ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಜ್ಞಾನಿಕ-ಕೈಗಾರಿಕಾ ಕ್ರಾಂತಿಗಳು ಭಾರತದಲ್ಲೇಕೆ ಆಗಲಿಲ್ಲ?

By Staff
|
Google Oneindia Kannada News


Queen of the Sciences ಆದ ಗಣಿತವನ್ನು ತೆಗೆದುಕೊಳ್ಳೋಣ. Herman Wyle ಪ್ರಕಾರ ಐರೋಪ್ಯರ ಗಣಿತ ಗ್ರೀಕರ ದೃಷ್ಟಿಕೋನವನ್ನು ಬಿಟ್ಟು ಹೊಸ ಹಾದಿ ಹಿಡಿದಿದ್ದು ಪ್ರಾಯಶಃ ಇಂಡಿಯಾದ ಗಣಿತ ಅರಬ್ಬರ ಮೂಲಕ ಪರಿಷ್ಕಾರ ಹೊಂದಿ ಪಶ್ಚಿಮ ಏಷ್ಯಾದ ಮೂಲಕ ಯೂರೋಪಿಗೆ ಬಂದಾಗ.

ಖಗೋಳಶಾಸ್ತ್ರಜ್ಞರಾದ ಗ್ರೀಕಿನ ಟಾಲೆಮಿ (ಕ್ರಿ.ಶ.2) ಮತ್ತು ಇಂಡಿಯಾದ ಆರ್ಯಭಟ (ಕ್ರಿ.ಶ.5) ರನ್ನು ಹೋಲಿಸಿ ನೋಡಿದರೆ ಗ್ರೀಕರ ವಿಧಾನಕ್ಕೂ, ಭಾರತೀಯ ವಿಧಾನಕ್ಕೂ ಇದ್ದ ಮೂಲಭೂತ ವ್ಯತ್ಯಾಸಗಳು ಕಾಣುತ್ತವೆ. ಗ್ರೀಕರು ಪ್ರಾರಂಭಿಸುತ್ತಿದ್ದುದು ಮೂಲವಾಕ್ಯ (axiom) ಅಥವಾ ಮಾದರಿಯಿಂದ. ನಂತರ ವ್ಯವಸ್ಠಿತ ತಾರ್ಕಿಕ ನಿಗಮನದಿಂದ (deductive logic) ಪ್ರಮೇಯಗಳನ್ನು, ಫಲಿತಾಂಶಗಳನ್ನು ಸ್ಥಿರಪಡಿಸುತ್ತಿದ್ದರು. ಆದರೆ ಇಂಡಿಯಾದ ವಿಧಾನ ವೀಕ್ಷಣೆ, ಗುಣನಕ್ರಮಗಳ ಮೂಲಕ ಸಮರ್ಥನೀಯ ತೀರ್ಮಾನವನ್ನು ತಲುಪುವುದು. ಅಲ್ಲದೇ ರ್ನಿಗಮನ ತರ್ಕದ ಬಗ್ಗೆ ಅಪನಂಬಿಕೆ. ಭೌತ-ಗಣಿತ ಮಾದರಿಗಳಲ್ಲಿ ಸಂಶಯ ಕಂಡುಬರುತ್ತದೆ.

ವಿಜ್ಞಾನದ ಸಮಸ್ಯೆಗಳಿಗೆ ಇಂಡಿಯಾದವರ ದೃಷ್ಟಿಕೋನದಲ್ಲಿ ಪ್ರಯೋಜನಕ್ಕೆ ಹೆಚ್ಚು ಪ್ರಾಶಸ್ತ್ಯವಿತ್ತು. ಉದಾಹರಣೆಗೆ, ವಿಶ್ವ ಸೂರ್ಯಕೇಂದ್ರಿತವೋ ಅಥವಾ ಭೂಕೇಂದ್ರಿತವೋ ಎಂಬ ಸಿದ್ಧಾಂತದ ಪ್ರಶ್ನೆ ಗ್ರೀಕ್‌ ಹಾಗೂ ಪಾಶ್ಚಿಮಾತ್ಯ ಚಿಂತಕರಿಗೆ ಮುಖ್ಯವಾಗಿ ಕಾಡಿದ್ದರೆ, ಇಂಡಿಯಾದ ಖಗೋಳಶಾಸ್ತ್ರಜ್ಞರಿಗೆ ಮುಖ್ಯವಾಗಿದ್ದು ಗ್ರಹಣ ಎಂದು ಸಂಭವಿಸುತ್ತದೆ ಎಂಬ ಕ್ರಿಯಾಜ್ಞಾನ.

