ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡಿಯನ್‌ ಎಕ್ಸ್‌ಪ್ರೆಸ್‌@ಫ್ರೀಪಾರ್ಸೆಲ್‌.ಕಾಮ್‌!

By Staff
|
Google Oneindia Kannada News


ಸದ್ಯದಲ್ಲಿಯೇ ಇಂಡಿಯಾಗೆ ಹೊರಡುತ್ತಿರುವ ಅನಿವಾಸಿ ಭಾರತೀಯರು ಮತ್ತು ಬೆಂಗಳೂರಿನಿಂದ ವಿದೇಶಕ್ಕೆ ಹೊರಟ ಮಂದಿ ಈ ಲಲಿತ ಪ್ರಬಂಧ ಓದಲೇ ಬೇಕು! ಓದುವುದರಿಂದ ಸಾಕಷ್ಟು ಪ್ರಯೋಜನಗಳಿವೆ!!

ನಾನು ಅಮೆರಿಕಾಗೆ ಬಂದು ಬಹಳ ಸಮಯವಾಯಿತು. ಇಲ್ಲಿದ್ದಾಗ ನನಗೆ ಎಷ್ಟೋ ಜನ ಸ್ನೇಹಿತರಾಗಿಬಿಟ್ಟರು. ಇವರ ಜೊತೆಯಲ್ಲಿದ್ದು ನಾನು ತುಂಬಾ ಬುಧ್ಧಿವಂತನಾದೆ. ಹೇಗೆ ಬುಧ್ಧಿವಂತನಾದೆ? ಎಂಬ ಕತೆಯನ್ನು ನಿಮ್ಮಲ್ಲಿ ಹೇಳೋಣ ಎಂದು ಮನಸ್ಸಾಯಿತು.

ಅಮೆರಿಕಾದಲ್ಲಿ ನೀವು ಫೆಡರಲ್‌ ಎಕ್ಸ್‌ಪ್ರೆಸ್‌, ಪ್ರಯಾರಿಟಿ ಮೈಲ್‌, ಮತ್ತು ಯುಪಿಎಸ್‌ ಎಲ್ಲಾ ಕೇಳಿರಬಹುದು. ಇವುಗಳ ಮೂಲಕ ನಾವು ಪ್ರಪಂಚದಲ್ಲಿ ಯಾರಿಗೆ ಬೇಕಾದರೂ ಏನೇನೋ ಸಾಮಾನುಗಳನ್ನು ಕಳಿಸಿಕೊಡಬಹದು. ಯಾರ ಹಂಗೂ ಬೇಡ. ಯಾವ ಸ್ನೇಹಿತರೂ ಬೇಡ. ಆದರೆ ನಿಮ್ಮ ಕೈಯಿಂದ ಸ್ವಲ್ಪ ಹಣ ಮಾತ್ರ ಬಿಚ್ಚಬೇಕು. ಅಂದರೆ ಇದು ಪುಕ್ಸಟ್ಟೆಯ ಕತೆಯಲ್ಲ. ಆದರೆ ನಮ್ಮಲ್ಲಿ ಇನ್ನೊಂದು ಎಕ್ಸ್‌ಪ್ರೆಸ್‌ ಇದೆ. ಅದರ ಬಗ್ಗೆ ಹೆಚ್ಚು ಪಬ್ಲಿಸಿಟಿ ಇಲ್ಲ.

ಈ ಎಕ್ಸ್‌ಪ್ರೆಸಿನ ಹೆಸರು ಇಂಡಿಯನ್‌ ಫೆಡರಲ್‌ ಎಕ್ಸ್‌ಪ್ರೆಸ್‌. ಈ ಎಕ್ಸ್‌ಪ್ರೆಸ್‌ನಲ್ಲಿ ಅಮೆರಿಕಾದಿಂದ ಇಂಡಿಯಾಕ್ಕೆ, ಇಂಡಿಯದಿಂದ ಅಮೆರಿಕಾಗೆ ಏನೇನೋ ಸಾಮಾನುಗಳನ್ನು ಕಳಿಸಿಕೊಡುವುದಕ್ಕೆ ಸಾಧ್ಯವಾಗುತ್ತದೆ. ಯಾವ ಏರ್‌ಲೈನ್ಸ್‌ ಮೂಲಕವೂ ಕಳಿಸಿಕೊಡಬಹುದು. ಉದಾಹರಣೆಗಾಗಿ ಏರ್‌ ಇಂಡಿಯಾ, ಬ್ರಿಟಿಷ್‌ ಏರ್‌ವೇಸ್‌, ಲುಫ್ತಾನ್ಸಾ, ಏರ್‌ ಫ್ರಾನ್ಸ್‌, ಕೆಎಲ್‌ಎಂ ಮತ್ತು ಕುವೈಟ್‌ ಏರ್‌ಲೈನ್ಸ್‌ ಇತ್ಯಾದಿ. ಇಂಡಿಯನ್‌ ಫೆಡರಲ್‌ ಎಕ್ಸ್‌ಪ್ರೆಸ್‌ ಅಮೆರಿಕಾದಲ್ಲಿರುವ ಎಲ್ಲಾ ಎಕ್ಸ್‌ಪ್ರೆಸ್ಸನ್ನೂ ಮೀರಿಸುತ್ತದೆ. ಏಕೆಂದರೆ ಉಳಿದ ಎಕ್ಸ್‌ಪ್ರೆಸ್‌ನಲ್ಲಿ ನಾಲ್ಕು ಐದು ದಿನ ತೆಗೆದುಕೊಂಡರೆ ಇಂಡಿಯನ್‌ ಫೆಡರಲ್‌ ಎಕ್ಸ್‌ಪ್ರೆಸ್‌ನಲ್ಲಿ ಒಂದು ದಿನದಲ್ಲೇ ಸಾಮಾನುಗಳನ್ನು ಕಳಿಸಿಕೊಡಬಹುದು.

