ಸಾಹಿತ್ಯಗೋಷ್ಠಿಯಲ್ಲಿ ವಿಜಯಾ ಹರನ್ ಉಪನ್ಯಾಸ
ಅಮೆರಿಕಾ ನೆಲದ ಕನ್ನಡ ಅಕ್ಷರಪ್ರೇಮಿಗಳ ವೃಂದ 'ಸಾಹಿತ್ಯಗೋಷ್ಠಿ' ಕಾರ್ಯಕ್ರಮಕ್ಕೆ ಮತ್ತೊಮ್ಮೆ ಎಲ್ಲರಿಗೂ ಸ್ವಾಗತ. ಈ ತಿಂಗಳ ಕಾರ್ಯಕ್ರಮದಲ್ಲಿ ಡಾ|| ಎಮ್. ಎಸ್. ವಿಜಯ ಹರನ್ ಅವರು ಒಂದು ಸ್ವಾರಸ್ಯಕರ ಉಪನ್ಯಾಸವನ್ನು ನೀಡಲಿದ್ದಾರೆ: "ಆನಂದರ (ಅಜ್ಜಂಪುರದ ಸೀತಾರಾಮ)ಸಣ್ಣ ಕಥೆಗಳು". ಇದೇ ವಸ್ತುವಿನ ಮೇಲೆ ಬರೆದ ಪ್ರೌಢ ಪ್ರಬಂಧ ಇವರಿಗೆ ಪಿಎಚ್.ಡಿಯನ್ನು ತಂದು ಕೊಟ್ಟಿದೆ.
ಕಾರ್ಯಕ್ರಮದ ವಿವರಗಳು ಇಂತಿವೆ:
ಜನವರಿ 25, 2009 (ಶನಿವಾರ)
ಮಧ್ಯಾಹ್ನ 2:00 ರಿಂದ 5:00 ರವರೆಗೆ
ಲಾಸ್ ಆಲ್ಟೋಸ್ ವಾಚನಾಲಯದ ಸಾರ್ವಜನಿಕ ಸಭಾಂಗಣ
13 ಸೌತ್ ಸ್ಯಾನ್ ಅಂಟೊನಿಯೋ ರೋಡ್,
ಲಾಸ್ ಆಲ್ಟೋಸ್, ಕ್ಯಾಲಿಫೋರ್ನಿಯ 94022
* ಪ್ರಾರ್ಥನೆ : ಪದ್ಮ ರಾವ್.
* ಉಪನ್ಯಾಸ : 'ಆನಂದರ ಸಣ್ಣ ಕಥೆಗಳು" ಡಾ|| ಎಂ.ಎಸ್. ವಿಜಯ ಹರನ್
* ಕಾರ್ಯಕ್ರಮ ನಿರ್ವಹಣೆ : ವಿಶ್ವನಾಥ್ ಹುಲಿಕಲ್
ಡಾ||ಎಮ್. ಎಸ್. ವಿಜಯ ಹರನ್ ಪರಿಚಯ:
ಶ್ರೀಮತಿ ವಿಜಯ ಹರನ್‌ರವರು ಬಿ.ಎ. ಮತ್ತು ಎಮ್. ಎ. ಪದವಿಗಳನ್ನು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಮತ್ತು ಪಿಎಚ್.ಡಿ.ಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದಿದ್ದಾರೆ. ಅವರು "ಭಾರತ ಪ್ರಸಾರ ಕಾರ್ಯಕ್ರಮ ಸೇವೆ" ಪರೀಕ್ಷೆಯಲ್ಲೂ ಉತ್ತೀರ್ಣರಾಗಿದ್ದಾರೆ.
ಆಕಾಶವಾಣಿಯಲ್ಲಿ 34 ವರ್ಷಗಳು ಇವರು ಪ್ರಕಟಣೆ, ಕಾರ್ಯಕ್ರಮ ನಿರ್ವಹಣೆ ಮತ್ತು ಸಹ ನಿರ್ದೇಶಕಿ - ಹೀಗೆ ವಿವಿಧ ರೀತಿಯ ಕೆಲಸಗಳನ್ನು ನಿರ್ವಹಿಸಿದ್ದಾರೆ. ಪ್ರಸ್ತುತ ಇವರು ಮೈಸೂರಿನ ಆಕಾಶವಾಣಿಯಲ್ಲಿ ನಿಲಯದ ನಿರ್ದೇಶಕಿಯಾಗಿ ಸೇವೆಸಲ್ಲಿಸುತ್ತಿದ್ದಾರೆ.
ವಿಜಯ್ ಹರನ್ ಹಲವಾರು ನಾಟಕಗಳನ್ನು ಮತ್ತು ವಿಶೇಷ ಕಾರ್ಯಕ್ರಮಗಳನ್ನು ಬರೆದು ಪ್ರಸ್ತುತಪಡಿಸಿ, ಕೇಳುಗರ ಮನಗೆದ್ದಿದ್ದಾರೆ. ನಿತ್ಯ ಜೀವನದ ಪ್ರಾಮುಖ್ಯತೆಯ ಬಗ್ಗೆ 52 ಪ್ರಬಂಧಗಳನ್ನು ಬರೆದು ಪ್ರಸ್ತುತ ಪಡಿಸಿದ್ದಾರೆ; ಇದು ಪ್ರತಿವಾರವೂ ಆಕಾಶವಾಣಿಯಲ್ಲಿ ಬಿತ್ತರಿಸಲ್ಪಟ್ಟಿದೆ.
ಖಾಸಗಿ ಚಾನೆಲ್ ಮತ್ತು ಅದರಲ್ಲಿನ ಸವಾಲುಗಳ ಬಗ್ಗೆ ಪ್ರಸಾರ ಭಾರತಿಯ ಮುಂದೆ 2001ರಲ್ಲಿ ದೆಹಲಿಯಲ್ಲಿ ಒಂದು ಲೇಖನವನ್ನು ಮಂಡಿಸಿದ್ದಾರೆ. ರೇಡಿಯೋ ಮತ್ತು ಜನತೆಯ ಮೇಲೆ ಅದರ ಪರಿಣಾಮ ಎಂಬುದರ ಬಗ್ಗೆ ಬರೆದ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಪ್ರಕಟಿತ ಕೃತಿಗಳು: "ಆನಂದರ ಬದುಕು-ಬರಹ" ಮತ್ತು "ಆಲೋಕ". ಇದಲ್ಲದೆ ದಿನ ಪತ್ರಿಕೆಗಳಲ್ಲಿ ಹಲವಾರು ಲೇಖನಗಳನ್ನು ಬರೆದು ಪ್ರಕಟಿಸಿದ್ದಾರೆ.
ಸಾಹಿತ್ಯಗೋಷ್ಠಿಯ ನಿಮ್ಮ ವಿಶ್ವಾಸಿಗಳು,
ಪ್ರಕಾಶ್ ನಾಯಕ್ ಮತ್ತು ವಿಶ್ವನಾಥ್ ಹುಲಿಕಲ್
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications