• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಿಕಾಗೊ ಕನ್ನಡ ಸಮ್ಮೇಳನಕ್ಕೆ 7000 ಕನ್ನಡಿಗರು

By Staff
|

Ramesh Gowda, AKKA Presidentಬೆಂಗಳೂರು, ಡಿ. 27 : ಉತ್ತರ ಅಮೆರಿಕಾ ಕನ್ನಡ ಕೂಟಗಳ ಆಗರ (ಅಕ್ಕ)ಎರಡು ವರ್ಷಕ್ಕೊಮ್ಮೆ ಹಮ್ಮಿಕೊಳ್ಳುವ ವಿಶ್ವ ಕನ್ನಡ ಸಮ್ಮೇಳನ ಈ ಬಾರಿ ಶಿಕಾಗೋ ನಗರದಲ್ಲಿ ನಡೆಯುತ್ತದೆ. ಕನ್ನಡ ಪರಂಪರೆ ಮತ್ತು ಕನ್ನಡಿಗರ ಪ್ರತಿಭೆಯನ್ನು ಬಿಂಬಿಸುವ ಉದ್ದೇಶದ ಸಮ್ಮೇಳನಕ್ಕೆ ಈ ಬಾರಿ ಜಗತ್ತಿನ ನಾನಾ ಮೂಲೆಗಳಿಂದ ಸುಮಾರು 7000 ಕನ್ನಡಿಗರನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅಕ್ಕ ಅಧ್ಯಕ್ಷ ರಮೇಶ್ ಗೌಡ ಹೇಳಿದ್ದಾರೆ. ಸಮ್ಮೇಳನದ ದಿನಾಂಕ ಆಗಸ್ಟ್ 29-31, 2008.

ಕರ್ನಾಟಕದ ಸಮೃದ್ಧ ಸಂಸ್ಕೃತಿ, ಭವ್ಯ ಪರಂಪರೆ, ರಾಜ್ಯಕ್ಕೆ ಲಭ್ಯವಾಗಿರುವ ವಿಜ್ಞಾನ ತಂತ್ರಜ್ಞಾನದ ಇತ್ತೀಚಿನ ಫಲಗಳು ಹಾಗೂ ಬರಲಿರುವ ದಶಕಗಳಲ್ಲಿ ಕನ್ನಡಿಗರು ಕಾಣಬಯಸುವ ಕನಸುಗಳನ್ನು ಚಿತ್ರಗಳ ಮೂಲಕ, ಛಾಯಾಚಿತ್ರಗಳ ಮೂಲಕ, ಆಡಿಯೊ, ವಿಡಿಯೋ ಮೂಲಕ ಅನಾವರಣಗೊಳಿಸುವ ವಿಶಿಷ್ಟ ಕಾರ್ಯಕ್ರಮಗಳನ್ನು ಸಮ್ಮೇಳನ ಸಂದರ್ಭಕ್ಕಾಗಿ ಆಯೋಜಿಸುವ ಸಿದ್ಧತೆಗಳು ಭರದಿಂದ ಸಾಗಿವೆ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ಗುರುವಾರ ತಿಳಿಸಿದರು.

ಅಕ್ಕ ಸಂಸ್ಥೆಯ ಬಾಹುಳ್ಯದಲ್ಲಿ ಅಮೆರಿಕಾದಲ್ಲಿ 45ಕ್ಕೂ ಹೆಚ್ಚು ಕನ್ನಡ ಕೂಟ, ಸಂಘ, ಸಂಸ್ಥೆಗಳಿವೆ. ಆ ಸಂಸ್ಥೆಗಳ ಪಾಲುದಾರಿಕೆ ಮತ್ತು ಸಹಭಾಗಿತ್ವದ ನೆರವಿನಿಂದ ನಡೆಯುವ 5ನೇ ವಿಶ್ವ ಸಮ್ಮೇಳನಕ್ಕೆ ಪ್ರತಿನಿಧಿಗಳನ್ನು ನೊಂದಾಯಿಸುವ ಪ್ರಕ್ರಿಯೆ ಈಗಾಗಲೆ ಆರಂಭವಾಗಿದೆ ಎಂದೂ ಅವರು ತಿಳಿಸಿದರು. ಬರಲಿರುವ ಸಮ್ಮೇಳನದ ಆತಿಥ್ಯವನ್ನು ಶಿಕಾಗೋ ಕನ್ನಡಿಗರ "ವಿದ್ಯಾರಣ್ಯ ಕನ್ನಡ ಕೂಟ" ವಹಿಸಿಕೊಂಡಿದೆ.

