123850ugadiಹೋಳಿಗೆಯ ಇತಿವೃತ್ತ , ಯುಗಾದಿಯ ವೃತ್ತಾಂತ/recipe/sweet/2008/0403-obbattu-for-ugadi.htmlಹೋಳಿಗೆ ಅಥವಾ ಒಬ್ಬಟ್ಟು ಇಲ್ಲದಿರೆ ಹಬ್ಬ ಪೂರ್ಣವಾಗಲು ಎಂತು ಸಾಧ್ಯ. ನಮ್ಮ ಹಳ್ಳಿ ಅಮ್ಮಂದರಿಗಂತೂ ಹಬ್ಬವನ್ನು ಹೊರತು ಪಡಿಸಿದರೂ- ಮಗ ಪರೀಕ್ಷೆಯಲ್ಲಿ ಪಾಸಾಗಲಿ, ಮಗಳು ಊರಿನಿಂದ ತವರಿಗೆ ಬರಲಿ, ಗಂಡನಿಗೆ ವ್ಯವಹಾರದಲ್ಲಿ ಲಾಭ ಬರಲಿ , ಎಲ್ಲ ಸಂಭ್ರಮಗಳಿಗೂ ಹೋಳಿಗೆಯೇ ಆಗಬೇಕು. ಇಂಥಾ ಹೋಳಿಗೆ ಊಟದೊಂದಿಗೇ ಯುಗಾದಿ ಅರ್ಥಪೂರ್ಣಗೊಳ್ಳುತ್ತದೆ. ವಾರ, ಹದಿನೈದು ದಿನಗಳಿಂದ ಹಬ್ಬಕ್ಕಾಗಿ ನಡೆಸಿದ ಸಿದ್ಧತೆಯ 2926http://kannada.oneindia.com/img/2009/03/25-obbattu1.jpg123850ugadiಯುಗಾದಿಗೆ ಶುಭಾಶಯ ತಪ್ಪದೆ ತಿಳಿಸಿ/response/2009/0103-enough-of-new-year-greeting-craze.htmlಪ್ರಿಯ ಸಂಪಾದಕರೆ,ಈಗಷ್ಟೆ ನಾವು ಹೊಸ ವರ್ಷಾಚರಣೆಯ ಗುಂಗಿನಿಂದ ಹೊರಬರುತ್ತಿದ್ದೇವೆ. ಈ ಕ್ಷಣಕ್ಕೆ ಒಮ್ಮೆ ಯೋಚಿಸೋಣ. ಶ್ರೀ ರಾಮನವಮಿಗೆ, ಹನುಮಜಯಂತಿಗೆ, ಅಷ್ಟೇ ಯಾಕೆ ಸ್ವತಃ ಹಿಂದೂ ಸಂಪ್ರದಾಯದ ಹೊಸವರ್ಷವಾದ ಯುಗಾದಿಗೆ ಒಂದು ಶುಭಾಶಯ ಹೇಳಬೇಕೆನ್ನುವ ಪರಿಜ್ಞಾನ ಇಲ್ಲದ ನಾವು ಈ ಪಾಶ್ಚಾತ್ಯ ಸಂಸ್ಕೃತಿಯ ಹೊಸವರ್ಷಾಚರಣೆಯನ್ನು ಇಷ್ಟು ಸಂಭ್ರಮದಿಂದ ಆಚರಿಸುತ್ತಾ wish you happy new year - two 33846http://kannada.oneindia.com/img/2009/01/03-ugadi1e.jpg123850ugadiಕನ್ನಡದ ಕಿರಣ್‌ಬೇಡಿಗೆ ಕ್ಲೀನ್ ಸೆನ್ಸಾರ್/movies/heroine/2009/03/16-kannadada-kiran-bedi-clears-censor.htmlಪ್ರತಿಷ್ಟಿತ ರಾಮು ಎಂಟರ್ ಪ್ರೈಸಸ್ ಅವರ 25ನೇ ಕೊಡುಗೆ 'ಕನ್ನಡದ ಕಿರಣ್‌ಬೇಡಿ' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಲಿ ಯು ಅರ್ಹತಾಪತ್ರವನ್ನು ನೀಡಿದೆ. ಮಾಸಾಂತ್ಯಕ್ಕೆ ಚಿತ್ರ ತೆರೆಗೆ ಬರಲಿದೆ. ಪೊಲೀಸ್ ಪಾತ್ರಗಳಲ್ಲಿ ತಮ್ಮ ಮನೋಜ್ಞ ಅಭಿನಯದಿಂದ ಜನಪ್ರಿಯರಾಗಿದ್ದ ಮಾಲಾಶ್ರೀ 'ಕನ್ನಡದ ಕಿರಣ್‌ಬೇಡಿ' ಚಿತ್ರದಲ್ಲೂ ಪೊಲೀಸ್ ಪಾತ್ರ ನಿರ್ವಹಿಸಿದ್ದಾರೆ. ಆದರ್ಶ ವ್ಯಕ್ತಿಗಳ ಹೆಸರನ್ನು ತಮ್ಮ ಮಕ್ಕಳಿಗೆ ಇಡುವುದು 35242http://kannada.oneindia.com/img/2009/03/16-malashri-kiran-bedi2.jpg123850ugadiಯುಗಾದಿಗೆ ಟಾಟಾ ನ್ಯಾನೋ ಜೊತೆ ಬೇವು-ಬೆಲ್ಲ/lifestyle/automobiles/2009/0318-tata-nano-and-ugadi-bevu-bella.htmlಯುಗಾದಿ ಹತ್ತಿರ ಬರುತ್ತಿದ್ದಂತೆ ಟಾಟಾ ಮೋಟಾರ್ಸ್ ನ ಬಹುನಿರೀಕ್ಷಿತ ನ್ಯಾನೋ ಕಾರು ಖರೀದಿಸಬೇಕೆನ್ನು ಖರೀದಿದಾರರಿಗೆ ಬೇವು-ಬೆಲ್ಲ ಎರಡೂ ಕಾದಿದೆ. ಒಂದು ಕಡೆ ಲಕ್ಷ ಚಿಲ್ಲರೆ ರುಪಾಯಿ ಕಾರು ಕೊಳ್ಳುವ ಕನಸು ನನಸಾಗುವ ಹಂತ ಹತ್ತಿರ ಬರುತ್ತಿದ್ದರೆ, ಇನ್ನೊಂದೆಡೆ ಅರ್ಜಿಗಾಗಿ 300 ರು. ತೆತ್ತಬೇಕಾದ ಪರಿಸ್ಥಿತಿ ಬಂದಿದೆ. ಓಹ್ ನೋ ಅನ್ನಬೇಡಿ. ನ್ಯಾನೋ ಅರ್ಜಿ ಬೇಕಾದರೆ ಹಣ ತೆತ್ತಿ, 35317http://kannada.oneindia.com/img/2009/03/18-tata-nano1.jpg123850ugadiಓಂ ಪ್ರಕಾಶ್ ರಾವ್ ಎಂಬ ಮಾಸ್ಟರ್ ಮೈಂಡ್/movies/headlines/2009/03/19-om-prakash-raos-kiran-bedi.htmlಓಂ ಪ್ರಕಾಶ್ ರಾವ್, ಮಾಸ್ ನಿರ್ದೇಶಕ ಎಂದೇ ಖ್ಯಾತರಾದವರು. ಓಂ ನಿರ್ದೇಶನದ ಬಹುತೇಕ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿವೆ. ಕಥೆಯ ಆಯ್ಕೆ, ಪ್ರೇಕ್ಷಕರನ್ನು ಸೆಳೆಯುವ ಜಾಣ್ಮೆ ಓಂ ಪ್ರಕಾಶ್ ಗೆ ಇದೆ ಎಂದರೆ ತಪ್ಪಾಗಲಾರದು.ಮಾಸ್ ಚಿತ್ರಗಳ ಮಾಸ್ಟರ್ ಮೈಂಡ್ ಆಗಿರುವ ಓಂ ಪ್ರಕಾಶ್ , ರಾಮು ನಿರ್ಮಾಣದಲ್ಲಿ ಮಾಡುತ್ತ್ತಿರುವ ಐದನೇ ಚಿತ್ರ ಕಿರಣ್ ಬೇಡಿ. ಲಾಕಪ್ ಡೆತ್ 35365http://kannada.oneindia.com/img/2009/03/19-omprakash1.jpg127217recessionಪಬ್ ಬಾರ್‌ಗಳ ಕಿಕ್ ಇಳಿಸಿದ ಆರ್ಥಿಕ ಹಿಂಜರಿತ/news/2009/01/05/bar-crisis-in-bengaluru.htmlಬೆಂಗಳೂರು, ಜ. 5 : ಮುಗ್ಗರಿಸಿರುವ ಜಾಗತಿಕ ಆರ್ಥಿಕ ಪರಿಸ್ಥಿತಿಯಿಂದಾಗಿ ಕೆಲಸ ಕಳೆದುಕೊಳ್ಳುವಿಕೆ, ಸಂಬಳದಲ್ಲಿ ಕಡಿತ, ಕಂಪನಿಗಳ ಮುಚ್ಚುವಿಕೆಯಂಥ ಪ್ರತ್ಯಕ್ಷ ದುಷ್ಪರಿಣಾಮ ಉಂಟಾಗಿದ್ದರೆ ಪರೋಕ್ಷವಾಗಿ ಕುಡಿತದಿಂದ ಸರ್ವನಾಶವಾಗುತ್ತಿದ್ದ ಕುಟಂಬಗಳಿಗೆ ಮಾನಸಿಕ ನೆಮ್ಮದಿಯನ್ನು ತಂದಿದೆ.ಆರ್ಥಿಕ ಸಂಕಷ್ಟದಿಂದಾಗಿ ಕುಡುಕರು ಎಚ್ಚೆತ್ತಿರುವುದರಿಂದ ಬೆಂಗಳೂರಿನ ಬಾರ್ ಮತ್ತು ಪಬ್ ಮಾಲಿಕರು ಬಾಯಿಬಡಿದುಕೊಳ್ಳುತ್ತಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಮದ್ಯ ಮಾರಾಟದ ಪ್ರಮಾಣ ಶೇ.40ಕ್ಕೂ ಹೆಚ್ಚು 33894http://kannada.oneindia.com/img/2009/01/05-liquor.jpg127217recessionಸುದ್ದಿಗೋಷ್ಠಿಗಳಲ್ಲಿ ಒಣಹವೆಗೆ ಕ್ಷಣಗಣನೆ/movies/headlines/2009/01/13-count-down-for-dry-eve-parties-began-kfcc.htmlಕನ್ನಡ ಚಲನಚಿತ್ರಗಳಿಗೆ ಸಂಬಂಧಿಸಿದ ಪತ್ರಿಕಾಗೋಷ್ಠಿ, ಆಡಿಯೋ ಕ್ಯಾಸೆಟ್ ಬಿಡುಗಡೆ ಮುಂತಾದ ಕಾರ್ಯಕ್ರಮಗಳನ್ನು ಸಂಜೆ ಹೊತ್ತು ಇಟ್ಟುಕೊಳ್ಳಬಾರದು ಎಂಬ ವಾಣಿಜ್ಯ ಮಂಡಳಿಯ ಆದೇಶ ಜಾರಿಯಾಗುವುದಕ್ಕೆ ಕ್ಷಣಗಣನೆ ಆರಂಭವಾಗಿದೆ. ಜನವರಿ 1 ನೇ ತೇದಿಯಿಂದಲೇ ಜಾರಿಗೆ ಬರಬೇಕಾಗಿದ್ದ ಈ ಆದೇಶ ಕಾರಣಾಂತರಗಳಿಂದ 15ನೇ ತಾರೀಖಿಗೆ ಮುಂದೂಡಲಾಗಿತ್ತು. ವಾಣಿಜ್ಯ ಮಂಡಳಿ ಮತ್ತೆ ಮನಸ್ಸು ಬದಲಾಯಿಸದಿದ್ದರೆ, ಇದೇ ಗುರುವಾರ ಉತ್ತರಾಯಣ ಪುಣ್ಯಕಾಲದ ಆರಂಭದಿಂದ 34046http://kannada.oneindia.com/img/2009/01/13-kcn-chandrashekar2.jpg127217recessionನಿರಾಶೆ ಕಾರ್ಮೋಡದಲ್ಲೂ ಮಿಂಚಲಿರುವ ಕಾರುಗಳು/lifestyle/automobiles/2009/0217-new-car-models-to-hit-indian-roads-soon.htmlಆರ್ಥಿಕ ಬಿಕ್ಕಟ್ಟಿನ ಹೊಡೆತ ಭಾರತದಲ್ಲಿ ಕಾರುಗಳ ಮಾರಾಟದ ವೇಗಕ್ಕೆ ಬ್ರೇಕ್ ಹಾಕಿದೆ. ಆದರೂ, ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಕಾರುಗಳ ಮಾರಾಟ ನಿರಾಶಾದಾಯಕವಾಗೇನೂ ಇಲ್ಲ. ಅನ್ಯ ದೇಶಗಳಲ್ಲಿ ಋಣಾತ್ಮಕ ಬೆಳವಣಿಗೆ ಕಂಡಿದ್ದರೆ, ಭಾರತದಲ್ಲಿ ವಿಶ್ವಾಸದ ಮಟ್ಟ ಇನ್ನೂ ಕುಸಿದಿಲ್ಲ. ವರ್ಷಾದಾರಂಭದಲ್ಲಿ ಕಾರು ತಯಾರಕರು ಝೈಲೋ, ಲಿನಿಯಾ ಮೊದಲಾದ ಅತ್ಯಾಕರ್ಷಕ ಕಾರಿನ ಮಾಡೆಲ್ ಗಳನ್ನು ಮಾರಾಟಕ್ಕೆ ಬಿಟ್ಟಿದ್ದರಿಂದ ಜನ ಅವುಗಳತ್ತ 34697http://kannada.oneindia.com/img/2009/02/17-skoda-superb1.jpg127217recessionರಾಕ್ ಲೈನ್ ನಿರ್ಮಾಣದಲ್ಲಿ ಮೂರು ಚಿತ್ರಗಳು/movies/studio/2009/02/19-rockline-venkatesh-starts-two-new-films.htmlಸದ್ದಿಲ್ಲದಂತೆ ರಾಕ್ ಲೈನ್ ವೆಂಕಟೇಶ್ ರ ಎರಡು ಹೊಸ ಚಿತ್ರಗಳು ವಾರದ ಹಿಂದೆಯೇ ಸೆಟ್ಟೇರಿವೆ. ರಾಕ್ ಲೈನ್ ರ ಎರಡು ಚಿತ್ರಗಳ ನಾಯಕರಾಗಿ ವಿಜಯ್ ಮತ್ತು ದಿಗಂತ್ ನಟಿಸುತ್ತಿದ್ದಾರೆ. ಈ ಚಿತ್ರಗಳ ನಾಯಕಿ ಪಾತ್ರಕ್ಕೆ ಹುಡುಕಾಟ ಆರಂಭವಾಗಿದೆ. ಮಾಧ್ಯಮದವರ ಹಂಗ್ಯಾಕೆ ಎಂದು ರಾಕ್ ಲೈನ್ ವೆಂಕಟೇಶ್ ಒಂಚೂರು ಸುಳಿವು ಕೊಡದೆ ಈ ಎರಡು ಚಿತ್ರಗಳ 34752http://kannada.oneindia.com/img/2009/02/19-rockline-venkatesh1.jpg127217recessionಬೆಂಗಳೂರಿನಲ್ಲಿ ಟೊಯೋಟಾ ಸಣ್ಣ ಕಾರು ಘಟಕ/lifestyle/automobiles/2009/0224-toyota-small-car-plant-in-bengaluru.htmlಯಾವುದೇ ಮಾತುಕತೆ ನಡೆಯುತ್ತಿರಲಿ, ಅದು ಕೊನೆಗೆ ಆರ್ಥಿಕ ಬಿಕ್ಕಟ್ಟಿನೆಡೆಗೇ ಬಂದು ನಿಲ್ಲುತ್ತದೆ. ಇದು ಆಟೋಮೊಬೈಲ್ ಕ್ಷೇತ್ರವನ್ನೂ ಬಿಟ್ಟಿಲ್ಲ. ಐಷಾರಾಮಿ ಅನ್ನುವ ಮಾತು ನೇಪಥ್ಯಕ್ಕೆ ಸರಿದಿದ್ದು ಎಲ್ಲ ಕಾರು ತಯಾರಿಕಾ ಕಂಪನಿಗಳು ಸಣ್ಣ ಕಾರುಗಳ ತಯಾರಿಕೆಯತ್ತ ಗಮನ ಹರಿಸಿವೆ. ಆರ್ಥಿಕ ಸಂಕಷ್ಟ ಕಾರಿನ ಇಗ್ನೀಷನ್ ಕೀ ಶುರು ಮಾಡುವ ಮೊದಲೇ ಇಂಜಿನ್ನಿಗೆ ಬಿಸಿ ಮುಟ್ಟಿಸಿದೆ.ಟೊಯೋಟಾ ಕಂಪನಿ ಕೂಡ ಇದಕ್ಕೆ 34833http://kannada.oneindia.com/img/2009/02/24-toyota-small-car1.jpg123846ಯುಗಾದಿಹೋಳಿಗೆಯ ಇತಿವೃತ್ತ , ಯುಗಾದಿಯ ವೃತ್ತಾಂತ/recipe/sweet/2008/0403-obbattu-for-ugadi.htmlಹೋಳಿಗೆ ಅಥವಾ ಒಬ್ಬಟ್ಟು ಇಲ್ಲದಿರೆ ಹಬ್ಬ ಪೂರ್ಣವಾಗಲು ಎಂತು ಸಾಧ್ಯ. ನಮ್ಮ ಹಳ್ಳಿ ಅಮ್ಮಂದರಿಗಂತೂ ಹಬ್ಬವನ್ನು ಹೊರತು ಪಡಿಸಿದರೂ- ಮಗ ಪರೀಕ್ಷೆಯಲ್ಲಿ ಪಾಸಾಗಲಿ, ಮಗಳು ಊರಿನಿಂದ ತವರಿಗೆ ಬರಲಿ, ಗಂಡನಿಗೆ ವ್ಯವಹಾರದಲ್ಲಿ ಲಾಭ ಬರಲಿ , ಎಲ್ಲ ಸಂಭ್ರಮಗಳಿಗೂ ಹೋಳಿಗೆಯೇ ಆಗಬೇಕು. ಇಂಥಾ ಹೋಳಿಗೆ ಊಟದೊಂದಿಗೇ ಯುಗಾದಿ ಅರ್ಥಪೂರ್ಣಗೊಳ್ಳುತ್ತದೆ. ವಾರ, ಹದಿನೈದು ದಿನಗಳಿಂದ ಹಬ್ಬಕ್ಕಾಗಿ ನಡೆಸಿದ ಸಿದ್ಧತೆಯ 2926http://kannada.oneindia.com/img/2009/03/25-obbattu1.jpg123846ಯುಗಾದಿಯುಗಾದಿಗೆ ಶುಭಾಶಯ ತಪ್ಪದೆ ತಿಳಿಸಿ/response/2009/0103-enough-of-new-year-greeting-craze.htmlಪ್ರಿಯ ಸಂಪಾದಕರೆ,ಈಗಷ್ಟೆ ನಾವು ಹೊಸ ವರ್ಷಾಚರಣೆಯ ಗುಂಗಿನಿಂದ ಹೊರಬರುತ್ತಿದ್ದೇವೆ. ಈ ಕ್ಷಣಕ್ಕೆ ಒಮ್ಮೆ ಯೋಚಿಸೋಣ. ಶ್ರೀ ರಾಮನವಮಿಗೆ, ಹನುಮಜಯಂತಿಗೆ, ಅಷ್ಟೇ ಯಾಕೆ ಸ್ವತಃ ಹಿಂದೂ ಸಂಪ್ರದಾಯದ ಹೊಸವರ್ಷವಾದ ಯುಗಾದಿಗೆ ಒಂದು ಶುಭಾಶಯ ಹೇಳಬೇಕೆನ್ನುವ ಪರಿಜ್ಞಾನ ಇಲ್ಲದ ನಾವು ಈ ಪಾಶ್ಚಾತ್ಯ ಸಂಸ್ಕೃತಿಯ ಹೊಸವರ್ಷಾಚರಣೆಯನ್ನು ಇಷ್ಟು ಸಂಭ್ರಮದಿಂದ ಆಚರಿಸುತ್ತಾ wish you happy new year - two 33846http://kannada.oneindia.com/img/2009/01/03-ugadi1e.jpg123846ಯುಗಾದಿಯುಗಾದಿಗೆ ಸಜ್ಜಾಗಿವೆ ದೊಡ್ಡ ಬ್ಯಾನರ್ ಚಿತ್ರಗಳು/movies/headlines/2009/03/13-bhimoos-bang-bang-kids-kiran-bedi-on-ugadi.htmlನಿರೀಕ್ಷೆಯಂತೆ ಯುಗಾದಿ ಹಬ್ಬಕ್ಕೆ ಎರಡು ದೊಡ್ಡ ಬ್ಯಾನರ್ ನ ಚಿತ್ರಗಳು ಬಿಡುಗಡೆಯಾಗುತ್ತಿವೆ. ಅವುಗಳಲ್ಲಿ ಒಂದು ರಾಮು ನಿರ್ಮಾಣದ 'ಕನ್ನ್ನಡದ ಕಿರಣ್ ಬೇಡಿ', ಮತ್ತೊಂದು ಉಪೇಂದ್ರ ಅಭಿನಯದ 'ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್'. ಮಾಲಾಶ್ರೀ ಅಭಿನಯದ ಅದ್ದೂರಿ ಚಿತ್ರಪ್ರೇಕ್ಷಕರನ್ನು ಸೆಳೆಯುತ್ತದೆ ಎಂಬ ಉತ್ಸಾಹದಲ್ಲಿ ನಿರ್ಮಾಪಕ ರಾಮು ಇದ್ದಾರೆ. ಗುಲಾಮ ಚಿತ್ರದ ಸೋಲಿನಿಂದ ಕಂಗೆಟ್ಟಿರುವ ಅವರು ಈ ಚಿತ್ರ ಗೆದ್ದೇ 35219http://kannada.oneindia.com/img/2009/03/14-b3kids-upendra1.jpg123846ಯುಗಾದಿಕನ್ನಡದ ಕಿರಣ್‌ಬೇಡಿಗೆ ಕ್ಲೀನ್ ಸೆನ್ಸಾರ್/movies/heroine/2009/03/16-kannadada-kiran-bedi-clears-censor.htmlಪ್ರತಿಷ್ಟಿತ ರಾಮು ಎಂಟರ್ ಪ್ರೈಸಸ್ ಅವರ 25ನೇ ಕೊಡುಗೆ 'ಕನ್ನಡದ ಕಿರಣ್‌ಬೇಡಿ' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಲಿ ಯು ಅರ್ಹತಾಪತ್ರವನ್ನು ನೀಡಿದೆ. ಮಾಸಾಂತ್ಯಕ್ಕೆ ಚಿತ್ರ ತೆರೆಗೆ ಬರಲಿದೆ. ಪೊಲೀಸ್ ಪಾತ್ರಗಳಲ್ಲಿ ತಮ್ಮ ಮನೋಜ್ಞ ಅಭಿನಯದಿಂದ ಜನಪ್ರಿಯರಾಗಿದ್ದ ಮಾಲಾಶ್ರೀ 'ಕನ್ನಡದ ಕಿರಣ್‌ಬೇಡಿ' ಚಿತ್ರದಲ್ಲೂ ಪೊಲೀಸ್ ಪಾತ್ರ ನಿರ್ವಹಿಸಿದ್ದಾರೆ. ಆದರ್ಶ ವ್ಯಕ್ತಿಗಳ ಹೆಸರನ್ನು ತಮ್ಮ ಮಕ್ಕಳಿಗೆ ಇಡುವುದು 35242http://kannada.oneindia.com/img/2009/03/16-malashri-kiran-bedi2.jpg123846ಯುಗಾದಿಯುಗಾದಿಗೆ ಟಾಟಾ ನ್ಯಾನೋ ಜೊತೆ ಬೇವು-ಬೆಲ್ಲ/lifestyle/automobiles/2009/0318-tata-nano-and-ugadi-bevu-bella.htmlಯುಗಾದಿ ಹತ್ತಿರ ಬರುತ್ತಿದ್ದಂತೆ ಟಾಟಾ ಮೋಟಾರ್ಸ್ ನ ಬಹುನಿರೀಕ್ಷಿತ ನ್ಯಾನೋ ಕಾರು ಖರೀದಿಸಬೇಕೆನ್ನು ಖರೀದಿದಾರರಿಗೆ ಬೇವು-ಬೆಲ್ಲ ಎರಡೂ ಕಾದಿದೆ. ಒಂದು ಕಡೆ ಲಕ್ಷ ಚಿಲ್ಲರೆ ರುಪಾಯಿ ಕಾರು ಕೊಳ್ಳುವ ಕನಸು ನನಸಾಗುವ ಹಂತ ಹತ್ತಿರ ಬರುತ್ತಿದ್ದರೆ, ಇನ್ನೊಂದೆಡೆ ಅರ್ಜಿಗಾಗಿ 300 ರು. ತೆತ್ತಬೇಕಾದ ಪರಿಸ್ಥಿತಿ ಬಂದಿದೆ. ಓಹ್ ನೋ ಅನ್ನಬೇಡಿ. ನ್ಯಾನೋ ಅರ್ಜಿ ಬೇಕಾದರೆ ಹಣ ತೆತ್ತಿ, 35317http://kannada.oneindia.com/img/2009/03/18-tata-nano1.jpgnews"> ರೆಡಿಂಗ್‌ನಲ್ಲಿ ಮಿತವಾದ ಹಿತವಾದ ಯುಗಾದಿ | Ugadi in Reading | Kannadigaru UK | Virodhi | Pavan - ರೆಡಿಂಗ್‌ನಲ್ಲಿ ಮಿತವಾದ ಹಿತವಾದ ಯುಗಾದಿ - Kannada Oneindia

ರೆಡಿಂಗ್‌ನಲ್ಲಿ ಮಿತವಾದ ಹಿತವಾದ ಯುಗಾದಿ

Ugadi celebrated in Reading
ಜಗತ್ತಿನಲ್ಲಿ ಎಲ್ಲೆಡೆಯಿರುವಂತೆ ಇಂಗ್ಲೆಂಡಿನಲ್ಲಿಯೂ ಆರ್ಥಿಕ ಬಿಕ್ಕಟ್ಟಿನ ಬಿಸಿ ವಿರೋಧದ ಅಲೆ ಎಬ್ಬಿಸಿದೆ. ಕೆಲಸ ಕಳೆದುಕೊಳ್ಳುವ ಭೀತಿಯ ತೂಗಕತ್ತಿ ತಲೆಯ ಮೇಲೆ ನೇತಾಡುತ್ತಿದೆ. ಅಂಥದರಲ್ಲಿಯೂ ರೆಡಿಂಗ್ ನಲ್ಲಿರುವ ಕನ್ನಡಿಗರು ಯುಕೆ ತಂಡದ ಸದಸ್ಯರು ಹಿತವಾಗಿ ಮತ್ತು ಮಿತವಾಗಿ ಸಂಭ್ರಮದಿಂದ ಮಾರ್ಚ್ 28ರಂದು ಯುಗಾದಿ ಆಚರಿಸಿದರು.

