ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡಿಯನ್‌ ಎಕ್ಸ್‌ಪ್ರೆಸ್‌@ಫ್ರೀಪಾರ್ಸೆಲ್‌.ಕಾಮ್‌!

By Staff
|
Google Oneindia Kannada News


ಕೂಡಲೇ ಈ ಮನುಷ್ಯ ಒಂದು ಸಣ್ಣ ಪೆಟ್ಟಿಗೆಯನ್ನು ನನ್ನ ಜೇಬಿನಲ್ಲಿ ತುರುಕ ಬೇಕೇ? ಅದರೊಳಗೆ ಒಂದು ಹಳೆಯ ಕಾಲದ ಗ್ರಾಮಫೋನಿನ ನೀಡಲ್‌ ಇಟ್ಟಿದ್ದನಂತೆ. ಅದನ್ನು ಅವನ ಮಾವನಿಗೆ ತಲುಪಿಸಬೇಕಂತೆ. ನನಗೆ ಗಾಭರಿಯಾಯಿತು. ಕಾರಣ ಆಗಿನ ಕಾಲದಲ್ಲಿ ಚಿನ್ನ, ಡೈಮಂಡ್‌ ಎಲ್ಲ ಈಗಿನ ಹಾಗೆ ತೆಗೆದುಕೊಂಡುಹೋಗುವ ಹಾಗಿಲ್ಲ. ಅವನು ಅದಕ್ಕೆ ನನ್ನ ಹತ್ತಿರ ಏನಾದರೂ ಕಳ್ಳಜೇಬು ಇದೆಯಾ ಅಂತ ಕೇಳಿದ. ‘ಇಲ್ಲ’ ಎಂದೆ. ಕೊನೆಗೆ ಅದನ್ನು ಒಂದು ಕರ್ಚೀಫ್‌ ಒಳಗೆ ಕಟ್ಟಿಕೊಂಡು ಬೆಂಗಳೂರಿಗೆ ಹೋದೆ.

ಒಂದು ತಿಂಗಳ ಮೇಲೆ ಅಮೆರಿಕಾಗೆ ವಾಪಾಸ್‌ ಬರುವ ಸಮಯದಲ್ಲಿ ನನ್ನ ತಮ್ಮನ ಕೈಲಿ ನನ್ನ ಗೆಳೆಯನ ಸಾಮಾನನ್ನು ಕೊಟ್ಟು ಹೇಳಿದೆ,‘ ಇದನ್ನು ನನ್ನ ಗೆಳೆಯನ ಮಾವನಿಗೆ ತಲುಪಿಸಬೇಕು. ಏನೂ ಅವಸರ ಮಾಡಿ ತೊಂದರೆ ತೆಗೆದುಕೊಳ್ಳಬೇಡ’. ಅವನು ಆಗಲಿ ಎಂದ.

ಇದಾಗಿ ಆರು ತಿಂಗಳಲ್ಲಿ ನನ್ನ ಗೆಳೆಯ ಮತ್ತು ಅವನ ಹೆಂಡತಿ ಕೋಮಲೆ ನನ್ನನ್ನು ಮತ್ತು ನನ್ನವಳನ್ನು ಊಟಕ್ಕೆ ಕರೆದಿದ್ದರು. ಯಾಕೆಂದರೆ ನನ್ನ ಗೆಳೆಯನ ಅತ್ತೆಯವರು ಹಾಡಿದ ಸಂಗೀತವನ್ನು ಒಂದು ಟೇಪಿನಲ್ಲಿ ಹಾಕಿ ಇನ್ನೊಂದು ಇಂಡಿಯನ್‌ ಫೆಡೆರಲ್‌ ಎಕ್ಸ್‌ಪ್ರೆಸ್‌ನಲ್ಲಿ ಅವನ ಮಾವ ಕಳಿಸಿಕೊಟ್ಟಿದ್ದನಂತೆ. ನಾವು ಹೋದೆವು. ಗಡದ್ದಿನ ಊಟವಾಯಿತು. ಸಂಗೀತ ಶುರುವಾಯಿತು.

ಎರಡು ಹಾಡು ಮುಗಿಯಿತು. ಮೂರನೆಯ ಹಾಡು ಅರ್ಧವಾದ ಮೇಲೆ ಸಂಗೀತ ಇದ್ದಕ್ಕಿದ್ದಂತೆ ನಿಂತು ಹೋಯಿತು. ಟೇಪ್‌ರೆಕಾರ್ಡರ್‌ನಲ್ಲಿ ನನ್ನ ಗೆಳೆಯನ ಮಾವನ ಸ್ವರ ಗಟ್ಟಿಯಾಗಿ ಕೇಳಿಬಂತು. By the way what happened to the gramaphone needle you have sent to through your friend? ಮತ್ತೆ ಸಂಗೀತ ಶುರುವಾಯಿತು. ನನಗೆ ಒಂದು ಥರ ಆಯಿತು. ಆದರೆ ಒಳಗೊಳಗೇ ನಗು ಬಂತು. ತೋರಿಸುವ ಹಾಗಿಲ್ಲ. ಇವನಿಗೆ ಬುಧ್ಧಿ ಕಲಿಸಿದ್ದಕ್ಕಾಗಿ ಸ್ವಲ್ಪ ಜಂಭವೂ ಬಂದಿತು.

ಇದಾಗಿ ಮೂರು ವರ್ಷವಾದ ಮೇಲೆ ಇನ್ನೊಂದು ಬಾರಿ ಇಂಡಿಯಾಗೆ ಹೋಗಬೇಕಾಗಿ ಬಂತು. ಈ ಸುದ್ದಿ ವಾಯುವೇಗದಿಂದ ಎಲ್ಲಾ ಕಡೆ ಹೋಯಿತು. ಇದಕ್ಕೆ ಕಾರಣ ನನ್ನವಳಿದ್ದರೂ ಇರಬಹುದು. ಕೂಡಲೇ ನನ್ನ ಇನ್ನೊಬ್ಬ ಗೆಳೆಯ ಫೋನ್‌ ಮಾಡಿದ, ‘ಏನು ಮೈಯ? ಏನು ಸಮಾಚಾರ? ಎಂದು ಕೇಳಿದ.‘ ಏನಿಲ್ಲ, ನಿಮ್ಮಕಡೆ ಏನು ಸುದ್ದಿ’ ಎಂದೆ. ನಾನು ಇಂಡಿಯಾಗೆ ಹೋಗುವ ವಿಚಾರ ಗುಟ್ಟಿನಲ್ಲಿಟ್ಟಿದ್ದೆ.

ನಿಮ್ಮಿಂದ ನನಗೆ ದೊಡ್ಡ ಉಪಕಾರ ಆಗಬೇಕು. ಎರಡು ಜಿಲೆಟ್‌ ಬ್ಲೇಡ್‌ ಪ್ಯಾಕೆಟ್‌, ಮತ್ತು ನನ್ನ ಅಮ್ಮನಿಗೆ ಸ್ವಲ್ಪ ಔಷಧಿ ದಯವಿಟ್ಟು ತೆಗೆದುಕೊಂದು ಹೋಗ್ತೀರಾ? ಎಂದು ವಿನಯದಿಂದ ಕೇಳಿದ. ಅವುಗಳನ್ನು ಸೂಟ್‌ಕೇಸಿನಲ್ಲಿ ಹಾಕಲಿಕ್ಕೇನಂತೆ. ‘ಆಗಲಿ’ ಎಂದು ದಾಕ್ಷಿಣ್ಯಕ್ಕೆ ಒಪ್ಪಿಕೊಂಡೆ.

