159682ಅಕ್ಕ ವಿವಾದಭಿನ್ನಮತೀಯರಿಗೆ ಸೊಪ್ಪುಹಾಕದ ಅಕ್ಕ/nri/article/2009/0119-akka-president-ramesh-gowda-refutes-charges.htmlಅಕ್ಕ ಸಂಸ್ಥೆ ಕೆಲವೇ ಪಟ್ಟಭದ್ರ ಹಿತಾಸಕ್ತಿಗಳ ಕಾರಸ್ಥಾನ ಆಗಿದೆ ಎಂದೂ, ಇತ್ತೀಚೆಗೆ ನಡೆದ ನಿರ್ದೇಶಕ ಮಂಡಳಿ ಚುನಾವಣೆಗಳನ್ನು ಮೋಸ ಆಗಿದೆ ಎಂದೂ ಅಕ್ಕದ ಒಂದು ಗುಂಪು ಆಪಾದನೆ ಮಾಡಿತ್ತು. ಈ ಆಪಾದನೆಗೆ ಪ್ರತ್ಯುತ್ತರವಾಗಿ ಅಕ್ಕದ ಅಧ್ಯಕ್ಷ ರಮೇಶ್ ಗೌಡ ಅವರು ಅವರು ನೀಡಿರುವ ನಿರಾಕರಣೆ ಹೇಳಿಕೆಯನ್ನು ಪ್ರಕಟಿಸಲಾಗಿದೆ- ಸಂಪಾದಕ.ಮಾನ್ಯರೆ,ಈ ಮೂಲಕ ದಟ್ಸ್ ಕನ್ನಡ ಬ್ರೌಸರುಗಳಿಗೆ ತಿಳಿಯಪಡಿಸುವುದೇನೆಂದರೆ:ಕೆಲವೊಂದು 34141http://kannada.oneindia.com/img/2009/01/19-ramesh-gowda2.jpg159682ಅಕ್ಕ ವಿವಾದರವಿ ಡಂಕಣಿಕೋಟೆ ಅಕ್ಕಗೆ ಅಧ್ಯಕ್ಷ/nri/article/2009/0122-ravi-dankanikote-new-president-of-akka.htmlಬೆಲ್ ವ್ಯೂ,(ವಾಷಿಂಗ್ಟನ್ ಡಿಸಿ),ಜ. 22 : ಕಾವೇರಿ ಕನ್ನಡ ಸಂಘದ ಸದಸ್ಯ ಮತ್ತು ಅಕ್ಕ ಆಡಳಿತ ಮಂಡಳಿಯ ನಿರ್ದೇಶಕ ರವಿ ಡಂಕಣಿಕೋಟೆ ಅವರು ಅಕ್ಕದ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಬರಾಕ್ ಒಬಾಮ ಅವರು ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿ ಆಯ್ಕೆಗೊಂಡ ಮಂಗಳವಾರದ ಮುಹೂರ್ತದಲ್ಲೇ ಅಮೆರಿಕಾದಲ್ಲಿ ನೆಲೆಸಿರುವ ಕನ್ನಡಿಗರ ಗುಂಪಿಗೂ ಹೊಸ ಅಧ್ಯಕ್ಷರ ನೇಮಕವಾಗಿರುವುದು ಕಾಕತಾಳೀಯವಾಗಿದೆ.ಕಾರ್ಯಕಾರಿ 34222http://kannada.oneindia.com/img/2009/01/22-ravi-dankanikote1e.jpg159682ಅಕ್ಕ ವಿವಾದರಮೇಶ್ ಗೌಡರಿಗೆ ಸುರೇಶ್ ರಾಮಚಂದ್ರ ಪತ್ರ/nri/article/2009/0124-suresh-ramachandra-rejoinder-to-ramesh-gowda.htmlಪ್ರಿಯ ರಮೇಶ್,ತಮ್ಮ ಪತ್ರ ಓದಿದೆ. ನನ್ನ ಹೆಸರು ನೀವು ಪ್ರಸ್ತಾಪಿಸಿರುವುದರಿಂದ ಈ ಸ್ವಷ್ಟೀಕರಣ ನೀಡಬಯಸುತ್ತೇನೆ. ನಾನು ಅಕ್ಕ ಅಧ್ಯಕ್ಷ ಸ್ಥಾನಕ್ಕೆ ಸ್ವಯ೦ ಘೋಷಿತ ಅಭ್ಯರ್ಥಿಯಾಗಿರಲಿಲ್ಲ. ಶಿಕಾಗೊ ಸಮ್ಮೇಳನದ ಸಮಯದಲ್ಲಿ ಕೆಲವು ನಿರ್ದೇಶಕರು ನಾನು ಸ್ವರ್ಧಿಸುತ್ತೇನೆಯೆ? ಎ೦ದು ಕೇಳಿದಾಗ, ನನ್ನ ನಿರ್ದೇಶಕ ಅವಧಿ ಸದ್ಯದಲ್ಲೆ ಮುಗಿಯುವುದರಿ೦ದ ಈ ಬಗ್ಗೆ ಇನ್ನು ಸ್ಪಷ್ಟವಾಗಿ ಚಿ೦ತಿಸಿಲ್ಲ ಎ೦ದು ಹೇಳಿದ್ದೆ. ನ೦ತರ ನಾನು 34271http://kannada.oneindia.com/img/2009/01/24-suresh1e.jpg159682ಅಕ್ಕ ವಿವಾದಅಮೆರಿಕದಲ್ಲಿ ಕನ್ನಡಿಗರ ಹೊಸ ಸಂಸ್ಥೆ!/nri/article/2009/0206-new-kannada-org-north-america.htmlಅಮೆರಿಕನ್ನಡಿಗರಿಂದ, ಅಮೆರಿಕನ್ನಡಿಗರಿಗೋಸ್ಕರ, ಅಮೆರಿಕನ್ನಡಿಗರಿಗಾಗಿ ಮುಡಿಪಾದ ಸಂಸ್ಥೆಯ ಪತ್ರಿಕಾ ಪ್ರಕಟಣೆ.