ತಪ್ಪು ತಿದ್ದಿಕೊಳ್ಳುವಲ್ಲಿ ಸಂಕೋಚವೇಕೆ?

ಆ ಹಿರಿಯವರು ಎಲ್ಲರನ್ನು ಬಹಳ ಪ್ರೀತಿಯಿಂದ ಮಾತನಾಡಿಸಿದ ಮೇಲೆ, ಆಶೀರ್ವದಿಸುವಾಗ, ಶ್ಲೋಕವನ್ನು ಹೇಳುತ್ತ ಬಹಳ ಉತ್ಸುಕತೆಯಿಂದ ಆ ವಯಸ್ಸಿನಲ್ಲಿಯೂ ಆಶೀರ್ವಚನ ನೀಡುತ್ತಿದ್ದರು. ನನ್ನ ಮಕ್ಕಳಿಗೆ ಮತ್ತು ನನ್ನ ಅಣ್ಣನ ಮಕ್ಕಳಿಗೆ ಆಶೀರ್ವದಿಸುವಾಗ, ಅವರಿಗೆ ಗೊತ್ತಿದ್ದ ಆಂಗ್ಲ ಪದಗಳನ್ನು ಬಳಸಿ ಹೇಳಲು ನಾಚಿಕೊಳ್ಳುತ್ತಿದ್ದರು. ಅವರು ನಾವು ಚಿಕ್ಕವರಿದ್ದಾಗಿನಿಂದ ನೋಡಿದ್ದವರು. ಆಂಗ್ಲ ಭಾಷೆ ಅರಿತವರು. ಆ ಜಾಗದಲ್ಲಿ ಅವರ ಯಜಮಾನರು ಬಿಟ್ಟರೆ ಬೇರೆ ಯಾರೂ ಇರಲಿಲ್ಲ.
ನನಗೆ ಆಶ್ಚರ್ಯ ಕೂಡಿದ ಸೋಜಿಗವಾಯಿತು. ಆಕೆ ಅರ್ಧ ಶತಮಾನ ಅವರ ಗಂಡನ ಜೊತೆಯಲ್ಲಿ ಕಳೆದಿದ್ದಾರೆ. ತಮ್ಮ ಜೀವನದ, ನೋವು, ನುಡಿ, ಸಹಿ-ಕಹಿ ನೆನಪುಗಳನ್ನು ಹಂಚಿಕೊಂಡಿದ್ದಾರೆ. ದೇಶ ವಿದೇಶ ಸುತ್ತಿದ್ದಾರೆ. ಹಾಗಿರುವಾಗ, ಸ್ವಂತ ಜನಗಳ ಮುಂದೆ, ಕುಟುಂಬದವರ ಮುಂದೆ ಆ ಹಿರಿಯರು ನಾಚಿಕೊಳ್ಳುವುದು ಕಂಡು ನನಗೆ ಒಂದು ಕ್ಷಣ ಅಚ್ಚರಿಯಾಯಿತು. ಏಕೆಂದು ನಾನು ಮತ್ತು ನನ್ನ ಅಣ್ಣನವರು ಅವರನ್ನು ಇಬ್ಬಂದಿಯಲ್ಲಿ ಸಿಕ್ಕಿಸಲಾರದೆ ಪ್ರಶ್ನಿಸಲಿಲ್ಲ.
ಸ್ವಲ್ಪ ಸಮಯದ ನಂತರ ಆಕೆಯೇ ನನ್ನ ಹತ್ತಿರ ಬಂದು 'ನನಗೆ ನನ್ನವರ ಮುಂದೆ ಆಂಗ್ಲ ಪದಗಳನ್ನು ಬಳಕೆ ಮಾಡಲು ಮುಜುಗರವಾಗುತ್ತದೆ, ದಯವಿಟ್ಟು ಕ್ಷಮಿಸಿ' ಎಂದರು. ಆ ಹಿರಿಯವರು ಕ್ಷಮಿಸುವಂಥ ಯಾವ ಕೆಲಸವನ್ನು ಮಾಡಿರಲಿಲ್ಲ. ಆಂಗ್ಲ ಭಾಷೆ ಬಳಸದಿದ್ದರೂ ಪರವಾಗಿಲ್ಲ. ಆದರೆ ಆಕೆ ಹೇಳಿದ ಕಾರಣ ಕೇಳಿ ಯೋಚಿಸುವಂತಾಯಿತು. ಆಕೆಯ ಹಿಂಜರಿಯುವಿಕೆಯ ಕಾರಣ ಆಮೇಲೆ ವ್ಯಕ್ತವಾಯಿತು. ಆ ಹಿರಿಯ ದಂಪತಿಗಳು ವಿದೇಶದಲ್ಲಿರುವಾಗ, ಯಾವಾಗಲೋ ಒಮ್ಮೆ ಒಂದು ಆಂಗ್ಲ ಪದವನ್ನು ತಪ್ಪಾಗಿ ಉಚ್ಚರಿಸಿದ್ದರಂತೆ. ಜೊತೆಯಲ್ಲಿದ್ದ ಅವರ ಬಾಳ ಸಂಗಾತಿ ಅದನ್ನು ಬೇರೆಯವರ ಮುಂದೆ ಈಕೆಯ ಮನೋಸಂಕಟ ಅರಿಯದೆ ಹೇಳಿಬಿಟ್ಟಿದ್ದಾರೆ. ಈ ಹಿರಿಯ ಜೀವಕ್ಕೆ ಅದು ಅಪಾರ ಸಂಕಟ ತಂದಿದೆ. ತನ್ನ ಜೀವನ ಸಂಗಾತಿಯಾದವರು ತನ್ನನ್ನು ಬೇರೆಯವರ ಮುಂದೆ ವಿಮರ್ಶಿಸದೇ, ವೈಯಕ್ತಿಕವಾಗಿ ಹೇಳಬಹುದಿತ್ತಲ್ಲ ಎಂದು.
