ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದಲ್ಲಿ ಕ್ರಾಂತಿಕಾರಿ ಬಸವಣ್ಣ ಜಯಂತಿ

By Staff
|
Google Oneindia Kannada News

Siddalingamahaswamyದಯವೇ ಧರ್ಮದ ಮೂಲವಯ್ಯಾ ಎಂದು ನುಡಿದ ಸಮಾಜ ಸುಧಾರಕ ಬಸವಣ್ಣನವರ ಜನ್ಮದಿನ ವೈಶಾಖ ಶುದ್ಧ ತದಿಗೆಯಂದು. ಈ ದಿನವನ್ನು ಬಸವ ಜಯಂತಿ ಎಂದು ಕರ್ನಾಟಕದ ಬಹುತೇಕೆಡೆಗಳಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಇದೇ ಬಸವ ಜಯಂತಿ ಕಾರ್ಯಕ್ರಮ ಇತ್ತೀಚೆಗೆ ಬಸವ ಸಮಿತಿ, ಸಿಂಗಪುರದ ವತಿಯಿಂದ ಮಾರ್ಚ್ 17 ಭಾನುವಾರ ಸ್ಥಳೀಯ ಆನಂದ ಭವನ ಹಾಲ್‌ನಲ್ಲಿ ಆಚರಿಸಲಾಯಿತು.

ವಾಣಿ ರಾಮದಾಸ್, ಸಿಂಗಪುರ್

ಸಿಂಗಪುರದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮಕ್ಕೆ ವಿಶೇಷಹ್ವಾನಿತರಾಗಿ 2004ರಲ್ಲಿ ಕೋಮು ಸೌಹಾರ್ದತೆ ಹಾಗೂ ರಾಷ್ಟ್ರಿಯ ಭಾವೈಕ್ಯತೆಗಾಗಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಂದ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾಗಿರುವ ದಂಬಾಳ್-ಗದಗ ಎಡೆಯೂರು ತೋಂಟದಾರ್ಯ ಸಂಸ್ಥಾನ ಮಠಾಧೀಶರಾದ ಜಗದ್ಗುರು ಡಾ. ಸಿದ್ಧಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಲು ಆಗಮಿಸಿದ್ದರು. ಇವರು ಗದಗ ಆಸುಪಾಸಿನ ಗ್ರಾಮೀಣ ಪ್ರದೇಶಗಳಲ್ಲಿ 65 ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ಹದಿನಾರು ಸಾವಿರ ಗ್ರಾಮೀಣ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಹಾಗೂ ದಿನಂಪ್ರತಿ ಹತ್ತು ಸಾವಿರ ಜನರಿಗೆ ಊಟದ ವ್ಯವಸ್ಥೆಯ ಗಣನೀಯ ಸೇವೆಯ ನೇತೃತ್ವ ವಹಿಸುತ್ತಿದ್ದಾರೆ.