ಪ್ರಿಯ ಅಮೆರಿಕನ್ನಡ ಬಂಧುಗಳೆ,ಕನ್ನಡ ನಾಡಿನಿಂದ ಬಂದು ಅಮೆರಿಕದ ಬೇರೆ ಬೇರೆ ಪ್ರಾಂತ್ಯಗಳಲ್ಲಿ ನೆಲೆಸಿ ಇಲ್ಲಿನ ಜೀವನಕ್ಕೆ ಹೊಂದಿಕೊಂಡು ಬಾಳುತ್ತಿದ್ದೀರಿ. ನಮ್ಮ ಜನಾಂಗದ ಅಭಿಲಾಷೆಗಳಲ್ಲಿ ಪ್ರಾಮುಖ್ಯವಾಗಿ ತಾಯಿಭಾಷೆಯ ಅಭಿಮಾನ, ಕರ್ನಾಟಕ ಸಂಸ್ಕೃತಿ, ಉತ್ತರ ಅಮೆರಿದದಾದ್ಯಂತ ಇರುವ ನಾನಾ ಕನ್ನಡ ಸಂಘಗಳ ಮೂಲಕ ಎಲ್ಲರನ್ನು ಮುಟ್ಟುತ್ತಿದೆ. ಆದರೆ ಮುಂದಿನ ಜನಾಂಗದ ಮಕ್ಕಳಲ್ಲಿ 34511http://kannada.oneindia.com/img/2009/02/06-liberty-statue-from-behind1.jpg159683ಚುನಾವಣೆಕೊಳೆತ ಮಾರುಕಟ್ಟೆಯಲ್ಲಿ ಹೆಂಗಸರ ತಾಜಾ ರಾಜಕೀಯ/column/humor/2008/0506-fresh-politics-in-rotten-market.htmlಭಾನುವಾರ ಬೆಳಿಗ್ಗೆ ಸಂತೆ. ಹಣ್ಣು, ಹೂವು, ತರಕಾರಿ ಮಾರುವವರದೇ ಭರಾಟೆ. ತರಕಾರಿ ಹೆಸರನ್ನು ಹಿಡಿದುಕೊಂಡು ಗಿರಾಕಿಗಳನ್ನು ತಮ್ಮತ್ತ ಸೆಳೆಯುವವರದೇ ಚೀರಲು ಧ್ವನಿಗಳು. ಆದರೆ, ಒಂದು ಮೂಲೆಯಲ್ಲಿ ಈ ಎಲ್ಲ ಚೀರು ಧ್ವನಿಗಳನ್ನು ಮೀರಿ ರೋಷಾವೇಷದ ಮಾತುಗಳು ಕೇಳಿಬರುತ್ತಿತ್ತು. ಮಹಿಳಾಮಣಿಗಳದ್ದೇ ಅಬ್ಬರ. ಏನೋ ಮಜಾ ನಡೆದೈತಿ ಅಂತ ನನ್ನ ಅನುಮತಿಗೂ ಕಾಯದೇ ಡಿಬ್ಬಿ ಅತ್ತ ಎಳೆದುಕೊಂಡು ಹೋದ. ಯಶ್ 2596http://kannada.oneindia.com/img/2009/11/14-market1.jpg159683ಚುನಾವಣೆಭಿನ್ನಮತೀಯರಿಗೆ ಸೊಪ್ಪುಹಾಕದ ಅಕ್ಕ/nri/article/2009/0119-akka-president-ramesh-gowda-refutes-charges.htmlಅಕ್ಕ ಸಂಸ್ಥೆ ಕೆಲವೇ ಪಟ್ಟಭದ್ರ ಹಿತಾಸಕ್ತಿಗಳ ಕಾರಸ್ಥಾನ ಆಗಿದೆ ಎಂದೂ, ಇತ್ತೀಚೆಗೆ ನಡೆದ ನಿರ್ದೇಶಕ ಮಂಡಳಿ ಚುನಾವಣೆಗಳನ್ನು ಮೋಸ ಆಗಿದೆ ಎಂದೂ ಅಕ್ಕದ ಒಂದು ಗುಂಪು ಆಪಾದನೆ ಮಾಡಿತ್ತು. ಈ ಆಪಾದನೆಗೆ ಪ್ರತ್ಯುತ್ತರವಾಗಿ ಅಕ್ಕದ ಅಧ್ಯಕ್ಷ ರಮೇಶ್ ಗೌಡ ಅವರು ಅವರು ನೀಡಿರುವ ನಿರಾಕರಣೆ ಹೇಳಿಕೆಯನ್ನು ಪ್ರಕಟಿಸಲಾಗಿದೆ- ಸಂಪಾದಕ.ಮಾನ್ಯರೆ,ಈ ಮೂಲಕ ದಟ್ಸ್ ಕನ್ನಡ ಬ್ರೌಸರುಗಳಿಗೆ ತಿಳಿಯಪಡಿಸುವುದೇನೆಂದರೆ:ಕೆಲವೊಂದು 34141http://kannada.oneindia.com/img/2009/01/19-ramesh-gowda2.jpg159683ಚುನಾವಣೆರವಿ ಡಂಕಣಿಕೋಟೆ ಅಕ್ಕಗೆ ಅಧ್ಯಕ್ಷ/nri/article/2009/0122-ravi-dankanikote-new-president-of-akka.htmlಬೆಲ್ ವ್ಯೂ,(ವಾಷಿಂಗ್ಟನ್ ಡಿಸಿ),ಜ. 22 : ಕಾವೇರಿ ಕನ್ನಡ ಸಂಘದ ಸದಸ್ಯ ಮತ್ತು ಅಕ್ಕ ಆಡಳಿತ ಮಂಡಳಿಯ ನಿರ್ದೇಶಕ ರವಿ ಡಂಕಣಿಕೋಟೆ ಅವರು ಅಕ್ಕದ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಬರಾಕ್ ಒಬಾಮ ಅವರು ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿ ಆಯ್ಕೆಗೊಂಡ ಮಂಗಳವಾರದ ಮುಹೂರ್ತದಲ್ಲೇ ಅಮೆರಿಕಾದಲ್ಲಿ ನೆಲೆಸಿರುವ ಕನ್ನಡಿಗರ ಗುಂಪಿಗೂ ಹೊಸ ಅಧ್ಯಕ್ಷರ ನೇಮಕವಾಗಿರುವುದು ಕಾಕತಾಳೀಯವಾಗಿದೆ.