ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಕಲಿಸಲು ಪರಿಮಣಾಮಕಾರಿ ವಿಧಾನಗಳು

By Staff
|
Google Oneindia Kannada News

Kannada Classes by M.S. Ramannaಭಾಷೆ ಕಲಿಯುವ ಉತ್ಸಾಹ ಮಕ್ಕಳಲ್ಲಿ ಚುರುಕಾಗಿರುತ್ತದೆ. ಆದರೆ ಅದನ್ನು ಪರಿಣಾಮಕಾರಿಯಾಗಿ, ಸಮರ್ಥವಾಗಿ ಹೇಳಿಕೊಡುವ ಕೌಶಲ್ಯ ಮುಖ್ಯ. ಅಮೆರಿಕಾದಲ್ಲಿ ಕನ್ನಡ ಕಲಿಸುವವರಿಗೆ ನುರಿತ ಶಿಕ್ಷಕರಿಂದ ಕಲಿಕಾ ತರಬೇತಿ ಹಾಗೂ ಉಪನ್ಯಾಸ; ಚಿಕ್ಕಮಗಳೂರು ಎಮ್. ಎಸ್. ರಾಮಣ್ಣ ಅವರಿಂದ.

ದಿನ : ರವಿವಾರ ಫೆಬ್ರವರಿ 24, 2008
ಸಮಯ : ಮದ್ಯಾಹ್ನ 2:00
ಸ್ಥಳ : ಏಕತಾ ಕೇಂದ್ರ, 2691, ರಿಕ್ಟರ್ ಅವೆನ್ಯು.105, ಅರ್ವೈನ್, ಕ್ಯಾಲಿಫೋರ್ನಿಯ 92606

ನೀವು ಮಕ್ಕಳಿಗೆ ಕನ್ನಡ ಕಲಿಸುವ ವಿಧಾನಗಳು ಎಷ್ಟು ಪರಿಣಾಮಕಾರಿ ಆಗಿವೆ? ಕಲಿಸುವ ವಿಧಾನದಲ್ಲಿ ಲೋಪದೋಷಗಳೇನಾದರೂ ಇದೆಯಾ? ಬೇರೆ ವಿಧಾನಗಳು ಇವೆಯೆ? ಕನ್ನಡ ವಿಷಯಗಳನ್ನು ಕಲಿಸಲು ಉತ್ತಮವಾದ ಕ್ರಮ ಯಾವುದು? ಅಕ್ಷರಾಭ್ಯಾಸ ಅಗತ್ಯವೆ? ಮುಂತಾದ ಜಟಿಲ ಪ್ರಶ್ನೆಗಳು ನಿಮ್ಮ ಮನದಲ್ಲಿ ಹಾದುಹೋಗಿವೆಯಾ? ಬನ್ನಿ. ನುರಿತ ಶಿಕ್ಷಕ ಎಮ್. ಎಸ್. ರಾಮಣ್ಣ ಅವರಿಂದ ಉಪಯುಕ್ತ ಉತ್ತರಗಳನ್ನು ಕಂಡುಕೊಳ್ಳೋಣ. ಕರ್ನಾಟಕದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ರಾಮಣ್ಣ ಅವರು ತಮ್ಮ ಅನುಭವವನ್ನು ಮತ್ತು ಇಲ್ಲಿಯ ಮಕ್ಕಳ ಕನ್ನಡ ವಿದ್ಯಾಭ್ಯಾಸದ ಬಗೆಗಿನ ತಮ್ಮ ಚಿಂತನೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ.

ಎಮ್. ಎಸ್. ರಾಮಣ್ಣನವರು ಚಿಕ್ಕಮಗಳೂರು ಜಿಲ್ಲೆಯಲ್ಲಿ 1934ರಲ್ಲಿ ಜನಿಸಿದರು. ಎಮ್.ಎ., ಬಿ.ಎಡ್., ಡಿ.ಡಿ.ಎಡ್.(ಡಿಪ್ಲೊಮ ಇನ್ ಡ್ರಾಮ ಎಜುಕೇಷನ್), ಹಿಂದಿ ಬಿ.ಎಡ್. ಮೊದಲಾದ ಪದವಿಗಳನ್ನು ಗಳಿಸಿದ್ದಾರೆ. ತಮ್ಮ 24ನೇ ವಯಸ್ಸಿನಲ್ಲಿ ಶಿಕ್ಷಕರಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದ ಇವರು ಒಟ್ಟು 44 ವರ್ಷಗಳಿಗೂ ಹೆಚ್ಚು ವರ್ಷಗಳ ಕಾಲ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಅಪಾರ ಶಿಷ್ಯವೃಂದವನ್ನೂ, ಸಮೃದ್ಧವಾದ ಅನುಭವವನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಪ್ರಸ್ತುತ ಚಿಕ್ಕಮಗಳೂರಿನ ವಿಜಯಪುರದಲ್ಲಿ ವಾಸಿಸುತ್ತಿರುವ ಇವರು ಸದ್ಯ ಅರ್ವೈನ್‍ನಲ್ಲಿ ತಮ್ಮ ಮಗನ ಮನೆಯಲ್ಲಿ ತಂಗಿದ್ದಾರೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : ಕನ್ನಡ ಕಲಿ : [email protected] ದೂರವಾಣಿ : 949-559-1819

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X