ಒಟ್ಟಿನಲ್ಲಿ, ಚೀನಾದಿಂದ ಬಂದ ತಾಂತ್ರಿಕತೆ, ಇಂಡಿಯಾದಿಂದ ಬಂದ ಗಣಿತದ ಚಿಂತನಾಹಾದಿ, ಗ್ರೀಸಿನಿಂದ ಪಡೆದ ವಿಜ್ಞಾನ ಪರಂಪರೆ, ಪಶ್ಚಿಮ ಏಷ್ಯಾದಿಂದ ಬಂದ ಕ್ರಿಯಾಶೀಲ ಮಾಧ್ಯಮ - ಈ ಎಲ್ಲಾ ಆವಿಷ್ಕಾರಗಳಿರದಿದ್ದರೆ ಯೂರೋಪಿನ ವೈಜ್ಞಾನಿಕ ಯಶಸ್ಸು ಸಾಧ್ಯವಾಗುತ್ತಿರಲಿಲ್ಲ.

ಅಂತೆಯೇ, ಯೂರೋಪಿನ ವಿಜ್ಞಾನ ಭೌತ-ಗಣಿತ ಮಾದರಿಗಳಿಂದ ಅದ್ಭುತ ಯಶಸ್ಸನ್ನು ಗಳಿಸಿದ್ದನ್ನು ಗಮನಿಸಿದರೆ, ಭಾರತೀಯರಿಗೆ ಭೌತ-ಗಣಿತ ಮಾದರಿಗಳಲ್ಲಿ ಇದ್ದ ಸಂಶಯದಿಂದ ಬಹಳಷ್ಟು ನಷ್ಟವಾಗಿರಬೇಕೆಂದು ತೋರುತ್ತದೆ. ಇದರೊಂದಿಗೆ ಮೌಖಿಕ ಪದ್ಧತಿಗೆ ಪ್ರಾಮುಖ್ಯವಿದ್ದು ದಾಖಲೆಗಳು ಹೆಚ್ಚಿಗೆ ಇಲ್ಲದಿದ್ದುದು, ಬರೆದಿಟ್ಟರೂ ಕ್ಲಿಷ್ಟವಾಗಿ, ಸಂಕ್ಷಿಪ್ತವಾಗಿ ಬರೆದಿಡುವ ಸಂಪ್ರದಾಯವಿದ್ದಿದ್ದರಿಂದ, ಭಾರತದಲ್ಲಿ ಆಧುನಿಕ ವಿಜ್ಞಾನದ ಬೆಳವಣಿಗೆಗೆ ಅಡ್ಡಬಂದಿತು.

ಹೀಗೆ ಕಾರಣಾಂತರಗಳಿಂದ ತನ್ನನ್ನು ತಾನೇ ಕಟ್ಟಿಹಾಕಿಕೊಂಡ ಇಂಡಿಯಾದಲ್ಲಿ ಆಧುನಿಕ ವಿಜ್ಞಾನದ ಹುಟ್ಟು ಸಾಧ್ಯವಿರಲಿಲ್ಲವಾದರೂ, ಈಗಿನ ಹಾಗೂ ಮುಂದಿನ ಪೀಳಿಗೆಯ ಭಾರತೀಯ ವಿಜ್ಞಾನಿಗಳಿಗೆ ಈ ಅಡೆತೊಡೆಗಳಿಲ್ಲದಿರುವುದು ಸಮಾಧಾನಕರ ಸಂಗತಿ ಎಂಬ ಆಶಾಭಾವನೆಯಲ್ಲಿ ಚರ್ಚೆ ಮುಕ್ತಾಯವಾಯಿತು.

ದೂರದಲ್ಲಿ ನೆಲೆಸಿರುವ ಆಸಕ್ತರು ಭೂಮಿಕಾ ಚರ್ಚೆಯಲ್ಲಿ ದೂರವಾಣಿಯ ಮೂಲಕ ಭಾಗವಹಿಸಬಹುದು. ಈ ಅವಕಾಶ ಕಲ್ಪಿಸುವ ಪ್ರಯತ್ನ ನಡೆಯುತ್ತಿದೆ. ಆಸಕ್ತರು ಭೂಮಿಕಾದ ಕಾರ್ಯಕರ್ತರನ್ನು ಸಂಪರ್ಕಿಸಿ :

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X