ಕಾರ್ಯಕಾರಿ 34222http://kannada.oneindia.com/img/2009/01/22-ravi-dankanikote1e.jpg159683ಚುನಾವಣೆರಮೇಶ್ ಗೌಡರಿಗೆ ಸುರೇಶ್ ರಾಮಚಂದ್ರ ಪತ್ರ/nri/article/2009/0124-suresh-ramachandra-rejoinder-to-ramesh-gowda.htmlಪ್ರಿಯ ರಮೇಶ್,ತಮ್ಮ ಪತ್ರ ಓದಿದೆ. ನನ್ನ ಹೆಸರು ನೀವು ಪ್ರಸ್ತಾಪಿಸಿರುವುದರಿಂದ ಈ ಸ್ವಷ್ಟೀಕರಣ ನೀಡಬಯಸುತ್ತೇನೆ. ನಾನು ಅಕ್ಕ ಅಧ್ಯಕ್ಷ ಸ್ಥಾನಕ್ಕೆ ಸ್ವಯ೦ ಘೋಷಿತ ಅಭ್ಯರ್ಥಿಯಾಗಿರಲಿಲ್ಲ. ಶಿಕಾಗೊ ಸಮ್ಮೇಳನದ ಸಮಯದಲ್ಲಿ ಕೆಲವು ನಿರ್ದೇಶಕರು ನಾನು ಸ್ವರ್ಧಿಸುತ್ತೇನೆಯೆ? ಎ೦ದು ಕೇಳಿದಾಗ, ನನ್ನ ನಿರ್ದೇಶಕ ಅವಧಿ ಸದ್ಯದಲ್ಲೆ ಮುಗಿಯುವುದರಿ೦ದ ಈ ಬಗ್ಗೆ ಇನ್ನು ಸ್ಪಷ್ಟವಾಗಿ ಚಿ೦ತಿಸಿಲ್ಲ ಎ೦ದು ಹೇಳಿದ್ದೆ. ನ೦ತರ ನಾನು 34271http://kannada.oneindia.com/img/2009/01/24-suresh1e.jpg159683ಚುನಾವಣೆಉತ್ತಮ ಆಶ್ವಾಸನೆ : ಯಡ್ಡಿ ಭರವಸೆ/column/majavani/2009/0203-bsy-assures-better-promises-for-ls-election.htmlಶಿವಮೊಗ್ಗ, ಫೆ.3 : ಮುಂಬರುವ ಲೋಕಸಭಾ ಚುನಾವಣೆಯ ವೇಳೆಗೆ ತಾವು ಉತ್ತಮ ಆಶ್ವಾಸನೆಗಳನ್ನು ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಭಾರೀ ಬಹಿರಂಗ ಸಭೆಯಲ್ಲಿ ಮಾತನಾಡುತ್ತಿದ್ದ ಯಡಿಯೂರಪ್ಪನವರು ತಮ್ಮ ಮಂತ್ರಿ ಮಂಡಲ ಉತ್ತಮ ಆಶ್ವಾಸನೆಗಳನ್ನು ನೀಡುವಲ್ಲಿ ಇಲ್ಲಿಯವರೆಗೆ ವಿಫಲವಾಗಿರುವುದನ್ನು ಒಪ್ಪಿಕೊಂಡರು."ನಾನೂ ಸೇರಿದಂತೆ ನಮ್ಮ ಪಕ್ಷದ ಮಂತ್ರಿಗಳು ಯಾರೂ ಇಲ್ಲಿಯವರೆಗೆ ಒಂದೂ ಉತ್ತಮ ಆಶ್ವಾಸನೆ 34441http://kannada.oneindia.com/img/2009/02/03-yeddyurappa-speaking1.jpg155733ಕೃಷ್ಣಮೂರ್ತಿಅಕ್ಕ ಇಬ್ಭಾಗ, ಓ ಅಮೆರಿಕನ್ನಡಿಗ!/nri/article/2009/0114-akka-splits-dissidents-announce-new-umbrella.htmlಬೆಂಗಳೂರು, ಜ. 14 : ಕಳೆದ ಕೆಲವು ತಿಂಗಳಿನಿಂದ ಆಂತರಿಕ ಬಿಕ್ಕಟ್ಟು ಮತ್ತು ತೀವ್ರತಮ ಭಿನ್ನಾಭಿಪ್ರಾಯಗಳ ಕುಲುಮೆಯಲ್ಲಿ ಬೇಯುತ್ತಿದ್ದ ಉತ್ತರ ಅಮೆರಿಕಾ ಕನ್ನಡ ಕೂಟಗಳ ಆಗರ (ಅಕ್ಕ) ಇಂದು ಒಡೆದು ಎರಡು ಹೋಳಾಗಿದೆ. ಸಂಸ್ಥೆಯು ಜನ್ಮತಾಳಿದಾಗಿನಿಂದ ಅಕ್ಕ ಚಟುವಟಿಕೆಗಳೊಂದಿಗೆ ಆಪ್ತವಾಗಿ ಗುರುತಿಸಿಕೊಂಡಿದ್ದ ಹಲವರು ಹಿರಿಯ ಕಾರ್ಯಕರ್ತರು ತಮ್ಮ ಸದ್ಯತ್ವಕ್ಕೆ ರಾಜೀನಾಮೆ ನೀಡುವುದರೊಂದಿಗೆ ಸಂಸ್ಥೆಯಲ್ಲಿದ್ದ ತಳಮಳ ಭುಗಿಲೆದ್ದಿದೆ.ಅಮೆರಿಕಾದ 34064http://kannada.oneindia.com/img/2009/01/14-suresh-krishnamurthy1.jpg155733ಕೃಷ್ಣಮೂರ್ತಿಅಮೆರಿಕನ್ನಡಿಗನಿಗೆ ‘ವೈದಿಕ ರತ್ನ'ಪ್ರದಾನ/nri/article/2009/0115-krishnamurthy-joisa-bags-vaidika-ratna-award.htmlಅಮೆರಿಕದ ವರ್ಜೀನಿಯಾ ಸಂಸ್ಥಾನ ನಿವಾಸಿ ಕನ್ನಡಿಗ ಡಾ.ಕೃಷ್ಣಮೂರ್ತಿ ಜೋಯಿಸ ಅವರಿಗೆ ಇತ್ತೀಚೆಗೆ ಗೋಕರ್ಣದಲ್ಲಿ ನಡೆದ ಸಮಾರಂಭದಲ್ಲಿ 'ವೈದಿಕ ರತ್ನ" ಬಿರುದು ಪ್ರದಾನ ಮಾಡಲಾಯಿತು. ಗೋಕರ್ಣದ ಉಪಾಧಿವಂತ ಮಂಡಳ, ವಿಪ್ರನೌಕರರ ಹಾಗೂ ನಿವೃತ್ತನೌಕರರ ಸಂಘ ಕುಮಟಾ ಮತ್ತು ಮೋಹಿತ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಈ ಪುರಸ್ಕಾರ ಸಮಾರಂಭವು, ಗೋಕರ್ಣದ ಸಾಗರ ಸಂಗಮ ಸಭಾಂಗಣದಲ್ಲಿ ನಡೆಯಿತು.