ಅಕ್ಕ ಸಂಸ್ಥೆಯ ಇತರ ಕಾರ್ಯಚಟುವಟಿಕೆಗಳ ಸಂಕ್ಷಿಪ್ತ ಪರಿಚಯ ನೀಡಿದ ರಮೇಶ್ ಗೌಡ ಅವರು, ಅಕ್ಕ ಬಳಗದ ವತಿಯಿಂದ ಕೈಗೊಳ್ಳಲಾಗಿರುವ ಸಮಾಜಮುಖಿ ಹಾಗೂ ಸಹಾಯಾರ್ಥ ಕಾರ್ಯಕ್ರಮಗಳನ್ನು ವಿವರಿಸಿದರು. 2005ರಲ್ಲಿ ಅಕ್ಕ ರೂಪಿಸಿದ್ದ "ಮನೋರಂಜನಿ" ಮನರಂಜನಾ ಕಾರ್ಯಕ್ರಮದ ಮೂಲಕ ನಿಧಿ ಸಂಗ್ರಹಿಸಿ ಕರ್ನಾಟಕದ 13 ಶಾಲೆಗಳಿಗೆ ಧನಸಹಾಯ ಮಾಡಲಾಗಿದೆ. ಈ ಹಣ ಮುಖ್ಯವಾಗಿ ಶಾಲೆಗಳ ಕಟ್ಟಡ ದುರಸ್ತಿ, ಮಕ್ಕಳಿಗೆ ಸಮವಸ್ತ್ರ ಮತ್ತು ಶೈಕ್ಷಣಿಕ ಸಲಕರಣೆಗಳನ್ನು ಶಾಲೆಗಳಿಗೆ ಒದಗಿಸುವುದೇ ಆಗಿದೆ ಎಂದು ರಮೇಶ್ ತಿಳಿಸಿದರು.

ಅಕ್ಕ ಚಾರಿಟಿ ಸಂಸ್ಥೆ ಇತ್ತೀಚೆಗೆ ನೂರು ಸಾವಿರ ಡಾಲರುಗಳ ನಿಧಿಯನ್ನೂ ಸಂಗ್ರಹಿಸಿತು. ಈ ಮೊತ್ತಕ್ಕೆ ಸರಿಸಮಾನವಾದ ಮೊತ್ತವನ್ನು ಸಿಲಿಕಾನ್ ವ್ಯಾಲಿಯಲ್ಲಿರುವ ಕನ್ನಡಿಗ, ಸಾಫ್ಟ್ ವೇರ್ ಉದ್ಯಮಿ ಬಿ.ವಿ. ಜಗದೀಶ್ ಅವರು ನೀಡಿದ್ದಾರೆ. ಈ ಸಂಪನ್ಮೂಲವನ್ನು ಬೆಂಗಳೂರಿನಲ್ಲಿ ತಲೆ ಎತ್ತುತ್ತಿರುವ ಶಂಕರ್ ಐ ಫೊಂಡೇಶನ್ ಆಸ್ಪತ್ರೆಗೆ ದೇಣಿಗೆಯಾಗಿ ನೀಡಲಾಗಿದೆ ಎಂದು ಅವರು ಹೇಳಿದರು.

2007ರ ನವಂಬರ್ ತಿಂಗಳಲ್ಲಿ ಸಹಾಯಾರ್ಥ ಉದ್ದೇಶದ ಮತ್ತೊಂದು ಕಾರ್ಯಕ್ರಮ "ರಸಮಂಜರಿ-2007" ರೂಪಿಸಿಲಾಗಿತ್ತು. ಕರ್ನಾಟಕದಿಂದ ಅಮೆರಿಕಾಗೆ ಆಗಮಿಸಿ ರಸಮಂಜರಿ, ನಗೆಮಂಜರಿ ನಡೆಸಿಕೊಟ್ಟ ಐದು ಮಂದಿ ಕಲಾವಿದರು (ಮೈಸೂರು ಆನಂದ್, ರಿಚರ್ಡ್ ಲೂಯಿಸ್, ಶಮಿತಾ ಮಲ್ನಾಡ್, ಸುನಿಲ್ ರಾವ್, ಎಲ್. ಎನ್, ಶಾಸ್ತ್ರೀ)ನಿಧಿಸಂಗ್ರಹಣೆ ಕಾಯಕಕ್ಕೆ ನೆರವಾದರು. ಈ ನಿಧಿಯನ್ನು ಕರ್ನಾಟಕ ರೋಟರಿ ಕ್ಲಬ್ ಸಹಯೋಗದಲ್ಲಿ ಸೂಕ್ತ, ಅರ್ಹ ಆನಾಥಾಶ್ರಮಗಳಿಗೆ ಸದ್ಯದಲ್ಲೇ ವಿತರಿಸಲಾಗುವುದು ಎಂದು ಅವರು ತಿಳಿಸಿದರು.

ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆಯೊಂದಿಗೆ ಅಕ್ಕ ಸಂಸ್ಥೆಯು ಕೈಜೋಡಿಸಿದ್ದು ಕನ್ನಡ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ಪೂರೈಸುವ ಯೋಜನೆಯೊಂದನ್ನು ಹಾಕಿಕೊಂಡಿದೆ. ಈ ಯೋಜನೆಗೆ ಪುಸ್ತಕಗಳನ್ನು ಅಮೆರಿಕಾದ ಸರಕಾರ ನೀಡುತ್ತಿದೆ ಎಂದು ಅಕ್ಕದ ಇನ್ನೊಬ್ಬ ನಿರ್ದೇಶಕ ಮತ್ತು ಟ್ರಸ್ಟಿ ಪ್ರಭುದೇವ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಅಕ್ಕ ದತ್ತಿನಿಧಿ ಸಮಿತಿ ಸದಸ್ಯ ಹಳೆಕೋಟೆ ವಿಶ್ವಾಮಿತ್ರ ಮತ್ತು ಅಕ್ಕದ ಭಾರತ ಸಂಯೋಜನಾಧಿಕಾರಿ ಎಂ. ಕೃಷ್ಣಮೂರ್ತಿ ಉಪಸ್ಥಿತರಿದ್ದರು.

( ದಟ್ಸ್ ಕನ್ನಡ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more