ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅದೋ ಅಲ್ಲಿ, ಅಲ್ಲಿಗೇಟರ್!

By Staff
|
Google Oneindia Kannada News

The Allegators of clear water, Tampa
ನಮ್ಮೂರ ನದಿಗಳಲ್ಲಿ, ಕೆರೆಗಳಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದ ಅಲ್ಲಿಗೇಟರುಗಳು (ನಮ್ಮ ಭಾಷೆಯಲ್ಲಿ ಮೊಸಳೆಗಳು) ಅಲ್ಲೆಲ್ಲಿಯೂ ಈಗ ಕಾಣಿಸಿಕೊಳ್ಳುತ್ತಿಲ್ಲ. ಯಾಕೆಂದರೆ ಕೆರೆಗಳಲ್ಲಿ, ನದಿಗಳಲ್ಲಿ ಮೊದಲಿನ ಹಾಗೆ ನೀರೂ ಇರುವುದಿಲ್ಲ. ಆದರೆ, ಅಮೆರಿಕಾದ ಫ್ಲಾರಿಡಾದಲ್ಲಿ ಹಾಗಲ್ಲ. ಅಲ್ಲಿನ ತಿಳಿನೀರ ಕೆರೆಗಳಲ್ಲಿ ಅಲ್ಲಿಗೇಟರುಗಳು ಸರ್ವೇಸಾಮಾನ್ಯ.

* ರೇಖಾ ಹೆಗಡೆ ಬಾಳೇಸರ

ಆರು ತಿಂಗಳ ಹಿಂದೆ 'ಫ್ಲೋರಿಡಾಕ್ಕೆ ಹೊರಡುತ್ತಿದ್ದೇವೆ' ಎಂದು ಗೊತ್ತಾಗುತ್ತಿದ್ದಂತೆಯೇ ಸಹಜವಾಗಿ ಜಯರಾಮಗೆ ಕೇಳಿದೆ: 'ಹೇಗಿದೆಯಂತೆ ಅದು?' ಮೂರು ಶಬ್ದಗಳಲ್ಲಿ ಉತ್ತರ ಬಂತು - 'ಸೆಖೆ, ಬೀಚು, ಅಲ್ಲಿಗೇಟರ್ಸ್'. 'ಮೊಸಳೆ- ಅಷ್ಟೊಂದಿದೆಯೆ' ತತ್ಕ್ಷಣಕ್ಕೆ ಕುತೂಹಲ ಮೂಡಿತ್ತು ನನಗೆ.

ಟಾಂಪಾ ವಿಮಾನ ನಿಲ್ದಾಣದಿಂದ ಹೊರಬೀಳುತ್ತಿದ್ದಂತೆಯೇ ಸೆಖೆಯ ಅಂದಾಜು ಹತ್ತಿತು. ಬಂದ ಒಂದೆರಡು ದಿನದಲ್ಲೇ ಬೀಚ್ ಕೂಡ ಸುತ್ತಾಡಿ ಬಂದೆವು. ನಾನು ಈವರೆಗೆ ನೋಡಿದ್ದಕ್ಕಿಂತ ಅತ್ಯಂತ ಸ್ವಚ್ಛ ನೀರು, ಸುಂದರ-ನಯವಾದ ಮರಳು ಅಲ್ಲಿತ್ತು. ಹೇಳಿ ಕೇಳಿ 'ಕ್ಲೀಯರ್ ವಾಟರ್' ಎಂದು ಹೆಸರು ಆ ಸಾಗರದಂಚಿಗೆ. ಮಕರ ದರ್ಶನ ಮಾತ್ರ ಬಾಕಿ ಉಳಿದಿತ್ತು.

ಒಂದಿನ ನಾವು ಮತ್ತು ಜಯರಾಮ್ ಸಹೋದ್ಯೋಗಿ ದಂಪತಿ ಕಾರ್ ಖರೀದಿಗೆಂದು ಒಂದೆಡೆ ಹೋದೆವು. ಮಾರುತ್ತಿದ್ದ ವ್ಯಕ್ತಿ ಕೆರೆಯಂಚಿನ ಗೃಹ ಸಮುಚ್ಚಯವೊಂದರಲ್ಲಿ ವಾಸವಿದ್ದ. ಕಾರ್ ನೋಡಿ ಜಯರಾಮ್ ಮತ್ತು ಸಹೋದ್ಯೋಗಿ ಪರೀಕ್ಷಾರ್ಥ ಚಾಲನೆಗೆ ತೆರಳಿದರು. ಅವರ ಪತ್ನಿ ಮತ್ತು ನಾನು ಕಾರ್ ಮಾಲೀಕನೊಂದಿಗೆ ಮಾತಿಗಿಳಿದೆವು. ಮಾಮೂಲಿನಂತೆ ಹವಾಮಾನ, ಬೀಚ್ ಅದು ಇದು ಮಾತು ಮುಗಿಸಿ, 'ಇಲ್ಲಿ ಸಿಕ್ಕಾಪಟ್ಟೆ ಅಲ್ಲಿಗೇಟರ್ಸ್ ಇವೆಯಂತೆ ಹೌದಾ' ಎಂದೆವು. 'ಹಾಂ, ನಿನ್ನೆ ಬೆಳಿಗ್ಗೆ ಇಲ್ಲೇ ಒಂದು ಬಂದಿತ್ತು' ಎಂದು ಅವ ನಮ್ಮಿಬ್ಬರ ಕಾಲಡಿಗೆ ಇದ್ದ ಮಳೆ ನೀರಿನ ಕಾಲುವೆಯತ್ತ ಕೈ ತೋರಿಸಿದ. ಕಾಲುವೆಗೆ ಮುಚ್ಚಿದ್ದ ತೂತು ತೂತಿನ ಮುಚ್ಚಳದಿಂದ ಗರಗಸದ ದಂತಪಂಕ್ತಿ ತೂರಿದಂತಾಗಿ ಬೆಚ್ಚಿ ನಾವಿಬ್ಬರು ನಾಲ್ಕಡಿ ದೂರ ಜಿಗಿದೆವು.

ಅದೇ ವೇಳೆ ಬಾಡಿಗೆ ಮನೆಯನ್ನೂ ಹುಡುಕುತ್ತಿದ್ದೆವು. ಸರಿ, ಅಪಾರ್ಟಮೆಂಟ್ ಒಂದನ್ನು ನೋಡಿ, ಬಾಡಿಗೆ ಒಪ್ಪಂದ ಮಾಡಿಕೊಳ್ಳಲೆಂದು ಅದೇ ದಂಪತಿ ಜೊತೆ ಆ ಗೃಹ ಸಮುಚ್ಚಯದ ಕಚೇರಿಗೆ ಬಂದೆವು. ಕಣ್ಣಳತೆಯಲ್ಲೇ ಮೂರ್ನಾಲ್ಕು ಕೆರೆಗಳು, ಅಡ್ಡಾದಿಡ್ಡಿ ಹುಲ್ಲು ತುಂಬಿದ ನೆಲ, ಮೈತುಂಬ ಶಿಲಾವಲ್ಕದ ಮಾಲೆ ಜೋತಾಡಿಸಿಕೊಂಡ ಮರಗಳು. ವಾತಾವರಣ ವಿಚಿತ್ರವೆನಿಸಿತು ನಮಗೆ. 'ಇಲ್ಲಿ ಸಿಕ್ಕಾಪಟ್ಟೆ ಓತಿಕ್ಯಾತ ಇದ್ದಂಗಿದೆ' ಎಂದೆವು ಅಪಾರ್ಟಮೆಂಟ್ ಆಡಳಿತಾಧಿಕಾರಿಗೆ. 'ಹಾಂ, ಓತಿಕ್ಯಾತ, ಅಳಿಲು, ಅಲ್ಲಿಗೇಟರ್ಸ್ ಎಲ್ಲಾ ಇಲ್ಲಿ ಬೇಕಾದಷ್ಟಿವೆ' ಆರಾಮವಾಗಿ ಹೇಳಿದರಾಕೆ. ಓತಿಯನ್ನು ನೋಡೇ ಹೆದರಿಕೊಂಡಿದ್ದ ಜಯರಾಮ್ ಸಹೋದ್ಯೋಗಿಯ ಪತ್ನಿ ಕಂಗಾಲು.

