ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೃಂದಾವನದಲ್ಲಿ ಫಟಫಟಿಸಿದ ರಾಷ್ಟ್ರಧ್ವಜ

By ವರದಿ : ರಾಜ್ ಶಶಿ
|
Google Oneindia Kannada News

Republic Day celebrated at Brindavana, NJಶನಿವಾರ ಜನವರಿ 26ರಂದು ನ್ಯೂಜೆರ್ಸಿಯ ಬೃಂದಾವನದಲ್ಲಿ ಗಣರಾಜ್ಯೋತ್ಸವ ಹಾಗು ಮೂರನೆಯ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ "ಅನುಯಲ್ ಮ್ಯೂಸಿಕಲ್, ಡಾನ್ಸ್ ನೈಟ್ ಮತ್ತು ಡಿನ್ನರ್ ಗಾಲ" ನ್ಯೂಜೆರ್ಸಿಯ ರಾಯಲ್ ಆಲ್ಬರ್ಟ್ಸ್ ಪಾಲಸ್‌ನ ಸಭಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಅರಮನೆಯಂತೆ ಝಗಮಗಿಸುತ್ತಿದ್ದ ರಾಯಲ್ ಆಲ್ಬರ್ಟ್ಸ್‌ನ ಸಭಾಂಗಣದ ವೇದಿಕೆಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಭಾರತ, ಕನ್ನಡ ಹಾಗು ಅಮೆರಿಕೆಯ ಧ್ವಜಗಳು ಫಟಫಟಿಸುತ್ತಿದ್ದರೆ, ಬಾಂಕ್ವೆಟ್‌ನಲ್ಲಿ ಬಿಸಿಬಿಸಿ ಬೊಂಡ ಹೊಟ್ಟೆ ಚುರುಗುಟ್ಟುವಂತೆ ಮಾಡಿತ್ತು.

ಸಂಜೆ ಏಳರ ವೇಳೆಗಾಗಲೆ ಬೃಂದಾವನದ ವೈವಿಧ್ಯಮಯ ಕಾರ್ಯಕ್ರಮಗಳ ಪಟ್ಟಿ ಹಿಡಿದು ಸಜ್ಜಾಗಿದ್ದರು ಅಂದಿನ "ಎಂ.ಸಿ." ಯಾಗಿದ್ದ ನಮ್ಮ ವಿದ್ಯಾಮೂರ್ತಿ. ಬೃಂದಾವನದ ನೃತ್ಯ ಪ್ರವೀಣೆಯರಾದ ಭ್ರಮರಿ ಶಿವಪ್ರಕಾಶ್ ಹಾಗು ಆಶಾ ಆಡಿಗ ಅವರಿಂದ ಗಣಪನ "ಫ್ಯೂಶನ್ ನೃತ್ಯ", ಬೃಂದಾವನದ ಕಾರ್ಯಕಾರಿ ಸಮಿತಿಯವರಿಂದ ಅಮೆರಿಕ ಹಾಗು ಭಾರತದ ರಾಷ್ಟಗೀತೆ ಗಾಯನ ಮತ್ತು ವಸಂತಾ ಶಶಿ ಹಾಡಿದ "ಯೇ ಮೆರೆ ವತನ್" ದೇಶಭಕ್ತಿ ಗೀತೆಗಳಿಂದ ಸಂಭ್ರಮ ಕಳೆಕಟ್ಟಿತ್ತು.

ಅಂದು ಮೈಸೂರಿನಿಂದ ಬಂದಿದ್ದ ರಾಷ್ಟ್ರಕವಿ ಕುವೆಂಪು ಅವರ ಪುತ್ರಿ ತಾರಣಿ ಚಿದಾನಂದ್ ಹಾಗು ಅಳಿಯ ಡಾ. ಕೆ.ಸಿ. ಚಿದಾನಂದ ಗೌಡ (ಕುವೆಂಪು ಯುನಿವರ್ಸಿಟಿಯ ಮಾಜಿ ವಿಸಿ) ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಬೃಂದಾವನದ ಮೊಟ್ಟ ಮೊದಲ ನ್ಯೂಸ್‌ಲೆಟರ್(ವನವಾಹಿನಿ) "ಸುದ್ದಿ ಸಾರಂಗಿ"ಯನ್ನು ಮುಖ್ಯ ಅತಿಥಿಗಳು ಬಿಡುಗಡೆ ಮಾಡಿದರು.

