ಕುವೈತ್ ಕನ್ನಡ ಕೂಟದಿಂದ ನಾಡಹಬ್ಬ ಆಚರಣೆ
ಕುವೈತ್
ಕನ್ನಡ ಕೂಟದ ವತಿಯಿಂದ ಇಲ್ಲಿನ ಇಂಡಿಯನ್ ಕಮ್ಯುನಿಟಿ ಶಾಲೆಯ ಸಭಾಭವನದಲ್ಲಿ ನಾಡಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಇತ್ತೀಚೆಗೆ ಆಚರಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಕೂಟದ ಅದ್ಯಕ್ಷ ಡಾ.ಸುರೇಂದ್ರ ನಾಯಕ್ ಕಾಪಾಡಿ ಸ್ವಾಗತವನ್ನು ಕೋರಿದರು. ಉಪಾಧ್ಯಕ್ಷೆ ಪುಷ್ಕಳ ಗಣೇಶ್ ಹಾಗೂ ಸುಗುಣ ನಾಯಕ್ ದೀಪ ಬೆಳಗಿಸಿದರು. id="toptextpromo">ಕೂಟದ
ಮಹಿಳೆಯರು ಚಾಮುಂಡೇಶ್ವರಿಯ ಪೂಜೆಯ ನೃತ್ಯಗಳನ್ನು ಸಾದರ ಪಡಿಸಿದರು. ಕೂಟದ ಸದಸ್ಯರಿಗಾಗಿ ನವರಾತ್ರಿಯಲ್ಲಿ ಆಡುವ ದಾಂಡಿಯ ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿಜೇತರಿಗೆ ಸೂಕ್ತ ಬಹುಮಾನ ನೀಡಿ ಅಭಿನಂದಿಸಲಾಯಿತು. ಇತ್ತೀಚಿಗೆ ನಡೆದ ಬ್ಯಾಡ್ ಮಿಂಟನ್ ಪಂದ್ಯಾವಳಿಯಲ್ಲಿ ವಿಜೇತರಾದ ಮುರಳಿಧರ್ ಜೆ., ಡಾ.ಯೋಗಿಶ್, ಸ್ವರ ಕುಲಕರ್ಣಿ, ಅಶುತೋಷ್ ಕುಲಕರ್ಣಿಯವರನ್ನು ಪುರಸ್ಕರಿಸಲಾಯಿತು. id='are-slot-1' class='oiad oi-axt oiadv'> id='top-searched-articles'>ಕೂಟದ
ಕಾರ್ಯದರ್ಶಿ ರಾಮ ಕುಮಾರ್ ನಾಗರಾಜ ವಂದಿಸಿದರು. ಖಜಾಂಚಿ ಡಾ.ನಾಗೇಶ್ ಬಾಬು, ಕ್ರೀಡಾ ಸಮಿತಿಯ ಸಂಚಾಲಕರಾದ ಅನಿಲ್ ಪ್ರಭು, ರಮೇಶ್ ಪಿ., ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ರೇಖಾ ದಾಮೋದರ್, ಸಂದ್ಯಾ ಅರುಣ, ಗಣೇಶನ್, ಮಲ್ಲಿಕಾ ರವಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು. ಕೊನೆಯಲ್ಲಿ ಕೂಟದ ಸದಸ್ಯರಿಗೆ ಸ್ವಾದಿಷ್ಟ ವಿವಿಧ ದೋಸೆಗಳ ಸಹಿತ ಭೋಜನವನ್ನು ಏರ್ಪಡಿಸಲಾಗಿತ್ತು.











Click it and Unblock the Notifications