ಮತ್ತೊಂದು ವಿಶೇಷವೇನೆಂದರೆ ಒಂದೇ ಒಂದು ಕಾಸು ಕೊಡಬೇಕಾಗಿಲ್ಲ. ಇದನ್ನು ಕೇಳಿ ಈಗಾಗಲೇ ನಿಮ್ಮ ಕಿವಿ ನೆಟ್ಟಗಾಗಿರಬಹುದು. ಹೌದು, ಕಾಸು ಬೇಕಿಲ್ಲ. ಆದರೆ ಸ್ನೇಹಿತರು ಬೇಕು. ಬಹಳ ಆತ್ಮೀಯ ಸ್ನೇಹಿತರಿದ್ದರೆ ಒಳ್ಳೆಯದು. ಈ ಎಕ್ಸ್‌ಪ್ರೆಸ್‌ನಲ್ಲಿ ಅಮೆರಿಕಾದಿಂದ ಇಂಡಿಯಾಗೆ, ಹಾಗೂ ಇಂಡಿಯಾದಿಂದ ಅಮೆರಿಕಾಗೆ ಏನೇನೋ ಸಾಮಾನುಗಳನ್ನು ಕಳಿಸಬಹುದು ಅಥವಾ ತರಿಸಬಹುದು. ಈ ಸಾಮಾನುಗಳ ಒಂದು ಪಟ್ಟಿ ಮಾಡಲೇ?

ಅಮೆರಿಕಾದಿಂದ ಇಂಡಿಯಾಗೆ ಕಳಿಸಿಕೊಡುವ ಸಾಮನುಗಳು: ಪೆನ್ನುಗಳು, ಕ್ಯಾಂಡಿ, ಜಿಲೆಟ್‌ ಬ್ಲೇಡುಗಳು, ಇಪ್ಪತ್ತೈದು ಮೂವತ್ತು ಎನ್‌ವಲಪ್‌ಗಳು (ಈ ಎನ್‌ವಲಪ್‌ಗಳ ಒಳಗೆ ಪತ್ರಗಳು, ಹೊರಗೆ ಇಂಡಿಯನ್‌ ಸ್ಟಾಂಪು), ಹಳೆಯ ರವಿಕೆ ಮತ್ತು ಸೀರೆಗಳು, ಹಳೆಯ ಕಾಲದ ಗ್ರಾಮಾಫೋನಿನ ನೀಡಲ್‌, ಕೂದಲಿಗೆ ಹಾಕುವ ಕ್ಲಿಪ್‌ಗಳು ಇತ್ಯಾದಿ.

ಇಂಡಿಯಾದಿಂದ ಅಮೆರಿಕಾಗೆ ತರಿಸಿಕೊಳ್ಳುವ ಸಾಮಾನುಗಳು: ಅಮ್ಮ ಮತ್ತು ಅಜ್ಜಿ ಮಾಡಿದ ಸ್ಪೆಷಲ್‌ ಚಕ್ಕುಲಿ, ಕೋಡುಬಳೆ, ಹುರಿದ ಕಡಲೆ ಕಾಳು, ಸಾರಿನ ಪುಡಿ, ಉಪ್ಪಿನಕಾಯಿ, ಹಪ್ಪಳ, ಇಡ್ಲಿ ಪಾತ್ರೆ (ಹಗುರ ಆದರೆ ಸೂಟ್‌ಕೇಸ್‌ ಒಳಗೆ ಹಿಡಿಸುವುದಿಲ್ಲ), ದೋಸೆಕಲ್ಲು (ಗಾತ್ರ ಸಣ್ಣದು, ಭಾರ ಜಾಸ್ತಿ, ಸೂಟ್‌ಕೇಸ್‌ ಒಳಗೆ ಹೋಗುತ್ತದೆ), ಬಾದಾಮ್‌ ಬರ್ಫಿ, ತಂಬಿಟ್ಟುಂಡೆ, ಹುರುಳಿ ಕಾಳು, ಇತ್ಯಾದಿ.

ನನ್ನಲ್ಲಿ ಇನ್ನೂ ದೊಡ್ಡ ಲಿಸ್ಟ್‌ ಇದೆ. ಈ ಪಟ್ಟಿಯನ್ನು ದೊಡ್ಡದು ಮಾಡಿದರೆ ಈ ಲೇಖನ ಪ್ರಕಟವಾಗುತ್ತದೋ ಇಲ್ಲವೋ ಎಂಬ ಭಯದಿಂದ ಇಲ್ಲಿಗೇ ನಿಲ್ಲಿಸಿಬಿಡುತ್ತೇನೆ. ಆಹಾ ಈ ಮೇಲಿನ ಪಟ್ಟಿಯನ್ನು ತಯಾರು ಮಾಡುವುದರಲ್ಲೇ ನನ್ನ ತಲೆಬುರುಡೆಯಲ್ಲಿ ಏನೇನೋ ನೆನಪುಗಳು ಬರಲು ಶುರುವಾಗುತ್ತಾ ಇದೆ. ಬಹಳ ವರ್ಷಗಳ ಹಿಂದೆ ನನಗೊಬ್ಬ ಗೆಳೆಯನಿದ್ದ. ಅವನು ತಮಿಳುನಾಡಿನವನು. ಅವನ ಹೆಂಡತಿ ಕೋಮಲೆ. ಗಾಯಕಿ. ಹೆಸರಿಗೆ ತಕ್ಕ ಕಂಠ. ಅವನ ಅತ್ತಿಗೆಗೆ ಸಂಗೀತದಲ್ಲಿ ಪಾಂಡಿತ್ಯ. ಆವನ ಮಾವನಿಗೆ ಕತ್ತೆಯ ಸ್ವರ, ಆದರೂ ಸಂಗೀತದಲ್ಲಿ ಒಳ್ಳೇ ಅಭಿರುಚಿ. ಈ ಗೆಳೆಯ ನನಗೆ ಎಷ್ಟು ಆತ್ಮೀಯ ಅಂದರೆ ಅವನು ಕೋಮಲೆಯನ್ನು ಮದುವೆಯಾಗಿ ಅಮೇರಿಕಾಗೆ ಬಂದಾಗ ನಾನೇ ಏರ್‌ಪೋರ್ಟಿಗೆ ಹೋಗಿದ್ದೆ. ನಮ್ಮಲ್ಲಿ ಆ ರಾತ್ರಿ ಈ ವಧೂವರರಿಗೆ ಇಡ್ಲಿ ಸಾಂಬಾರ್‌, ಪುಳಿಯೋಗರೆ ಮತ್ತು ಘಮ ಘಮ ಪಾಯಸದ ಗಮ್ಮತ್ತಿನ ಊಟ.

ನಾನು ಒಂದು ಸಲ ಇಂಡಿಯಾಗೆ ಹೋಗಬೇಕಾಯಿತು. ನನ್ನ ಇದೇ ಗೆಳೆಯ ಧಾರಾಳವಾಗಿ ಏರ್ಪೋರ್ಟ್‌ಗೆ ರೈಡ್‌ ಕೊಡುತ್ತೇನೆಂದು ಹೇಳಿದ. ಆಗ ನಾನು ಪೆದ್ದಂಭಟ್ಟನಾಗಿದ್ದಿದ್ದರಿಂದ ಒಪ್ಪಿಕೊಂಡುಬಿಟ್ಟೆ. ಈಗಾಗಿದ್ದರೆ ಒಪ್ಪಿಕೊಳ್ಳುತ್ತಿರಲಿಲ್ಲ. ಯಾಕಂತ ಹೇಳ್ತೀನಿ ಕೇಳಿ. ಆವನ ಕಾರಿನಲ್ಲಿ ಏರ್‌ಪೋರ್ಟ್‌ಗೆ ಹೋದೆ. ಕೆಳಗಿಳಿದಾಗ ‘ತುಂಬಾ ಥ್ಯಾಂಕ್ಸ್‌’ ಅಂದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X