ಐದನೇ ವಸಂತ ಸಾಹಿತ್ಯೋತ್ಸವಕ್ಕೆ ಭರದ ಸಿದ್ಧತೆ

ಅಮೆರಿಕಾದ ಸಾಹಿತ್ಯ ಪ್ರೇಮಿಗಳಿಗೆ ರಸದೌತಣ ನೀಡಲಿದೆ. ಕನ್ನಡ ಸಾಹಿತ್ಯ ರಂಗ ತನ್ನ ಐದನೆಯ ಪ್ರಕಟಣೆಯನ್ನು ಲೋಕಾರ್ಪಣೆ ಮಾಡುತ್ತಿದೆ. ನಮ್ಮ ಹೆಮ್ಮೆಯ ಬರಹಗಾರರು ಎಂಬ ಕಾರ್ಯಕ್ರಮದಡಿ ಅಮೆರಿಕಾದ ಬರಹಗಾರರು ಮತ್ತು ಅವರ ಕೃತಿಗಳನ್ನು ಪರಿಚಯ ಮಾಡಿಕೊಡುವ ಯತ್ನಕ್ಕೆ ಕನ್ನಡ ಸಾಹಿತ್ಯ ರಂಗ ಮುಂದಾಗಿದೆ.
ಸಾಹಿತ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಕನ್ನಡದ ಖ್ಯಾತ ಸಾಹಿತಿ ಸುಮತೀಂದ್ರ ನಾಡಿಗ್ ಅವರು ಬರುತ್ತಿದ್ದಾರೆ. ಅಲ್ಲದೆ ಕನ್ನಡದ ಅತ್ಯುತ್ತಮ ಹಾಸ್ಯ ಸಾಹಿತಿಗಳಲ್ಲೊಬ್ಬರಾದ ಭುವನೇಶ್ವರಿ ಹೆಗಡೆ ಅವರು ವಿಶೇಷ ಅತಿಥಿಯಾಗಿ ಬರುತ್ತಿದ್ದಾರೆ.
ಕಾರ್ಯಕ್ರಮದ ವಿಶೇಷಗಳು
* ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಮೌಖಿಕ ಭಾಷಣ.
* ಕನ್ನಡ ಸಾಹಿತ್ಯ ರಂಗದ 5ನೇ ಪ್ರಕಟಣೆ (ಪ್ರಬಂಧ ಸಂಕಲನ) ಮತ್ತು ಇತರ ಪುಸ್ತಕಗಳ ಲೋಕಾರ್ಪಣೆ.
* ಕವಿಗೋಷ್ಠಿ ಮತ್ತು ಸಾಹಿತ್ಯಗೋಷ್ಠಿಗಳು
* ಅತಿಥಿಗಳೊಂದಿಗೆ ಸಂವಾದ
* ಕನ್ನಡ ಕಲಿಯುತ್ತಿರುವ ಮಕ್ಕಳಿಂದ ಕಾರ್ಯಕ್ರಮ
* ಅಮೆರಿಕಾದ ಬರಹಗಾರರ ಇತ್ತೀಚಿನ ಕೃತಿಗಳ ಪರಿಚಯ
* ಪುಸ್ತಕಗಳ ಮಾರಾಟ
ಈ ಸಾಹಿತ್ಯ ಸಂಭ್ರಮದಲ್ಲಿ ಭಾಗವಹಿಸುವವರಿಗೆ ನೊಂದಣಿ ಮತ್ತು ಕಾರ್ಯಕ್ರಮದ ಸಂಪೂರ್ಣ ವಿವರಗಳನ್ನು ಸದ್ಯದಲ್ಲೇ ಪ್ರಕಟಿಸಲಾಗುವುದೆಂದು ಕನ್ನಡ ಸಾಹಿತ್ಯ ರಂಗದ ಸಂಘಟಕರು ಹೇಳಿದ್ದಾರೆ.
ಸಂಪರ್ಕಿಸಿ : ಎಚ್.ವೈ.ರಾಜಗೋಪಾಲ್ ([email protected]); ವಲ್ಲೀಶ ಶಾಸ್ತ್ರಿ ([email protected]); ಅಲಮೇಲು ಐಯಂಗಾರ್ ([email protected]); ಪದ್ಮಾ ರಾವ್ ([email protected]); ವಿಶ್ವನಾಥ ಹುಲಿಕಲ್ ([email protected])












Click it and Unblock the Notifications