ಅಕ್ಲೆಂಡಿನಲ್ಲಿ ರಾಘವೇಂದ್ರ ಭಕ್ತಿಪ್ರಚಾರ ಸಮಿತಿ ಉದ್ಘಾಟನೆ

Aralumallige Parthasarathi in Aucklandಹರಿದಾಸ ಸಾಹಿತ್ಯದ ಹರಿಕಾರ ವಿದ್ಯಾ ವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರು ಅಕ್ಲೆಂಡಿನ ಮೌಂಟ್ ಈಡನ್ ಹಿರಿಯ ನಾಗರೀಕರ ಸಭಾಂಗಣದಲ್ಲಿ ಶ್ರೀ ಗುರು ರಾಘವೇಂದ್ರ ಭಕ್ತಿ ಪ್ರಚಾರ ಸಮಿತಿಯನ್ನು ಉದ್ಘಾಟಿಸಿ ತಾವು ಆಂಗ್ಲ ಭಾಷೆಯಲ್ಲಿ ರಚಿಸಿರುವ ವಿಷ್ಣು ಸಹಸ್ರನಾಮ ಗ್ರಂಥವನ್ನು ಬಿಡುಗಡೆ ಮಾಡಿದರು.

ಈ ಸಮಿತಿಯು ತನ್ನ ಪ್ರಥಮ ಕಾರ್ಯಕ್ರಮವಾಗಿ ಬಾಲ್ ಮೊರಾಲ್ ದೇವಸ್ಥಾನದಲ್ಲಿ ಎರಡು ವಾರದ ಕಾಲ ರಾಮಾಯಣ ಭಾಗವತ ಪ್ರವಚನ ಎರ್ಪಡಿಸಿತ್ತು, ಡಾ.ಪಾರ್ಥಸಾರಥಿಯವರು ಇದೇ ಕಾರ್ಯಕ್ರಮಗಳನ್ನು ಎರಡು ವಾರಗಳ ಕನ್ನಡದಲ್ಲಿ ವಿವಿಧ ಸ್ಥಳಗಳಲ್ಲಿ ನಡೆಸಿ ಅಂತಿಮವಾಗಿ ದಿನಾಂಕ ಜೂನ್ 19ರಂದು ಗುರುವಾರ ಶ್ರೀಕಾಂತ ಕೊಳ್ಳಿಯವರ ಮನೆಯಲ್ಲಿ ಮಂಗಳದೊಂದಿಗೆ ಮುಕ್ತಾಯಗೊಳಿಸಿದರು.

ನ್ಯೂಜಿಲೆಂಡ್ ಕನ್ನಡ ಕೂಟ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಕ್ತ ಕನಕ ದಾಸರ ಭವ್ಯ ಬದುಕು ಮತ್ತು ಅವರ ಅಮೂಲ್ಯ ಸಾಹಿತ್ಯದ ಬಗ್ಗೆ ಬೆಳಕು ಚೆಲ್ಲಿದ ಡಾ.ಪಾರ್ಥಸಾರಥಿಯವರು ಕನಕರ ಕೃತಿಗಳು ಅಮರ ಆದ್ದರಿಂದಲೇ ಈಗಲೂ ಕರ್ನಾಟಕದ ಅದರಲ್ಲೂ ಉತ್ತರದ ಜಿಲ್ಲೆಗಳಲ್ಲಿ, ಹಳ್ಳಿ ಹಳ್ಳಿಗಳಲ್ಲಿ ಅನಕ್ಷರಸ್ಥ ರೈತ ಜನರೂ ಕೂಡ ಅವುಗಳನ್ನು ಹಾಡುತ್ತಾರೆ ಎಂದು ಹೇಳಿ ಅನೇಕ ಉದಾಹರಣೆಗಳನ್ನು ನೀಡಿದರು.