ಇದನ್ನು ಕೇಳಿದಾಗ ನನಗೆ ನಾನು ಮೊದಲ ಸಾರಿ ನನ್ನವರ ಜೊತೆ ಒಂದು ಕೂಟಕ್ಕೆ(ಪಾರ್ಟಿಗೆ) ಹೋದಾಗ ಮಾಡಿದ ಉಚ್ಚಾರಣೆಯ ತಪ್ಪು ನೆನಪಾಯಿತು. ಆಗ ನನ್ನ ಮನೆಯವರು ಥಟ್ಟನೆ ನನ್ನನ್ನು ಎಲ್ಲರ ಮುಂದೆ ಸರಿಪಡಿಸಿದ್ದರು. ಆಗ ಅವರ ಗೆಳೆಯರೊಬ್ಬರು ನನಗೆ ಸಮಾಧಾನವಾಗಿ ವಿವರಿಸಿದರು. ನನ್ನ ಮನೆಯವರಿಗೆ ನನ್ನ ತಪ್ಪೇನು ಇಲ್ಲವೆಂದು ಹೇಳಿ, ಎಲ್ಲರೂ ಮಾಡುವ ಒಂದು ಸಹಜವಾದ ಕ್ರಿಯೆಯೆಂದು, ಅವಮಾನ ಪಡಲು ಏನು ಆಗಿಲ್ಲವೆಂದು ಪ್ರೋತ್ಸಾಹಿಸಿದರು.
ಅಮೇರಿಕಾದಲ್ಲಿ ಕೆಲವು ಊರಿನ ಹೆಸರುಗಳು ಬರೆಯುವುದಕ್ಕಿಂತ ಕರೆಯುವಾಗ ಬೇರೆ ತರಹ ಉಚ್ಚರಿಸುತ್ತಾರೆ. ಉದಾಹರಣೆಗೆ San Jose ಅನ್ನು ಸಾನ್ ಹೋಸೆ ಎಂದು, Sean ಎಂಬುವ ಹೆಸರನ್ನು ಶಾನ್ ಎಂದು ಕರೆಯುವುದು, ಹೀಗೆ ಹಲವಾರು ಪದಗಳ ಬೇರೆ ಆಡುವಿಕೆ ಇದೆ. ಏಕೆಂದು ಹೇಳಿದೆನೆಂದರೆ, ನಮ್ಮ ದೇಶದ ಗಂಡಸರು ಹೆಂಡತಿಯನ್ನು ಎಲ್ಲರ ಮುಂದೆ ವಿಮರ್ಶಿಸುವುದನ್ನು ಕಂಡಿದ್ದೇನೆ. ನಾನು ಒಂದು blanket statement ಮಾಡುತ್ತಿದ್ದೆನಾದರೂ, ಎಲ್ಲರೂ ಹಾಗೆ ಇರುವುದಿಲ್ಲ, ಆದರೂ ಅಧಿಕ ಪಕ್ಷ ಇದೆ ಎಂದು ಹೇಳಬಲ್ಲೆ (ಕೆಲವು ಹೆಂಗಸರೂ ಈ ಪಕ್ಷಕ್ಕೆ ಸೇರಿಸಿಕೊಳ್ಳಬಹುದು). ಅದು ಅವರಿಗೆ ಒಂದು ಜಂಭ ಕೊಡುವ ವಿಷಯವಿರಬಹುದು. ಅಥವಾ ಅದು ಒಂದು ಸಾಮಾನ್ಯದ ಸಂಗತಿಯೆಂದು ಅವರಿಗೆ ಅನ್ನಿಸಬಹುದು. ಇದು ಬರಿ ನಮ್ಮ ದೇಶಕ್ಕೆ ಮಾತ್ರ ಸೀಮಿತವಾದದ್ದಲ್ಲ. ನನ್ನ ಪಾಕಿಸ್ತಾನಿ, ಬಾಂಗ್ಲಾ ದೇಶಿ, ಅಥವಾ ಸೌತ್ ಏಶಿಯನ್ ಗೆಳೆಯರ/ಬಳಗದ ಅಭಿಪ್ರಾಯವು ಕೂಡ.
