• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಲಿಮಿಟೆಡ್‌’ ಸಿಂಗಪೂರಿಗರಿಗೆ ‘ಬಹುರಂಗಿ ರಂಗಾನುಭವ’!

By Staff
|

ಸುಬ್ಬರಾಯಭಟ್ಟರಿಂದ ರಂಗತಾಲೀಮು ಶಿಬಿರ, ಜೊತೆಗೊಂದು ನಾಟಕ ‘ಯಾತ್ರೆ’. ಎಲ್ಲಾ ಮುಗಿದ ಮೇಲೆ ಮತ್ತೆಮತ್ತೆ ನೆನೆಯುವಂತೆ ಮಾಡುವ ಭೋಜನ! ಇದಕ್ಕಿಂತ ಇನ್ನೇನು ಬೇಕು...

Subray Bhat demonstrating the art of makeup‘ಬಣ್ಣವೇ ಬಣ್ಣ ಹಾಗೂ ಬಹುರಂಗಿ ರಂಗಾನುಭವ’ ಎಂಬ ಕಾರ್ಯಕ್ರಮ ಜಿ.ಐ.ಎಸ್‌.ಎಸ್‌. ಶಾಲೆಯಲ್ಲಿ ಫೆಬ್ರವರಿ 25ರಂದು ನಡೆಯಲಿದೆ ಎಂದು ಸಿಂಗಪುರ ಕನ್ನಡ ಸಂಘದ ಈ-ಮೇಲ್‌ ಬಂದಿತ್ತು. ‘ಬಣ್ಣವೇ ಬಣ್ಣ’ ಇದು 9.30 ಯಿಂದ 4.00ವರೆಗೆ. ಸಂಜೆ ನಾಲ್ಕರಿಂದ ‘ಬಹುರಂಗಿ ರಂಗಾನುಭವ’ ಬಹುಮುಖ ಪ್ರತಿಭೆಯ ಸುಬ್ರಾಯ ಭಟ್‌ ಅವರಿಂದ ನಡೆಸಲ್ಪಡುವ ಕಾರ್ಯಕ್ರಮ ಎಂದಿತ್ತು.

‘ಬಣ್ಣವೇ ಬಣ್ಣ’ ಕ್ಕಿಂತ ‘ಬಹುರಂಗಿ ರಂಗಾನುಭವ’ ರಂಗಾಗಿರಬಹುದೆಂದು ಮಧ್ಯಾಹ್ನದ ಕಾರ್ಯಕ್ರಮಕ್ಕೆ ಹೋದೆ. ಬಣ್ಣವೇ ಬಣ್ಣ ಶಿಬಿರ ಇನ್ನು ಮುಗಿದಿರಲಿಲ್ಲ. ತೆರೆದ ಅರ್ಧ ಬಾಗಿಲಿನಿಂದ ಕಂಡದ್ದು ನಾಲ್ಕರಿಂದ ಐವತ್ತರವರೆಗಿನ ಚಿಕ್ಕ ಗುಂಪು. ಎಲ್ಲರ ಕೈಯಲ್ಲಿ ಬಣ್ಣದ ಮೇಕಪ್ಪಿನ ಬಾಕ್ಸ್‌. ಒಬ್ಬನ ಮುಖದಲ್ಲಿ ಪೌಡರ್‌ ಚುಕ್ಕೆ, ಮತ್ತೋರ್ವರ ಮುಖ ಕಾಣದಂತೆ ಬಿಳಿಯ ಕ್ರೀಮ್‌, ಇನ್ನೋರ್ವಳು ಕಣ್ಣಿಗೆ ಕಾಡಿಗೆ ಹಚ್ಚಿಕೊಳ್ಳುತ್ತಿದ್ದರೆ ಪ್ಯಾಂಟ್‌-ಶರ್ಟ್‌ ತೊಟ್ಟ ಮಹಿಳೆಗೆ ದುಪ್ಪಟ್ಟಾ ಸೀರೆ. ಇನ್ನು ಮೀಸೆ ಬಾರದ ಪುಟಾಣಿಗೆ ತಿದ್ದಿದ ಡೊಂಕಿನ ಪೆನ್ಸಿಲ್‌ ಮೀಸೆ, ಮೀಸೆ ಇರದ ವಯಸ್ಕನಿಗೆ ನೈಜ ಕೂದಲಿನ ಅಂಟಿನ ಮೀಸೆ. ಒಬ್ಬರು ತಲೆಗೆ ಗೌಡನ ಟವೆಲ್‌, ಮತ್ತೊಬ್ಬ ಪ್ಯಾಂಟಿನ ಪಂಚೆಧಾರಿ. ಮಹಿಳೆಯರಿಗೆ ವಿಚಿತ್ರ ಡ್ರೆಸ್‌ ಸೆಲ್ವಾರ್‌-ಕಮೀಜಿನ ದುಪ್ಪಟ್ಟಾ ಸೀರೆಯ ಹೊದಿಕೆಯಾಗಿತ್ತು.

