ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕನ್ನಡದ ಅಭಿಮಾನಿಗಳಲ್ಲಿ ವಿನಂತಿ

By Staff
|
Google Oneindia Kannada News

ಬಹುಭಾಷೆಗಳ ದೇಶ ಅಮೆರಿಕೆಯಲ್ಲಿ ಕನ್ನಡ ಸಾಹಿತ್ಯ ಪತ್ರಿಕೆ ಹುಟ್ಟುಹಾಕಿ ಕೈಸುಟ್ಟು ಕರಕಲು ಮಾಡಿಕೊಂಡವರು ಅದರ ಸಂಪಾದಕ ಮತ್ತು ಪ್ರಕಾಶಕ ಶಿಕಾರಿಪುರ ಹರಿಹರೇಶ್ವರ. ಪತ್ರಿಕೆ ಕಣ್ಣುಮುಚ್ಚಿ ಸುಮಾರು 20 ವರ್ಷಗಳೇ ಸಂದರೂ ಪತ್ರಿಕೆಯನ್ನು ಪೋಷಿಸಿದ ಕನ್ನಡ ಕುಲ ಬಾಂಧವರನ್ನು ಪತ್ರಿಕೆಯ ಆಡಳಿತ ವರ್ಗ ಮರೆತಿಲ್ಲ.. ಮುಂದೆ ಓದಿ.

***

Harihareshwaraವಿದೇಶದಲ್ಲಿರುವ ಕನ್ನಡಿಗರ ಮಾತುಕತೆ, ಓದು ಮತ್ತು ಬರಹಗಳಲ್ಲಿನ ಆಶೋತ್ತರಗಳನ್ನು ಪ್ರತಿಬಿಂಬಿಸುತ್ತ, ಅಲ್ಲಿ ಕನ್ನಡ ಉಳಿಯಲು, ಬೆಳೆಸಲು ಯಥಾಮತಿ, ಯಥಾಶಕ್ತಿ, ಯಥೋಚಿತವಾಗಿ ಪ್ರಯತ್ನಿಸುತ್ತಾ, ನಾವು ಅಮೆರಿಕನ್ನಡ ಪತ್ರಿಕೆಯನ್ನು ನಡೆಸುತ್ತಿದ್ದೆವು; ಆಗ, ಅಪಾರ ಸಂಖ್ಯೆಯಲ್ಲಿ ಕನ್ನಡದ ಅಭಿಮಾನಿಗಳು ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ನಮಗೆ ತುಂಬ ಸಹಾಯ ಮಾಡಿದ್ದಾರೆ. ಅವರೆಲ್ಲರಿಗೂ ನಾಗಲಕ್ಷ್ಮಿ ಮತ್ತು ನಾನು ಕೃತಜ್ಞರಾಗಿದ್ದೇವೆ.

ಅಮೆರಿಕನ್ನಡ ಸಾಹಿತ್ಯ ಪತ್ರಿಕೆಯಾದ್ದರಿಂದ, ಅತೀವ ಆರ್ಥಿಕಮುಗ್ಗಟ್ಟನ್ನು ಅನುಭವಿಸಿ, ಅದು ಮುಂದುವರಿಯಲಾಗದೆ ಅನಿವಾರ್ಯವಾಗಿ ನಿಲ್ಲಬೇಕಾಗಿ ಬಂದಿದ್ದು ಅಮೆರಿಕನ್ನಡದ ಅಭಿಮಾನಿಗಳಿಗೆಲ್ಲರಿಗೂ ತಿಳಿದ ವಿಷಯ. ಪತ್ರಿಕೆಯ ಕೊನೆಯ ಸಂಚಿಕೆಗಳಲ್ಲಿ ಈ ಕಷ್ಟ ನಷ್ಟಗಳ ಬಗ್ಗೆ ವಿವರಿಸುತ್ತ, ನಮ್ಮ ಅಸಹಾಯಕತೆಯನ್ನು ನಿಮ್ಮಲ್ಲಿ ತೋಡಿಕೊಂಡಿದ್ದೇವೆ. ಪತ್ರಿಕೆಯ ಆ ನಿಲುಗಡೆ ತಾತ್ಕಾಲಿಕವೆಂದೇ ಆ ಅಭಿಮಾನಿಗಳ ಆಶಯದಂತೆ ನಮ್ಮದೂ ಕೂಡ.

