ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರಳುಗಾಡಲ್ಲಿ ಮಲ್ಲಿಗೆಯಂತಿರುವ ಕುವೈಟ್ ಕನ್ನಡಕೂಟ

By Staff
|
Google Oneindia Kannada News

Suguna Mahesh, Kuwait
ಕನ್ನಡಿಗರೇ ವಿರಳವಾಗಿರುವ ಕುವೈಟ್‌ನಂಥ ರಾಷ್ಟ್ರಗಳಲ್ಲಿ ಕನ್ನಡದೆರಡು ನುಡಿಗಳು ಕಿವಿಗೆ ಬಿದ್ದರೂ ಮರಳುಗಾಡಿನಲ್ಲಿ ಸಿಕ್ಕ ಓಯಾಸಿಸ್‌ನಂತೆ. ನಮ್ಮ ನೆಲದಿಂದ ದೂರ ದೇಶದಲ್ಲಿದ್ದು ಅಲ್ಲಿನ ಕನ್ನಡದ ಮಲ್ಲಿಗೆಯ ಕಂಪನ್ನು ಹೀರಿ, ಅಲ್ಲಿನ ಕನ್ನಡಿಗರ ಆಚಾರ, ವಿಚಾರ, ವಾತಾವರಣದ ಬಗ್ಗೆ ಸುಗುಣ ಮಹೇಶ್ ಪರಿಚಯ ಮಾಡಿಕೊಟ್ಟಿದ್ದಾರೆ.

***

ಅದು ಜೂನ್ ತಿಂಗಳ ಕೊನೆಯವಾರ ಸಂಜೆ ಸುಮಾರು 6.30ರ ಸಮಯಕ್ಕೆ ಕುವೈಟ್ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ಬಂದು ಇಳಿದಾಗ ಮೊದಲ ನೋಟಕ್ಕೆ ಓಹೂ!!! ಎಷ್ಟು ಚೆನ್ನಾಗಿದೆ ಐಷಾರಾಮಿಯಾಗಿದೆ ಇಲ್ಲಿನ ವ್ಯವಸ್ಥೆ ಎಂದು ಸಂತೋಷದಿಂದ ಮನೆಕಡೆ ಹೊರಟೆವು. ರಸ್ತೆಯ ಇಕ್ಕೆಡಗಳಲ್ಲಿಯೂ ನೋಡಿ ಬಹಳ ಖುಷಿ. ಇಲ್ಲಿನ ಹವಮಾನಕ್ಕೆ ಇಷ್ಟು ಹಸಿರು ರಾರಾಜಿಸುತ್ತಿರುವುದ ಕಂಡು ಮನ ಸ್ಪರ್ಶಿಸಿತು. ಮನೆತಲುಪಿದ ಕೊಡಲೆ ನನ್ನ ಮಗನಿಗೆ ಬಹಳ ಖುಷಿ ತುಂಬಾ ಚೆನ್ನಾಗಿದೆ ಮನೆ ಆಟವಾಡಲು ಎಂದು, ಆದರೆ ಆ ಖುಷಿ ಹೆಚ್ಚುದಿನ ಇರಲಿಲ್ಲ. ಏಕೆಂದರೆ ಜೂನ್ ತಿಂಗಳಲ್ಲಿ ಇಲ್ಲಿ ಹೆಚ್ಚು ಭಾರತೀಯರು ಇರುವುದಿಲ್ಲ, ಇಲ್ಲಿನ ಶಾಲೆಗಳಿಗೆ 3 ತಿಂಗಳು ರಜೆ ಇರುವುದಿರಿಂದ ಅಲ್ಲದೆ ಹೆಚ್ಚು ಬಿಸಿಲಿನ ತಾಪ ತಡೆಯದೆ ಎಲ್ಲ ಜನರು ಸ್ವದೇಶಕ್ಕೆ ತೆರಳುತ್ತಾರೆ.

