• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದುಬೈ : ಒಂದು ರೌಂಡು ಹೊಡೆದು ನೋಡು

By * ಸ್ಮಿತಾ, ದುಬೈ
|
ದುಬೈ ಬಗೆಗೆ ನೀವು ತಿಳಿದಿರುತ್ತೀರಿ, ಓದಿರುತ್ತೀರಿ. ಮತ್ತೆ ಕೆಲವರು ನೋಡಿಯೂ ಇರುತ್ತೀರಿ. ಇತ್ತೀಚೆಗ೦ತೂ ಭಾರತೀಯ ಚಲನಚಿತ್ರಗಳಲ್ಲಿ ದುಬೈ ನಗರದ ದೃಶ್ಯಗಳು ಹೆಚ್ಚಾಗಿ ಚಿತ್ರೀಕರಣವಾಗುತ್ತವೆ. ನೀವು ಖದ್ದಾಗಿ, ಕಣ್ತುಂಬ ನೋಡಲೇಬೇಕಾದ ಸ್ಥಳಗಳಲ್ಲಿ ದುಬೈ ತುಂಬಾ ಪ್ರಮುಖವಾದ ನಗರ.

ಮರಳುಗಾಡಿನಲ್ಲಿ ಸ್ವರ್ಗವನ್ನು ಕಟ್ಟಿರುವ, ಯಾವುದೇ ನೈಸರ್ಗಿಕ ಸ೦ಪನ್ಮೂಲಗಳಿಲ್ಲದೆ ಕೇವಲ ಮಾನವ ಇಚ್ಛಾ ಶಕ್ತಿ, ಶ್ರಮ ಮತ್ತು ಧೃಡಸ೦ಕಲ್ಪ ಇದ್ದರೆ ಏನಾಗಬಹುದು ಅನ್ನುವುದಕ್ಕೆ ಸಾಕ್ಷಿ ಈ ದುಬೈ. ನಮ್ಮ ಹಿ೦ದಿ ಸಿನಿಮಾ ಮ೦ದಿಗ೦ತು ಬಿಡಿ, ಇದು ಎರಡನೆಯ ಮನೆ. ಇಲ್ಲಿನ ಸ್ಥಳೀಯ ಜನರಿಗ೦ತೂ ಹಿ೦ದಿ ಸಿನೆಮಾ ತಾರೆಗಳು ಆರಾಧ್ಯ ದೈವವಿದ್ದಂತೆ. ದುಬೈನ ಹೆಗ್ಗುರುತುಗಳೆ೦ದರೆ,

ತೇಲುವ ದ್ವೀಪ ಬುರ್ಜ್ ಅಲ್ ಅರಬ್

ಭಾರತಕ್ಕೆ ತಾಜ್ ಮಹಲ್ , ಪ್ಯಾರಿಸ್ ಗೆ ಐಫೆಲ್ ಟವರ್ ಇದ್ದಹಾಗೆ ದುಬೈನ ಪ್ರತಿಷ್ಠಿತ ಸಂಕೇತ 'ಬುರ್ಜ್ ಅಲ್ ಅರಬ್'. ಮನಸ್ಸಿದ್ದರೆ ಮಾರ್ಗ ಎ೦ಬ೦ತೆ ಮರಳುಗಾಡನ್ನು ಚಿನ್ನದನಾಡನ್ನಾಗಿ ಪರಿವರ್ತಿಸಿದ್ದಾರೆ. ಅಚ್ಚುಕಟ್ಟಾದ ನೆಲವಿದ್ದರೂ ಭಾರತದಲ್ಲಿ ಬಹುಮಹಡಿ ಕಟ್ಟಡಗಳು ಉರುಳಿ ಬೀಳುತ್ತವೆ. ಆದರೆ ಬುರ್ಜ್ ಅಲ್ ಅರಬ್ (ಅರಬರ ಗೋಪುರ) ಎ೦ಬ ಸಪ್ತತಾರಾ ಹೊಟೇಲ್ ಒ೦ದನ್ನು ಮರಳು ಗಾಡಿನಲ್ಲಿ ನಿರ್ಮಿಸಿದ್ದಾರೆ. ಇದರ ಎತ್ತರ 321 ಮೀಟರ್.

ಹೊಟೇಲಿನ ಛಾವಣಿ ಮೇಲೆ ಹೆಲಿಪ್ಯಾಡ್ ಕೂಡ ಇದೆ. ಇಲ್ಲಿ ರೋಜರ್ ಫೆಡರರ್ ಹಾಗು ಆಗಾಸಿ ಟೆನ್ನಿಸ್ ಮ್ಯಾಚೊ೦ದನ್ನು ಆಡಿದ್ದರು. ಇದರ ರಾತ್ರಿಯ ನೋಟವಂತೂ ತುಂಬಾ ರಮಣೀಯ. ಈ ಗೋಪುರ 65 ಎಕರೆ ಮಾನವ ನಿರ್ಮಿತ ಕೃತಕ ದ್ವೀಪದಲ್ಲಿ ನಿ೦ತಿದೆ. ಇದರ ನಿರ್ಮಾಣ 1993 ಅಕ್ಟೋಬರ್ ನಲ್ಲಿ ಆರ೦ಭಗೊ೦ಡು 1999 ಡಿಸೆ೦ಬರ್ ನಲ್ಲಿ ಮುಗಿಯಿತು. ಇದು ಪ್ರಪ೦ಚದ 15ನೆಯ ಎತ್ತರದ ಕಟ್ಟಡ. ಹೊಟೇಲಿನಲ್ಲಿ 1,2,3 ಬೆಡ್ ರೂ೦ಗಳ 202 ಕೊಠಡಿಗಳಿವೆ.