ವೃತ್ತಿಯಿಂದ 34072http://kannada.oneindia.com/img/2009/01/15-krishnamurthy-jois-award.jpg155733ಕೃಷ್ಣಮೂರ್ತಿಭಿನ್ನಮತೀಯರಿಗೆ ಸೊಪ್ಪುಹಾಕದ ಅಕ್ಕ/nri/article/2009/0119-akka-president-ramesh-gowda-refutes-charges.htmlಅಕ್ಕ ಸಂಸ್ಥೆ ಕೆಲವೇ ಪಟ್ಟಭದ್ರ ಹಿತಾಸಕ್ತಿಗಳ ಕಾರಸ್ಥಾನ ಆಗಿದೆ ಎಂದೂ, ಇತ್ತೀಚೆಗೆ ನಡೆದ ನಿರ್ದೇಶಕ ಮಂಡಳಿ ಚುನಾವಣೆಗಳನ್ನು ಮೋಸ ಆಗಿದೆ ಎಂದೂ ಅಕ್ಕದ ಒಂದು ಗುಂಪು ಆಪಾದನೆ ಮಾಡಿತ್ತು. ಈ ಆಪಾದನೆಗೆ ಪ್ರತ್ಯುತ್ತರವಾಗಿ ಅಕ್ಕದ ಅಧ್ಯಕ್ಷ ರಮೇಶ್ ಗೌಡ ಅವರು ಅವರು ನೀಡಿರುವ ನಿರಾಕರಣೆ ಹೇಳಿಕೆಯನ್ನು ಪ್ರಕಟಿಸಲಾಗಿದೆ- ಸಂಪಾದಕ.ಮಾನ್ಯರೆ,ಈ ಮೂಲಕ ದಟ್ಸ್ ಕನ್ನಡ ಬ್ರೌಸರುಗಳಿಗೆ ತಿಳಿಯಪಡಿಸುವುದೇನೆಂದರೆ:ಕೆಲವೊಂದು 34141http://kannada.oneindia.com/img/2009/01/19-ramesh-gowda2.jpg155733ಕೃಷ್ಣಮೂರ್ತಿಪಶ್ಚಿಮಕರಾವಳಿಯಲ್ಲಿ ನಾವಿಕ ಸಮ್ಮೇಳನ-2010/nri/engagements/2009/0810-1st-navika-world-kannada-convention-usa.htmlಬೆಂಗಳೂರು, ಆ. 10 : ಉತ್ತರ ಅಮೆರಿಕ ವಿಶ್ವ ಕನ್ನಡ ಅಸೋಸಿಯೇಷನ್, ನಾವಿಕ, ಆಶ್ರಯದಲ್ಲಿ ಪ್ರಥಮ ವಿಶ್ವ ಕನ್ನಡ ಸಮ್ಮೇಳನವನ್ನು ಆಯೋಜಿಸಲಾಗಿದೆ. 2010ನೇ ಇಸವಿ ಜುಲೈ 3ರಿಂದ 5ರವರೆಗೆ ಜರಗುವ ಈ ಸಮ್ಮೇಳನ ಅಮೆರಿಕದ ಪಶ್ಚಿಮ ಕರಾವಳಿಯಲ್ಲಿರುವ ಪೆಸಿಫಿಕ್ ಮಹಾಸಾಗರದಂಚಿನ ಲಾಸ್ಏಂಜಲಿಸ್ ನಗರದಲ್ಲಿ ಏರ್ಪಡಿಸಲಾಗಿದೆ.ಮೂರು ದಿನಗಳ ಈ ಕನ್ನಡ ಸಂಸ್ಕತಿ ಉತ್ಸವದಲ್ಲಿ ಕಲೆ, ಸಾಹಿತ್ಯ, ವಾಣಿಜ್ಯ, ಯುವ 38533http://kannada.oneindia.com/img/2009/08/10-navika-logo1.jpg155733ಕೃಷ್ಣಮೂರ್ತಿಬೆಂಗಳೂರಿನಲ್ಲಿ ನಾವಿಕ ಪದಾಧಿಕಾರಿಗಳ ಪತ್ರಿಕಾಗೋಷ್ಠಿ/nri/article/2009/0924-navika-usa-kannada-meet-press-conference.htmlಉತ್ತರ ಅಮೆರಿಕಾದಲ್ಲಿ ಒಂದು ಅಂದಾಜಿನ ಪ್ರಕಾರ ಸುಮಾರು 60 ಸಾವಿರಕ್ಕೂ ಹೆಚ್ಚು ಕರ್ನಾಟಕ ಜನರಿದ್ದಾರೆ. ಬಹುಮಟ್ಟಿಗೆ ಈ ಜನಸಾಂದ್ರತೆ ಕಂಡುಬರುವುದು ಪಶ್ಚಿಮ, ಪೂರ್ವ ಮತ್ತು ಮಧ್ಯ ಅಮೆರಿಕಾದ ಪ್ರಾಂತ್ಯಗಳಲ್ಲಿ. ನಾನಾ ಸಮುದಾಯ ಮತ್ತು ಆರ್ಥಿಕ ವರ್ಗಗಳ ಹಿನ್ನೆಲೆಯಿಂದ ಬಂದ ಕನ್ನಡಿಗರು ಇಲ್ಲಿ ನೆಲೆಸಿದ್ದಾರೆ. ಈ ಸಂಗತಿಯನ್ನು ಗಮನಿಸಿದಾಗ ಉತ್ತರ ಅಮೆರಿಕದಲ್ಲಿ ಒಂದೇ ದಿಕ್ಕಿನಲ್ಲಿ ಪುನಃ ಪುನಃ ವಾರ್ಷಿಕ 39363http://kannada.oneindia.com/img/2009/09/24-navika-press-conf1.jpgnews"> ಭಿನ್ನಮತೀಯರಿಗೆ ಸೊಪ್ಪುಹಾಕದ ಅಕ್ಕ | AKKA president Ramesh Gowda refutes all charges - ಭಿನ್ನಮತೀಯರಿಗೆ ಸೊಪ್ಪುಹಾಕದ ಅಕ್ಕ - Kannada Oneindia