ಹೊಸ ಮನೆಗೆ ಬಂದಿಳಿದ ಮಾರನೇ ದಿನವೇ ಮೊಸಳೆ ವೀಕ್ಷಣೆಗೆ ಹೊರಟೆ ಮಗನೊಂದಿಗೆ. ಕೆರೆಯ ಸಮೀಪ ಹೋಗಿ ನಿಂತುಕೊಂಡು ಉದ್ದಕ್ಕೂ ಕಣ್ಣು ಹಾಯಿಸುತ್ತಿದ್ದಂತೆಯೇ ಕಾಲ ಬುಡದಲ್ಲೇ ಏನೋ ಪುಳಕ್ಕೆಂದು ನೀರೊಳಕ್ಕೆ ನುಗ್ಗಿದಂತಾಯಿತು. ಬೆದರಿ ಹಿಂದೆ ಸರಿದು ನೋಡಿದರೆ. ಅಯ್ಯೋ, ದಂಡೆಯಲ್ಲಿ ಮೈಚಾಚಿದ್ದ ಆಮೆಯೊಂದು ಉಲ್ಟಾ ನನ್ನನ್ನು ಕಂಡು ಹೆದರಿ ನೀರಿಗೆ ಜಿಗಿದಿತ್ತಷ್ಟೇ. 'ಸಧ್ಯ' ಎಂದು ಉಸಿರು ಎಳೆದುಕೊಳ್ಳುತ್ತ ದೃಷ್ಟಿ ಚಾಚುತ್ತಿದ್ದಂತೆಯೇ, 'ಅರೇ'- ಈ ಬಾರಿ ನಿಜಕ್ಕೂ 'ಅಲ್ಲಿಗೇಟರ್!'

ಹತ್ತು ಮೀಟರ್ ದೂರದಲ್ಲಿ ಆರಾಮವಾಗಿ ನೀರೊಳಗೆ ಮೈ ಹರವಿಕೊಂಡು, ಮೂತಿಯನ್ನಷ್ಟೇ ತೇಲಿ ಬಿಟ್ಟು ನಿಶ್ಚಲವಾಗಿತ್ತು ಮೊಸಳೆ. ಅತ್ಯುತ್ಸಾಹದಿಂದ 'ಅದೇ, ಅಲ್ನೋಡು ಅಲ್ಲಿಗೇಟರ್' ಎಂದು ಮಗನಿಗೆ ತೋರಿಸಿದೆ. ಮರದ ತೊಗಟೆಯ ತುಂಡಿನಂತೆ ಕಾಣುತ್ತಿದ್ದ ಅದನ್ನು ಮೊಸಳೆ ಎಂದು ಗುರುತಿಸಲು ಮಗನಿಗೆ ಸ್ವಲ್ಪ ಕಷ್ಟವಾಯ್ತೇನೋ. 'ಅದು ಅಲ್ಲಿಗೇಟರ್ರಾ' ಎಂದ ಅಪನಂಬಿಕೆಯಿಂದ. ಅಷ್ಟೊತ್ತಿಗೆ ನಮ್ಮ ಮಾತಿನಿಂದ ಮೊಸಳೆ ಅಪಾಯವನ್ನು ಗ್ರಹಿಸಿತೇನೋ [....]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X