ಸಾಕ್ರಮೆಂಟೋದಲ್ಲಿ 'ರಂಗ ವಸಂತ'ದ ಕಂಪು
ವೇಣು ಮಲ್ಲೇಸರ ರೋಸ್ ವಿಲ್, ಕ್ಯಾಲಿಫೋರ್ನಿಯ.
ಸಾಕ್ರಮೆಂಟೋ ಕನ್ನಡ ಸಂಘ ಮೊಟ್ಟ ಮೊದಲ ಬಾರಿಗೆ ರಂಗೋತ್ಸವ "ರಂಗ ವಸಂತ" ವನ್ನು ಇದೇ ಮಾರ್ಚ್ 22ರಂದು ಆಯೋಜಿಸಿದೆ. ಸ್ಥಳೀಯ ಕನ್ನಡಿಗರಿಗೆ ಕರ್ನಾಟಕದ ರಂಗ ಪ್ರಬೇಧಗಳನ್ನು ಪರಿಚಯಿಸುವ ಈ ಕಾರ್ಯಕ್ರಮದಲ್ಲಿ ಹೆಸರಾಂತ ಕಲಾವಿದರುಗಳ ವಿನೂತನ ಶೈಲಿಯ ನಾಟಕ ಮತ್ತು ಯಕ್ಷಗಾನ ಪ್ರದರ್ಶನ ಪ್ರಮುಖ ಆಕರ್ಷಣೆಗಳಾಗಿವೆ. ರಂಗವಸಂತದ ವಿವರಗಳು ಹೀಗಿವೆ:
ದಿನಾಂಕ: ಶನಿವಾರ, ಮಾರ್ಚ್ 22, 2008.
ಸಮಯ: ಮಧ್ಯಾಹ್ನ 3ರಿಂದ ಸಂಜೆ 7 ರವರೆಗೆ.
ಸ್ಥಳ: ವೆಟರನ್ಸ್ ಮೆಮೋರಿಯಲ್ ಸೆಂಟರ್, 203, ಈಸ್ಟ್ 14 ಸ್ಟ್ರೀಟ್, ಡೇವಿಸ್, ಕ್ಯಾಲಿಫೋರ್ನಿಯ, 95616.
[Venue: Veterans Memorial Center, 203 East 14th street, Davis, CA 95616.]
ನಾಟಕ: "ಸಿಂಗಾರೆವ್ವ ಮತ್ತು ಅರಮನೆ" : ಬೆಂಗಳೂರಿನ ಸುಪ್ರಸಿದ್ದ "ಸಮುದಾಯ" ರಂಗತಂಡದ ಲಕ್ಷ್ಮಿ ಚಂದ್ರಶೇಖರ್ ( ಮಾಯಮೃಗ, ಗೃಹಭಂಗ ಮುಂತಾದ ಧಾರವಾಹಿಗಳ ಖ್ಯಾತಿಯ) ಅವರಿಂದ. ಡಾ|| ಚಂದ್ರಶೇಖರ ಕಂಬಾರರ ಕಾದಂಬರಿಯನ್ನಾದರಿಸಿದ ಏಕವ್ಯಕ್ತಿ ಅಭಿನಯ.
ಯಕ್ಷಗಾನ: ಪ್ರಸಂಗ "ಕಂಸವಧೆ" : ಬೇ ಏರಿಯಾದ ಪ್ರಸಿದ್ಧ "ಯಕ್ಷ ರಂಗ" ತಂಡದವರಿಂದ. ನಿರ್ದೇಶನ: ಕೆ. ಜೆ. ಗಣೇಶ, ಕಿದಿಯೂರು.
ಭಾಗವತರು: ಕೆ. ಜೆ. ಗಣೇಶ, ಸಂಗೀತ: ಚಿನ್ಮಯ ಹೆಗ್ಡೆ, ಚಂಡೆ: ವಿವೇಕ್ ಭಟ್ ಮತ್ತು ತೇಜಸ್ ಶೆಟ್ಟಿ, ಕಂಸ: ಅಶೋಕ್ ಉಪಾಧ್ಯಾಯ, ಅಕ್ರೂರ: ಶ್ರೀಪಾದ ಹೆಗ್ಡೆ, ಕೃಷ್ಣ: ಗಿರೀಶ್ ಹೆಗ್ಡೆ, ಬಲರಾಮ: ಶಿವರಾಮ ಭಟ್, ಗೋಪಿಕೆ: ಅಲಕ ಜೋಷಿ ಮತ್ತು ಉಷಾ ಹೆಬ್ಬಾರ್, ರಾಜಕ: ಗೋಪಾಲ್ ಭಟ್, ಚಾನೂರ: ವೆಂಕಟ ಭಟ್ ಹಾಗು ಮಸ್ಥಿಕ: ವಿಕಾಸ್ ಅಗರ್ಥ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ಸಾಕ್ರಮೆಂಟೋ ಕನ್ನಡ ಸಂಘ. http://sackannadasangha.org/












Click it and Unblock the Notifications