ಕೆಕೆಎನ್ ಸಿಯಲ್ಲಿ ಎಳೆ ಚಿಗುರುಗಳ ಯುಗಾದಿ

ನಟನೆ, ನರ್ತನೆ, ಸಂಗೀತ, ಹಾಡುಗಾರಿಕೆ, ಅನುಕರಣೆ, ಜಾದೂ ಪ್ರದರ್ಶನ ಅಥವಾ ಸಭಿಕರನ್ನು ಹಿಡಿದಿಟ್ಟುಕೊಳ್ಳುವಂಥ ಯಾವುದೇ ಆದ ಸೃಜನಾತ್ಮಕ ಕಲೆಯನ್ನು ಚಿಣ್ಣರು ಪ್ರದರ್ಶಿಸಬಹುದಾಗಿದೆ. ಏಪ್ರಿಲ್ 23ರಂದು ಸನ್ನಿವೇಲ್ ದೇವಸ್ಥಾನದ ಸಭಾಂಗಣದಲ್ಲಿ ಯುಗಾದಿ ಉತ್ಸವಾಚರಣೆಯ ಸಂದರ್ಭದಲ್ಲಿ ಅಂತಿಮ ಸ್ಪರ್ಧೆ ನಡೆಯಲಿದೆ.
4ರಿಂದ 8, 8ರಿಂದ 12 ಮತ್ತು 12ರಿಂದ 16 ವರ್ಷದ ಮಕ್ಕಳ ಮೂರು ವಿಭಾಗಗಳನ್ನು ಮಾಡಲಾಗಿದೆ. ಪ್ರತಿ ವಿಭಾಗದಲ್ಲಿ ಅಂತಿಮ ಹಂತ ತಲುಪಿದ ಐವರು ಮಕ್ಕಳ ನಡುವೆ ಸ್ಪರ್ಧೆ ನಡೆಯಲಿದೆ. ಗೆದ್ದ ಮೂವರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಇಲ್ಲಿ ಕೆಕೆಎನ್ ಸಿಯ ಮಕ್ಕಳಿಗೆ ಮಾತ್ರ ಸ್ಪರ್ಧಿಸಲು ಅವಕಾಶ ನೀಡಲಾಗಿದೆ.
ಖರನಾಮ ಸಂವತ್ಸರದ ಯುಗಾದಿ ಆಚರಣೆಯಲ್ಲಿ ಮರಿ ಕೋಗಿಲೆಗಳು ಉಲಿಯಲಿವೆ. ಚೈತ್ರದ ಎಳೆ ಚಿಗುರುಗಳು ನಲಿದಾಡಲಿವೆ. ಹೊಸ ಸೊಬಗು, ಹೊಸ ಹುಮ್ಮಸ್ಸಿನೊಂದಿಗೆ ಹೊಸ ವರ್ಷ ಆಚರಣೆಗೆ ಚುಲ್ಟಾರಿಗಳು ರಂಗು ತರಲಿದ್ದಾರೆ. ಕೆಕೆಎನ್ ಸಿ ಸದಸ್ಯರಿಗೆಲ್ಲ ಖರನಾಮ ಸಂವತ್ಸರ ಶುಭಕರವಾಗಿರಲಿ.












Click it and Unblock the Notifications