* ಪವನ್ ಮೈಸೂರ್, ಕನ್ನಡಿಗರು ಯು.ಕೆ

2008ರಿಂದ ಹಠಾತ್ತನೆ ದಿನನಿತ್ಯದ ನೌಕರಿ, ಚಾಕರಿಗಳಿಗೆ ಕುತ್ತು. ಸಣ್ಣ ಪುಟ್ಟ ವ್ಯಾಪಾರಿಗಳಿಂದ ಹಿಡಿದು ಮಹಾನ್ ಘಟಾನುಘಟಿಗಳಾಗಿ ಮೆರೆದ ದೊಡ್ಡ ಪ್ರಮಾಣದ ಕಂಪನಿಗಳು ಮಡಚಿಕೊಂಡು ಹೋದವು. ಪ್ರಪಂಚದ ಪ್ರತಿಯೊಂದು ದೇಶದಲ್ಲೂ ಹಬ್ಬಿರುವ ಈ ಅರ್ಥ(ಅ)ವ್ಯವಸ್ಥೆಯ ರೋಗ ಎಲ್ಲರನ್ನೂ ಆಪೋಷನ ತೆಗೆದು ಕೊಳ್ಳುವುದೇನೋ ಎಂಬ ಆತಂಕಮಯ ವಾತಾವರಣ. ಅದರಲ್ಲೂ ಇಂಗ್ಲೆಂಡ್ ನಂತಹ ಸಣ್ಣ ರಾಷ್ಟ್ರ ಸದ್ಯದ ಪರಿಸ್ಥಿತಿಯಲ್ಲಿ ನಲುಗಿ ಹೋಗಿದೆ. ಇಲ್ಲಿ ನೆಲೆಸಿರುವ ಪ್ರತಿಯೊಂದು ಜೀವಿಯೂ ಮತ್ತು ಕನ್ನಡಿಗರು ಮತ್ತು ಕನ್ನಡೇತರರು ಕೊಂಚ ಕಂಗಾಲಾಗಿರುವುದು ಸುಳ್ಳೇನಲ್ಲ.

ಇಂತಹ ವಾತವರಣದಲ್ಲಿ ಕನ್ನಡಿಗರು ಯು.ಕೆ ಈ ವರ್ಷದ ಯುಗಾದಿ ಹಬ್ಬವನ್ನು ಆಚರಿಸುವುದು ಹೇಗೆ? ಹಿಂದಿನ ದಿನಗಳಂತಲ್ಲ ಈಗ. ಬೆಲೆ ಏರಿಕೆ, ನೌಕರಿಗಳ ಆತಂಕ, ಭಾರತಕ್ಕೆ ಹಿಂತಿರುಗುವ ಮಾತುಗಳು ಮತ್ತು ಕಾರ್ಯಕಾರಿ ಸಮಿತಿಯವರಿಗೆ ಎಲ್ಲರಂತೆಯೇ ವೇಳೆಯ ಅಭಾವ. (ಇದರಿಂದಾಗಿಯೇ ಅಲ್ಲವೇ, ಈ ಬರಹವನ್ನು ಇಷ್ಟು ದಿನಗಳ ನಂತರ ನಿಮ್ಮ ಮುಂದಿಡಲು ಸಾಧ್ಯವಾದದ್ದು?) ಕಡೆಗೂ ದೃಢಚಿತ್ತದಿಂದ ಉಗಾದಿ ಹಬ್ಬವನ್ನು ಮಾರ್ಚ್ 28ರಂದು ಆಚರಿಸಲು ನಿರ್ಧರಿಸಿ ಮತ್ತೆ ಟೊಂಕ ಕಟ್ಟಿ ನಿಂತೆವು. 2008ರ ರಾಜ್ಯೋತ್ಸವದ ಯಶಸ್ಸು ಒಂದು ರೀತಿಯಲ್ಲಿ ಕನ್ನಡಿಗರು ಯು.ಕೆಯ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದ್ದವು. ಸದ್ಯದ ಪರಿಸ್ಥಿತಿಯಲ್ಲಿ ಕಡಿಮೆ ಖರ್ಚಿನಲ್ಲಿ ಒಳ್ಳೆಯ ಹಬ್ಬದ ಆಚರಣೆ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲಿತ್ತು.

