ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಿವಾಸಿ ಭಾರತೀಯರ ಮಕ್ಕಳಿಗೆ ‘ವಿದ್ಯಾರ್ಥಿ ವೇತನ’

By Staff
|
Google Oneindia Kannada News


ಭಾರತದಲ್ಲಿ 2007-08ನೇ ಸಾಲಿನಲ್ಲಿ ಉನ್ನತ ವ್ಯಾಸಂಗ ಹಾಗೂ ತಾಂತ್ರಿಕ ಶಿಕ್ಷಣವನ್ನು ಅಭ್ಯಸಿಸಲು ಬಯಸುವ ಅನಿವಾಸಿಗಳ ಮಕ್ಕಳಿಗೆ, ವಿದ್ಯಾರ್ಥಿ ವೇತನ ನೀಡುವುದಾಗಿ ಸಾಗರದಾಚೆಗಿನ ಭಾರತೀಯ ವ್ಯವಹಾರಗಳ ಕಚೇರಿ ಪ್ರಕಟಿಸಿದೆ.

ಭಾರತ ಸರ್ಕಾರ ಸ್ವಾವ ು್ಯದ ಎಜುಕೇಷನ್‌ ಕನ್ಸಲ್‌ಟೆಂಟ್‌ ಇಂಡಿಯಾ ಲಿ. (Educational Consultants India Limited- EdCIL) ಸಂಸ್ಥೆಯು ನೋಡಲ್‌ ಏಜೆನ್ಸಿಯಾಗಿ ವಿದ್ಯಾರ್ಥಿ ವೇತನ ವಿತರಣಾ ಪ್ರಕ್ರಿಯೆ ಕಾರ್ಯವನ್ನು ನಿರ್ವಹಿಸಲಿದೆ.

ಅರ್ಹತೆ ಆಧಾರದ ಮೇಲೆ ಅನಿವಾಸಿಗಳ ಮಕ್ಕಳು ದಾಖಲಾತಿ ಮೊದಲು ಹಾಗೂ ದಾಖಲಾತಿಯ ನಂತರ EdCIL ಸಂಸ್ಥೆಯ ಸಹಾಯ ಪಡೆಯಬಹುದು. ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಪ್ರತಿ ವಿದ್ಯಾರ್ಥಿಗೆ 1,800 ಡಾಲರ್‌(80,000 ರೂ.) ದೊರೆಯಲಿದೆ. 100 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.

ಯಾರೆಲ್ಲ ಅರ್ಹರು?

ಅಮೆರಿಕ, ಇಂಗ್ಲೆಂಡ್‌, ಆಸ್ಟ್ರೇಲಿಯಾ, ಸಿಂಗಪುರ, ಬಹರೇನ್‌, ಕೆನೆಡಾ, ಫಿಜಿ, ಫ್ರಾನ್ಸ್‌, ಜರ್ಮನಿ, ಗಯಾನಾ, ಜಮೈಕಾ, ಮಲೇಷಿಯಾ, ಮಾರಿಷಸ್‌, ನೆದರ್‌ಲ್ಯಾಂಡ್‌, ನ್ಯೂಜಿಲ್ಯಾಂಡ್‌, ದಕ್ಷಿಣ ಆಫ್ರಿಕ, ಟ್ರಿನಿಡಾಡ್‌ ಮತ್ತು ಟೋಬಾಕೋ ಸೇರಿದಂತೆ ಒಟ್ಟು 39 ರಾಷ್ಟ್ರಗಳ ಅನಿವಾಸಿ ಭಾರತೀಯರು, ಈ ವಿದ್ಯಾರ್ಥಿ ವೇತನದ ಪ್ರಯೋಜನವನ್ನು ಪಡೆಯಬಹುದಾಗಿದೆ.

ವಾಣಿಜ್ಯ, ಇಂಜಿನೀಯರಿಂಗ್‌, ಮ್ಯಾನೇಜ್‌ಮೆಂಟ್‌, ಪತ್ರಿಕೋದ್ಯಮ, ಕೃಷಿ ಸೇರಿದಂತೆ ಅನೇಕ ವಿಷಯಗಳ ಆಧಾರದ ಮೇಲೆ ಅನಿವಾಸಿ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆಯಬಹುದಾಗಿದೆ. ವೈದ್ಯಕೀಯಕ್ಕೆ ಸಂಬಂಧಿಸಿದ ಕೋರ್ಸ್‌ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವೃತ್ತಿ ಶಿಕ್ಷಣ ಹಾಗೂ ಇನ್ನಿತರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪದವಿ ಪೂರ್ವ ವಿದ್ಯಾರ್ಥಿಗಳಿಗೂ ಕೂಡ ಈ ವಿದ್ಯಾರ್ಥಿ ವೇತನ ಅನ್ವಯವಾಗಲಿದೆ.

ಅರ್ಜಿ ಸಲ್ಲಿಕೆ ಹೇಗೆ?

ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವವರಿಗೆ ಮಾರ್ಚ್‌ 31, 2007 ಕೊನೆಯ ದಿನಾಂಕ. 17ರಿಂದ 21 ವರ್ಷ ವಯೋಮಿತಿಯ (ಅಕ್ಟೋಬರ್‌ 01, 2007ಕ್ಕೆ ಹೊಂದುವಂತೆ) ಆಸಕ್ತ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಬೇಕಾದ ವಿಳಾಸ :

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X