Workshop on theatre by Subray Bhat of Bangaloreಎಲ್ಲರೂ ಬಣ್ಣ ಹಚ್ಚಿಕೊಳ್ಳೂತ್ತಾ ತಮ್ಮ ವೇಷಭೂಷಣಗಳನ್ನು ಒಪ್ಪ-ಓರ್ಪಡಿಸಿಕೊಳ್ಳುವುದರಲ್ಲಿ ಮಗ್ನರಾಗಿದ್ದರು. ಬೋರ್ಡಿನ ಮೇಲೆ performance, audience, stage, subject ಎಂದು ಬರೆದಿತ್ತು. ಇವು ನಾಲ್ಕು ಇದ್ದಲ್ಲಿ ಮಾತ್ರ ‘ರಂಗಾನುಭವ’, ‘ಬಣ್ಣವೇ ಬಣ್ಣ’ದ ಶೀರ್ಷಿಕೆ ‘ರಂಗ ತಾಲೀಮು’ ಎಂದರಿತೆ. ‘ಸೈಲೆನ್ಸ್‌ ಪ್ಲೀಸ್‌’ ಎಂದು ಗದರುತ್ತಾ, ಹಾಗಲ್ಲ ಹೀಗೆ ಎಂದು ಸಲಹೆ ನೀಡುತ್ತಾ ಅತ್ತಇತ್ತ ಸುಳಿದಾಡುತ್ತಿದ್ದರು ಶಿಬಿರದ ಮೇಷ್ಟ್ರು ‘ಸುಬ್ರಾಯ ಭಟ್ಟರು’.

Participants having fun‘ಯಾತ್ರೆ’ : ಇದು ರಂಗತಾಲೀಮಿನಲ್ಲಿ ರಚಿತಗೊಂಡ ಒಂದು ನಾಟಕ. ನಿರ್ದಿಷ್ಟ ಗುರಿ ಹೊತ್ತು ಜಾತ್ರೆಗೆ ಹೋಗಿ ದೇವರನ್ನು ಕಾಣುವ ತವಕದಿಂದ ಹೊರಡುವ ಒಂದು ಹಳ್ಳಿಯ ಯಾತ್ರಿಗಳ ಗುಂಪು. ನಡೆದಂತೆ ದಾರಿಯಲ್ಲಿ ಬರುವ ಪ್ರಕೃತಿಯ ಪರಿಸರದ ಚಿತ್ರಣ ಹಸಿರು, ನೀರು, ಗಾಳಿ, ಗುಡ್ಡ, ನದಿ, ನಾವಿಕ ಎಲ್ಲವೂ ಅಲ್ಲಿತ್ತು. ಗುಂಪುಗೂಡಿ ನಡೆದ ಹಳ್ಳಿಯ ಜನರ ಸಂಭಾಷಣೆ ಆಯಾಸವನ್ನಿರಯದಂತೆ ಮಾಡಲು ನೃತ್ಯ, ಹಾಡು, ಹಾಸ್ಯ, ಹರಟೆ ಜೊತೆಗೆ ಗಲಾಟೆ, ಜಗಳ, ಹಂಚಿ ತಿನ್ನುವಿಕೆ, ಸುಖ-ದುಃಖ, ನೋವು-ನಲಿವುಗಳ ಭಾವನೆಗಳ ಸಮಾವೇಶ ತುಂಬಿತ್ತು. ದಾರಿಯಲ್ಲಿ ಎದುರಾಗುವ ಕಷ್ಟಗಳನ್ನು ಎದುರಿಸುವ ಒಗ್ಗಟ್ಟಿತ್ತು. ಕಡೆಯಲ್ಲಿ ದೇವರನ್ನು ಕಂಡಾಗ ಸಿಗುವ ಮಹದಾನಂದದ ಸನ್ನಿವೇಶವಿತ್ತು.

ರಂಗತಾಲೀಮಿಗೆಂದೇ ರಚಿತಗೊಂಡಿದ್ದ ಯಾತ್ರೆ ಎಂಬ ರೂಪಕವನ್ನು ನೋಡಿದಾಗ ನನಗೆ ಅನಿಸಿದ್ದು : ಇಂದು ‘ನಾನು ನನ್ನ’ ಇದೇ ನನ್ನ ಜಗತ್ತು ಎನ್ನುವ ಕಾಲವಿದು. ‘ನಾವು ನಮ್ಮವರು’, ವಸುದೈವ ಕುಟುಂಬಕಮ್‌ ಎನ್ನುವುದನ್ನು ಭಟ್ಟರು ತಮ್ಮ ಯಾತ್ರೆಯಲ್ಲಿ ಸುಂದರವಾಗಿ ನಿರೂಪಿಸಿ ‘ನಾವು ನಮ್ಮವರು’ ಎಂಬುದರಲ್ಲಿ ಬಲವಿದೆ ಎಂಬ ಸಂದೇಶವನ್ನು ತಿಳಿಯ ಪಡಿಸುವ ಪ್ರಯತ್ನ ಮಾಡಿದ್ದಾರೆ ಎಂದು.