ವೇವ್ಜ್ ಮ್ಯೂಸಿಕ್ ಖ್ಯಾತಿಯ ಹಾಗು ನ್ಯೂಜೆರ್ಸಿಯ ಗಾನಕೋಗಿಲೆ ಎಂದೇ ಹೆಸರುವಾಸಿಯಾಗಿರುವ ಬೃಂದಾವನದ ಅಧ್ಯಕ್ಷೆ ವಸಂತಾ ಶಶಿ ಮತ್ತು ಕಲಾವಿದ ಮುರಳಿ ಅಯಂಗಾರ್ ಅವರು ಬೃಂದಾವನದ ಸಂಕೇತ ಗೀತೆ ಹಾಡಿದರು. ವೇವ್ಜ್ ಮ್ಯೂಸಿಕ್ ವತಿಯಿಂದ ಪ್ರಾಯೋಜಿಸಲಾಗಿದ್ದ “ಎ ಟ್ರಿಬ್ಯೂಟ್ ಟು ಇಂಡಿಯನ್ ಲೆಜೆಂಡರಿ ಮ್ಯೂಸಿಶಿಯನ್ಸ್" ಎಂಬ ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ಹಳೆಯ ಕನ್ನಡ ಮತ್ತು ಹಿಂದಿ ಗೀತೆಗಳನ್ನು ಹಾಡಿ ಮಾಧುರ್ಯದ ಗೀತೆಗಳನ್ನು ಮೆಲುಕು ಹಾಕುವಂತೆ ಮಾಡಿದರು. ಆ ಹಾಡುಗಳ ಚಿತ್ರ ಸರಿಯಾಗಿ ಹೇಳಿದವರಿಗೆ ಆಡಿಯೋ ಸೀಡಿ, ಕರೋಕಿ ಸೀಡಿ, ಹಾಗು ಡಿವಿಡಿಗಳ ಬಹುಮಾನವನ್ನು ನೀಡಿಲಾಯಿತು.

ಹಾಡುಗಳಿಗೆ ಸಭಿಕರ ನೃತ್ಯ, ಡೀಜೆ ಕುಣಿತ ಮತ್ತು ರಾಫಲ್ ಡ್ರಾ ಕಾರ್ಯಕ್ರಮದ ಹೈಲೈಟ್ ಎಂದರೂ ತಪ್ಪಾಗದು. ಕೊನೆಗೆ ಡ್ರಾದಲ್ಲಿ ಗೆದ್ದವರಿಗೆ ಚಿನ್ನದ ನೆಕ್ಲೇಸ್, ಸಿಲ್ವರ್ ಪಿಂಕ್ ಟೊಪಾಜ್ ಜುಯಲರಿ ಸೆಟ್ ನೀಡಲಾಯಿತು.

ಕಾರ್ಯಕ್ರಮದ ಯಶಸ್ಸಿಗೆ ದುಡಿದ, ಆರ್ಥಿಕವಾಗಿ ಸಹಾಯಹಸ್ತ ಚಾಚಿದ ಎಲ್ಲರಿಗೆ ಬೃಂದಾವನ ಕನ್ನಡ ಕೂಟದ ಅಧ್ಯಕ್ಷೆ ವಂದಿಸಿದರು. ಮೇ 10ರಂದು ಬೃಂದಾವನದಲ್ಲಿ ನಾಲ್ಕೈದು ಕನ್ನಡ ಕೂಟಗಳನ್ನೊಳಗೊಂಡ ಯುಗಾದಿ ಹಬ್ಬದಾಚರಣೆಯಲ್ಲಿ ನಾಟಕೋತ್ಸವ ನಡೆಯಲಿದೆ ಎಂದು ಅವರು ತಿಳಿಸಿದರು.

ಹೆಚ್ಚಿನ ವಿವರಗಳಿಗಾಗಿ ಬೃಂದಾವನ ಅಂತರ್ಜಾಲ ತಾಣ ನೋಡಿ : http://www.brindavana.org/
ಹೆಚ್ಚಿನ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X