಸಂಜೆ 4ರಿಂದ 7ರವರೆಗೆ
  ಸ್ಥಳ : ದಿ ಗ್ರೇಟ್ ಹಾಲ್, ಲಂಡನ್ ರೋಡ್, ರೆಡಿಂಗ್, RG1 5AT

  ಹೆಚ್ಚಿನ ವಿವರಗಳಿಗೆ ಮತ್ತು ಟಿಕೇಟ್ಟನ್ನು ಖರೀದಿಸಲು ದಯವಿಟ್ಟು ಅಂತರ್ಜಾಲ ತಾಣ http://www.kannadigaruuk.com/ಕ್ಕೆ ಭೇಟಿ ನೀಡಿ. ನೀವೂ ಬಂದು ಭಾಗವಹಿಸಿ, ನಿಮ್ಮ ಮಿತ್ರರನ್ನು ಕರೆತನ್ನಿ. ಎಂದಿನಂತೆ ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರೋತ್ಸಾಹಿಸುವಿರೆಂದು ನಮ್ಮ ಭರವಸೆ.

  ನಿಮ್ಮ ನಿರೀಕ್ಷೆಯಲ್ಲಿ,

  ಕನ್ನಡಿಗರುಯುಕೆ ಕಾರ್ಯಕಾರಿ ಸಮಿತಿ

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Kannada folk rock singer Raghu Dixit Live concert is organized in Reading, London on June 16, Saturday. The musical evening is organized by Kannadigaru UK. The Kannada koota has invited all the Kannadiga and non-kannadigas to the event.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more