ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮಗೆ ನಗೆ ಬಗೆ ತಿಳಿಸಿದ ಚಿಕಾಗೊ ವಸಂತೋತ್ಸವ!

By Staff
|
Google Oneindia Kannada News


‘ಅಮೆರಿಕದಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಹೆಚ್ಚುತ್ತಿದೆ‰’ ಎನ್ನುವ ಸಿ.ಆರ್‌.ಸಿಂಹ ಅವರ ಮಾತು ಅತಿಶಯದ ಮಾತಲ್ಲವೆಂದೆನಿಸುತ್ತದೆ. ಯಾಕೆಂದರೆ ಇಲ್ಲಿನ ಅಪ್ಪಟ ಸಾಹಿತ್ಯ ಕಾರ್ಯಕ್ರಮಕ್ಕೆ 175ಕ್ಕೂಅಧಿಕ ಮಂದಿ ಆಗಮಿಸಿದ್ದರು!

Nagegannadam Gelge book released in Vasantotsava, Chicagoಕನ್ನಡ ಸಾಹಿತ್ಯ ರಂಗ, ಚಿಕಾಗೊ ವಿದ್ಯಾರಣ್ಯ ಕೂಟದ ಸಹಯೋಗದಲ್ಲಿ ಯೋಜಿಸಲಾಗಿದ್ದ ಎರಡು ದಿನದ ವಸಂತೋತ್ಸವ ಕಾರ್ಯಕ್ರಮ ಸಾಹಿತ್ಯದ ದೃಷ್ಟಿಯಿಂದ ಒಂದು ದಾಪುಗಾಲೇ ಸರಿ. ಸ್ಥಳೀಯ ಕಲಾವಿದರಿಂದ ಸ್ವಾಗತ ಗೀತೆಯಾಂದಿಗೆ ವಸಂತೋತ್ಸವಕ್ಕೆ ಚಾಲನೆ ದೊರೆಯಿತು. ಮೊದಲ ದಿನದ ವಿಶೇಷವೆಂದರೆ -ಕನ್ನಡ ಸಾಹಿತ್ಯಕ್ಕೆ ಅಮೆರಿಕದ ಸಾಹಿತ್ಯ ರಂಗದ ಮಹೋನ್ನತ ಕೊಡುಗೆ ‘ನಗೆಗನ್ನಡಂ ಗೆಲ್ಗೆ’ ಬಿಡುಗಡೆ.

ಈ ಪುಸ್ತಕವನ್ನು ಅಮೆರಿಕ ಹಾಗೂ ಬೆಂಗಳೂರಿನಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಿದ್ದು ಒಂದು ವಿಶೇಷ. ಕನ್ನಡನಾಡಿನ ನಗೆಯ ದಿಗ್ಗಜರನ್ನೆಲ್ಲಾ ನೆನೆಸುವ ಈ ಕಾರ್ಯ ಒಂದೇ ಪುಸ್ತಕದಲ್ಲಿ ಬಂದಿರುವುದು ಒಂದು ವಿಶೇಷ. ಇಂತಹ ಕಾರ್ಯ ಕನ್ನಡದಲ್ಲಿ ಆಗಿರುವುದು ಇದೇ ಮೊದಲ ಕೆಲಸವಿರಬಹುದು. ಈ ಪುಸ್ತಕ ಕನ್ನಡ ನಗೆ ಸಾಹಿತ್ಯದಲ್ಲಿ ಒಂದು ಮೈಲಿಗಲ್ಲೆನ್ನಬೇಕು.

