• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹ ಹ್ಹಾ ರಿಚಿ ಆನಂದ್ ಸಖತ್ ಹಾಸ್ಯ ಸಂಜೆ

By Staff
|

Richi and Anand with Vasantha Shashiನಿಂತಲ್ಲಿ ಕುಳಿತಲ್ಲಿ ಎಲ್ಲಿಬೇಕಾದರಲ್ಲಿ ಕಂಡಲ್ಲಿ ಹಾಸ್ಯ ಗುಂಡುಗಳನ್ನು ಹಾರಿಸುವ 'ರಿಚಿ ಆನಂದ್' ಜೋಡಿ ನಮ್ಮೂರಿಗೂ ಬಂದಿತ್ತು. ನಮಗಂತೂ ನಕ್ಕು ನಕ್ಕು ಸಾಕಾಯಿತು. ವೇವ್ ಜ್-ಮ್ಯೂಸಿಕ್ (http://www.wavez-music.com/) ಖ್ಯಾತಿಯ ವಸಂತಾ ಶಶಿ ಅವರ ನಿವಾಸದಲ್ಲಿ ಕರ್ನಾಟಕದ ಲಾರೆಲ್ ಹಾರ್ ಡಿ ಎನ್ನಬಹುದಾದ ರಿಚಿ ಮತ್ತು ಅನಂದ್ ಹಾಸ್ಯ ಪಂಡಿತರಿಂದ "ಸಕ್ಕತ್ ಹಾಸ್ಯ ಸಂಜೆ" ಕಾರ್ಯಕ್ರಮದ ಬಗ್ಗೆ ಶಶಿ ಅವರ ಒಂದು ವರದಿ.

ಎಂದಿನಂತೆ ರಿಚಿ ಹಾಗು ಅನಂದ್ ಅವರು ತಮ್ಮ "ಅಕ್ಕಳ ಮನರಂಜಿನಿ" ಕಾರ್ಯಕ್ರಮಗಳನ್ನೆಲ್ಲಾ ಮುಗಿಸಿಕೊಂಡು ಭಾರತಕ್ಕೆ ತೆರಳಬೇಕಿತ್ತು. ಅಕಸ್ಮಾತಾಗಿ ಅವರು ಒಂದು ವಾರ ತಮ್ಮ ಪ್ರಯಾಣ ಮುಂದೆ ಹಾಕಿದ್ದರಿಂದ ಅವರಿಬ್ಬರ ಹಾಸ್ಯದ ಹೊನಲನ್ನು ಸವಿಯುವ ಭಾಗ್ಯ ನಮ್ಮದಾಗಿತ್ತು. ಮನೆಯಲ್ಲಿ, ನಿಂತಲ್ಲಿ, ಕೂತಲ್ಲಿ, ಸೈಟ್ ಸೀಯಿಂಗ್ ಹೋದಲ್ಲಿ, ಎಲ್ಲೆಲ್ಲು ಹಾಸ್ಯದ ತುಣುಕುಗಳು ಇವೆ ಅನ್ನುವುದಕ್ಕೆ ಅವರು ನಮ್ಮೊಂದಿಗಿದ್ದ ಒಂದು ವಾರದ ಅವಧಿಯಲ್ಲಿ ಹರಿಸಿದ ಹಾಸ್ಯ ಚಟಾಕಿಗಳೆ ಸಾಕ್ಷಿ. ಹಾಸ್ಯಕ್ಕೆ ಭಾಷೆ ಬೇಕಿಲ್ಲ ಅನ್ನುವುದಕ್ಕೆ ಅವರು ಕನ್ನಡ ಒಂದೇ ಅಲ್ಲದೆ, ತಮಿಳು, ತೆಲುಗು, ತುಳು, ಮಲಯಾಳಮ್, ಗುಜರಾತಿ, ಅಂಗ್ಲ ಹೀಗೆ ಎಲ್ಲಾ ಭಾಷೆಯಲ್ಲೂ ಮತ್ತು ಕೆಲವು ಕಡೆ ಮಾತೇ ಇಲ್ಲದೆ ಹಾಸ್ಯದ ಚಟಾಕಿ ಹಾರಿಸಿದರು.

ನವಂಬರ್ 24ರಂದು ಅಮೇರಿಕೆಯ ಥಾಂಕ್ಸ್ ಗಿವಿಂಗ್ ವೀಕ್‌ಎಂಡ್‌ನಲ್ಲಿ "ರಿಚಿ ಆನಂದ್-ಸಕ್ಕತ್ ಹಾಸ್ಯ ಸಂಜೆ" ಕಾರ್ಯಕ್ರಮವನ್ನು ವಸಂತಾ ಶಶಿ ಅವರ ನಿವಾಸದಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮ ಇನ್ನು ಶುರುನೇ ಆಗಿಲ್ಲ ಆವಗ್ಲೇ ಇಲ್ಲಿನ ಯುವ ಪೀಳಿಗೆಯವರ ದಂಡೇ ಹಾಜರಿತ್ತು. ಅಂದು ಕಾರ್ಯಕ್ರಮದ ಮೊದಲಿನಿಂದ ಕೊನೆಯವರೆಗೂ ಹಾಸ್ಯ! ಹಾಸ್ಯ!! ಹಾಸ್ಯ!!! ತುಂಬಿ ತುಳುಕಾಡಿ, ಆನೆ ಹಬ್ಬವೂ ಆದ್ದರಿಂದ, ಕಾರ್ಯಕ್ರಮದ ಮೊದಲಿಗೆ ಎಂದಿನಂತೆ ಗಜಲ್ ಧಾಟಿಯಲ್ಲಿ ಗಣಪನಿಗೆ ನಮನ ಹಾಗು ವಿಭಿನ್ನ ರೀತಿಯಲ್ಲಿ ರಿಚಿ ಆನಂದ್‌ರಿಗೆ ಕರತಾಡಣದ ಬದಲಿಗೆ "ರಿಚಿ ಅನಂದ್ ಅವರು ಬಿದ್ ಬಿದ್ ನಗುಸ್ತಾರೆ ನಗುವ ಬನ್ನಿ ನಾವು" ಎಂದು ಅನಂದ್‌ರ ಕೋರಿ ಹಾಸ್ಯದ ವೇದಿಕೆಗೆ ಬರಮಾಡಿಕೊಂಡರು.