ನಮಗೂ ಮೊದಲೆ ಯಾರು ಪರಿಚಿತರು ಇರಲ್ಲಿಲ್ಲ ಅದರಲ್ಲೂ ಅಕ್ಕ ಪಕ್ಕದ ಮನೆಯವರು ಯಾರು ಕಾಣಲಿಲ್ಲ. ಜೊತೆಗೆ ಇದ್ದರೂ ಅವರು ಬೇರೆ ಯಾವುದೋ ಅರಬ್ಬಿರಾಷ್ಟ್ರದವರಾಗಿದ್ದರು. ಇನ್ನು ಭಾರತಿಯರಿದ್ದರು ನಮಗೆ ನನ್ನ ಊರು ನನ್ನ ಭಾಷೆಯವರಿದ್ದಾಗ ನನ್ನವರನ್ನು ಬಿಟ್ಟುಬಂದ ನೋವು ಮರೆಸುತ್ತದೆಂಬ ಭಾವನೆ. ಸದ್ಯದ ಪರಿಸ್ಥಿತಿಯಲ್ಲಿ ನಮಗೆ ಯಾವುದೆ ಖುಷಿಯು ದೊರೆಯಲಿಲ್ಲ ಒಂದು ರೀತಿ ಹಿಂಸೆ ಆಗಲು ಪರಿಣಮಿಸಿತು....ಕಾಲ ಕಳೆಯುವುದೆ ಕಷ್ಟವಾಯಿತು. ಆ ಪರಿಸ್ಥಿತಿಯಲ್ಲಿ ಯಾರಾದರು ಕನ್ನಡದವರು ಸಿಕ್ಕರೆ ಸಾಕು ಅನ್ನೊ ಹಾಗಾಗಿತ್ತು. ದಿನಗಳು ಹೀಗೆ ಉರುಳಿದವು. ನಮ್ಮ ಪತಿಯ ಸ್ನೇಹಿತರಿಂದ ಒಬ್ಬರು ಕನ್ನಡದವರು ಪರಿಚಯವಾಯಿತು ಅವರು ಕುವೈಟಿನಲ್ಲಿನ ಕನ್ನಡಕೂಟದ ಬಗ್ಗೆ ಬಹಳ ತಿಳಿಸುತ್ತಿದ್ದರು ನೀವುಗಳು ಕನ್ನಡಕೂಟಕ್ಕೆ ಸದಸ್ಯರಾಗಿರೆಂದು ಬಹುಬಾರಿ ಹೇಳುತ್ತಲಿದ್ದರು. ನಮಗೋ ಇಲ್ಲಿ ಅದು ಹೇಗಿರುತ್ತೆ ಏನು ಮಾಡುತ್ತಾರೆ ಕನ್ನಡಕೂಟದಲ್ಲಿ, ಎಂಬ ಪರಿವೆ ಇರಲಿಲ್ಲ. ಜೊತೆಗೆ ಕನ್ನಡದ ಹೆಸರಿನಲ್ಲಿ ಆಂಗ್ಲಭಾಷೆ ರಾರಾಜಿಸುತ್ತದೇನೋ ಎಂಬ ಉಡಾಫೆಯಲ್ಲಿದ್ದೆವು.