ಭಿನ್ನಮತೀಯರಿಗೆ ಸೊಪ್ಪುಹಾಕದ ಅಕ್ಕ

Ramesh Gowda, AKKA President
ಅಕ್ಕ ಸಂಸ್ಥೆ ಕೆಲವೇ ಪಟ್ಟಭದ್ರ ಹಿತಾಸಕ್ತಿಗಳ ಕಾರಸ್ಥಾನ ಆಗಿದೆ ಎಂದೂ, ಇತ್ತೀಚೆಗೆ ನಡೆದ ನಿರ್ದೇಶಕ ಮಂಡಳಿ ಚುನಾವಣೆಗಳನ್ನು ಮೋಸ ಆಗಿದೆ ಎಂದೂ ಅಕ್ಕದ ಒಂದು ಗುಂಪು ಆಪಾದನೆ ಮಾಡಿತ್ತು. ಈ ಆಪಾದನೆಗೆ ಪ್ರತ್ಯುತ್ತರವಾಗಿ ಅಕ್ಕದ ಅಧ್ಯಕ್ಷ ರಮೇಶ್ ಗೌಡ ಅವರು ಅವರು ನೀಡಿರುವ ನಿರಾಕರಣೆ ಹೇಳಿಕೆಯನ್ನು ಪ್ರಕಟಿಸಲಾಗಿದೆ- ಸಂಪಾದಕ.

ಮಾನ್ಯರೆ,

ಈ ಮೂಲಕ ದಟ್ಸ್ ಕನ್ನಡ ಬ್ರೌಸರುಗಳಿಗೆ ತಿಳಿಯಪಡಿಸುವುದೇನೆಂದರೆ:

ಕೆಲವೊಂದು ಮಂದಿ "ಅಕ್ಕ" ಇಬ್ಭಾಗ ಎಂದು ಘೊಷಿಸಿಬಿಟ್ಟರೆ ಇಬ್ಭಾಗವಾಗುವಷ್ಟು ಟೊಳ್ಳಲ್ಲ ಅಕ್ಕ ಸಂಸ್ಥೆ. ಆಗಿಂದಾಗ್ಗೆ ನಮ್ಮ ತಪ್ಪುಗಳನ್ನು ಗುರುತಿಸಿಕೊಂಡು ಸಂವಿಧಾನದ ತಿದ್ದುಪಡಿಗಳನ್ನು ಮಾಡುತ್ತಾ, ಕಾರ್ಯ ವೈಖರಿಗಳನ್ನು ಬದಲಾಯಿಸಿಕೊಳ್ಳುತ್ತ ಸಾಗಿದ್ದೇವೆ. ಹಾಗಿದ್ದೂ ಕೂಡ ಕೆಲವೊಂದು ಜನ ತಮ್ಮ ನಿಟ್ಟಿನಲ್ಲಿ ಸಾಗುತ್ತಿಲ್ಲವೆಂದು ದೂರಿ ಬೇರೆ ಹೊಗುತ್ತೇವೆ ಎಂದರೆ "ಎಂದೆಂದಿಗೂ ನೀ ಕನ್ನಡವಾಗಿರು" ಎಂದು ಹರಸಿ ಬೀಳ್ಕೊಡುವುದರ ಬದಲು ಇನ್ನೇನು ಮಾಡಲು ಸಾಧ್ಯ?

ನಿಮ್ಮ ವರದಿಗೆ ಸಹಿ ಹಾಕಿರತಕ್ಕಂತಹ ಮಹನೀಯರೆಲ್ಲ ಅಕ್ಕ ಸಂಸ್ಥೆಗೆ ಬಹಳ ಕೆಲಸ ಮಾಡಿದ್ದಾರೆ ನಿಜ. ಆದರೆ "ಅಕ್ಕ" ಯಾರ ವೈಯಕ್ತಿಕ ಸೊತ್ತಲ್ಲ. ಇದು ಅಮೆರಿಕನ್ನಡಿಗರ ಸಂಸ್ಥೆ. ಇದರ ಸದಸ್ಯರುಗಳು ಏನು ಬಯಸುತ್ತಾರೊ ಹಾಗೆಯೇ ನಡೆಯುತ್ತಕ್ಕಂಥ ಸಂಸ್ಥೆ. ಈ ಭಿನ್ನಮತೀಯರ ಬೇಡಿಕೆಯಂತೆಯೇ ಮೊಟ್ಟ ಮೊದಲನೆ ಬಾರಿಗೆ ಈ ಬಾರಿ ವಿಶ್ವಾಸಾರ್ಹ ಸ್ವತಂತ್ರ ಚುನಾವಣಾ ಸಂಸ್ಥೆಯನ್ನು (Election Trust http://www.electiontrust.com]ನೇಮಕ ಮಾಡಿ ಚುನಾವಣೆ ನಡೆಸಲಾಯಿತು.