ವಿದ್ಯೆ ಹಾಗೂ ಜೀವನ ರೂಪಿಸಿಕೊಳ್ಳುವುದರಲ್ಲಿ ಪುರುಷರಂತೆ ಸ್ತ್ರೀಯರಿಗೂ ಸಮಾನಹಕ್ಕಿದೆ ಎಂದು 12ನೆಯ ಶತಮಾನದಲ್ಲೇ ಅನೇಕ ಸಮಾಜ ಸುಧಾರಣೆಯನ್ನು ಕೈಗೊಂಡು, ಸಮಾನತೆಯ ಮಾರ್ಪಾಡುಗಳನ್ನು ತಂದವರು ಕ್ರಾಂತಿಯೋಗಿ ಬಸವಣ್ಣನವರು. ಭಕ್ತಿ ಪಥವ ತೋರಿ, ಭಕ್ತಿ ಪಂಥದ ಪ್ರಮುಖರಲ್ಲಿ ಒಬ್ಬರಾಗಿ ಭಕ್ತಿ ಭಂಡಾರಿ ಎಂದೆನಿಸಿಕೊಂಡರು. ಕಾಯಕವೇ ಕೈಲಾಸ, ಆಲಸೀ ಜೀವನ ಸಲ್ಲ ಎಂಬುದನ್ನು ಸಾರಿ ಜನರನ್ನು ದುಡಿದು ಬದುಕುವ ಪಥದ ಮಾರ್ಗ ತೋರಿದರು. ಕನ್ನಡ ಸಾಹಿತ್ಯ ಪ್ರಪಂಚಕ್ಕೆ ವಚನ ಸಾಹಿತ್ಯದ ಕೊಡುಗೆ ಅಪಾರ. 12ನೆಯ ಶತಮಾನದಲ್ಲಿ ಬಸವಣ್ಣನವರಿಂದ ಆರಂಭವಾದ ಈ ಕ್ರಾಂತಿ ಜಾತಿ, ಮತ, ಧರ್ಮ ಜಿಜ್ಞಾಸೆಗಳ ಕ್ರಾಂತಿಕಾರಿ ಮರುಪರಿಶೀಲನೆಗೆ ದಾರಿ ಮಾಡಿಕೊಟ್ಟಿತು. ವಚನ ಸಾಹಿತ್ಯ ಅಧ್ಯಾತ್ಮಿಕತೆಯ ದೃಷ್ಟಿಕೋನ ಬದಲಾಯಿಸಿತು. ಕಾಯಕವೇ ಕೈಲಾಸ ಎಂಬ ಭೋಧನೆ ಎಲ್ಲರ ಮನ ತಟ್ಟೆಬ್ಬಿಸುವಂತೆ ಮಾಡಿತು.

ಬಸವ ಸಮಿತಿ, ಸಿಂಗಪುರ ನಡೆದು ಬಂದ ದಾರಿ ಹಾಗೂ ಸ್ವಾಮಿಗಳ ಪರಿಚಯ ಮಾಡಿಕೊಟ್ಟರು ಸೋಮಶೇಖರ್. ಅಂದು ನೆರೆದಿದ್ದ ಕನ್ನಡಿಗರಿಗೆ ಮನುಜ ಸುಧಾರಣೆ, ಸಮಾಜ ಸುಧಾರಣೆ ಹಾಗೂ ಜಗತ್ತಿನ ಸುಧಾರಣೆಗಳ ಬಗ್ಗೆ ಹೇಳುತ್ತಾ ವ್ಯಕ್ತಿ ವಿಕಸನದ ಬಗ್ಗೆ ಮಾತನಾಡಿದರು. "ಹುಡುಕೋ ಚಟ ಇರುವವರು ಹುಡುಗರು, ಅದಕ್ಕೆ ಅವ್ರು ಕೂರೂದೇ ಇಲ್ಲ ನೋಡ್ರಿ" ಎಂದು ಅತ್ತಿತ್ತ ಓಡಾಡುತ್ತಿದ್ದ ಪುಟಾಣಿಯರತ್ತ ನೋಟ ಬೀರಿ, ಸಿಂಗಪುರದಾಗ ಸರಿ ರಾತ್ರಿಲೂ ಹೆಣ್ಣುಮಕ್ಕಳು ನಿರ್ಭಯದಿಂದ ಓಡಾಡಬಹುದು ಎಂದು ಕೇಳಿ ಬಾಳಾ ಸಂತೋಷ ಆಯ್ತ್ ನೋಡ್ರಿ. "ಯಾವಾಗ ಹೆಣ್ಣು ನಿರ್ಭಯವಾಗಿ ತಿರುಗಾಡುತ್ತಾಳೋ ಆಗ ಪ್ರಜಾಪ್ರಭುತ್ವ ಯಶಸ್ವೀ" ಎಂಬ ಮಹಾತ್ಮಾಗಾಂಧೀಜಿಯವರ ಮಾತುಗಳನ್ನು ನೆನಪಿಸಿದರು.

