ಬಂದಾವನದಲ್ಲಿ ನಲಿದಾಡಿದ ನ್ಯೂಜೆರ್ಸಿ ಮಕ್ಕಳು

ಮಧ್ಯಾಹ್ನ ಹನ್ನೆರಡು ಘಂಟೆಯಿಂದ ಆರಂಭವಾದ ಜೆನರಲ್ ಬಾಡಿ ಮೀಟಿಂಗ್‌ನಲ್ಲಿ 2011ರ ಕಾರ್ಯಕ್ರಮಗಳ ವಿವರ, ಆಯ-ವ್ಯಯ ಹಾಗೂ ಸಂಸ್ಥೆಯ ಬೆಳವಣಿಗೆ ಮತ್ತು ಮುಂಬರುವ ಯೋಜನೆಗಳ ಬಗ್ಗೆ ಸುಧೀರ್ಘವಾಗಿ ಚರ್ಚಿಸಲಾಯಿತು. ಅಧ್ಯಕ್ಷ ಸಂತೋಷ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಮುಂದಿನ ವರ್ಷಗಳ ಕಾರ್ಯಕ್ರಮಗಳ ರೂಪುರೇಶೆಯನ್ನು ವಿವರಿಸಿದರು. ಮುಂಬರುವ ದಿನಗಳಲ್ಲಿ ಚಾರಿಟಿಗೆ ಸಂಬಂಧಿಸಿದ ಕೆಲಸಗಳಿಗೆ ಆದ್ಯತೆ ನೀಡಲಾಗುತ್ತದೆ, ಅಲ್ಲದೇ ಈ ಸಂಘಕ್ಕೆ ತನ್ನದೇ ಆದ ಒಂದು ಸಭಾಭವನದ ಅವಶ್ಯಕತೆ ಇದ್ದು, ಅದಕ್ಕೆ ಸಂಬಂಧಿಸಿದಂತೆಯೂ ಒತ್ತು ನೀಡಲಾಗುತ್ತದೆ ಎಂದು ಹೇಳಿದರು.
ಸಂಗೀತ ಮತ್ತು ನೃತ್ಯ : ಭರತ ನಾಟ್ಯ, ಸಂಗೀತ, ಸಾಮೂಹಿಕ ನೃತ್ಯ ಮತ್ತು ರೂಪಕಗಳನ್ನು ಆಯ್ಕೆ ಮಾಡಲಾಗಿತ್ತು. ನಾಲ್ಕು ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಮಕ್ಕಳು ಹಾಗೂ ಅನೇಕ ತಂಡಗಳು ಸುಮಾರು ಒಂದು ಗಂಟೆಯ ಕಾಲ ಸಭಿಕರನ್ನು ರಂಜಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾವಗೀತೆ, ಕರ್ನಾಟಕ ಸಂಗೀತ, ಅಷ್ಟಲಕ್ಷ್ಮಿ ನೃತ್ಯ, ಚಿತ್ರ ವಿಹಾರ, ಫ್ಯೂಷನ್ ಡ್ಯಾನ್ಸ್, ಇಂದು ಬಾನಿಗೆಲ್ಲ ಹಬ್ಬ, ಭಾಗ್ಯದ ಲಕ್ಷ್ಮಿ ಬಾರಮ್ಮ, ಗಜವದನ ಭರತನಾಟ್ಯ, ನಮ್ಮ ಪ್ರೀತಿಯ ಮಾತೃಭೂಮಿ, ಜಾನಪದ ನೃತ್ಯಗಳು ಜನರ ಮನಸ್ಸನ್ನು ಸೆಳೆಯುವಲ್ಲಿ ಯಶಸ್ವಿಯಾದವು.
