ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರ ಚಿಣ್ಣರ ಸೆಳೆದ ಮಕ್ಕಳ ಚಲನಚಿತ್ರೋತ್ಸವ

By Prasad
|
Google Oneindia Kannada News

International Children's Film Festival
ಕನ್ನಡ ಸಂಘ(ಸಿಂಗಪುರ) ವುಡ್‍ಲ್ಯಾಂಡ್ಸ್ ಕಮ್ಯುನಿಟಿ ಕ್ಲಬ್ ಮತ್ತು ಚಿಲ್ಡ್ರನ್ಸ್ ಇಂಡಿಯಾದ ಜಂಟಿ ಆಯೋಗದಲ್ಲಿ ಪ್ರಪ್ರಥಮ ಮಕ್ಕಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಸೆಪ್ಟೆಂಬರ್ 10 ಮತ್ತು 11ರಂದು ವುಡ್‍ಲ್ಯಾಂಡ್ಸ್ ಕಮ್ಯುನಿಟಿ ಕ್ಲಬ್‍ನ ಸಭಾಂಗಣದಲ್ಲಿ ಏರ್ಪಡಿಸಿತ್ತು. ಚಿ|| ರಂಜನ್ ಆರ್. ಜಮದಗ್ನಿಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಶ್ರೀಗಣೇಶವಾಯಿತು.

ಉದ್ಘಾಟನೆ : ಸಂಘದ ಅಧ್ಯಕ್ಷ ಡಾ| ವಿಜಯ್‍ಕುಮಾರ್, ವುಡ್‍ಲ್ಯಾಂಡ್ಸ್ ಕಮ್ಯುನಿಟಿ ಕ್ಲಬ್‍ನ ಉಪಾಧ್ಯಕ್ಷ ಚಾಂಗ್ ಸೀ ಫ಼ೂಕ್, Woodlands CC(IAEC) ಅಧ್ಯಕ್ಷರಾದ ಅಜೇಯನ್, ಚಲನಚಿತ್ರ ನಿರ್ದೇಶಕರು ಮತ್ತು "ಚಿಲ್ಡ್ರನ್ಸ್ ಇಂಡಿಯಾ"ದ ಅಧ್ಯಕ್ಷ ಎನ್.ಅರ್.ನಂಜುಂಡೇಗೌಡ, ಚಲನಚಿತ್ರ ನಿರ್ದೇಶಕ ಶಿವಾನಂದ ಸೋಮಪ್ಪ ಮತ್ತು ಚಿಣ್ಣರಾದ ಚಿ|| ಶ್ರೇಯಸ್ ಜಮದಗ್ನಿ ಮತ್ತು ಕುಮಾರಿ ವೃಂದ ಕುಲಕರ್ಣಿಯವರ ಸಮಾಗಮದಲ್ಲಿ ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಕನ್ನಡ ಸಂಘ(ಸಿಂಗಪುರ)ದ ಪರವಾಗಿ ಬಂದಂತಹ ಅತಿಥಿಗಳಿಗೆ ಕಿರುಕಾಣಿಕೆಯನ್ನು ಮತ್ತು ಪ್ರದರ್ಶಿಸಲ್ಪಡುವ ಎಲ್ಲ ಚಿತ್ರದ ನಿರ್ದೇಶಕರಿಗೆ ಪ್ರಶಸ್ತಿ ಪತ್ರಗಳನ್ನು ಎನ್.ಆರ್. ನಂಜುಂಡೇಗೌಡ ನೀಡಿದರು.

