ಕೆಕೆಎನ್ ಸಿ ಸಣ್ಣಕಥಾ ಸ್ಪರ್ಧೆಗೆ ಕಥೆ ಕಳಿಸಿ

Short story competition by KKNC
ಕಾಡುವ ಕನಸುಗಳು, ಹಾಡುವ ನೆನಪುಗಳು, ನಿಮ್ಮೆದೆಯಲ್ಲಿ ಮೌನವಾಗಿ ಮೊಳೆಯುತ್ತಾ ಮುತ್ತಾಗಿ ರೂಪುಗೊಳ್ಳಲು ಕಾಯುತ್ತಿವೆಯೇ? ಆ ಮುತ್ತುಗಳ ಸುಂದರ ಮಾಲೆ ಪೋಣಿಸಿ, ಕನ್ನಡ ಓದುಗರ ಮುಂದಿಡಬಾರದೇಕೆ?

ಇಗೊಳ್ಳಿ, ನಿಮಗಾಗಿ ಸ್ವರ್ಣಸೇತು 2011ರ ಸಂಪಾದಕ ಸಮಿತಿಯು ಕಥಾಸ್ಪರ್ಧೆಯ ಮೂಲಕ ಆ ನಿಮ್ಮ ಕನಸನ್ನು ನನಸಾಗಿಸುವ ಸದವಕಾಶ ನೀಡುತ್ತಿದೆ. ಅತ್ಯುತ್ತಮ ಕಥೆಗಳು ಬಹುಮಾನ ಪಡೆಯುವುದರೊಂದಿಗೆ, ಸ್ವರ್ಣಸೇತು 2011ರಲ್ಲಿ ಅಚ್ಚಾಗುವ ಅವಕಾಶ ಪಡೆಯುತ್ತವೆ.

ಅಮೆರಿಕಾದ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟ ಈ ಕಥಾ ಸ್ಪರ್ಧೆಯನ್ನು ಆಯೋಜಿಸಿದೆ. ಕಥೆ ಕಳಿಸುವ ಮುನ್ನ ಸ್ಪರ್ಧೆಯ ನಿಯಮಗಳನ್ನು ತಪ್ಪದೆ ಓದಿರಿ. ಕಥೆಗಳನ್ನು ಸೆಪ್ಟೆಂಬರ್ 25, 2011ರೊಳಗೆ, [email protected]ಗೆ ಕಳುಹಿಸಬೇಕು.

ಸ್ಪರ್ಧೆಯ ನಿಯಮಗಳು:

1. ನಿಮ್ಮ ಸ್ವರಚಿತ ಕಥೆಗಳನ್ನು ಮಾತ್ರ ಕಳುಹಿಸಿಬೇಕು, ಅನುವಾದಿತ ಕಥೆಗಳಿಗೆ ಅವಕಾಶವಿರುವುದಿಲ್ಲ. ನಿಮ್ಮ ಕಥೆ ಈ ಮುನ್ನ ಬೇರೆಲ್ಲೂ ಪ್ರಕಟವಾಗಿರಬಾರದು, ಬಾನುಲಿಯಲ್ಲಿ, ವೆಬ್-ಮ್ಯಾಗ್/ಬ್ಲಾಗ್ ಗಳಲ್ಲಿಯೂ ಪ್ರಕಟವಾಗಿರಬಾರದು.

2. ಕಥೆಗಳು “ಬರಹ", “MS-WORD" ಅಥವಾ “ನುಡಿ"ಯಲ್ಲಿರಬೇಕು. ಕೈ ಬರಹದ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ.

3. ಬರಹ/ನುಡಿಯ 12 ಫಾಂಟ್ ಸೈಜಿನಲ್ಲಿ ನಾಲ್ಕು ಪುಟಗಳಿಗೆ ಮೀರದಂತೆ ನಿಮ್ಮ ಕಥೆ ಅರಳಲಿ.

4. ಸ್ವೀಕರಿಸಿದ ಕಥೆಗಳನ್ನೂ ಸ್ವರ್ಣಸೇತು 2011ರಲ್ಲಿ ಪ್ರಕಟಣೆಗಾಗಿ ಪರಿಗಣಿಸಲಾಗುವುದು. ಪ್ರಕಟಿಸುವ ಅಥವಾ ಪ್ರಕಟಿಸದಿರುವ ತೀರ್ಮಾನ ಸ್ವರ್ಣಸೇತು ಸಂಪಾದಕ ಸಮಿತಿಯದಾಗಿರುತ್ತದೆ.

5. ಸ್ಪರ್ಧೆಗೆ ಕಳುಹಿಸಿದ ಕೃತಿಗಳನ್ನು ಸ್ವರ್ಣಸೇತು-2011 ಬಿಡುಗಡೆಯವರೆಗೂ ಬೇರೆಲ್ಲೂ ಪ್ರಕಟಿಸಬಾರದು.

6. ಕಥೆಗಳನ್ನು ನಿಮ್ಮ ಈ-ಮೇಲ್ ಹಾಗೂ ದೂರವಾಣಿ ಸಂಖ್ಯೆಯ ಜೊತೆಯಲ್ಲಿ ಈ ವಿಳಾಸಕ್ಕೆ ಕಳುಹಿಸಿ [email protected].

7. ಕಥೆಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 25, 2011.

8. ತೀರ್ಪುಗಾರರ ನಿರ್ಧಾರವೇ ಅಂತಿಮ.

ಸಂಪಾದಕ ಸಮಿತಿ, ಸ್ವರ್ಣಸೇತು 2011

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+