ಸಂಕಟ ಬಂದಾಗ ವೆಂಕಟರಮಣ ಎಂಬ ನಮ್ಮ ಭಾರತೀಯ ಸಂಪ್ರದಾಯವನ್ನನುಸರಿಸಿ ಈ ಯುಗಾದಿಗೆ ಸರ್ವೇ ಜನಾಃ ಸುಖಿನೋ ಭವಂತು ಎನ್ನುವ ಉದ್ದೇಶದೊಂದಿಗೆ ಶ್ರೀ ಸತ್ಯನಾರಾಯಣ ಪೂಜೆಯನ್ನು ಕೈಗೊಳ್ಳುವ ಕಾರ್ಯಕ್ಕೆ ಇಲ್ಲಿನ ಬಾಲಾಜಿ ದೇವಸ್ಥಾನದ ಅಪರೂಪ ಕನ್ನಡ ಅರ್ಚಕರಾದ ಪ್ರಸಾದ್ ಅವರ ಸಕಾರಾತ್ಮಕ ಪ್ರತಿಕ್ರಿಯೆಯಿಂದ, ಈ ಸಾಮೂಹಿಕ ಪೂಜೆ ಸಾಕಾರವಾಯಿತು. ಇದಲ್ಲದೇ ಅನೇಕರು ತಮ್ಮ ಪ್ರತಿಭೆಯನ್ನು ವೇದಿಕೆಯ ಮೇಲೆ ಪ್ರದರ್ಶಿಸಲು ಮುಂದು ಬಂದರು. ರೆಡಿಂಗ್ ಹಿಂದೂ ದೇವಾಲಯದ ಸಭಾಂಗಣವನ್ನು ಈ ಆಚರಣೆಗೆ ಆಯ್ಕೆ ಮಾಡಿದೆವು. ಇನ್ನೇನು, ಹಬ್ಬದ ಆಚರಣೆಗೆ ಬೇಕಾದುದೆಲ್ಲಾ ಪೂರಕವಾಗಿ ನೆರವೇರಿದಂತಾಯಿತು.

ಸುಮಾರು 260 ಕನ್ನಡಿಗರ ಸಮಾಗಮ, ಮಂತ್ರ ಘೋಷಗಳು, ಜನರ ಹರಟೆ, ಪರಸ್ಪರ ಯುಗಾದಿ ಶುಭಾಶಯಗಳ ವಿನಿಮಯ, ಸಣ್ಣ ಮಕ್ಕಳ ಓಡಾಟ ರೆಡಿಂಗ್ ನಲ್ಲಿ ಮನೆಯ ಹಬ್ಬದ ವಾತವರಣ ಸೃಷ್ಟಿಸಿತ್ತು. ಆಗಮಿಸಿದ್ದ ಪ್ರತಿಯೊಬ್ಬರಿಗೂ ಬೇವು, ಬೆಲ್ಲ, ಮತ್ತು ಫಲ ಪ್ರಸಾದ ವಿನಿಯೋಗವಾಯಿತು. ಪ್ರಸಾದ ವಿನಿಯೋಗ ಮುಗಿದ ಮೇಲೆ ಊಟ ತಯಾರಾಗಿತ್ತು. ನಾವೆಲ್ಲರೂ ಅಚ್ಚು ಕಟ್ಟಾಗಿ ಸಾಲಿನಲ್ಲಿ ನಿಂತು ಹಬ್ಬದ ಊಟ ಮುಗಿಸಿದೆವು. ಕೊಂಚ ಹೊತ್ತಿನಲ್ಲಿ ನೋಡು ನೋಡುತ್ತಿದ್ದಂತೆ ನೆರೆದಿದ್ದ ಎಲ್ಲರೂ ಸೇರಿ ಸಭಾಂಗಣವನ್ನೆಲ್ಲ ಸ್ವಚ್ಚಗೊಳಿಸಿ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅಣಿಮಾಡಿದರು. 3.15ಕ್ಕೆ ವೇದಿಕೆ ಸಜ್ಜಾಗಿ ಪ್ರಾರ್ಥನೆ ಮತ್ತು ಚುಟುಕು ಸ್ವಾಗತ ಭಾಷಣದೊಂದಿಗೆ ಕಾರ್ಯಕ್ರಮಗಳು ಪ್ರಾರಂಭವಾಯಿತು.