ಮರಳುಗಾಡಿನಲ್ಲಿ ದೂರೆತ ಮಲ್ಲಿಗೆ : ಕೆಲವು ದಿನಗಳ ನಂತರ ನವೆಂಬರನಲ್ಲಿ ರಾಜ್ಯೋತ್ಸವ ಸಮಾರಂಭಕ್ಕೆ ಸ್ನೇಹಿತರಿಂದ ಆಹ್ವಾನಬಂತು. ಅವರೆ ಬಂದು ನಮ್ಮನ್ನು ಆ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋದರು. ನಾವು ಅಂದು ಮೊದಲಬಾರಿ ಕನ್ನಡಕೂಟದ ಕಾರ್ಯಕ್ರಮ ನೋಡಿ ನನ್ನೂಳಗೆ ಏನೋ ಪುಳಕ. ಆ ಸಮಾರಂಭದಲ್ಲಿ ಕನ್ನಡ ಭಾಷೆ ನೆಲ ಜಲ ಸಂಸ್ಕೃತಿಯ ವೈಭವ ಮೆರೆಯಲು ಒಂದು ಸುಂದರ ವೇದಿಕೆ ಅಲ್ಲಿದಿದ್ದು ಕಂಡು ಬಹಳ ಆನಂದವಾಯಿತು. ಎಂತಹ ಪ್ರತಿಭೆಗೂ ಅಲ್ಲಿ ಸ್ಥಾನವಿದೆ ಎಂದು ಅಂದು ನನಗೆ ಮನದಟ್ಟಾಯಿತು. ಏಕೆಂದರೆ ಎಲ್ಲಾ ಕೂಟದ ಮಕ್ಕಳು ದೊಡ್ಡವರು ಎಲ್ಲರಿಗು ಪ್ರತಿಭೆ ತೋರಲು ಅವಕಾಶ ನೀಡಿದ್ದರು... ಅಂದೆ ತೀರ್ಮಾನ ಮಾಡಿದೆವು ನಾವು ಕನ್ನಡಕೂಟದ ಸದಸ್ಯರಾಗಲು. ಡಿಸೆಂಬರ್, ಜನವರಿಯಲ್ಲಿ ಕೂಟದ ಕಾರ್ಯಕಾರಿ ಸದಸ್ಯರನ್ನು ಆಯ್ಕೆ ಮಾಡುವ ವಿಶೇಷ ಸಂದರ್ಭದಲ್ಲಿ ನಾವು ಸದಸ್ಯರಾದೆವು. ಅಂದಿನಿಂದ ನಾವು ಕನ್ನಡಕೂಟವೆಂಬ ಸುಮಾರು ಇನ್ನೂರಕ್ಕು ಹೆಚ್ಚು ಕುಟುಂಬದ ಸದಸ್ಯರುಗಳಲ್ಲಿ ಒಬ್ಬರಾದೆವು. ಅಲ್ಲಿಂದ ಪ್ರಾರಂಭ ನಮ್ಮ ತುಂಬು ಕುಟುಂಬದ ಪಯಣ. ಕನ್ನಡಕೂಟ ಹೆಸರಿಗೆ ಕೂಟವಲ್ಲ ಅದು ನಮಗೆ ಮರಳುಗಾಡಿನಲ್ಲಿ ದೂರೆತ ಮರಳಮಲ್ಲಿಗೆ, ಮಲ್ಲಿಗೆಯ ಸುವಾಸನೆಗೆ ಸೇರಿದೆವು ಮೆಲ್ಲಗೆ, ಆ ಮಲ್ಲಿಗೆ ಏಂದೆಂದಿಗು ತುಂಬಿದ ಬಿಂದಿಗೆ.

ಸರ್ವಂ ಇಸ್ಲಾಂ ಮಯಂ : ಎಲ್ಲರಿಗು ತಿಳಿದಂತೆ ಕುವೈಟ್ ಒಂದು ಇಸ್ಲಾಂ ರಾಷ್ಟ್ರ. ಬೇರೆ ಅರಬಿ ದೇಶಗಳಿಗಿಂತ ಸೌದಿಅರೇಬಿಯ ಹಾಗು ಕುವೈಟ್ ಸ್ವಲ್ಪ ವಿಭಿನ್ನವಾದದ್ದು. ಏಕೆಂದರೆ ಇಲ್ಲಿ ನಮ್ಮ ಸ್ವತಂತ್ರ, ಧಾರ್ಮಿಕ ಸಂಸ್ಕೃತಿಗಳಿಗೆ ಕಡಿವಾಣವಿದೆ. ಅಷ್ಟು ಸುಲಭವಲ್ಲ ನಮ್ಮತನವನ್ನು ಪ್ರದರ್ಶಿಸುವುದು. ಅದು ಏನಿದ್ದರು ಗೌಪ್ಯವಾಗಿರಬೇಕು. ಇಂತಹದರಲ್ಲಿ ಕನ್ನಡಕೂಟಕ್ಕೆಂದು ಒಂದು ಕಚೇರಿಯಾಗಲಿ ಯಾವುದೇ ವ್ಯವಸ್ಥಿತ ಸ್ಥಳವಿಲ್ಲ. ಆದರೂ ತಮ್ಮತಮ್ಮ ಮನೆಗಳೇ ಕಚೇರಿಗಳಾಗಿರುತ್ತವೆ. ಮತ್ತು ಯಾವುದೇ ಸಮಾರಂಭಕ್ಕೆ ಒಂದು ಸ್ಥಳವನ್ನು ಮೀಸಲಾಗಿ ಒಂದು ವರ್ಷ ಅಥವಾ 6 ತಿಂಗಳುಗಳ ಮುಂಚಿತವಾಗಿ ನೂಂದಾಯಿಸಬೇಕು. ಅಲ್ಲದೆ ಆ ಸಮಾರಂಭಗಳಲ್ಲಿ ಕಿಂಚಿತ್ತಾದರು ಇಲ್ಲಿನ ಇಸ್ಲಾಂ ಧರ್ಮಕ್ಕೆ ಧಕ್ಕೆ ಬರದಂತೆ ನಡೆದುಕೊಳ್ಳಬೇಕು. ಮಸೀದಿ, ಕ್ರೈಸ್ತ ದೇವಾಲಯಗಳ ಗದ್ದಲದಲ್ಲಿ ಹಿಂದೂ ದೇವಮಂದಿರುಗಳಿಗೆ ಸ್ಥಾನವಿಲ್ಲದಾಗಿದೆ. ಎಲ್ಲೆಲ್ಲಿ ನೋಡಿದರೂ ಮಸೀದಿಗಳೇ ಕಾಣುವವು. ಎಷ್ಟೆ ಆದರು ಅದು ಅವರ ದೇಶ ತನ್ನತನವನ್ನು ಉಳಿಸಿಕೊಂಡ್ಡಿದ್ದಾರೆ. ನಾವುಗಳು ಸಂತೋಷದೂಂದಿಗೆ ಸ್ವೀಕರಿಸಿ ಅವರುಗಳಿಂದ ನಾವೂಗಳು ಕಲಿಯಬೇಕಾದದ್ದು ಬಹಳ ಇದೆ.

