274557usaಹಿಂದು ಹೃದಯಕಮಲದ ವ್ಯಾಲಂಟೈನ್/festivals/valentines-day/2009/0213-what-does-valentines-day-mean-to-me.htmlಭಾರತದಲ್ಲಿ ನಾವಿಂದು ವಿಚಿತ್ರ ಕಾಲಘಟ್ಟದಲ್ಲಿ ಬಂದು ನಿಂತಿದ್ದೇವೆ. ನಮ್ಮ ಸಂಸ್ಕೃತಿಯನ್ನು ಕಾಪಾಡಿಕೊಂಡು ಕಾಲಕ್ಕೆ ತಕ್ಕಂತೆ ಬದಲಾವಣೆಗಳಿಗೆ ತೆರೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಪ್ರೇಮಿಗಳ ದಿನಾಚರಣೆ ಕರ್ನಾಟಕದಲ್ಲಿ ವಿಪರೀತ ಎನ್ನುವಂಥ ಸನ್ನಿವೇಶ ತೆರೆದಿಟ್ಟಿದೆ. ಇಂಥ ಸಂದರ್ಭದಲ್ಲಿ ಅಶ್ಲೀಲತೆಗೆ ಎಲ್ಲಿಯೂ ಎಡೆಗೊಡದೆ ಹಿಂದೂಗಳು ವ್ಯಾಲೇಟೈನ್ಸ್ ಡೇ ಆಚರಿಸಬಹುದು ಎನ್ನುತ್ತಾರೆ ಲೇಖಕರು.Dear Editor,I read Ravi Belagere's article with a lot 34632http://kannada.oneindia.com/img/2009/02/13-velentines-hindu1.jpg274557usaಮಾರ್ಚ್ 22ರಂದು 'ಕನ್ನಡ ಕಲಿ' ದಿನಾಚರಣೆ/nri/engagements/2009/0321-kannada-kali-day-celebration.htmlದಕ್ಷಿಣ ಕ್ಯಾಲಿಫೋರ್ನಿಯಾದ ಎಲ್ಲ ಅಧ್ಯಾಯಗಳ ಕನ್ನಡಕಲಿಗಳು ಪ್ರತಿ ವರ್ಷದಂತೆ ಒಂದೆಡೆ ಸೇರಿ ಮತ್ತೆ ಸಂಭ್ರಮಿಸಲಿದ್ದಾರೆ. 'ಕನ್ನಡ ಕಲಿ' ದಿನಾಚರಣೆ ಮಾರ್ಚ್ 22ರಂದು ಸರಿಟೊ ಅಧ್ಯಾಯದ ಮುಂದಾಳುತ್ವದಲ್ಲಿ ಲಿಬರ್ಟಿ ಪಾರ್ಕಿನ ಸಮುದಾಯ ಭವನದಲ್ಲಿ ನಡೆಯಲಿದೆ.ಪರಸ್ಪರ ವಿಚಾರ ವಿನಿಮಯ, ಕನ್ನಡ ಕಲಿಗಳಿಗೆ ಪರೀಕ್ಷೆ, ವಿನೋದಭರಿತ ಕ್ವಿಝ್, ಮಕ್ಕಳಿಂದ ಮನರಂಜನೆ, ಪ್ರಶಸ್ತಿ ಪ್ರದಾನ, ನಿಸ್ಪೃಹ ಸೇವೆ ಗೈಯುತ್ತಿರುವ ಶಿಕ್ಷಕರಿಗೆ ಸನ್ಮಾನ ಇತ್ಯಾದಿ 35402http://kannada.oneindia.com/img/2009/03/21-kannada-kali1.jpg274557usaಯುಗಾದಿಯಂದು ಹೊಸ ಕನ್ನಡಕೂಟ 'ನಾವಿಕ' ಉದಯ/nri/article/2009/0326-naavika-new-kannada-association-in-usa.htmlಅಮೆರಿಕ ಮತ್ತು ಹೆಚ್ಚಾಗಿ ಎಲ್ಲ ಹೊರನಾಡ ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸಲು ಮತ್ತು ಸಮಸ್ಯೆಗಳಿಗೆ ಒಗ್ಗಟ್ಟಿನಿಂದ ಪರಿಹಾರ ಕಂಡುಕೊಳ್ಳಲು 'ನಾವಿಕ' (NAVIKA ಅಂದ್ರೆ North America Vishwa Kannada Association) ಎಂಬ ಕನ್ನಡಿಗರ ಸಂಘವನ್ನು ಹುಟ್ಟುಹಾಕಲಾಗಿದೆ ಎಂದು ನಾವಿಕದ ಸ್ಥಾಪಕ ಸದಸ್ಯರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ವಿರೋಧಿ ನಾಮ ಸಂವತ್ಸರದ ಉಗಾದಿ ಹಬ್ಬದ ಶುಭ ದಿನ ನಾವು ಉತ್ತರ 35537http://kannada.oneindia.com/img/2009/03/26-liberty-statue1.jpg274557usaಅಮೇರಿಕದ ಬಾನುಲಿಯಲ್ಲಿ "ದುಡ್ಡೇ ದೊಡ್ಡಪ್ಪ"/nri/engagements/2009/0330-money-economy-kannada-program-us-fm-channel.htmlಇಂದಿನ ಆರ್ಥಿಕ ಮುಗ್ಗಟ್ಟು ನಿಮ್ಮನ್ನು ಯಾವ ರೀತಿ ತಟ್ಟಿದೆ? ವಿರೋಧಿ ನಾಮ ಸಂವತ್ಸರವು ನಿಮ್ಮ ಪಾಲಿಗೆ ಸಿಹಿ ತರುವುದೊ ಅಥವ ಕಹಿಯೆ ಹೆಚ್ಚಾಗಿ ತರುವುದೊ? ಈ ವಿಷಯಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ವಿಶ್ವಕನ್ನಡಿಗರೊಂದಿಗೆ ಹಂಚಿಕೊಂಡು ಚರ್ಚೆ ಮಾಡಲು ಇದೊಂದು ಸದಾವಕಾಶ. ಮಧ್ಯೆ ಮಧ್ಯೆ ಹಣ-ದುಡ್ಡು ಈ ವಿಷಯಗಳ ಬಗೆಗಿನ ಕನ್ನಡ ಚಿತ್ರಗೀತೆಗಳನ್ನು ಪ್ರಸಾರ ಮಾಡಲಾಗುವುದು. ನೇರಪ್ರಸಾರದ 35582http://kannada.oneindia.com/img/2009/03/30-madhukant2.jpg274557usaನ್ಯೂಯಾರ್ಕ್ ನಲ್ಲಿ ಗುಂಡಿನ ದಾಳಿಗೆ 13 ಬಲಿ/news/2009/04/04/gunman-shoots-himself-after-killing-13-in-us.htmlನ್ಯೂಯಾರ್ಕ್ ಎ 4: ಇಲ್ಲಿನ ಬಿಂಗ್ ಹ್ಯಾಮ್ಟನ್ ಪ್ರದೇಶದ ಅಮೇರಿಕನ್ ಸಿವಿಕ್ ಅಸೋಸಿಯೇಷನ್ ನಲ್ಲಿ ನಡೆದ ಶೂಟೌಟ್ ಗೆ ಸುಮಾರು 13 ಜನ ಬಲಿ ಯಾಗಿದ್ದು, 40 ಕ್ಕೂ ಹೆಚ್ಚು ಜನರನ್ನು ಒತ್ತೆಯಾಳಿಗಿಸಿಕೊಂಡ ಘಟನೆ ನಡೆದಿದೆ. ಗುಂಡಿನ ಮಳೆಗೆರೆದವನನ್ನು ಥೈಲಾಂಡ್ ಮೂಲದ 40ರ ಆಸುಪಾಸಿನ ವ್ಯಕ್ತಿ ಜಿವರ್ಲಿ ವೂಂಗ್ ಎಂದು ಗುರುತಿಸಲಾಗಿದೆ ಅತ್ಯಾಧುನಿಕ ಶಸ್ತ್ರಾಸ್ತ್ರ 35720http://kannada.oneindia.com/img/2009/04/04-new-york-shoot-out1.jpg523152ಭರತನಾಟ್ಯನ್ಯೂ ಜೆರ್ಸಿಯಲ್ಲಿ ನೃತ್ತ-ನೃತ್ಯ-ನಾಟ್ಯ ಸಂಭ್ರಮ/nri/article/2009/0620-dance-and-a-dance-drama-bhramari.htmlಅಮೇರಿಕಾದ ನ್ಯೂ ಜೆರ್ಸಿಯಲ್ಲಿರುವ ಬ್ರಿಡ್ಜ್‌ವಾಟರ್ ಶ್ರೀ ವೆಂಕಟೇಶ್ವರ ಸನ್ನಿಧಿಯ ಸಭಾಂಗಣದಲ್ಲಿ ವಿದುಷಿ ಭ್ರಮರಿ ಶಿವಪ್ರಕಾಶ್ ಮತ್ತು ಶಿಷ್ಯ ವೃಂದದಿಂದ ನಾದ ನೃತ್ಯ ದಿನ ಜೂನ್ 7ರಂದು ನಡೆಯಿತು.ಶಾಸ್ತ್ರೀಯ ನೃತ್ಯಪದ್ಧತಿಯಲ್ಲಿ ಕಾಣಸಿಗುವ ನೃತ್ತ ನೃತ್ಯ ನಾಟ್ಯ ವೈವಿಧ್ಯವನ್ನು "Dances and a Dance Drama" ಎಂಬ ಶೀರ್ಷಿಕೆಯೊಂದಿಗೆ ಭ್ರಮರಿ ಶಿವಪ್ರಕಾಶ್ ಅವರ ನೃತ್ಯ ತಂಡ ಸಾದರಪಡಿಸಿತು.ಭರತನಾಟ್ಯದ ಶಾಸ್ತ್ರೀಯ ನೃತ್ಯ 37476http://kannada.oneindia.com/img/2009/06/20-nj-dance-bhramari1.jpg523152ಭರತನಾಟ್ಯವಸುಂಧರಾ ದೊರೆಸ್ವಾಮಿ ಪ್ರಬುದ್ಧ ನೃತ್ಯ ಪ್ರದರ್ಶನ/nri/article/2009/0916-vasundhara-doreswamy-dance-program-maryland.htmlಭಾರತದ ಶಾಸ್ತ್ರೀಯ ನೃತ್ಯ ಶೈಲಿ ಭರತನಾಟ್ಯದ "ಮಾರ್ಗಂ" ಎಂಬ ಶೀರ್ಷಿಕೆಯಲ್ಲಿ ಪ್ರಬುದ್ಧ ಪ್ರದರ್ಶನವನ್ನು ನೀಡಿ ರಸಿಕರ ಮನ ತುಂಬಿದ ನಮ್ಮ ಕರ್ನಾಟಕದ ಹೆಮ್ಮೆಯ ಹಿರಿಯ ಕಲಾವಿದೆ ಡಾ ವಸುಂಧರಾ ದೊರೆಸ್ವಾಮಿ ಅವರ ಕಾರ್ಯಕ್ರಮವು ಮೇರಿಲ್ಯಾಂಡ್ ನ ಮುರುಗನ್ ದೇವಾಸ್ಥಾನದಲ್ಲಿ ಇತ್ತೀಚೆಗೆ ನಡೆಯಿತು. ಸುಮಾರು ಎರಡು ಗಂಟೆಗಳ ಕಾಲ ಗುರು ಡಾ ವಸುಂಧರಾ ಅವರು ಸಭಿಕರನ್ನೆಲ್ಲ ಅಮೋಘ ಅಭಿನಯ 39211http://kannada.oneindia.com/img/2009/09/16-vasundhara-doreswamy1.jpg523152ಭರತನಾಟ್ಯಸಂಜೆಯನ್ನು ಸುಂದರವಾಗಿಸಿದ ದಿವ್ಯಾ ಕಥಕ್ ನೃತ್ಯ/nri/article/2009/1005-kathak-dance-program-by-divya-patil.htmlಸೆಪ್ಟೆಂಬರ್ 12ರ ದಿವ್ಯ ಸಂಜೆಯಲ್ಲಿ ಹಲವು ಮೊದಲು'ಗಳು ಜರುಗಿದವು. ಅರಂಗೇಟ್ರ ಅಥವ ರಂಗಪ್ರವೇಶ ಎಂದಾಗ ಭರತನಾಟ್ಯ ಮನಸ್ಸಿನಲ್ಲಿ ಮೂಡಿಬರುವುದು ಮಾಮೂಲಿ. ಭಾರತದ ಇತರ ಅನೇಕ ಪ್ರಕಾರದ ನೃತ್ಯ ಪರಂಪರೆಗಳಲ್ಲಿ ಅರಂಗೇಟ್ರದ ಕಲ್ಪನೆಯೆ ಇಲ್ಲ. ಇಂಥ ಕಲ್ಪನೆಯ ರಂಗನ್ನು ಆ ಸುಂದರ ಸಂಜೆಗೆ ತನ್ನ 'ನೃತ್ಯ ದರ್ಶನ"ದಿಂದ ಮೊದಲು ಏರಿಸಿದವಳು ದಿವ್ಯಾ.ಸರ್ವಮಂಗಳ ಮತ್ತು ದಾದಾ ಪಾಟೀಲರ ಮೊದಲ 39526http://kannada.oneindia.com/img/2009/10/05-divya-patil1.jpg523152ಭರತನಾಟ್ಯನೆದರ್ಲ್ಯಾಂಡ್ಸ್ ನಲ್ಲಿ ಶ್ರೀಗಂಧದ ಘಮಘಮ/nri/article/2009/1118-kannada-rajyotsava-shrigandha-netherlands.html“ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು" ಎಂಬ ಕವಿ ನುಡಿಯಂತೆ, ಕನ್ನಡಿಗರು ತಾಯ್ನಾಡಲ್ಲಿರಲಿ ಅಥವಾ ವಿದೇಶದಲ್ಲಿರಲಿ, ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಅಂತೆಯೇ ನೆದರ್ಲ್ಯಾಂಡ್ಸ್ ನ ಶ್ರೀಗಂಧ ಕನ್ನಡ ಬಳಗದ ಸದಸ್ಯರೂ ಕೂಡಿ ರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮ ಹಾಗೂ ಅಭಿಮಾನದಿಂದ ಆಚರಿಸಿದರು.* ಶೆಲ್ವನಾರಾಯಣ, ನೆದರ್ಲ್ಯಾಂಡ್ಸ್ಕನ್ನಡ ಭಾಷೆಯನ್ನು ಮಾತಾಡುವ ಭೂಪ್ರದೇಶಗಳನ್ನು ಒಗ್ಗೂಡಿಸಲು ನಡೆದ ಏಕೀಕರಣ ಚಳವಳಿಯ ಫಲವಾಗಿ 40285http://kannada.oneindia.com/img/2009/11/18-srigandha-netherland1.jpgnews"> ವಸುಂಧರಾ ದೊರೆಸ್ವಾಮಿ ಪ್ರಬುದ್ಧ ನೃತ್ಯ ಪ್ರದರ್ಶನ | Vasundhara Doreswamy | Bharatanatya | Margam | Maryland | Bhramari - ವಸುಂಧರಾ ದೊರೆಸ್ವಾಮಿ ಪ್ರಬುದ್ಧ ನೃತ್ಯ ಪ್ರದರ್ಶನ - Kannada Oneindia

ವಸುಂಧರಾ ದೊರೆಸ್ವಾಮಿ ಪ್ರಬುದ್ಧ ನೃತ್ಯ ಪ್ರದರ್ಶನ

Dr. Vasundhara Doreswamy
ಭಾರತದ ಶಾಸ್ತ್ರೀಯ ನೃತ್ಯ ಶೈಲಿ ಭರತನಾಟ್ಯದ "ಮಾರ್ಗಂ" ಎಂಬ ಶೀರ್ಷಿಕೆಯಲ್ಲಿ ಪ್ರಬುದ್ಧ ಪ್ರದರ್ಶನವನ್ನು ನೀಡಿ ರಸಿಕರ ಮನ ತುಂಬಿದ ನಮ್ಮ ಕರ್ನಾಟಕದ ಹೆಮ್ಮೆಯ ಹಿರಿಯ ಕಲಾವಿದೆ ಡಾ ವಸುಂಧರಾ ದೊರೆಸ್ವಾಮಿ ಅವರ ಕಾರ್ಯಕ್ರಮವು ಮೇರಿಲ್ಯಾಂಡ್ ನ ಮುರುಗನ್ ದೇವಾಸ್ಥಾನದಲ್ಲಿ ಇತ್ತೀಚೆಗೆ ನಡೆಯಿತು. ಸುಮಾರು ಎರಡು ಗಂಟೆಗಳ ಕಾಲ ಗುರು ಡಾ ವಸುಂಧರಾ ಅವರು ಸಭಿಕರನ್ನೆಲ್ಲ ಅಮೋಘ ಅಭಿನಯ ಮತ್ತು ಲಯಗಾರಿಕೆಯಿಂದ ಮಂತ್ರ ಮುಗ್ಧಗೊಳಿಸಿದರು.

* ಭ್ರಮರಿ ಶಿವಪ್ರಕಾಶ್

ಡಾ ವಸುಂಧರಾ ದೊರೆಸ್ವಾಮಿ ಅವರು ತಮ್ಮ ಶಿಷ್ಯರಾದ ವಿದುಷಿ ವಾಣಿ ರಮೇಶ್ ಮತ್ತು ವಿದುಷಿ ಶೀಲಾ ಕುಮಾರ್ ಅವರ ನೃತ್ಯ ಶಾಲೆಯಲ್ಲಿ ಕಾರ್ಯಾಗಾರವನ್ನು ನಡೆಸಿಕೊಡಲು ಬಂದ ಸಂದರ್ಭದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿತು. ನೃತ್ಯ ಕಾರ್ಯಕ್ರಮಕ್ಕೆ ಮನಸ್ಸು ಮತ್ತು ದೇಹವನ್ನು ತಯಾರುಮಾಡಿಕೊಳ್ಳುವ ಒಂದು ನೃತ್ಯ ಬಂಧ ಮೇಳ ಪ್ರಾಪ್ತಿ ಜತಿಯಿಂದ ಕಾರ್ಯಕ್ರಮ ಆರಂಭಗೊಂಡಿತು. ಮತ್ತೆ ನಡೆದದ್ದು ವಿಘ್ನ ವಿನಾಶಕ ಗಣಪತಿಯ ಪ್ರಾರ್ಥನೆ. ಅಂಬಲದ ಆರಾಧ್ಯ ದೈವ ಸುಬ್ರಹ್ಮಣ್ಯನನ್ನು ಸ್ತುತಿಸುವ ನೃತ್ಯಬಂಧ ಷಣ್ಮುಖ ಕೌತ್ವಂ ಮೂರನೆಯದಾಗಿ ಪ್ರಸ್ತುತಗೊಂಡಿತು. ಮಯೂರ ಗತಿಯನ್ನು ಅಳವಡಿಸಿ ನವಿಲನ್ನು ಏರಿ ಬರುವ ಷಣ್ಮುಖನ ಸೊಬಗು ನೆರೆದ ಎಲ್ಲರ ಕಣ್ತುಂಬಿತು.