ಸಾವಿರಕ್ಕು ಹೆಚ್ಚಿನ ಸದಸ್ಯರೊಳಗೊಂಡ ಪಟ್ಟಿಯಲ್ಲಿ ಒಂದೆರಡು ಲೋಪಗಳಿರಬಹುದು. ಅದನ್ನು ಬೇಕೆಂದೆ ಮಾಡಲಾಗಿದೆ ಎಂದು ಆಪಾದಿಸುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ಗೆದ್ದವರ ಗೆಲುವಿನ ಅಂತರ (300 ಕ್ಕೂ ಹೆಚ್ಚು) ನೋಡಿದರೆ, ಈ ಬೆರಳೆಣಿಕೆಯ ದೋಷಗಳು ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಮಾಡಿರುತ್ತಿರಲಿಲ್ಲ. ಇವರುಗಳ ಬೇಡಿಕೆಯಂತೆ ಸದಸ್ಯರ ಪಟ್ಟಿಯನ್ನು ಚುನಾವಣೆ ಘೊಷಿಸುವುದಕ್ಕೆ ಮುನ್ನವೆ ಎಲ್ಲಾ ನಿರ್ದೆಶಕರುಗಳಿಗೆ ಲಭ್ಯವಿತ್ತು. ಅಂದು ಯಾವುದೆ ಚಕಾರವೆತ್ತದೆ, ಫಲಿತಾಂಶ ಬಂದ ನಂತರ ಮಾತನಾಡುತ್ತಿರುವುದು ಅವರ ಕಾರ್ಯ ವೈಖರಿಗೆ ಹಿಡಿದ ಕನ್ನಡಿ ಮತ್ತು ಅವರ ಹತಾಶ ಮನೋಭಾವದ ಸಂಕೇತ. ಬಹುಶಃ, ಅಮೇರಿಕನ್ನಡಿಗರು ಬೇಕೆಂದೇ ಹೊಸ ಮುಖಗಳನ್ನು ಆಯ್ಕೆ ಮಾಡಿರಬಹುದು. ಅದಕ್ಕೆ ಸಂಸ್ಥೆದೇನು ತಪ್ಪು? ಇಲ್ಲಿನ ಅಮೆರಿಕನ್ನಡಿಗರ ಇಂಗಿತಕ್ಕೆ ಸ್ಪಂದಿಸುವ ಬದಲು, "My way or high-way" ಎಂಬ ಅಖೈರು ನಿಲುವು ಸರಿಯಲ್ಲ.

ಅಕ್ಕ ಸಂಸ್ಥೆ ಮೂವತ್ತಕ್ಕೂ ಹೆಚ್ಚಿನ ಕನ್ನಡ ಕೂಟಗಳ ಎಪ್ಪತ್ತು ಸಾವಿರಕ್ಕು ಹೆಚ್ಚಿನ ಅಮೇರಿಕನ್ನಡಿಗರನ್ನು ಪ್ರತಿನಿಧಿಸುತ್ತಿರುವ ಪ್ರತಿಷ್ಠಿತ ಸಂಸ್ಥೆ.ಅಕ್ಕ ಸಂಸ್ಥೆಗೆ ಈ ರೀತಿಯ ಒಡೆಯುವ ಯತ್ನಗಳೇನು ಹೊಸದಲ್ಲ. ಪ್ರತಿ ಬಾರಿಯು "ಅಕ್ಕ" ಇನ್ನಷ್ಟು ಸಧೃಡವಾಗುತ್ತಿದ್ದಾಳೆಯೇ ವಿನಹ ಕ್ಷೀಣವಾಗುತಿಲ್ಲ. 2003-04 ರಲ್ಲಿ ಕೆಲವೊಂದು ಮಂದಿ ಒಡೆಯಲ್ಲಿಕ್ಕೆ ಹೊರಟರು. ಆದರೆ ಆ ಯತ್ನವನ್ನುಅಮೆರಿಕನ್ನಡಿಗರು ತಿರಸ್ಕರಿಸಿ ಅಂತವರನ್ನು ಮೂಲೆಗುಂಪು ಮಾಡಿದರು. ಇದೇ ಡಾ|| ರೇಣುಕಾ ರಾಮಪ್ಪರವರು 2006ರಲ್ಲಿ ಅಧ್ಯಕ್ಷ ಚುನಾವಣೆಯಲ್ಲಿ ಅವ್ಯವಹಾರ ನಡೆದಿದೆಯೆಂದು ಆಪಾದಿಸಿ ಕೊರ್ಟು-ಕಛೇರಿ ಹತ್ತಿದರು. ಆದರೆ ಅದರಲ್ಲಿ ಏನೇನು ಹುರುಳಿಲ್ಲ ಎಂದು ಎರಡು ವರ್ಷಗಳ ನಂತರ ಇತ್ತೀಚಿನ ಚುನಾವಣೆಗೂ ಮೊದಲು ಕೇಸನ್ನು ಕೈ ಬಿಟ್ಟರು.