ಇಂತಹದರಲ್ಲಿ ಕನ್ನಡಕೂಟವು ಎಲ್ಲ ಸದಸ್ಯರಿಗೆ ವರ್ಷಕೂಮ್ಮೆ ದೇವರ ಪೂಜೆ, ಭಜನೆ, ಗಾಯನ, ಮನನ ಎಲ್ಲವನ್ನೂ ಏರ್ಪಡಿಸುತ್ತಾರೆ. ನಿಜಕ್ಕೂ ಇದು ಹೆಮ್ಮೆಯ ವಿಷಯ. ಕನ್ನಡತನಕ್ಕೆ ಕನ್ನಡಸಂಸ್ಕೃತಿಗೆ ಎಂದೂ ಕುಂದುಬಾರದಂತೆ ನೆಡೆಸಿಕೂಂಡು ಬಂದಿದ್ದಾರೆ. ಇನ್ನೂಂದು ಮಾತು ನಿಮ್ಮೆಲ್ಲರಿಗೂ ತಿಳಿಸಲೇಬೇಕು. ಹಿಂದು ಪೂಜಾವಿಧಿಗಳನ್ನು ಯಾವುದೆ ಭೇದಭಾವವಿಲ್ಲದೆ ಕ್ರೈಸ್ತರು ಮುಸ್ಲಿಂರು ಹಿಂದೂಗಳಲೊಬ್ಬರಾಗಿ ಆಚರಣೆ ನೆಡೆದ ಆ ದಾಸಜಯಂತಿ ಅವಿಸ್ಮರಣೀಯ. ಈ ವರ್ಷವೇ ಅಲ್ಲ ಇದೇ ರೀತಿ ಹಲವಾರು ವರ್ಷಗಳು ನೆಡೆದಿವೆ. ಕನ್ನಡಪ್ರೇಮ ಹೇಗಿದೆಯೆಂದರೆ ಇತ್ತೀಚೆಗೆ ಮಹಾಭಾರತದ ಕುರುಕ್ಷೇತ್ರ ಅಭಿಮನ್ಯುವಿನ ಕತೆಯನ್ನು ಆಧರಿಸಿ ಯಕ್ಷಗಾನವನ್ನು ಕೂಟದ ಮಕ್ಕಳಿಂದ ಪ್ರದರ್ಶಿಸಲಾಗಿತ್ತು. ಅದು ಕೇವಲ 10-15 ದಿನಗಳಲ್ಲಿ ತರಬೇತುದಾರರಿಂದ ತರಬೇತಿ, ಜೊತೆಗೆ ಕನ್ನಡ ಕಲಿಕೆ. ಏಕೆಂದರೆ ಇಲ್ಲಿನ ಮಕ್ಕಳಿಗೆ ಕನ್ನಡ ಅಷ್ಟು ಯಕ್ಷಗಾನಕ್ಕೆ ಸರಿದೂಗಿಸುವ ಹಾಗೆ ತಿಳಿಯದು. ಹಾಗೆಂದು ಕನ್ನಡ ಬರುವುದಿಲ್ಲವೆಂದಲ್ಲ, ಮನೆಮಟ್ಟಿಗೆ ಮಾತಾಡುತ್ತಾರೆ. ಇಂತಹ ಸಮಯದಲ್ಲಿ ನಮ್ಮ ಮಕ್ಕಳು ಕನ್ನಡವನ್ನು ಕಲಿತು ಯಕ್ಷಗಾನವನ್ನು ಪ್ರದರ್ಶಿಸಿದರು. ಇದು ಕನ್ನಡಕೂಟಕ್ಕೆ ಹೂಸ ಮೈಲುಗಲ್ಲು.