ಮರುದಿನ ನನ್ನ ಗೆಳೆಯ ಒಂದು ಇಪ್ಪತ್ತು ಮೂವತ್ತು ಜಿಲೆಟ್‌ ಬ್ಲೇಡ್‌ ಪ್ಯಾಕೆಟ್ಸ್‌ ಮತ್ತು ಅವುಗಳ ಜೊತೆಯಲ್ಲಿ ಹದಿನೈದು ಔಷಧಿ ಬಾಟಲಿಗಳನ್ನು ತಂದುಕೊಟ್ಟ! ಅದೇ ದಿನ ಮುಂಬಯಿಗೆ ಪ್ರಯಾಣ ಬೆಳೆಸಿದೆ. ಮುಂಬಯಿಯಲ್ಲಿ ನನಗೆ ಹಲವಾರು ಸ್ನೇಹಿತರು ಇದ್ದರು. ಎಲ್ಲ ಸ್ನೇಹಿತರನ್ನೂ ನೋಡಿದೆ. ಅವರಿಗೆಲ್ಲ ಧಾರಾಳವಾಗಿ ಎರಡು ಮೂರು ಜಿಲೆಟ್‌ ಬ್ಲೇಡ್‌ಗಳನ್ನು ಕೊಟ್ಟುಬಿಟ್ಟೆ. ಬೆಂಗಳೂರಿಗೆ ಹೋದ ಮರುದಿನ ನನ್ನ ತಮ್ಮನ ಹತ್ತಿರ ಔಷಧಿ ಬಾಟಲಿಗಳನ್ನು ಕೊಟ್ಟು ನನ್ನ ಗೆಳೆಯನ ತಾಯಿಯವರಿಗೆ ತಲುಪಿಸುವಂತೆ ಹೇಳಿದೆ. ಆವನು ನಾನು ಹೇಳಿದ ಹಾಗೆ ಮಾಡಿದ.

ಸುಮಾರು ಒಂದು ತಿಂಗಳು ರಜೆ ಮುಗಿಸಿ ಅಮೆರಿಕಾಗೆ ವಾಪಾಸು ಬಂದೆ. ನನಗೆ ಮೊದಲ ಫೋನ್‌ಕಾಲ್‌ ನನ್ನ ಸ್ನೇಹಿತನಿಂದ ಬಂತು. ‘ನಾನು ಕೊಟ್ಟ ಔಷಧಿ ಬಾಟಲಿ ಮತ್ತು ಜಿಲೆಟ್‌ ಬ್ಲೇಡ್‌ಗಳನ್ನು ನಮ್ಮ ಮನೆಗೆ ತಲುಪಿಸಿದಿರಾ?’ ಎಂದ. ‘ಔಷಧಿ ಏನೋ ತಲುಪಿಸಿದೆ. ಆದರೆ ಬ್ಲೇಡ್‌ ಮಾತ್ರ ಕೊಡಲಿಕ್ಕೆ ಆಗಲಿಲ್ಲ. ಕಾರಣವೇನೆಂದರೆ ಬ್ಲೇಡಿಟ್ಟ ಸೂಟ್‌ಕೇಸ್‌ ಪ್ಲೇನಿನಲ್ಲಿ ಹೋಗುವಾಗ ಕಳೆದು ಹೋಯಿತು. ಸಾರಿ.’ ಎಂದೆ. ಅವನು ‘ಪರವಾಗಿಲ್ಲ’ ಅಂದ. ಹೀಗೆ ನನ್ನ ಗೆಳೆಯನಿಗೆ ಯಾರು ಬುಧ್ಧಿವಂತರು ಎಂದು ತೋರಿಸಿದೆ. ಇದು ನನಗೆ ಒಂದು ಹೆಮ್ಮೆಯ ವಿಚಾರ. ಯಾಕೆಂದರೆ ಅವನು ಕೊಟ್ಟ ಬ್ಲೇಡಿನಿಂದ ಹೆಚ್ಚು ಕಡಮೆ ಎಂಟು ಜನ ಸ್ನೇಹಿತರಿಗೆ ಕ್ಲೀನಾಗಿ ಚೌರ ಮಾಡಿಸಿದ್ದೆ!

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X