ಇದು ಮುಗಿದಂತೆ ಭಟ್ಟರು ಮಾತನಾಡುತ್ತಾ ‘ವ್ಯಕ್ತಿ ವಿಕಾಸವೇ ನಾಟಕದ ಮೂಲ’. ನಾಟಕ ಎಂಬುದು ಸತ್ಯ-ಅಸತ್ಯಗಳ ನಡುವೆ ನಡೆಯುವುದು. ನಾಟಕದಲ್ಲಿ ಯಾವ ಪಾತ್ರಗಳೂ ಚಿಕ್ಕದಲ್ಲ, ಯಾವುದೂ ದೊಡ್ಡದಲ್ಲ. ಎಲ್ಲಾ ಪಾತ್ರಗಳಿಗೂ ಒಂದು ನಿರ್ದಿಷ್ಟ ರೂಪ ಇರುತ್ತದೆ. ನಾಟಕ ನೋಡಿದ ಮೇಲೆ ಅದರಲ್ಲಿ ಅರಿತಿದ್ದೇನು, ಮನ ತಟ್ಟಿದುದೇನು ಎಂಬುದು ಮೆಲುಕು ಹಾಕುವಂತಿರಬೇಕು ಎಂದರು.

‘ಬಹುರಂಗೀ ರಂಗಾನುಭವ’ ನವರಸಗಳನ್ನು, ವಿವಿಧ ಭಾವನೆಗಳ ಹೊರಸೂಸುವಿಕೆ, ಕ್ರಿಯಾಶೀಲತೆ, ಪ್ರತಿಯೋರ್ವ ಪಾತ್ರಗಳಲ್ಲಿನ ಭಾವನೆ, ವ್ಯಕ್ತಿತ್ವವನ್ನು ತಮ್ಮ 50 ವರುಷಗಳ ನಾಟಕದ ಸುಧೀರ್ಘ ಪಯಣದಲ್ಲಿ ನಡೆದ ‘ಬಹುರಂಗಿ ರಂಗಾನುಭವಗಳನ್ನು’ ಹಾಗೂ ಸ್ವಾನುಭವಗಳನ್ನು ನಮ್ಮಲ್ಲಿ ಹಂಚಿಕೊಳ್ಳುವರೆಂದು ಕಾದಿದ್ದ ನನಗೆ ನಿರಾಶೆ ಕಾದಿತ್ತು. ಇಷ್ಟರಲ್ಲಿ ಗಂಟೆೆ 6.30 ಆಗಿತ್ತು. ಕಾರ್ಯಕ್ರಮ ಮುಗಿದಿತ್ತು.

ಕನ್ನಡಸಂಘದ ಕಾರ್ಯಕ್ರಮ ಎಂದರೆ ಫಿಕ್ಸ್‌ ಪ್ರೋಗ್ರಾಮ್‌. ಪ್ರಾರ್ಥನೆ, ಮಕ್ಕಳಿಂದ ನಾಟಕ, ಹಾಡು, ನೃತ್ಯ ನಂತರ ಸಂಘದ ಸದಸ್ಯರಿಂದ ಹಾಡು, ನಾಟಕ, ನೃತ್ಯ, ಪ್ರಹಸನ ಕಡೆಗೆ ವಂದನಾರ್ಪಣೆ ಜೊತೆಗೆ ಸವಿಯಾದ ಊಟ ಅನ್ನುವ ಪ್ರೋಗ್ರಾಂ ಫಿಕ್ಸ್‌ ಆಗಿ ಹೋಗಿತ್ತು. ಏನ್‌ ಮಾಡ್ತೀರಾ. ಸಿಂಗಪುರ ಚಿಕ್ಕ ದೇಶ. ಎಲ್ಲವೂ ಲಿಮಿಟೆಡ್‌ ಹಾಗೇ ಕನ್ನಡಿಗರು ಲಿಮಿಟೆಡ್‌, ಜಾಗ ಲಿಮಿಟೆಡ್‌, ಸ್ವಯಂ ಸೇವಕರು, ಹಣ ಲಿಮಿಟೆಡ್‌ ಒಂಥರಾ ‘ಲಿಮಿಟೆಡ್‌ ಮೀಲ್ಸ್‌ ಮೆನು’. ಆದ್ರೆ ಇದು ಎಲ್ಲದಕ್ಕೂ ಅನ್ವಯಿಸುವುದಿಲ್ಲ!

ಸುಬ್ರಾಯಭಟ್ಟರ ಬಗ್ಗೆ ಇನ್ನಷ್ಟು ವಿವರಗಳು... ನಿರೀಕ್ಷಿಸಿ...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more