ಕಾರ್ಯಕ್ರಮ :
ಕನ್ನಡ ಸಂಘದ ಸಹ ಕಾರ್ಯದರ್ಶಿ ರಾಮನಾಥ್ ಎಚ್.ಎಸ್. ಅವರ ಸಾರಥ್ಯದಲ್ಲಿ ನಡೆದ ಮಕ್ಕಳ ಚಲನಚಿತ್ರ ಪ್ರದರ್ಶನಗಳು ಸಿಂಗಪುರದ ಮಕ್ಕಳಿಗೆ ವಿಶೇಷವಾದ ಮನೋರಂಜನೆ ನೀಡುವಲ್ಲಿ ಸಫಲವಾಗಿದ್ದಲ್ಲದೆ ಒಂದು ವಿಭಿನ್ನವಾದ ವಾತಾವರಣವನ್ನು ಮೂಡಿಸಿ ಮಕ್ಕಳನ್ನು ತಮ್ಮದೇ ಆದ ಲೋಕಕ್ಕೆ ಕರೆದೊಯ್ದವುಯ. ಪ್ರತಿಯೊಂದು ಚಿತ್ರ ಶುರುವಾಗುವುದಕ್ಕೆ ಮುಂಚಿತವಾಗಿ ಮಕ್ಕಳಿಂದ ಆ ಚಲನಚಿತ್ರದ ಸಾರಾಂಶವನ್ನು ಇಂಗ್ಲಿಷ್ ಮತ್ತು ಚಿತ್ರದ ಮೂಲ ಭಾಷೆಯಲ್ಲಿ ಕತೆಯ ರೂಪದಲ್ಲಿ ಹೇಳಿಸಿದ್ದು ಮೆಚ್ಚುಗೆಗೆ ಪಾತ್ರವಾಯಿತು.

ಈ ಕಾರ್ಯಕ್ರಮದ ಮೊದಲನೇ ದಿನ ಎನ್.ಆರ್.ನಂಜುಂಡೇಗೌಡರು ನಿರ್ದೇಶಿಸಿದ "ನಾನು ಗಾಂಧಿ"(ಕನ್ನಡ), "ಫ಼ೋಟೊ" (ಹಿಂದಿ) ಮತ್ತು "ಚಿನ್ನಾರಿ ಪಂತುಲಮ್ಮ" (ತೆಲುಗು) ಚಿತ್ರಗಳು ಪ್ರದರ್ಶನಗೊಂಡವು. ಎರಡನೆ ದಿನ "ಅಪ್ಪು ಮತ್ತು ಪಪ್ಪು" (ಕನ್ನಡ), ಗುಬ್ಬಚ್ಚಿಗಳು (ಕನ್ನಡ) ಮತ್ತು "Magical Tortoise"(ಚೈನೀಸ್) ಚಿತ್ರಗಳು ಪ್ರದರ್ಶನಗೊಂಡವು. ಈ ಎಲ್ಲ ಚಿತ್ರಗಳಿಗೆ ಸಿಂಗಪುರದ ಮಕ್ಕಳಾದ ವೃಂದ ಕುಲಕರ್ಣಿ, ಖುಷಿ ಉದಯಕುಮಾರ್, ಸಂಜಯ್‍ ವಿಜಯ್ ಕಾಶ್ಯಪ್, ರಂಜನ್ ಆರ್. ಜಮದಗ್ನಿ, ಸಾತ್ವಿಕ್ ವಿಜಯ್ ಕಾಶ್ಯಪ್, ಕ್ಷೀರಜ ಕಿಶೋರ್, ಪ್ರಜ್ವಲಾ ಕನಕೇಶ್, ಶ್ರೇಯಸ್ ಭಾರದ್ವಾಜ್, ನಿಹಾರ್ ಹೆಗ್ಡೆ, ನವ್ಯಶ್ರೀ, ವೇಣುಗೋಪಾಲ್ ಕುಲಕರ್ಣಿ, ರಚನ ಆರ್. ಜಮದಗ್ನಿ ಮತ್ತು ಮನೋಜ್ಞ ಅನುಕ್ರಮವಾಗಿ ಚಿತ್ರದ ಸಾರಾಂಶವನ್ನು ಓದಿ, ಚಿಲ್ಡ್ರನ್ಸ್ ಇಂಡಿಯಾದ ಅಧ್ಯಕ್ಷರಾದ ನಂಜುಂಡೇಗೌಡರಿಂದ ಕಾಣಿಕೆಯನ್ನು ಪಡೆದರು.

ಪ್ರಶಸ್ತಿಗಳು : ಎನ್.ಆರ್.ನಂಜುಂಡೇಗೌಡ ನಿರ್ದೇಶನದ "ನಾನು ಗಾಂಧಿ"ಯ ಪಾತ್ರಧಾರಿ ಮಾಸ್ಟರ್ ಲಿಖಿತ್‍ಗೆ ಕರ್ನಾಟಕ ರಾಜ್ಯ ಸರ್ಕಾರದ "ಅತ್ಯುತ್ತಮ ಬಾಲನಟ" ಪ್ರಶಸ್ತಿ ಮತ್ತು ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ, ಕೊಲಂಬಿಯ-2008ರಲ್ಲಿ ನಡೆದ ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ "ಅತ್ಯುತ್ತಮ ಮಕ್ಕಳ ಚಿತ್ರ ಮತ್ತು ಅತ್ಯುತ್ತಮ ಬಾಲನಟ ಪ್ರಶಸ್ತಿಗಳನ್ನು ಗಳಿಸಿದೆ. ಅಭಯಸಿಂಹ ಅವರ ನಿರ್ದೇಶನದ "ಗುಬ್ಬಚ್ಚಿಗಳು" ಮಕ್ಕಳ ಚಿತ್ರದ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ತನ್ನ ಮಡಿಲಿಗೆ ಸೇರಿಸಿಕೊಂಡಿದೆ. "ಮ್ಯಾಜಿಕಲ್ ಟಾರ್‌ಟೈಸ್" ಚಿತ್ರದಲ್ಲಿನ ನಟನೆಗಾಗಿ ಮಾಸ್ಟರ್ ವಾಂಗ್ ಚೆಂಗ್‍ಯಾಂಗ್ ವಿದೇಶಿ ವಿಭಾಗದಲ್ಲಿ ಅತ್ಯುತ್ತಮ ಬಾಲನಟ ಪ್ರಶಸ್ತಿಯನ್ನು ಪಡೆದಿದ್ದಾನೆ.

ಎರಡೂ ದಿನ ಒಟ್ಟು ಸುಮಾರು 250 ಪ್ರೇಕ್ಷಕರಿಗೆ ಚಲನಚಿತ್ರ ಪ್ರದರ್ಶನಗಳ ನಡುವೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಎಲ್ಲಾ ಚಿತ್ರಗಳ ಬಗ್ಗೆ ಮಕ್ಕಳು ತಮ್ಮ ಅನಿಸಿಕೆಗಳನ್ನು ಕನ್ನಡ ಸಂಘಕ್ಕೆ ಕತೆ, ಕವನ, ಚುಟುಕ, ಬರಹ ಇನ್ಯಾವುದೇ ರೂಪದಲ್ಲಿ ಬರೆದು ತಿಳಿಸಬೇಕಾಗಿ ಕೋರಿದ ಸಂಘದ ಅಧ್ಯಕ್ಷರಾದ ಡಾ. ವಿಜಯ ಕುಮಾರ್ ಅವರು "ಇದರಿಂದ ಮಕ್ಕಳು ಚಿತ್ರದಲ್ಲಿ ತಮ್ಮನ್ನು ತಾವು ಕಂಡುಕೊಂಡ ಬಗೆಗೆ ಒಂದಷ್ಟು ಮಾಹಿತಿ ಮತ್ತು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವಲ್ಲಿನ ಸಣ್ಣ ಪ್ರಯತ್ನ ಬಹುಶಃ ಸಫಲವಾಗುತ್ತದೆ" ಎನ್ನುವ ಆಶಯ ವ್ಯಕ್ತಪಡಿಸಿದರು.

English summary
International Children's Film Festival was held in Singapore for the first time by Kannada Sangha (Singapore) in collaboration with Woodland Community Club and Childrens India on September 10 and 11. Various children movies including Gubbacchigalu and Naanu Gandhi were screened in the festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X