ಅಮೆರಿಕಾದಲ್ಲಿ ವೈಭವದ ಗುರುರಾಯರ ಆರಾಧನೆ

ಮುಖ್ಯ ಅರ್ಚಕ ಯೋಗೀಂದ್ರ ಭಟ್ಟರ ನೇತೃತ್ವದಲ್ಲಿ ಶ್ರೀ ರಾಯರಿಗೆ ಪಂಚಾಮೃತ ಅಭಿಷೇಕ, ಅಷ್ಟೋತ್ತರ, ಮಹಾಪೂಜೆ, ಅಲಂಕಾರ ಪಂಕ್ತಿ, ಸಾಯಂ ರಂಗ ಪೂಜೆ, ಅಷ್ಟಾವಧಾನ ಇತ್ಯಾದಿ ಸೇವೆಗಳು ಸಂಪನ್ನಗೊಂಡವು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ಸೀತಾಲಕ್ಷ್ಮಿ ಮಾಧವನ್ ಮತ್ತು ವೃಂದದವರಿಂದ ಸುಗಮ ಸಂಗೀತ, ಯೋಗೀಂದ್ರ ಭಟ್ ಇವರಿಂದ ಶ್ರೀ ರಾಯರ ಗ್ರಂಥಗಳ ಬಗ್ಗೆ ಉಪನ್ಯಾಸ ನಡೆಯಿತು.
ಕೆನಡಾದಲ್ಲಿ ಚಾತುರ್ಮಾಸ್ಯ ದೀಕ್ಷಿತರಾಗಿರುವ ಉಡುಪಿ ಶ್ರೀ ಪುತ್ತಿಗೆ ಮಠಾಧೀಶ ಪರಮಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ವೀಡಿಯೋ ಸಂದೇಶದ ಮೂಲಕ ನೆರೆದ ಭಕ್ತರನ್ನು ಹರಸಿದರು.
ಸಾವಿರಾರು ಕನ್ನಡಿಗರು ಏಕಕಾಲದಲ್ಲಿ ಒಟ್ಟು ಸೇರಿ ಸಂಭ್ರಮಿಸುವ, ವಿದೇಶದಲ್ಲಿರುವ ಏಕೈಕ ಧಾರ್ಮಿಕ ಸಂಸ್ಥೆ ಎನ್ನುವ ಹಿರಿಮೆ ನ್ಯೂಜೆರ್ಸಿಯ ಶ್ರೀ ಕೃಷ್ಣವೃಂದಾವನದ್ದಾಗಿದೆ.











Click it and Unblock the Notifications