ಚಿತ್ರಕಲೆ ಸ್ಪರ್ಧೆ : ಚಿತ್ರಕಲಾ ಸ್ಪರ್ಧೆಯನ್ನು ಮಕ್ಕಳ ವಯೋಮಾನಕ್ಕನುಗುಣವಾಗಿ ಮೂರು ಗುಂಪುಗಳಲ್ಲಿ ಆಯೋಜಿಸಲಾಗಿತ್ತು. ನಾಲ್ಕರಿಂದ ಹದಿನಾರು ವರ್ಷದವರೆಗೆ ಸುಮಾರು ಇಪ್ಪತ್ತು ಮಕ್ಕಳು ತಾವೇ ಮನೆಯಿಂದ ತಂದ ಬಣ್ಣದ ಸಾಮಗ್ರಿಗಳನ್ನು ಬಳಸಿ, ಭಾರತ-ಕರ್ನಾಟಕದ ಬಾವುಟ, ದೀಪಾವಳಿ ಆಚರಣೆ ಹಾಗೂ ಅನೇಕ ಕರ್ನಾಟಕದ ಸ್ಮಾರಕಗಳನ್ನು ಕುರಿತು ಕಪ್ಪು-ಬಿಳಿ ಹಾಗೂ ಬಣ್ಣದ ಕೃತಿಗಳನ್ನು ರಚಿಸಿದ್ದರು. ವಿಜೇತರು : ಸಬ್ ಜ್ಯೂನಿಯರ್: ಗೌರವ್ ಕೊರಟಗೆರೆ, ಕಾರ್ತಿಕ್ ಮುದುಕಲ್ಲಿ ; ಜ್ಯೂನಿಯರ್: ರಿಯಾ ಮೂರ್ತಿ, ಶ್ರೇಯಾ ಗೌಡ ; ಸೀನಿಯರ್: ಅಪೂರ್ವ ರಾವ್, ಆಕಾಶ್ ಮುತ್ತು. ತೀರ್ಪುಗಾರರು: ಶೈಲಾ ಪಾತಂಕರ್, ಛಾಯಾ ಸಮೀರ.
ಫ್ಯಾನ್ಸಿ ಡ್ರೆಸ್ ಮತ್ತು ಬೃಂದಾವನ ಐಡಲ್ 2011 : ಸುಮಾರು ಹತ್ತು ಹನ್ನೆರಡು ಮಕ್ಕಳು ಬಣ್ಣ-ಬಣ್ಣದ ವೇಷಭೂಷಣಗಳಲ್ಲಿ ಕಂಗೊಳಿಸಿದರು. ನಿರೂಪಕರಾಗಿ ಅಮೂಲ್ಯ ಮತ್ತು ಆಕಾಶ್ ಪ್ರತಿಯೊಬ್ಬ ಪುಟಾಣಿಯ ಹೆಸರು ಹಾಗೂ ವೇಷದ ಬಗ್ಗೆ ಕೇಳಿ ತಿಳಿದಾಗ ಪ್ರೇಕ್ಷಕರು ಪ್ರತಿಯೊಂದು ಮಗುವಿಗೂ ಚಪ್ಪಾಳೆಯ ಮೂಲಕ ಮೆಚ್ಚುಗೆ ಸೂಸಿದರು. ಬೃಂದಾವನ ಐಡಲ್ ಕಾರ್ಯಕ್ರಮದಲ್ಲಿ ಅಮೇರಿಕದಲ್ಲಿ ಹುಟ್ಟಿ ಬೆಳೆದ ಮಕ್ಕಳು ಸುಲಲಿತವಾಗಿ ಯಾವುದೇ ಸ್ಕ್ರಿಪ್ಟ್‌ನ ಅಗತ್ಯವಿಲ್ಲದೆ ತಮ್ಮ ಹಾಡಿನ ಪಲ್ಲವಿ ಹಾಗೂ ಒಂದು ಚರಣವನ್ನು ಅಚ್ಚುಕಟ್ಟಾಗಿ ಒಪ್ಪಿಸಿದ್ದು ಪ್ರತಿಯೊಬ್ಬರಿಗೂ ಮೆಚ್ಚುಗೆಯಾಯಿತು. ವಿಜೇತರು : ಸಬ್ ಜ್ಯೂನಿಯರ್: ವೀಣಾ ಕಲ್ಯಾಣಿ ನಾಗಪ್ರಸಾದ್, ನಿಧಿ ಮೂರ್ತಿ ; ಜ್ಯೂನಿಯರ್: ಪ್ರಭಂಜನ್ ಬಾಲಕೃಷ್ಣ, ರಾಜ್‌ಶ್ರೀ ಉಮೇಶ್ ; ಸೀನಿಯರ್: ಪ್ರೀತಿ ಇನಾಮ್‌ದಾರ್, ಲಕ್ಷ್ಮಿ ಶೈಲೇಶ್. ತೀರ್ಪುಗಾರರು: ಸಿಂಹಾದ್ರಿ ಸಂತೇಬೆನ್ನೂರು, ಶಾರದಾ ಖಂಡವಿಲ್ಲಿ. [ಸಂಗೀತ ಸಂಜೆ]
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications