ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಕೆಟ್‌ ಪದಬಂಧ ಬಿಡಿಸುವುದೇ ಒಂದು ಆನಂದ!

By Staff
|
Google Oneindia Kannada News


ಇನ್ನು ಕೆಲವೇ ದಿನಗಳಲ್ಲಿ ವಿಶ್ವಕಪ್‌ ಪಂದ್ಯಾವಳಿಗಳಿಂದಾಗಿ ‘ಕ್ರಿಕೆಟ್‌ ಜ್ವರ’ ಹರಡಲಿದೆ. ಈ ದಿಶೆಯಲ್ಲಿ, ಜಗತ್ತಿನ ಕೆಲವು ಕ್ರಿಕೆಟ್‌ ಆಟಗಾರರನ್ನು ನಿಮ್ಮ ಮುಂದೆ ನಿಲ್ಲಿಸಿದ್ದೇವೆ. ಲೇಖನದೊಂದಿಗೆ ಪ್ರಕಟವಾಗಿರುವ ಪದಬಂಧದ ಪ್ರಿಂಟ್‌ ತೆಗೆದು, ಕೈಯಲ್ಲಿಡಿದುಕೊಳ್ಳಿ. ನಿಮ್ಮ ನೆನಪುಗಳನ್ನು ಕೆದಕುತ್ತ ಪದಬಂಧ ಭರ್ತಿ ಮಾಡಿ.


ಎಡದಿಂದ-ಬಲಕ್ಕೆ

01. ವಿಂಡೀಸ್‌ ತಂಡದ ನಾಯಕ. ವೈಯುಕ್ತಿಕ ಹಾಗೂ ಟೆಸ್ಟ್‌ ಪಂದ್ಯಗಳಲ್ಲಿ ಅತಿ ಹೆಚ್ಚು ರನ್‌ಗಳನ್ನು ಗಳಿಸಿದ್ದಾರೆ (5)
06. ಟೆಸ್ಟ್‌ಗಳಲ್ಲಿ ಅತಿ ಹೆಚ್ಚು ವಿಕೆಟ್‌ ಗಳಿಸಿರುವ ಶ್ರೀಲಂಕದ ಆಫ್‌ ಸ್ಪಿನ್ನರ್‌ (9)
07. ಭಾರತ ತಂಡದ ಉತ್ತಮ ಲೆಗ್‌ ಸ್ಪಿನ್ನರ್‌. ‘ಟ್ರಂಪ್‌ ಕಾರ್ಡ್‌’ ಎಂದೇ ಖ್ಯಾತಿ (5)
08. ಚೆಂಡಿರುವುದೇ ದಂಡಿಸಲಿಕ್ಕೆ ಎಂಬ ಸಿದ್ದಾಂತದ ವಿಂಡೀಸ್‌ ತಂಡದ ಅಂದಿನ ನಾಯಕ ಬ್ಯಾಟ್ಸ್ಮನ್‌, ಬೌಲರೂ ಹೌದು (7)
10. ಪಾಕಿಸ್ತಾನ ತಂಡದ ನಾಯಕ ಉತ್ತಮ ಬ್ಯಾಟ್ಸ್ಮನ್‌ ಆದರೆ ಇವರಿಂದ ರನ್‌-ಔಟ್‌ಗಳಾಗುವುದು ಹೆಚ್ಚು ಎಂದು ಅಪವಾದವಿದೆ (4)
14. ದಕ್ಷಿಣ ಆಫ್ರಿಕಾ ತಂಡದ ಅಂದಿನ ನಾಯಕ ‘ಮ್ಯಾಚ್‌ ಫಿಕ್ಸಿಂಗ್‌’ ಅಪವಾದಕ್ಕೆ ಸಿಲುಕಿದ್ದರು (5)
15. ಭಾರತ ತಂಡದ ಅಂದಿನ ವೇಗದ ಬೌಲರ್‌, ಮೈಸೂರಿನವರು (7)
18. ಆಸ್ಟ್ರೇಲಿಯಾ ತಂಡದ ಅಂದಿನ ಉತ್ತಮ ಆಲ್‌ ರೌಂಡರ್‌, ‘ವಾ’ ಸಹೋದರರಲ್ಲಿ ಒಬ್ಬರು (3)
19. ಹದಿನಾರು ವಯಸ್ಸಿಗೇ ಟೆಸ್ಟ್‌ ಪಂದ್ಯಕ್ಕೆ ಪದಾರ್ಪಣ ಮಾಡಿದ ಪ್ರಚಂಡ ಯಶಸ್ಸು ಗಳಿಸಿದ ಭಾರತದ ಆಲ್‌ ರೌಂಡರ್‌, ಈ ನಡುವೆ ಶೂನ್ಯ ಸಂಪಾದನೆಯಲ್ಲಿ ಬ್ಯುಸಿ (7)
22. ಶ್ರೀಲಂಕ ತಂಡದ ನಾಯಕ ಉತ್ತಮ ಬ್ಯಾಟ್ಸ್ಮನ್‌ (8)
24. ಮೊದಲ ಮೂರು ಟೆಸ್ಟ್‌ ಗಳಲ್ಲಿ ಮೂರು ಸೆಂಚುರಿ ಬಾರಿಸಿ, ನಂತರದ ದಿನಗಳಲ್ಲಿ ವಿಫಲರಾಗಿ ಕೊನೆಗೆ ‘ಮ್ಯಾಚ್‌ ಫಿಕ್ಸಿಂಗ್‌’ ವಿವಾದಲ್ಲೊ ಸಿಲುಕಿಕೊಂಡರು (5)
25. ಭಾರತ ತಂಡದ ವೇಗದ ಬೌಲರ್‌. ಹಲವಾರು ಬಾರಿ ಹೊರಗೆ ಹೋಗಿ ಮತ್ತೆ ಒಳಗೆ ಬಂದಿದ್ದಾರೆ (5)
27. ಭರ್ಜರಿ ಎಂಟ್ರಿ ಪಡೆದು ಉಪನಾಯಕನೂ ಆಗಿದ್ದ ಇವರು ಈಚೆಗೆ ಏಕೋ ಫಾರ್ಮ್‌ ಕಳೆದುಕೊಂಡು ಮಂಕಾಗಿದ್ದಾರೆ (ಬಲದಿಂದ ಎಡಕ್ಕೆ) (3)
28. ವಿಂಡೀಸ್‌ ತಂಡದ ಉತ್ತಮ ಬ್ಯಾಟ್ಸ್ಮನ್‌ (ಬಲದಿಂದ ಎಡಕ್ಕೆ) (4)
29. ಭಾರತ ತಂಡ ಕಂಡ ಉತ್ತಮ ವಿಕೆಟ್‌ ಕೀಪರ್‌ ಕರ್ನಾಟಕದವರು (3)
30. ಕೀನ್ಯಾ ತಂಡದ ಇಂದಿನ ನಾಯಕ (5)

ಮೇಲಿಂದ-ಕೆಳಕ್ಕೆ

01. ಕೀನ್ಯಾ ತಂಡದಲ್ಲಿರುವ ಪಟೇಲ 2003ರ ವಿಶ್ವ ಕಪ್‌ ಪಂದ್ಯದಲ್ಲಿ ಆಡಿದ್ದರು (6)
02. ಭಾರತ ತಂಡದ ನಾಯಕ ‘ಗೋಡೆ’ ಎಂದೇ ಪ್ರಸಿದ್ದಿ (6)
03. ಯುವ ಆರಂಭಿಕ ಹಾಗೂ ವಿಕೆಟ್‌ ಕೀಪರ್‌ ಕರ್ನಾಟಕದವರು (3)
04. ಬಂಗಾಲದ ಹುಲಿ ಭಾರತ ತಂಡಕ್ಕೆ ಮರಳಿ ಬಂದಿದೆ (3)
05. ದಕ್ಷಿಣ ಆಫ್ರಿಕಾ ತಂಡದ ನಾಯಕ ಹಾಗೂ ಉತ್ತಮ ಆಲ್‌-ರೌಂಡರ್‌ (5)
07. ಶ್ರೀಲಂಕ ತಂಡದಲ್ಲಿದ್ದ ‘ಪಾರ್ಥ’ ಉತ್ತಮ ಬ್ಯಾಟ್ಸ್ಮನ್‌ (7)
09. ನ್ಯೂಜೀಲಾಂಡ್‌ ತಂಡದ ಅಂದಿನ ಅತ್ಯುತ್ತಮ ಆಲ್‌-ರೌಂಡರ್‌ ‘ಸರ್‌’ ಪದವಿಯನ್ನೂ ಹೊಂದಿದ್ದಾರೆ (5)
11. ಭಾರತ ತಂಡದ ಸ್ಪಿನ್ನರ್‌ ‘ಟರ್ಬನೇಟರ್‌’ ಎಂದೇ ಖ್ಯಾತಿ (7)
12. ಭಾರಾತ ತಂಡದ ಅಂದಿನ ಖ್ಯಾತ ಬ್ಯಾಟ್ಸ್ಮನ್‌ ‘ಕರ್ನಾಟಕದ ಲಿಟಲ್‌ ಮಾಸ್ಟರ್‌’ (4)
13. ಭಾರತ ತಂಡದ ಲಿಟಲ್‌ ಮಾಸ್ಟರ್‌, ಜಗತ್ತು ಕಂಡ ಉತ್ತಮ ಆರಂಭಿಕ ಆಟಗಾರ (7)
15. ಪಾಕಿಸ್ತಾನ ತಂಡದ ಅಂದಿನ ಬ್ಯಾಟ್ಸ್ಮನ್‌ ಚೇತನ್‌ ಶರ್ಮಾರ ಕೊನೆಯ ಎಸತದಲ್ಲಿ ಸಿಕ್ಸರ್‌ ಬಾರಿಸಿ ಪಂದ್ಯ ಗೆಲ್ಲಿಸಿದ್ದರು (7)
16. ಸಿಂಹಸ್ವಪ್ನವಾಗಿದ್ದ ವಿಂಡೀಸ್‌ ತಂಡದ ಅಂದಿನ ವೇಗದ ಬೌಲರ್‌, ತಿರುಗು ಮುರುಗಾಗಿದ್ದಾರೆ (5)
17. ಆಸ್ಟ್ರೇಲಿಯಾ ತಂಡದ ವೇಗದ ಬೌಲರ್‌ ತಿರುಗು ಮುರುಗಾಗಿದ್ದಾರೆ (5)
19. ಅತೀ ಕಡಿಮೆ ಬಾಲುಗಳಿಂದ ಹೆಚ್ಚು ರನ್‌ ತೆಗೆಯುತ್ತ ಒಂದು ದಿನದ ಪಂದ್ಯಗಳ ರೀತಿಯನ್ನೇ ಬದಲಿಸಿದ ಶ್ರೀಲಂಕದ ಆಲ್‌-ರೌಂಡರ್‌ (7)
20. ಜಾಂನಗರದ ಪ್ರತಿಷ್ಟಿತ ವಂಶಸ್ಥನಾದ ಈತ ಉತ್ತಮ ಫೀಲ್ಡರ್‌ ಎನಿಸಿಕೊಂಡಿದ್ದರು. (3)
21. ಸರ್ವಕಾಲಿಕ ಶ್ರೇಷ್ಟ ಬ್ಯಾಟ್ಸ್ಮನ್‌. ಇವರನ್ನು ತಡೆಗಟ್ಟಲು ಬಾಡಿಲೈನ್‌ ಬೌಲಿಂಗ್‌ ಕೂಡ ಪ್ರಯೋಗಿಸಲಾಗಿತ್ತು (5)
22. ಭಾರತ ತಂಡ ಆಕ್ರಮಣಕಾರಿ ಬ್ಯಾಟ್ಸ್ಮನ್‌, ವಿಕೆಟ್‌ ಕೀಪರ್‌ ಕೂಡ (7)
23. ಪಾಕಿಸ್ತಾನದ ಅಂದಿನ ಉತ್ತಮ ಎಡಗೈ ವೇಗಿ. ಚೆಂಡನ್ನು ಕುಕ್ಕುತ್ತ ಬ್ಯಾಟ್ಸ್ಮನ್‌ಗಳನ್ನು ನಡುಗಿಸಿದ್ದರು (6)
24. ಪಾಕಿಸ್ತಾನದ ವೇಗಿ, ‘ರಾವಲ್ಪಿಂಡಿ ಎಕ್ಸ್‌ ಪ್ರೆಸ್ಸ್‌’ ಎಂದೇ ಖ್ಯಾತಿ (3)
26. ಭಾರತ ಕಂಡ ಅತ್ಯುತ್ತಮ ಆಲ್‌-ರೌಂಡರ್‌. ಭಾರತ ವಿಶ್ವಕಪ್‌ ಗೆದ್ದದ್ದು ಇವರ ನೇತೃತ್ವದಲ್ಲೇ. (5)
29. ಭಾರತದ ಅಂದಿನ ವಿಕೆಟ್‌ ಕೀಪರ್‌-ಬ್ಯಾಟ್ಸ್ಮನ್‌, ಆಯ್ಕೆ ಸಮಿತಿಯ ಚೇರ್ಮನ್‌ ಕೂಡ ಆಗಿದ್ದರು (ಕೆಳಗಿಂದ ಮೇಲೆ) (5)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X