ಏಕೆಂದು ನನಗೆ ಗೊತ್ತಿಲ್ಲ. ಇದನ್ನು ನಾನು gender bias ಎಂದು ಹೇಳಲಾರೆ. ಅನ್ಯ ಆಂಗ್ಲ ಗೆಳೆಯರ ಕೂಟದಲ್ಲಿ ಒಡನಾಡುವಾಗ, ಅವರುಗಳು ಒಬ್ಬರಿಗೊಬ್ಬರು ದಂಪತಿಗಳು ತಮ್ಮ ತಮ್ಮ ಜೀವನ ಸಂಗಾತಿಯನ್ನು ಪ್ರೋತ್ಸಾಹಿಸಿ compliment ಮಾಡುತ್ತಾರೆ. ಮಕ್ಕಳ ಬಗ್ಗೆ ಆದರೂ ಅಷ್ಟೇ. ಸಭೆಯಲ್ಲಿ ಎಂದೂ ಯಾರನ್ನೂ ವಿಮರ್ಶಾತ್ಮಕ ರೂಪದಲ್ಲಿ ಮಾತನಾಡಿಸುವುದಿಲ್ಲ. ಎಷ್ಟೋ ಮಂದಿ ನಮ್ಮವರು ಇಲ್ಲಿನ ಸಂಸ್ಕೃತಿಯ ಒಳ್ಳೆಯದನ್ನು cherry pick ಮಾಡಿ ಅಳವಡಿಸಿಕೊಂಡಿದ್ದಾರೆ. ಯಾರನ್ನು ಮೇಲ್ಪಡಿಸಿಯೋ, ಇಲ್ಲ ಮತ್ತೊಬ್ಬರನ್ನು ಕೀಳ್ಪಡಿಸಿಯೋ ಹೇಳುವುದಕ್ಕಲ್ಲ. ಒಂದು ಒಳ್ಳೆಯದನ್ನು ಕಂಡಾಗ ಹಂಚಿಕೊಳ್ಳುವ ಬಯಕೆ.
ನಮ್ಮ ಸ್ವಂತದವರ ಮುಂದೆ ತಪ್ಪು ಮಾಡಿ ತಿದ್ದಿಕೊಳ್ಳುವುದರಲ್ಲಿ ಸಂಕೋಚವಿರಬಾರದು. ತಪ್ಪನ್ನು ತಿದ್ದಲು/ತಿದ್ದಿಕೊಳ್ಳಲು ಮುಕ್ತವಾದ ಅವಕಾಶವಿದ್ದರೆ ವಿಕಾಸಕ್ಕೆ ಮಾರ್ಗ ಎಂದು ನನ್ನ ಅಭಿಪ್ರಾಯ. ಕೂಡಿ ಎಲ್ಲವೂ ಹಂಚಿಕೊಂಡಾಗ, ಒಂದು insignificant (ಮಹತ್ವವಲ್ಲದ) ಸಂಗತಿ ನೋವಿನ ಎಳೆಯನ್ನು ಮೀಟಬಾರದು ಎಂದು ಒಂದು ಅನಿಸಿಕೆಯಷ್ಟೇ. ಹಾಗೇನಾದರು ನೋವಿಸುವಂಥ ಸಂಗತಿ ಇದ್ದಾರೆ ಮುಕ್ತವಾಗಿ ಹೇಳಿಕೊಂಡು ಚರ್ಚಿಸುವಂತಿರಬೇಕು, ಅಭಿಪ್ರಾಯ ಸೂಚಿಯಾಗಲು ಆಸ್ಪದವಿರಬೇಕು. ಹಾಗೆಯೇ ತುಂಬ ಸೂಕ್ಷ್ಮ ಜೀವಿಗಳಿದ್ದರೆ ಕಷ್ಟ, ಕೆಲವನ್ನು ಉಪೇಕ್ಷಿಸುವುದೇ ಒಳ್ಳೆಯದು ಅಲ್ಲವೇ?
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications