ಬೃಂದಾವನದ ಸಾರಥಿ ಸಂತೋಷ್ ಕಡ್ಳೇಬೇಳೆ

ಸಂತೋಷ್ ಕುಮಾರ್ ಕಡ್ಳೆಬೇಳೆ , ಅಧ್ಯಕ್ಷರು ; ಮ್ಯಾಟ್ ಸುರೇಶ್ , ನಿರ್ದೇಶಕರು (ಸಾಮರ್ಸೆಟ್ ಕೌಂಟಿ) ; ಸತೀಶ್ ಹೊಸನಗರ , ನಿರ್ದೇಶಕರು (ಮಾರ್ರಿಸ್ ಮತ್ತು ಮನಮೌತ್ ಕೌಂಟಿ) ; ಡಾ. ಸಿರಿ ಸಾಯಿ ಗೌಡ , ನಿರ್ದೇಶಕರು (ಅಟ್ಲಾಂಟಿಕ್, ಬರ್ಗನ್, ಬರ್ಲಿಂಗ್ಟನ್ ಮತ್ತು ಹಡ್ಸನ್ ಕೌಂಟಿ) ; ಮುರಳಿ ಮರಿಯಪ್ಪ , ನಿರ್ದೇಶಕರು (ಮರ್ಸರ್ ಕೌಂಟಿ); ಅಶೋಕ್ ಕಟ್ಟೀಮನಿ , ನಿರ್ದೇಶಕರು (ಮಿಡಲ್ ಸೆಕ್ಸ್ ಕೌಂಟಿ) ; ಪದ್ಮಿನಿ ಹೇಮಂತ್ , ನಿರ್ದೇಶಕರು (ಮಿಡಲ್‌ಸೆಕ್ಸ್ ಕೌಂಟಿ); ಡಾ. ರಾಜು ಮುತ್ತು , ನಿರ್ದೇಶಕರು (ಮಿಡಲ್ ಸೆಕ್ಸ್ ಕೌಂಟಿ) ರವಿ ಲಂಬಿ , ನಿರ್ದೇಶಕರು (ಮಿಡಲ್ ಸೆಕ್ಸ್ ಕೌಂಟಿ)
ಇದೇ ಪ್ರಥಮ ಬಾರಿಗೆ "ಬೃಂದಾವನ" ವಿಶ್ವಸ್ಥ ಮಂಡಲಿಗೆ (ಬೋರ್ಡ್ ಆಫ್ ಟ್ರಸ್ಟೀಸ್) ನಡೆದ ಚುನಾವಣೆಯಲ್ಲಿ "ಬೃಂದಾವನ" ದ ಮೂವರು ಅಜೀವ ಸದಸ್ಯರಾದ ಬೆನ್ ಕಾಂತರಾಜು, ವಿ. ಪ್ರಸನ್ನ ಕುಮಾರ್, ವಿಜೇಂದ್ರ ಮೂರ್ತಿ ಅವರುಗಳನ್ನು 2011-14 ರ ಅವಧಿಗೆ (ನಾಲ್ಕು ವರ್ಷ) ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿ ಡಾ. ಎಂ. ಜಿ. ಪ್ರಸಾದ್ ದಟ್ಸ್ ಕನ್ನಡಕ್ಕೆ ತಿಳಿಸಿದರು.
ನೂತನವಾಗಿ ಆಯ್ಕೆಯಾದ ಕಾರ್ಯಕಾರಿ ಮಂಡಳಿ ಮತ್ತು ವಿಶ್ವಸ್ಥ ಮಂಡಳಿಯ ಸದಸ್ಯರಿಗೆ ನಿರ್ಗಮಿಸುತ್ತಿರುವ ಬೃಂದಾವನ ಕನ್ನಡ ಸಂಘದ ಸ್ಫೂರ್ತಿ ತಂಡದ ಅಧ್ಯಕ್ಷೆ ಶ್ರೀಮತಿ ಉಷಾ ಪ್ರಸನ್ನಕುಮಾರ್ ಶುಭಾಶಯಗಳನ್ನು ಕೋರಿದ್ದಾರೆ. [ಬೃಂದಾವನ]












Click it and Unblock the Notifications