ಹಾಗೆಯೆ ಈಗ ಕೆಲವರು,ಜನರಿಂದ ದೂರವಾದ ನಂತರವೂ ಅಧಿಕಾರದ ಮೇಲಿನ ವ್ಯಾಮೋಹದಿಂದ ಹಾಗೂ ಹೇಗಾದರೂ ಯಾವುದಾದರು ಅಧಿಕಾರದಲ್ಲಿರಬೇಕೆಂದು ಅಕ್ಕ ಒಡೆಯಪವುದಕ್ಕೆ ಹೊರಟಿದ್ದಾರೆ. ಈ ಬಾರಿಯು ಜನ ಅವರನ್ನು ತಿರಸ್ಕರಿಸುತ್ತಾರೆಂಬುವುದರಲ್ಲಿ ಸಂದೇಹವೇ ಇಲ್ಲ.ಪ್ರಜಾಪ್ರಭುತ್ವದಲ್ಲಿ ಒಬ್ಬರು ಸೊಲುತ್ತಾರೆ ಮತ್ತೊಬ್ಬರು ಗೆಲ್ಲುತ್ತಾರೆ. ಸೋತ ಮಾತ್ರಕ್ಕೆ ಸಂಸ್ಥೆಯನ್ನೇ ದೂಷಿಸುವುದು ಸರಿಯಲ್ಲ. ಅಕ್ಕ ಸದಸ್ಯರುಗಳು ಬಹುತೇಕ ಯುವ ನಿರ್ದೇಶಕರನ್ನು ಆಯ್ಕೆ ಮಾಡಿದ್ದಾರೆ. ಬಹುಶಃ ಅವರ ಹೊಸ ಕಾರ್ಯಕ್ರಮಗಳು ಅಥವಾ ಅವರ ಚುನಾವಣಾ ಪ್ರಚಾರದ ವೈಖರಿ ನಮ್ಮ ಸದಸ್ಯರುಗಳಿಗೆ ರುಚಿಸಿರಬಹುದು. ಇಲ್ಲವೇ ಇತ್ತೀಚಿನ ಅಮೇರಿಕಾದಲ್ಲಿ ನಡೆದ ಒಬಾಮರವರ ಆಯ್ಕೆಯಿಂದಲೂ ಪ್ರಭಾವಿತರಾಗಿರಬಹುದು. ಇದರಲ್ಲಿ ಯಾವುದೇ ಆಶ್ಚರ್ಯಕರವಾದ ಸಂಗತಿಯಿಲ್ಲ.

ಇದು ನಿಮಗೆ ತಿಳಿದಿರಲಿ: ಅಕ್ಕ ಸಂಸ್ಥೆ ಇದುವರೆಗೆ ಐದು ಸಮ್ಮೇಳನಗಳನ್ನು (2000ರಲ್ಲಿ ಹ್ಯೂಸ್ಟನ್, 2002ರಲ್ಲಿ ಡೆಟ್ರಾಯಿಟ್, 2004ರಲ್ಲಿಆರ್ಲಾಂಡೊ, 2006 ರಲ್ಲಿ ಬಾಲ್ಟಿಮೋರ್, 2008ರಲ್ಲಿ ಚಿಕಾಗೊ) ಯಶಸ್ವಿಯಾಗಿ ನಿರ್ವಹಿಸಿದೆ. ಈ ಸಮ್ಮೆಳನಗಳು ಸಾವಿರಾರು ಕನ್ನಡಿಗರನ್ನು ಒಂದುಗೂಡಿಸಿ ಅಮೆರಿಕಾ ಮತ್ತು ಭಾರತದ ಕಲಾವಿದರಿಗೆ ವೇದಿಕೆಯನ್ನು ಒದಗಿಸಿದೆ. ಈ ಸಮ್ಮೇಳನಗಳು ವಾಣಿಜ್ಯ ಹಾಗು ಸಾಂಸ್ಕ್ರತಿಕ ವಿನಿಮಯಗಳ ಮಹಾವೇದಿಕೆಯೇ ಆಗಿದೆ.

2005 ರಲ್ಲಿ ಅಕ್ಕ ನಡೆಸಿದ ಕಾರ್ಯಕ್ರಮಗಳಿಂದ ಸಂಗ್ರಹಿಸಿದ ಲಕ್ಷಾಂತರ ರೂಪಾಯಿಗಳನ್ನು ಕರ್ನಾಟಕದ ಬಡ ಮಕ್ಕಳ ಶಿಕ್ಷಣಕ್ಕೆ ಬಳಸಲಾಯಿತು. 2006 ರಲ್ಲಿ ಅಕ್ಕ ಸುಮಾರು 100*ಸಾವಿರ ಡಾಲರುಗಳನ್ನು (45 ಲಕ್ಷ ರೂಪಾಯಿ)ಶಂಕರ ಐ ಫೊಂಡೋಶಲ್ಲಿಗೆ ಗೆ ಕೊಡುವುದರ ಮೂಲಕ ಬೆಂಗಳೂರಿನಲ್ಲಿ ಶಂಕರ ಕಣ್ಣಿನ ಆಸ್ಪತ್ರೆಗೆ ಹಣ ಒದಗಿಸಿದೆವು. ಇದರಿಂದ ಪ್ರೇರಿತರಾಗಿ ಕಾಲಿಫೋರ್ನಿಯಾದ ಬಿ. ವಿ. ಜಗದೀಶ್ ರವರು ಕೂಡ 100ಸಾವಿರ ಡಾಲರುಗಳನ್ನು ಕಣ್ಣಿನ ಆಸ್ಪತ್ರೆಗೆ ಒದಗಿಸಿದರು. 2007 ರಲ್ಲಿ ಅಕ್ಕ ಆಶ್ರಯದಲ್ಲಿ "ಅನಾಥ ಮಕ್ಕಳಿಗೆ ಅಕ್ಕಳ ಆಶ್ರಯ" ಎಂಬ ಶೀರ್ಷಿಕೆಯಡಿಯಲ್ಲಿ ನಡೆದ ರಸಮಂಜರಿ ಕಾರ್ಯಕ್ರಮದಿಂದ ಸಂಗ್ರಹಿಸಿದ ಹಣವನ್ನು ಕರ್ನಾಟಕದಲ್ಲಿ ವಿತರಿಸಲಾಗುವುದು. 2008 ರಲ್ಲಿ ವಿವಿಧ ಕನ್ನಡ ಕೂಟಗಳ ಸಹಕಾರದೊಂದಿಗೆ ಬಟ್ಟೆ, ಆಟಿಕೆಗಳು, ಪುಸ್ತಕಗಳನ್ನು ಸಂಗ್ರಹಿಸಿ ಕರ್ನಾಟಕದಲ್ಲಿರುವ ಬಡಮಕ್ಕಳಿಗೆ ವಿತರಿಸಲಾಯಿತು.

ಇಷ್ಟಾಗ್ಯೂ ಈ ಕೃಷ್ಣಮೂರ್ತಿ ಯಾರು?