ನಮ್ಮ ಕೂಟದ ಕನ್ನಡತನ ಎಷ್ಟು ಬಣ್ಣಿಸಿದರು ಸಾಲದು. ದೂರದೇಶದ ಅದರಲ್ಲೂ ಕುವೈಟ್, ಸೌದಿಅರೇಬಿಯಾಗಳಂತಹ ದೇಶಗಳಲ್ಲಿ ಈ ರೀತಿ ಆಚರಣೆ ಮಾಡುವುದು ಒಂದು ಪ್ರಭುದ್ಮಾನದ ಸಂಗತಿ. ಕನ್ನಡ ಕೂಟ ಇದೆಲ್ಲದರ ಜೊತೆಗೆ ಇಲ್ಲಿ ನೆಲೆಸಿರುವ ಎಲ್ಲಾ ಕನ್ನಡಕೂಟ ಸದಸ್ಯರಿಗೆಂದೆ ವರ್ಷಕ್ಕೆ 2 ಬಾರಿ ವಿಹಾರ ಏರ್ಪಡಿಸುತ್ತಾರೆ. ಅಂದು ಎಲ್ಲರು ಕುಟುಂಬಸಮೇತರಾಗಿ ಹಾಜರಾಗಿ ತಮ್ಮೆಲ್ಲಾ ಕೆಲಸಗಳ ಒತ್ತಡ ಬದಿಗಿಟ್ಟು ಎಲ್ಲರೊಳಗೂಂದಾಗಿ ನಕ್ಕು ನಲ್ಲಿಯುತ್ತಾರೆ. ಇಷ್ಟಕ್ಕೆ ಮುಗಿಯದೆ ಕೂಟದ ವತಿಯಿಂದ ಪತ್ರಿಕೆಗಳೂ ಸಹ ಮುದ್ರಿತವಾಗುತ್ತವೆ. ಆ ಪತ್ರಿಕೆಗಳಿಗೆ ದೂಡ್ಡವರೇ ಅಲ್ಲ ಚಿಣ್ಣರಿಂದಲೂ ಬರಹಗಳು, ಕವನ, ಸಾಹಿತ್ಯ, ಸಂಗೀತ ಎಲ್ಲದರ ಪರಿಯನ್ನು ಉಣಬಡಿಸುತ್ತಾ ಬರುತ್ತಿದ್ದಾರೆ. ಹಾಗು ಪತಿಭೆಗೆ ತಕ್ಕ ಪುರಸ್ಕಾರದಂತೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ನಮ್ಮ ಕನ್ನಡಕೂಟ ಯಾವುದೆ ಹೆಸರು ಬಯಸದೆ ಎಲೆಮರೆ ಕಾಯಿಯಾಗಿ ಕನ್ನಡದ ಹೆಸರು ಉಳಿಸಿ ಬೆಳೆಸುತ್ತ ಬಂದಿದೆ. ಎಲ್ಲಾದರು ಇರಲಿ ಎಂತಾದರು ಇರಲಿ ಎಂದೆಂದಿಗು ನಾವು ಕನ್ನಡಿಗರೆ, ಅಲ್ವೆ?

***

ಸುಗುಣ ಮಹೇಶ್ ಅವರ ಲೇಖನ ಓದಿದ ಅನೇಕ ಕನ್ನಡಿಗರು ಕುವೈಟ್ ಕನ್ನಡ ಕೂಟ ಸೇರಬೇಕೆಂದು ಇಚ್ಛಿಸಿ ಸಂಘದ ವಿಳಾಸ ಕೋರಿದ್ದಾರೆ. ಕೂಟ ಸೇರಬಯಸುವವರು ಹೆಚ್ಚಿನ ವಿವರಗಳಿಗಾಗಿ ನಮೂದಿಸಿರುವ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ http://www.kukakoo.org/

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X