ಭಾರತ ಬಹುವಿಧ ಜಾತಿ, ಬಹುವಿಧ ಸಂಸ್ಕೃತಿ, ಬಹುವಿಧ ಭಾಷೆಯ ಭವ್ಯ ದೇಶ. ಆ ಭವ್ಯತೆಗೆ ಧಕ್ಕೆ ಬರದಂತೆ ನಾವು ಶಾಂತಿ, ಸೌಹಾರ್ದತೆಗಳನು ಬೆಳೆಸಬೇಕು. ನಮ್ಮಲ್ಲಿಯೂ ನಿರ್ಭಯತೆ ಬರಬೇಕು. ಪ್ರಪಂಚ ಪ್ರಾಂತ್ಯಭೇದ, ಜನಾಂಗ ಭೇದದಿಂದ ರಕ್ತಸ್ತಿತವಾಗಿದೆ. ಹರಿದು ಹಂಚಿ ಹೋಗುತ್ತಿದೆ. ಎಲ್ಲರ ಮೈಯಲ್ಲಿ ಹರಿವುದೂ ಕೆಂಪು ರಕ್ತವೇ. ಎಲ್ಲರೂ ಮಾನವೀಯ ಮೌಲ್ಯಗಳನ್ನು, ಸೌಹಾರ್ದತೆಗಳನ್ನು ಬೆಳೆಸಿಕೊಳ್ಳಬೇಕು. ಜೀವನ ಪ್ರವಾಹಕ್ಕೆ ಎದುರಾಗಿ ಈಜುತ್ತೇವೆ, ಸತ್ತ ನಂತರ ಅದೇ ಪ್ರವಾಹದಲ್ಲಿ ತೇಲಿ ಹೋಗುತ್ತೇವೆ.

ಇಂಗ್ಲೀಷ್ ಪ್ರಭಾವದಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ. ಮನೆಯಲ್ಲಿ ಕನ್ನಡ ಪರಿಸರ ಇರಲಿ. ಎಲ್ಲಾದರು ಇರು ಎಂದೆಂದಿಗು ನೀ ಕನ್ನಡವಾಗಿರು ಎಂಬುದನು ಮರೆಯದಿರಿ. ಕನ್ನಡ ಭಾಷೆ ಉಳಿಸಿ, ಪೋಷಿಸಿ, ಬೆಳೆಸಿ ಎಂದು ಸಲಹೆಯನಿತ್ತರು.

ಕಾರ್ಯಕ್ರಮ ಉಷಾ ಹಿರೇಮಠ್ ಅವರು ರಚಿಸಿ, ಹಾಡಿದ ವಿಶ್ವಮಾನ್ಯನೆ, ಲೋಕವಂದ್ಯನೆ, ಕರ್ಮಯೋಗಿಯೆ ಬಸವನೆ ಎಂಬ ಹಾಡಿನಿಂದ ಪ್ರಾರಂಭಗೊಂಡಿತು. ನಂತರ ಶ್ರೀಮತಿ ಲಕ್ಷ್ಮಿಶ್ರೀ ನಿರ್ದೇಶನದಲ್ಲಿ ಪುಟಾಣಿಗಳಿಂದ ಲಿಂಗಾಷ್ಟಕ ಮೂಡಿ ಬಂದಿತು. ನಿವೇದಿತಾ ನಟನಾಂಜಲಿಯ ನಂತರ, ಮಹಿಳೆಯರು ಬಸವಣ್ಣನವರ ವಚನಗಳನ್ನು ಹಾಡಿದರು. ಸಂಗೀತ ವಿದುಷಿ ಶ್ರೀಮತಿ ಭಾಗ್ಯಮೂರ್ತಿ ಅವರಿಂದ "ಇದೆಯೆನ್ನ ಬಿನ್ನಹ, ನಿನಗೆನ್ನ ತಾಯೆ" ಎಂಬ ಹಾಡು ಬಹಳ ಸೊಗಸಾಗಿ ಮೂಡಿ ಬಂದಿತು. ರಶ್ಮಿ ಉದಯಕುಮಾರ್ ನಿರೂಪಣೆ ಹಾಗೂ ಬಸವ ಸಮಿತಿಯ ಅಧ್ಯಕ್ಷ ಸಂಜೀವ್ ಕುಮಾರ್ ಅವರೀಂದ ವಂದನಾರ್ಪಣೆ ನಡೆಯಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X