ಬೃಂದಾವನ ವಿಹಾರದಲ್ಲಿ ಸದಾನಂದ ವಿಶ್ವನಾಥ್

Sadanand Vishwanath
ಬೃಂದಾವನ ಕನ್ನಡ ಕೂಟದ ಈ ವರ್ಷದ ಪಿಕ್‌ನಿಕ್, ಬೃಂದಾವನ ವಿಹಾರವನ್ನು ಇದೇ ಶನಿವಾರ ಜುಲೈ 16ರಂದು ಬಹಳ ಅದ್ದೂರಿಯಾಗಿ ನಡೆಸಿಕೊಡಲಾಯಿತು. ಪ್ರಖ್ಯಾತ ಮಾಜಿ ಕ್ರಿಕೆಟ್ ಆಟಗಾರ ಸದಾನಂದ್ ವಿಶ್ವನಾಥ್ ಅವರು ಮುಖ್ಯ ಅತಿಥಿಗಳಾಗಿ ಈ ಹೊರಾಂಗಣ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಕ್ರಿಕೆಟ್ ಅಭಿಮಾನಿಗಳಲ್ಲಿ ಮಿಂಚಿನ ಸಂಚಲನವನ್ನು ಮೂಡಿಸಿದ್ದರು.

ಪ್ರತಿವರ್ಷದಂತೆ ಬೃಂದಾವನ ಕನ್ನಡ ಕೂಟದ ಕನ್ನಡಿಗರಿಗೆ ಈ ವರ್ಷದ ಬೇಸಿಗೆ ವಿಹಾರದಲ್ಲಿ ತಮ್ಮ ಆತ್ಮೀಯರನ್ನು, ಬಂಧು-ಮಿತ್ರರನ್ನು ಭೇಟಿ ಮಾಡುವ ಸದವಕಾಶವನ್ನು ಒದಗಿಸುವುದರ ಜೊತೆಗೆ ಹಮ್ಮಿಕೊಂಡ ಅನೇಕ ಆಟೋಟ ಕಾರ್ಯಕ್ರಮಗಳಲ್ಲೂ ಭಾಗವಹಿಸುವ ಅವಕಾಶವನ್ನು ಕಲ್ಪಿಸಿಕೊಡಲಾಗಿತ್ತು. ಎರಡು ವರ್ಷದ ಎಳೆಯರಿಂದ ಹಿಡಿದು 85ರ ಹಿರಿಯರವರೆಗೆ ಕೆಲವು ತಲೆಮಾರುಗಳು ಒಂದೇ ಕಾರ್ಯಕ್ರಮದಡಿ ಸೇರುವ ಮಹಾವಕಾಶ ಇದಾಗಿತ್ತು.

ಗಮನ ಸೆಳೆದ ಅಂಶಗಳು:

* ಮಕ್ಕಳು ಅಮೇರಿಕನ್ ರೆಡ್‌ಕ್ರಾಸ್‌ಗೆಂದು ಒಂದು ಚಾರಿಟಿ ಬೂತ್ ತೆರೆದು ಅದರ ಮೂಲಕ ಸೋಡಾ, ನೀರು, ಐಸ್ ಕ್ರೀಮ್ ಹಾಗೂ ತುಳಸಿ ಮೊದಲಾದ ಗಿಡಗಳನ್ನು ಮಾರುವುದರ ಮೂಲಕ ಸುಮಾರು ನೂರೈವತ್ತು ಡಾಲರುಗಳನ್ನು ಸಂಗ್ರಹಿಸಿದರು.

* ಖ್ಯಾತ ಕ್ರಿಕೆಟ್ ಪಟು ಹಾಗೂ ಅಂಪೈರ್ ಸದಾನಂದ್ ವಿಶ್ವನಾಥ್ ಅವರು ನಡೆಸಿಕೊಟ್ಟ ಕ್ರಿಕೆಟ್ ಮ್ಯಾಚ್ ಟೈನಲ್ಲಿ ಕೊನೆಗೊಂಡಿತು.

* ಮಕ್ಕಳು ಮತ್ತು ಹಿರಿಯರು ಭಾಗವಹಿಸಿ ಬಹಳ ಕುತೂಹಲ ಮೂಡಿಸಿದ್ದ ಟಗ್ ಆಫ್ ವಾರ್ ಆಟ ಹಗ್ಗ ತುಂಡಾವುದರೊಂದಿಗೆ ಕೊನೆಗೊಂಡಿತು.

* ಸುಮಾರು ಐವತ್ತು ಹೊಸ ಕನ್ನಡ ಕುಟುಂಬಗಳು ಬೃಂದಾವನ ಕನ್ನಡ ಕೂಟವನ್ನು ಸೇರಿಕೊಂಡವು.

* ಹಿರಿಯರು ಹಾಗೂ ಕಿರಿಯರು ಒಟ್ಟಿಗೆ ಸೇರಿ ಬಹಳ ಸಂಭ್ರಮದ ವಾತಾವರಣ ಸೃಷ್ಟಿಯಾಗಿತ್ತು, ಶುಭ್ರ ಬೇಸಿಗೆ ಬಿಸಿಲಿನ್ನು ಛೇಡಿಸಿ ಸುಂದರವಾದ ಬಣ್ಣದ ಗಾಳಿಪಟವೊಂದು ಹಾಯಾಗಿ ನೀಲಿಯಲ್ಲಿ ತೇಲುತ್ತಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+