ಈ ಪುಸ್ತಕದಲ್ಲಿ ದಿಗ್ಗಜರನ್ನು ನೆನೆಸುವುದು ಒಂದು ವಿಶೇಷವಾದರೆ, ಇನ್ನೊಂದು ವಿಭಾಗದಲ್ಲಿ ಅನಿವಾಸಿ ಕನ್ನಡಿಗರ ನಗೆ ಲೇಖನಗಳಿಗೆ ಮೀಸಲು ಮತ್ತೊಂದು ವಿಶೇಷ. ನಗೆಯ ಬಗ್ಗೆ ಗಂಭೀರವಾಗಿ ಚಿಂತಿಸುವ ಸಾಹಿತ್ಯ ಹಿತಚಿಂತಕರೆಲ್ಲರಿಗೂ ಈ ಪುಸ್ತಕ ಓದುವ ಅವಕಾಶ ಸಿಗಲೆಂಬುದೇ ನನ್ನ ಹಾರೈಕೆ. ಪುಸ್ತಕದ ಹೊದಿಕೆ ವ್ಯಂಗ್ಯ ಚಿತ್ರಗಳಿಂದ ಬಹಳ ಸುಂದರವಾಗಿ ಹೊರಬಂದಿದೆ.

ಮುನ್ನುಡಿಯಲ್ಲಿ ಹಾಸ್ಯ ತುಂಬಲು ಹೊರಟ ಶ್ರೀನಿವಾಸರಾಜುರವರ ಮಾತುಗಳು, ಅಮೆರಿಕೆಗೆ ಬಂದು ಸಾಹಿತ್ಯದ ಹೊನಲನ್ನು ಹರಿಸುತ್ತಿರುವ ಕೆಲವು ಹಿರಿಯ ಸಾಹಿತಿಗಳಿಗೆ ಮುಜುಗರವಾಗುವಂತಿವೆ. ಹಾಸ್ಯದ ರೀತಿಯಲ್ಲಿ ಹೇಳ ಹೊರಟಿರುವ ಅವರ ಮಾತುಗಳು, ಸ್ವಲ್ಪ ಹಾಸ್ಯದ ಗಡಿಮೀರಿದಂತೆನಿಸುತ್ತದೆ.

ಖ್ಯಾತ ಉಪನ್ಯಾಸಕ, ವಿಮರ್ಶಕ ಡಾ।। ಎಚ್‌ ಎಸ್‌ ರಾಘವೇಂದ್ರರವರ ಬೆನ್ನುಡಿ, ಬೆನ್ನು ತಟ್ಟಿ ಅಮೆರಿಕ ಕನ್ನಡಿಗರ ಸಾಹಿತ್ಯಾಭಿಮಾನಕ್ಕೆ ಹುರಿದುಂಬಿಸುತ್ತಿರುವಂತಿದೆ. ನಾಗ ಐತಾಳರ ಸಂಪಾದಕತ್ವದಲ್ಲಿ ಕನ್ನಡ ಸಾಹಿತ್ಯ ರಂಗ ಹಾಗೂ ಅಂಜಲಿಯ ಸಹಯೋಗದೊಂದಿಗೆ ಪ್ರಕಟಿಸಿದ ‘ಕನ್ನಡದಮರ ಚೇತನ ಮಾಸ್ತಿ’ ಯನ್ನು ಬಿಡುಗಡೆ ಮಾಡಿದವರು ವಿಶೇಷ ಅತಿಥಿ ರಾಘವೇಂದ್ರ ರಾವ್‌ರವರು. ಇವೆರಡೂ ಪುಸ್ತಕದ ಪ್ರಕಾಶಕರು ಬೆಂಗಳೂರಿನ ಅಭಿನವ ಪ್ರಕಾಶನ.

ನಗೆಗನ್ನಡಂ ಗೆಲ್ಗೆಯ ಸಂಪಾದಕರ ಪರವಾಗಿ ಡಾ. ಎಚ್‌ ಕೆ ನಂಜುಂಡ ಸ್ವಾಮಿ ಹಾಗೂ ಕನ್ನಡದಮರ ಚೇತನ ಆಸ್ತಿ ಸಂಪಾದಕರಾದ ಡಾ. ನಾಗ್‌ ಐತಾಳ್‌ರವರು ಪ್ರಕಟಿಸುವ ಸಮಯದಲ್ಲಿ ಅನುಭವಿಸಿದ ತಮ್ಮ ಕಷ್ಟಗಳನ್ನು ಹಂಚಿಕೊಂಡು, ಪುಸ್ತಕ ಹೊರಬರಲು ಸಹಾಯ ಮಾಡಿದ ಎಲ್ಲರಿಗೂ ವಂದನೆ ಸಲ್ಲಿಸಿದರು.