ಈ ಮಹಾನುಭಾವರು 2006ರಲ್ಲಿ ಒಂದು ಗುಂಪಿನೊಂದಿಗೇ ಗುರುತಿಸಿಕೊಂಡು ಗೆದ್ದು ಬಂದು, 2008ರ ಸಮ್ಮೇಳನದಲ್ಲೇ ಸುರೇಶ್ ರಾಮಚಂದ್ರನ್ ರವರನ್ನು ಅಕ್ಕ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲು ಪ್ರಚಾರ ಪ್ರಾರಂಭಿಸಿ ಬಿಟ್ಟಿದ್ದರು. ಇತ್ತೀಚಿನ ನಿರ್ದೆಶಕರುಗಳ ಚುನಾವಣೆಯಲ್ಲೂ ಕೂಡ ಮತ್ತೊಂದು ಗುಂಪನ್ನು ಅನುಮೋದಿಸಿದರು. ಆದರೆ ತಮ್ಮ ಗುಂಪಿನ ಕೆಲವೇ ಮಂದಿ ಆಯ್ಕೆ ಆಗಿದ್ದರಿಂದ, ಸೋಲನ್ನು ಸಹಿಸಲಾಗದೆ ಈ ರೀತಿಯ ಹೊಸ ನಾಟಕ ಶುರುಮಾಡಿದ್ದಾರೆ.

ಇವರ ಮೇಲಿರುವ ಆಪಾದನೆಗಳು ಒಂದೇ, ಎರಡೇ ? ಅಕ್ಕ ಹೆಸರಿನಲ್ಲಿ ಇವರು ಇವರ ಇಚ್ಚಾನುಸಾರಿ ಸಮ್ಮೇಳನಗಳಿಗೆ ಆಹ್ವಾನ ಪತ್ರಿಗೆಗಳನ್ನು ನೀಡಿದರು ಎಂದು, ಹಲವು ಬಾರಿ ಆಹ್ವಾನಿತ ಕಲಾವಿದರಿಗೆ ಅವಮಾನ ಮಾಡಿದರೆಂದು. ಇವರ ಬೇಜಬ್ದಾರಿ ವರ್ತನೆಯಿಂದ ಬೇಸತ್ತ ಕರ್ನಾಟಕದ ಮಾಧ್ಯಮದವರು ಇವರನ್ನು ಆಹ್ವಾನಿಸುವುದನ್ನು ಬಿಟ್ಟರೆಂದು, ಕರ್ನಾಟಕದಲ್ಲಿ ಅಕ್ಕ ಸಂಸ್ಥೆಯ ಎಲ್ಲ ಉಸ್ತುವಾರಿ ತನ್ನದೆ ಎಂದು ದುರುಪಯೋಗಪಡಿಸಿಕೊಳ್ಳುತಿದ್ದಾರೆಂದು ದೂರಲಾಗಿದೆ.

ಈ ಎಲ್ಲಾ ದೂರುಗಳನ್ನು ಅಕ್ಕ ಬೋರ್ಡ್ ಆಫ್ ಟ್ರಸ್ಟೀಸ್ ರವರು ಪರಿಶೀಲನೆ ಮಾಡುತ್ತಾ ಇದ್ದಂತ ಸಂದರ್ಭದಲ್ಲಿ, ಬಹುಶಃ ತಮ್ಮ ಉಚ್ಚಾಟನೆಯ ಸುಳಿವನ್ನು ಅರಿತು, ರಾಜೀನಾಮೆ ನೀಡಿ ಒಂದಿಬ್ಬರು ಸಮಾನ ಮನಸ್ಕರೊಡಗೂಡಿ ಅಕ್ಕಳ ಬಗ್ಗೆ ಅಪ ಪ್ರಚಾರಕ್ಕೆ ಇಳಿದಿದ್ದಾರೆ.

ಹೀಗೆ ಹೇಳುತ್ತಾ ಹೊಗಬಹುದು. ಆದರೆ ನಮ್ಮ ಧ್ಯೇಯ ಅಮೇರಿಕದಲ್ಲಿ ಕನ್ನಡ ಮತ್ತು ಕನ್ನಡ ಸಂಸ್ಕೃತಿಯನ್ನು ಉಳಿಸಿ, ಬೆಳಸಿ ಪ್ರೋತ್ಸಾಹಿಸುವುದು. ಮೊದಲೆ ಹೇಳಿದಂತೆ ಅಕ್ಕ ಬಹಳ ಸಧೃಡವಾಗಿದ್ದು, ನಿಮ್ಮೆಲ್ಲರ ಸಹಕಾರದಿಂದ ಹಲವಾರು ಮಹತ್ತರ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಮತ್ತಷ್ಟು ಎತ್ತರಕ್ಕೆ ಬೆಳೆಯುವುದನ್ನು ಕಾಣಲಿದ್ದೀರಿ. ಬೆರಳೆಣಿಕೆಯ ಮಂದಿಯ ನಿರ್ಗಮನದಿಂದ ನೀವುಗಳಾರು ವಿಚಲಿತರಾಗಬೇಕಿಲ್ಲ. ಭಿನ್ನಮತೀಯರು ವಿದ್ವಂಸಕ ಕಾರ್ಯಗಳನ್ನು ಬಿಟ್ಟು ಸಕ್ರಿಯವಾಗಿ, ಕ್ರಿಯಾತ್ಮಕವಾಗಿ ಅಕ್ಕಳನ್ನು ಇನ್ನಷ್ಟು ಬಲಪಡಿಸಲು ಮುಂದೆ ಬಂದರೆ ಅಕ್ಕಳ ಬಾಗಿಲು ಪ್ರತಿಯೊಬ್ಬರಿಗೂ ತೆರೆದೇ ಇರುತ್ತದೆ.

ಜೈ ಭುವನೇಶ್ವರಿ
ತಮ್ಮ ವಿಶ್ವಾಸಿ,
ರಮೇಶ್ ಗೌಡ
ಅಧ್ಯಕ್ಷ, "ಅಕ್ಕ"

ಭಿನ್ನಮತೀಯರ ಪತ್ರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+