ಅಮೆರಿಕನ್ನಡ ಒಂದು ದೊಡ್ದ ಕನ್ನಡ ಬರಹಗಾರರ ತಂಡವನ್ನೇ ವಿದೇಶದಲ್ಲಿ ಹುಟ್ಟು ಹಾಕಿದ್ದು, ಬೆಳೆಸಿದ್ದು, ಅವರೊಂದಿಗೆ ತಾನೂ ಬೆಳೆದದ್ದು ಎಲ್ಲರಿಗೂ ಗೊತ್ತಿರುವ ವಿಷಯ; ಬಲ್ಲವರಿಗೆ ಇಲ್ಲಿ ಬೆರಗೇನಿಲ್ಲ. ಅವರಲ್ಲಿ ಹಲವರು ಆಜೀವ ಸದಸ್ಯ್ಯರಾಗಿ ಪತ್ರಿಕೆಯನ್ನು ಪೋಷಿಸಿದರು.

ಅಮೆರಿಕನ್ನಡದ ಆ ಎಲ್ಲ ಆಜೀವ ಸದಸ್ಯರಿಗೆ ಮತ್ತು ಪತ್ರಿಕೆಯಲ್ಲಿ ಲೇಖನ ಬರೆದ ಬರಹಗಾರರಿಗೆ ನಾವು ಬರೆದ ಒಂದೆರಡು ಪುಸ್ತಕಗಳನ್ನು ಗೌರವಪೂರ್ವಕವಾಗಿ ಉಡುಗೊರೆಕೊಡಲು ಯೋಚಿಸುತ್ತಿದ್ದೇವೆ; ಭಾರತದಲ್ಲಿರುವ ಅವರ ಬಂಧುಗಳಿಗೆ ಅಂಚೆಮೂಲಕ ಈ ಪುಸ್ತಕಗಳನ್ನು ಕಳಿಸಲು ಇಚ್ಛಿಸುತ್ತಿದ್ದೇವೆ.

ಅಮೆರಿಕನ್ನಡದ ಬರಹಗಾರರೂ ಮತ್ತು ಆಜೀವಸದಸ್ಯರು, ದಯವಿಟ್ಟು, ಭಾರತದಲ್ಲಿರುವ ತಮ್ಮ ಬಂಧುವೊಬ್ಬರ ಸರಿಯಾದ ಅಂಚೆವಿಳಾಸವನ್ನು (ಮತ್ತು ಅವರ ಫೋನ್ ನಂಬರ್‌ಗಳನ್ನು, ಈಮೈಲ್ ವಿಳಾಸವನ್ನು) ನಮಗೆ ಈಮೈಲ್ ಮುಖಾಂತರ, ಆದಷ್ಟು ಬೇಗ, ಕಳುಹಿಸಬೇಕೆಂದು ಕೋರಿಕೊಳ್ಳುತ್ತಿದ್ದೇವೆ.

ಏಪ್ರಿಲ್ 7, 2008ರೊಳಗೆ ನಮಗೆ ತಲುಪುವಂತೆ, ದಯವಿಟ್ಟು ಈ ನಮ್ಮ ಈಮೈಲ್ ವಿಳಾಸಕ್ಕೆ ಕಾಗದ ಬರೆದು, ವಿವರಗಳನ್ನು ತಿಳಿಸಿ, ಸಹಕರಿಸಿ ಉಪಕರಿಸಿ:

ವಂದನೆಗಳೊಂದಿಗೆ,

ಸ್ನೇಹದಲ್ಲಿ ನಿಮ್ಮ,
ನಾಗಲಕ್ಷ್ಮಿ ಮತ್ತು ಶಿಕಾರಿಪುರ ಹರಿಹರೇಶ್ವರ (RNRI)
[email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X