ವಸಂತೋತ್ಸವದ ಮುಖ್ಯ ಕಾರ್ಯಕ್ರಮವಾದ ಮುಖ್ಯ ಅತಿಥಿಗಳ ಭಾಷಣ ರಸವತ್ತಾಗಿತ್ತು. ಹಾಸ್ಯದ ಬಗ್ಗೆ ಗಂಭೀರ ಚಿಂತೆಯ ಹಿನ್ನೆಲೆಯಲ್ಲಿ ಈ ವಸಂತೋತ್ಸವದ ಧ್ಯೇಯವನ್ನಿಟ್ಟಾಗ ಎಲ್ಲಿ ಹಾಸ್ಯೋತ್ಸವದ ಛಾಯೆ ಬೀಳುತ್ತದೋ ಎನ್ನುವ ಭಯವಿದ್ದ ಸಾಹಿತ್ಯ ರಂಗದ ಪದಾಧಿಕಾರಿಗಳ ಅನುಮಾನ ಅ ರಾ ಮಿತ್ರರವರ ಭಾಷಣದಲ್ಲಿ ಹಾಸ್ಯೋತ್ಸವದ ಛಾಯೆ ಬರದಿದ್ದಿದ್ದು ಸಮ್ಮೇಳನ ಧ್ಯೇಯದಲ್ಲಿ ಗೆದ್ದಂತೇ.

ಅ ರಾ ಮಿತ್ರಾರವರ ನಗೆ ಮಿಶ್ರಿತ ಅರ್ಥಪೂರ್ಣ ಭಾಷಣದಲ್ಲಿ ಜಾನಪದ ಸಾಹಿತ್ಯದಿಂದ ಹಿಡಿದು ಪ್ರಸಕ್ತ ಸಾಹಿತ್ಯದಲ್ಲಿ ಕಂಡುಬರುವ ಹಾಸ್ಯ ಸಾಹಿತ್ಯವನ್ನು ಬಿಡಿ ಬಿಡಿಯಾಗಿ ಎತ್ತಿ ತೋರಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಅಮೆರಿಕ ಕನ್ನಡಿಗರ ಕನ್ನಡಾಭಿಮಾನವನ್ನು ಕಾಶ್ಮೀರಿಗಳ ಅಗ್ಗಿಷ್ಟಕ್ಕೆ ಹೋಲಿಸಿದ್ದು ಕವಿಗಳ ಮಾತೇ ಸರಿ. ಅವರ ಭಾಷಣದಲ್ಲಿನ ಸಮಯ ಪ್ರಜ್ಞೆ No bell ಪ್ರಶಸ್ತಿಗೆ ಪಾತ್ರರಾದರು.

ಪೂರ್ಣಚಂದ್ರ ತೇಜಸ್ವಿಯನ್ನು ಕಳೆದುಕೊಂಡು ಕನ್ನಡ ಸಾಹಿತ್ಯ ತೇಜಸ್ಸನ್ನೇ ಕಳೆದುಕೊಂಡಷ್ಟಾಗಿದೆಯೆಂದು ಅವರೊಡನೆ ಕಳೆದ ಕೆಲವು ಸಾಹಿತ್ಯ ರಸ ನಿಮಿಷಗಳನ್ನು ನೆನೆದು ವಿಮಲಾ ರಾಜಗೋಪಲ್‌ರವರು ಅವರು ಕನ್ನಡ ಸಾಹಿತ್ಯ ರಂಗದ ಪರವಾಗಿ ಶ್ರದ್ಧಾಂಜಲಿಯನ್ನು ಅರ್ಪಿಸಿದರು. ನಮ್ಮ ಹೆಮ್ಮೆಯ ಕವಿ ಜಿ ಎಸ್‌ ಶಿವರುದ್ರಪ್ಪನವರು ರಾಷ್ಟ್ರಕವಿಯಾದ ಸಂದರ್ಭದಲ್ಲಿ ಅವರಿಗೆ ಅಮೆರಿಕ ಕನ್ನಡಿಗರ ಪರವಾಗಿ ನಮನ ಸಲ್ಲಿಸಿದ ರಾಘವೇಂದ್ರರಾವ್‌ರವರು ಜೆಎಸ್‌ಎಸ್‌ ರ ಕಾವ್ಯದ ಬಗ್ಗೆ ಅಮೆರಿಕ ಕನ್ನಡಿಗರಿಗೆ ಪರಿಚಯಿಸಿದರು. ಆ ಸಂದರ್ಭದಲ್ಲಿ ಒಂದು ಫಲಕವನ್ನೂ ನೀಡಲಾಯಿತು.