"ಜಲಲ ಜಲಲ ಜಲಧಾರೆ" ಮತ್ತು "ಬಂಗಾರ ತೀರ ಕಡಲಾಚೆ" ಸಮೂಹ ಗೀತೆಗಳು (ಅರ್ಚನ, ಪಲ್ಲವಿ, ವೀಣ, ಸೌಮ್ಯ, ಸನಮ್, ಕಿರಣ್, ನಾಗೇಶ್, ದಿವಾಕರ್, ಸಂದೀಪ್), ಚಿಣ್ಣರ ವೇಷಭೂಷಣ(ಆಂಚಲ್ ಮತ್ತು ಚೇತನಾ ನಿರ್ದೇಶನ), ವಯೋಲಿನ್ ತಬಲ ಜುಗಲಬಂದಿ (ಸೂರಜ್ ಮತ್ತು ಅನಿಲ್) , ಹಾಸ್ಯಭರಿತ "ಉಪ್ಪಿಟ್ಟು" ಕಿರು ನಾಟಕ (ಆನ್ನಪೂರ್ಣ, ಆನಂದ), "ರೆಡಿಂಗ್ ರಾಣಿ" ಸಾಮೂಹಿಕ ಆಟ, ಮಕ್ಕಳಿಂದ ಬಾಲಿವುಡ್ ನೃತ್ಯಗಳು (ಜ್ಯೋತಿ, ಅರ್ಪಿತ, ಭೂಮಿಕ,ಅನುಷ್ಕ, ಸಾಕ್ಷಿ ಮತ್ತು ಸ್ನೇಹ) ಮುಗಿದಾಗ 5.45. ಕಡೆಯದಾಗಿ "ಮಾಯದಂತ ಮಳೆ ಬಂತಣ್ಣ" ಜನಪದ ಗೀತೆಗೆ ಸಾಮೂಹಿಕ ನೃತ್ಯ ಮುಗಿಯುತ್ತಿದ್ದಂತೆ ಮಳೆರಾಯ "ಅಯ್ಯೊ ಮರೆತೆನಲ್ಲ" ಎಂದು ಮಳೆತರಿಸಿದ. ಎಲ್ಲರಿಗೂ ಕನ್ನಡಿಗರು ಯು.ಕೆ ಯ ಪರವಾಗಿ ಧನ್ಯವಾದಗಳನ್ನರ್ಪಿಸುವ ಮೂಲಕ ಯುಗಾದಿ ಹಬ್ಬದ ಆಚರಣೆ ತೆರೆ ಕಂಡಿತು.

ಕಾರ್ಯಕ್ರಮ ನಿರೂಪಿಸುವ ಜವಾಬ್ದಾರಿಯನ್ನು ನಾನು, ರಮ್ಯ ಮತ್ತು ಗಾಯತ್ರಿ ವಹಿಸಿದ್ದೆವು. ಕಳೆದ ಯುಗಾದಿಯನ್ನು ಕೇವಲ ಸಣ್ಣ ಮಕ್ಕಳಿಂದ ನಿರೂಪಿಸಿದ್ದೆವು, ರಾಜ್ಯೋತ್ಸವಕ್ಕೆ ಸಿಲ್ಲಿ-ಲಲ್ಲಿ ಇದ್ದರು, ಹಿಂದೆಲ್ಲ ವಾರಗಟ್ಟಳೆ ಅಭ್ಯಾಸ ಮಾಡಿಕೊಂಡು ನಿರೂಪಿಸುತ್ತಿದ್ದೆವು. ಈ ಬಾರಿ, ಯಾವುದೇ ತಯಾರಿಯಿಲ್ಲದೆ ವೇದಿಕೆಯ ಮೇಲೆ ಸಹಜವಾಗಿ ಸ್ಪುರಣವಾದ ನಿರೂಪಣೆ ಇದು.

ಈ ಹಬ್ಬಕ್ಕೆ ನಮಗೆ ಹಲವು ಸ್ತರದಲ್ಲಿ ನೆರವಾದ ಪ್ರಸಾದ್, ಸತ್ಯನಾರಾಯಣ, ಆಯುರ್ವೇದಿಕ್ ಯು.ಕೆ ಅಂಜಲಿ ಜೋಷಿ), ಸುಬ್ರಹ್ಮಣ್ಯ (ಚೆನ್ನೈ ದೋಸಾ) ಮತ್ತು ದಟ್ಸ್ ಕನ್ನಡದ ಪ್ರಸಾದ್ ನಾಯಕ್ ಇವರಿಗೆ ಧನ್ಯವಾದಗಳು. ಎಲ್ಲಕ್ಕಿಂತ ಮಿಗಿಲಾಗಿ ಕಾರ್ಯಕ್ರಮಗಳನ್ನು ಸಾಂಗವಾಗಿ ನಡೆಸಿಕೊಡಲು ಸ್ಪೂರ್ತಿ ಕೊಟ್ಟು, ತಪ್ಪು ನೆಪ್ಪುಗಳನ್ನು ಮಡಿಲಿಗಿರಿಸಿ ಕಡೆಯವರೆಗೂ ಸಂಯಮದೊಂದಿಗೆ ನಮ್ಮೊಂದಿಗಿದ್ದು ಸಹಕರಿಸಿದ ನಿಮಗೆ ಯಾವ ರೀತಿಯಲ್ಲಿ ಧನ್ಯವಾದಗಳನ್ನರ್ಪಿಸಿದರೂ ಕಡಿಮೆಯೇ.

ವಿ.ಸೂ - ಈ ಬೇಸಿಗೆಯಲ್ಲಿ ಕನ್ನಡದವರೆಲ್ಲ ಒಂದು ವನ ಭೊಜನ ಮತ್ತು ಹಲವಾರು ಹೊರಾಂಗಣ ಆಟಗಳನ್ನಾಡೋಣವೆಂಬ ಇರಾದೆ ಇದೆ. ಅದರ ಜತೆಗೆ ನಾವು ಮುಂದೆ ಯಾವ ದಿಕ್ಕಿನಲ್ಲಿ ಹೇಗೆ ಸಾಗಬೇಕೆಂಬ ವಿಚಾರನನ್ನು ನಿಮ್ಮೆಲ್ಲರೊಂದಿಗೆ ಮುಕ್ತವಾಗಿ ನಿಮ್ಮೆಲ್ಲರೊಂದಿಗೆ ಚರ್ಚಿಸಬೇಕೆಂಬುದೆ ನಮ್ಮ ಉದ್ದೇಶ. ಇಷ್ಟರಲ್ಲೇ ನಿಮಗೆ ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ಪ್ರಕಾಶಿಸುತ್ತೇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+