ಎರಡು ವಾರಗಳ ಕಾಲ ಉಪನ್ಯಾಸ ನೀಡಲು ಇಲ್ಲಿಗೆ ಆಗಮಿಸಿದ್ದ ಪಾರ್ಥಸಾರಥಿಯವರು ರಾಮಾಯಣ ಮತ್ತು ಭಾಗವತ ಸಪ್ತಾಹ, ಕನಕ ದಾಸರ ಬಗ್ಗೆ ಉಪನ್ಯಾಸ ಹಾಗೂ ಪ್ರಸಿದ್ದ ಬಾಲ್ ಮೊರಾಲ್ ಭಾರತೀಯ ದೇವಸ್ಥಾನದಲ್ಲಿ ಆಂಗ್ಲ ಭಾಷೆಯಲ್ಲಿ ನಡೆಸಿದ ರಾಮಾಯಣ ಭಾಗವತ ಪ್ರವಚನ ನೀಡಿದರು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಅಪಾರ ಸಂಖ್ಯೆಯ ಭಕ್ತರಿಗೆ ಡಾ. ಪಾರ್ಥಸಾರಥಿಯವರು ಹಿಂದೂ ಸಂಸ್ಕೃತಿ ಮತ್ತು ಕನ್ನಡ ಸಾಹಿತ್ಯದ ಮೇಲೆ ಹೊಂದಿರುವ ಜ್ಞಾನ ಸಂಪತ್ತಿನ ಪರಿಚಯ ಮಾಡಿಕೊಟ್ಟಿತು. ಎರಡು ವರ್ಷದ ಹಿಂದೆ ಅವರು ಇಲ್ಲಿಗೆ ಭೇಟಿಯಿತ್ತಾಗ ಕೂಡ ಆಂಗ್ಲ ಮತ್ತು ಕನ್ನಡ ಭಾಷೆಗಳಲ್ಲಿ ಭಕ್ತಿ ಸಾಹಿತ್ಯ ಹಾಗೂ ಕರ್ನಾಟಕದ ಭವ್ಯ ಇತಿಹಾಸದ ಬಗ್ಗೆ ಉಪನ್ಯಾಸ ನೀಡಿದ್ದರು.

ಶ್ರೀ ರಾಘವೇಂದ್ರ ಭಕ್ತಿ ಪ್ರಚಾರ ಸಮಿತಿಯ ವತಿಯಿಂದ ಪ್ರತಿ ವರ್ಷ ಆರಾಧನಾ ಮಹೋತ್ಸವದ ಆಚರಣೆ, ಸಾಮೂಹಿಕ ಭಜನೆ ಮತ್ತು ಪೂಜೆ, ಹನುಮ ಜಯಂತಿ ಇತ್ಯಾದಿಗಳನ್ನು ನಡೆಸುವ ಉದ್ದೇಶವಿದೆ ಎಂದು ಶ್ರೀಕಾಂತ ಕೊಳ್ಳಿಯವರು ವಿವರಿಸಿದರು. ಭುವನೇಂದ್ರ ಅವರು ತಾವು ಸಂಸ್ಕೃತದಲ್ಲಿ ಪಾರ್ಥಸಾರಥಿಯವರನ್ನು ಕುರಿತು ರಚಿಸಿದ ಸ್ವಾಗತ ಗೀತೆಯನ್ನು ಹಾಡಿದರು. ಅಕ್ಲೆಂಡಿನ ಸ್ವರ ರಾಗ ಸುಧಾ ಸಂಗೀತ ಶಾಲೆಯ ವಿದ್ವಾನ್ ಎಂ.ಡಿ. ದಿವಾಕರ್ ಅವರು ರೂಪಿಸಿ, ಸ್ಥಳೀಯ ಕುಶಲಕರ್ಮಿಗಳ ನೆರವಿನಿಂದ ನಿರ್ಮಿಸಿದ ವಿನೂತನ ಶೈಲಿಯ ವೀಣೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಈ ಸುಂದರ ಮತ್ತು ಸ್ಥಳೀಯ ಹವಾಗುಣಕ್ಕೆ ಉಪಯುಕ್ತವಾದ ವೀಣೆಗೆ ಪಾರ್ಥಸಾರಥಿಯವರು ಸಾರಂಗ ಸರಸ್ವತಿ ವೀಣೆಯೆಂದು ನಾಮಕರಣ ಮಾಡಿದರು. ಉಮೇಶ್ ಪ್ರಸಾದ್, ಪ್ರಭಾಕರ್, ಶ್ರೀಕಾಂತ್ ಕೊಳ್ಳಿ ಅವರುಗಳು ಪಾರ್ಥಸಾರಥಿಯವರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು. ಪ್ರೊ. ಎಂ.ಕೆ. ವಾಮನ ಮೂರ್ತಿ ವಂದನಾರ್ಪಣೆ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+