ಎರಡು ವರ್ಷಕ್ಕೊಮ್ಮೆ ಕನ್ನಡ ಸಾಹಿತ್ಯ ರಂಗದ ವಸಂತೋತ್ಸವ ಕಾರ್ಯಕ್ರಮದಲ್ಲಿ ಮತ್ತೊಂದು ಮಹತ್ತರ ಕಾರ್ಯ ಅಮೆರಿಕ ಕನ್ನಡಿಗರ ಬರಹಗಾರರಿಗೆ ಉತ್ತೇಜನಕೊಡುವಂತಹ ಕೆಲಸ ‘ನಮ್ಮ ಬರಹಗಾರರು’ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಅಮೆರಿಕೆಯ ಕನ್ನಡ ಬರಹಗಾರರು ಪ್ರಕಟಿಸಿದ ಪುಸ್ತಕಗಳ ವಿಮರ್ಶಾಕಾರ್ಯ. ತಮ್ಮ ಉದ್ಯೋಗದ ವೇಳೆಯಲ್ಲೂ ಸಮಯ ಮಾಡಿಕೊಂಡು ಬರೆಯುವ ತಮ್ಮ ಬರಹದ ವಿಮರ್ಶೆಗೆ ಒಂದು ವೇದಿಕೆಯನ್ನು ಒದಗಿಸುವ ಕಾರ್ಯವನ್ನು ಮಾಡುತ್ತಿರುವ ಕನ್ನಡ ಸಾಹಿತ್ಯ ರಂಗ ನಿಜವಾಗಲೂ ಸ್ತುತ್ಯಾರ್ಹ.

ಅಮೆರಿಕ ಕನ್ನಡಿಗರ ಪ್ರಕಟಣೆಗಳಲ್ಲಿ ಪ್ರಶಸ್ತಿ ವಿಜೇತ ಡಾ. ಗುರುಪ್ರಸಾದ್‌ ಕಾಗಿನೆಲೆ ಅವರ ‘ಶಾಕುಂತಳಾ’ ಕಥೆಯುಳ್ಳ ಪುಸ್ತಕವೂ ಸೇರಿತ್ತು. ಭರ್ಜರಿ ಭೋಜನದ ನಂತರ ಡಾ।। ಚಂದ್ರಶೇಖರ್‌ರವರ ‘ಖರೋ ಖರ’ ನಾಟಕದೊಂದಿಗೆ ಮುಕ್ತಾಯಗೊಂಡ ಮೊದಲದಿನ ಕಾರ್ಯಕ್ರಮ ಎರಡನೇ ದಿನದ ಕಾರ್ಯಕ್ರಮಕ್ಕೆ ಕಾತುರದಿಂದ ಕಾಯುವ ಹಾಗೆ ಮಾಡಿತ್ತು.

ಚಿಕಾಗೊ ನಗರದ ಶಿಕರ ತಂಡದಿಂದ ಪ್ರಕಾಶ್‌ ಹೇಮಾವತಿಯವರ ನಿರ್ದೇಶನದಲ್ಲಿ ರಂಗಪ್ರದರ್ಶನಗೊಂಡ ವಿಶೇಷವೆಂದರೆ ಧಾರವಾಡದ ದಾಟಿಯ ಭಾಷೆ ಬೆಂಗಳೂರಿನ ದಾಟಿಗೆ ಅನುವಾದಗೊಂಡಿದ್ದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X