ಮುಂದೆ ವಿದುಷಿ ಗೀತಾ ಸೀತಾರಾಂ ಅವರು ಕನ್ನಡದಲ್ಲಿ ರಚಿಸಿದ ಪದವರ್ಣ ವೇಣುಗೋಪಾಲ ಸ್ವಾಮಿಯ ಕರೆ ತಾರೆಲೆ ಇಡೀ ಕಾರ್ಯಕ್ರಮದ ಕೇಂದ್ರ ಬಿಂದುವಾಗಿತ್ತು. ಈ ಆತ್ಮ ಪರಮಾತ್ಮನಲ್ಲಿ ಲೀನವಾಗಲು ಹಂಬಲಿಸುವುದನ್ನು ನಾಯಕ ನಾಯಕಿ ಭಾವದ ಮೂಲಕ ಡಾ ವಸುಂಧರಾ ಅವರು ಮನೋಜ್ಞವಾಗಿ ಅಭಿನಯಿಸಿದರು. ಕನ್ನಡ ಭಾಷೆಯಲ್ಲಿ ರಚಿತವಾದ ಶಾಸ್ತ್ರೀಯ ಭರತನಾಟ್ಯದ ನೃತ್ಯ ಬಂಧಗಳು ಬಹಳ ವಿರಳವಾದದ್ದರಿಂದ ನವ್ಯ ವಾಗ್ಗೇಯಕಾರರ ಇಂಥ ಪ್ರಯತ್ನ ಪ್ರಶಂಸನಾರ್ಹ.

ಮುಂದಿನ ಹಂತದಲ್ಲಿ ಗಂಗಾವತರಣವನ್ನು ಚಿತ್ರಿಸುವ ಮಹಾದೇವ ಶಿವ ಶಂಭೋ ಮತ್ತು ಮಹಿಷಾಸುರ ಮರ್ದನದ ಕಥೆಯನ್ನು ಹೇಳುವ ಜಯದುರ್ಗೆ ದುರ್ಗತಿ ಪರಿಹಾರಿಣಿ ಹೃದಯ ಸ್ಪರ್ಶಿಯಾಗಿದ್ದವು. ಉಡುಪಿ ಶ್ರೀ ಕೃಷ್ಣ ಮಠದ ಆಸ್ಥಾನ ವಿದುಷಿಯಾಗಿರುವ ಡಾ ವಸುಂಧರಾ ಅವರು ತಿಲ್ಲಾನಕ್ಕಾಗಿ ಆಯ್ದ ಕೃತಿ ಶ್ರೀಮತಿ ನಾಗಮಣಿ ಶ್ರೀನಾಥ್ ಅವರು ರಚಿಸಿದ ಶಿವಶಕ್ತಿ ರಾಗದ ನೃತ್ಯ ಬಂಧ. ಇದರಲ್ಲಿ ಭಕ್ತ ಶ್ರೇಷ್ಠ ಸಂತ ಕನಕದಾಸರಿಗೆ ಕಡೆಗೋಲು ಹಗ್ಗ ಹಿಡಿದ ಮುದ್ದು ಬಾಲ ಕೃಷ್ಣ ದರ್ಶನ ನೀಡಿದ ಸಂದರ್ಭವನ್ನು ತೋರಿಸಿ ಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಧ್ವನಿ ಮುದ್ರಿತ ಹಿನ್ನೆಲೆ ಸಂಗೀತ ಒಂದೊಮ್ಮೆ ಕೈಕೊಟ್ಟು ರಸಾಭಾಸವಾಗಿ ಆಯೋಜಕರು ತಾಳ್ಮೆಕೆಟ್ಟರೂ ಸಂಯಮದಿಂದಿದ್ದ ಡಾ ವಸುಂಧರಾ ನೆರೆದಿದ್ದ ಎಲ್ಲ ಗಣ್ಯರು ಮತ್ತು ನನ್ನಂಥ ಎಲ್ಲ ಶಿಷ್ಯವೃಂದದವರಿಗೆ ಆದರ್ಶ ಪ್ರಾಯರಾಗಿ ಇಡೀ ಕಾರ್ಯಕ್ರಮವನ್ನು ಚೆಂದಗಾಣಿಸಿಕೊಟ್ಟರು. ಮುರುಗನ್ ದೇವಸ್ಥಾನದ ಅರ್ಚಕರು ದೇವರ ಪ್ರಸಾದ ಆಶೀರ್ವಾದಪೂರ್ವಕವಾಗಿ ನೀಡಿ ದೇವಾಲಯದ ಕಾರ್ಯಕರ್ತರು ಕಲಾವಿದೆಯನ್ನು, ಸಂಘಟಕರನ್ನು ಅಭಿನಂದಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+