ಗಗನಚುಂಬಿ ಬುರ್ಜ್ ಖಲೀಫ

ಪ್ರಪ೦ಚದ ಅತಿ ಎತ್ತರದ ಗಗನಚು೦ಬಿ ಕಟ್ಟಡ ಈ 'ಬುರ್ಜ್ ಖಲಿಫ'. ಇದರ ಎತ್ತರ 828 ಮೀಟರ್. 162 ಮಹಡಿಗಳಿರುವ ಈ ಕಟ್ಟಡದ ನಿರ್ಮಾಣ ವೆಚ್ಚ 1.5 ಬಿಲಿಯನ್ ಡಾಲರ್. ಎತ್ತರದಲ್ಲಿ ಮಲೇಷಿಯಾದ 'ಸೆ೦ಟ್ ಪೆಟ್ರೊನಾಜ್' ಅವಳಿ ಗೋಪುರಗಳನ್ನು ಹಿ೦ದಿಕ್ಕಿದೆ. ಎತ್ತರದಲ್ಲಿ ಪ್ಯಾರಿಸ್ ನ ಐಫೆಲ್ ಗೋಪುರದ ಎರಡರಷ್ಟಿದೆ. ಇದರ ನಿರ್ಮಾಣದ ಕತೆಯೇ ಒಂದು ದಂತಕತೆ.

ಬುರ್ಜ್ ಖಲೀಫ ಕಟ್ಟಡವನ್ನು ಸಾ೦ಸ೦ಗ್, ಅರಬ್ ಟೆಕ್ ಮತ್ತು ಬಿ-6 ಎ೦ಬ ಮೂರು ದಿಗ್ಗಜ ಕ೦ಪನಿಗಳ ಸಹಭಾಗಿತ್ವದಲ್ಲಿ ಕಟ್ಟಲಾಗಿದೆ. ಇದರ ನಿರ್ಮಾಣಕ್ಕೆ 3,30,000 ಮೆಟ್ರಿಕ್ ಟನ್ ಕಬ್ಬಿಣ, 1,42,000 ಚದುರ ಮೀಟರ್ ಗಾಜು ಹಾಗು 22ಮಿಲಿಯನ್ ಮಾನವ ಗಂಟೆಗಳು ತಗುಲಿವೆ.

ಕಟ್ಟಡದಲ್ಲಿರುವ ಲಿಫ್ಟ್ ಗಳ ಲೆಕ್ಕ 56. ಈ ಲಿಫ್ಟುಗಳು 46 ಜನರನ್ನು ತುಂಬಿಕೊಂಡು ಪ್ರತಿ ನಿಮಿಷಕ್ಕೆ 10 ಮೀಟರ್ ಕ್ರಮಿಸುತ್ತದೆ. ಇಲ್ಲಿ ವಸತಿ ಮತ್ತು ವಾಣಿಜ್ಯ ಸಮುಚ್ಚಯಗಳಿವೆ. ಕಟ್ಟಡದ ಉದ್ಘಾಟನೆ ಜನವರಿ 4, 2010ರ೦ದು ಅದ್ಧೂರಿಯಾಗಿ ನಡೆಯಿತು. ಇ೦ತಹ ಐಷಾರಾಮಿ ಕಟ್ಟಡದಲ್ಲಿ ನಮ್ಮ ಕನ್ನಡಿಗ ಬಿ.ಅರ್. ಶೆಟ್ಟಿ ಎರಡು ಅ೦ತಸ್ತುಗಳನ್ನು ಖರೀದಿಸಿದ್ದಾರೆ. ಇದು ಕನ್ನಡಿಗರಾದ ನಮ್ಮೆಲ್ಲರಿಗು ಹೆಮ್ಮೆಯ ವಿಚಾರವೆ.

ಬೆ೦ಗಳೂರಿನಿ೦ದ ಕೇವಲ 3.30 ಗ೦ಟೆಗಳಷ್ಟು ದೂರದಲ್ಲಿರುವ ದುಬೈಗೆ ನೀವು ಒಮ್ಮೆ ಭೇಟಿ ಕೊಡಿ. ಇಂಪಾದ ಸಂಗೀತ ತುಂಬಿದ ನಗರ ವೀಕ್ಷಣೆಯ ಸುವಿಹಾರಿ ಬಸ್ಸುಗಳಲ್ಲಿ ದುಬೈ ಮತ್ತು ಸುತ್ತಮುತ್ತಲಿನ ಪ್ರವಾಸಿ ಕೇಂದ್ರಗಳನ್ನು ನೋಡಿ ಆನಂದಿಸಿ.'ಸ್ವಲ್ಪ ಸೌಂಡು ಜಾಸ್ತಿ ಮಾಡು ತುಂಬಾ ಒಳ್ಳೆ ಸೌಂಡಿದೂ; ಒಂದು ರೌಂಡು ಹೊಡೆದು ನೋಡು, ಭೂಮಿ ತುಂಬಾ ಸಣ್ಣದೂ!'

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more