New Jersy Kannada lovers with Richi and Anandರಿಚಿ ಅವರು ಇನ್ನು ವೇದಿಕೆಗೆ ಬರ್ತಾ ಇದ್ದಂಗೆ... ಅಹಾ!! ವಸಂತಾ ಅವರ ಗಣಪನ ನಮನ ಲತಾ ಮಂಗೇಶ್ಕರ್ ಗಣಪನ್ನ ಕರೆದಾಗಿತ್ತಲ್ಲ !!! ಎಂದು ಹಾಸ್ಯ ಚಟಾಕಿ ಹಾರಿಸಿದರು. ಜಬ್ಬರ್ ಇಂದ ಹೆಬ್ಬಾರ್, ಮಕ್ಕಳಿಂದ ಹಿಡಿದು ಮುದಿಕಿಯವರೆಗೂ, ಪ್ರಾಣಿಗಳಿಂದ ಹಿಡಿದು ಮಾನವ ಜೀವಿಗಳವೆರೆಗೂ, ಇದಲ್ಲದೆ ಒಬ್ಬ ಮನುಷ್ಯನಲ್ಲಿ ಹಾಸ್ಯ ಎಲ್ಲಿ ಹೇಗೆ ಯಾವ ಕಾರಣಗಳಿಗೆ ಹುಟ್ಟುತ್ತೆ ಅನ್ನೋ ಉದಾಹರಣೆಯಲ್ಲಿ ಚಾರ್ಲಿ ಚಾಪ್ಲಿನ್ ಇಂದ ಹಿಡಿದು ತಮ್ಮ ಅಥವಾ ಅನಂದ್‌ವರೆಗೂ ಗಂಭೀರವಾಗಿ ವಿಶ್ಲೇಷಿಸಿದರು.

ಅನಂದ್ ಅವರು ತಮ್ಮ ಮೈಕೇಲ್ ಜಾಕ್ಸನ್ ನೃತ್ಯ ಅಭಿನಯದಲ್ಲಾಗಲಿ, ಘಂಟಸಾಲನ ಹಾಡಿನಲ್ಲಾಗಲಿ, ಸಿನೇಮಾ ರಂಗದಲ್ಲಿ ನಡೆದುಬಂದ ಸಂಗೀತ ನೃತ್ಯದ ಶೈಲಿ, ಪೊಲೀಸ್ ಪೇದೆ ಮೈಮ್, ವಿವಿಧ ವಿನೋದಾವಳಿ ಕ್ರಿಕೆಟ್ ಕಾಮೆಂಟರಿ ತುಂಬಾ ಮಜ ಕೊಡ್ತು. ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಇಳಿದಾಗ ನಡೆದ ಪ್ರಸಂಗದಿಂದ ಹಿಡಿದು ಅವರ ಅಮೇರಿಕೆಯ ಸುತ್ತ ಮುತ್ತ ಪ್ರವಾಸ, ಕಾರ್ಯಕ್ರಮಗಳಲ್ಲಿ ನಡೆಯುತ್ತಿದ್ದ ಪಾಟ್-ಲಕ್ ಭರಾಟೆಯ ಅನುಭವಗಳ ಮೆಲುಕನ್ನು ಸ್ಪಾನ್ ಟೇನಿಯಸ್ ತಿಳಿ ಹಾಸ್ಯದ ಲೇಪನವಿಟ್ಟು ಸತತವಾಗಿ 3 ಗಂಟೆಗಳ ಕಾಲ ಸಭಿಕರನ್ನೆಲ್ಲಾ ಹೊಟ್ಟೆ ಹುಣ್ಣಾಗುವಂತೆ ನಗಿಸಿದ ಆ ಸಂಜೆ ಗಮ್ಮತ್ತಾಗಿತ್ತು.

ಕೊನೆಯಲ್ಲಿ ವಸಂತಾ ಶಶಿ ಅವರ ವೇವ್‌ಜ್ ಮ್ಯೂಸಿಕ್ ವತಿಯಿಂದ ಹಾಗು ಅಲ್ಲಿ ನೆರೆದಿದ್ದ ಸಭಿಕರೆಲ್ಲರ ಪರವಾಗಿ ರಿಚಿ ಹಾಗು ಅನಂದ್ ಅವರಿಗೆ ಶಾಲು ಹೊದಿಸಿ ಕಿರುಕಾಣಿಕೆಗಳನ್ನಿತ್ತು ಆತ್ಮೀಯವಾಗಿ ಸನ್ಮಾನಿಸಲಾಯಿತು. ಅಂದು ಸಭಿಕರಲ್ಲಿ ಆಗಮಿಸಿದ್ದ ಪು.ತಿ.ನ ಅವರ ಪುತ್ರಿ ಪದ್ಮ ಹಾಗು ರಂಗಾಚಾರ್ ಅವರುಗಳ ಆಶೀರ್ವಾದದೊಂದಿಗೆ ಗೌರವಿಸಲಾಯಿತು.

"ರಿಚಿ ಅನಂದರ ಸಕ್ಕತ್ ಹಾಸ್ಯ ಸಂಜೆಯ" ಕಾರ್ಯಕ್ರಮದ ಸವಿನೆನಪಿಗೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more