• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆಜ್‌ ಕಹೇಂಗೆ ದಿಲ್‌ಕಾ ಫಸಾನಾ... ಜಾನ್‌ಭಿ ಲೇಲೇ...

By Staff
|

‘ಚೆಲುವೆಯೇ ನಿನ್ನ ನೋಡಲು... ಮಾತುಗಳು ಬರದವನು, ಬರೆಯುತ ಹೊಸ ಕವಿತೆಯ... ಹಾಡುತ ನೋಡಿ ನಿಲ್ಲುವನು..ಚೆಲುವೆಯೇ...’ ಹೌದು, ಚೆಂದಕ್ಕಿಂತ ಚೆಂದ ಎನ್ನುವಂತಿದ್ದಳು; ಮಧುಬಾಲಾ! ಫೆ.23ಬಂದರೆ, ಆ ಸುಂದರಿ ನಮ್ಮಿಂದ ದೂರವಾಗಿ 37ವರ್ಷಗಳು ತುಂಬುತ್ತವೆ. ಈ ಸಂದರ್ಭದಲ್ಲಿ ಮಧುಬಾಲಾ ಯಶಸ್ಸು, ಕಷ್ಟ, ಸಂಕಷ್ಟ, ಸಾಯುವಾಗಿನ ಯಾತನೆಗಳ ಸುತ್ತ ಒಂದು ಸುತ್ತು.

A Thing of beauty is joy for ever1933 ಫೆಬ್ರವರಿ 14ರಂದು ದೆಹಲಿಯಲ್ಲಿ ನೆಲೆಸಿದ್ದ ಅತೌವುಲ್ಲಾಖಾನನ ಮನೆಯಲ್ಲಿ ಐದನೆಯ ಹೆಣ್ಣು ಕೂಸು ಹುಟ್ಟಿತು. ಮಗುವನ್ನು ಹರಸಲು ಬಂದ ಫಕೀರನೊಬ್ಬ ‘ಈ ಹುಡುಗಿಗೆ ಮುಮ್ತಾಜ್‌ ಎಂದು ಹೆಸರಿಡಿ, ಈ ಮಗು ನಿಮಗೆ ಹಣ, ಹೆಸರು ಎರಡನ್ನೂ ತರುತ್ತಾಳೆ. ಆದರೆ ಅತಿ ಚಿಕ್ಕ ವಯಸ್ಸಿನಲ್ಲಿಯೇ ಮರಣವನ್ನಪ್ಪುತ್ತಾಳೆ’ ಎಂದು ಭವಿಷ್ಯವಾಣಿ ಹೇಳಿದ. ಫಕೀರನ ಭವಿಷ್ಯವಾಣಿ ನಿಜವಾಗುತ್ತದೆ ಎಂಬ ನಂಬಿಕೆ ಇನ್ನು ಯಾರಿಗಿತ್ತೋ ಇಲ್ಲವೋ ಮುಮ್ತಾಜಳ ತಂದೆ ಅತೌವುಲ್ಲಾಖಾನನಿಗಿತ್ತು.

ದೆಹಲಿಯಲ್ಲಿ ನೆಲೆಸಿದ್ದ ಮಮ್ತಾಜಳ ತಂದೆ ಆತೌವುಲ್ಲಖಾನನಿಗೆ ಹನ್ನೊಂದು ಮಕ್ಕಳು. ಕುದುರೆಗಾಡಿಯಿಂದ ಬರುತ್ತಿದ್ದ ಹಣದಲ್ಲಿ ಜೀವನ ಕಷ್ಟವಾಗಿತ್ತು. ಉದರ ಪೋಷಣೆ, ಅದೃಷ್ಟ ಖುಲಾಯಿಸಬಹುದು ಎಂಬ ನಂಬಿಕೆ ಮುಂಬಯಿಯತ್ತ ವಲಸೆ ಬರುವಂತೆ ಮಾಡಿತು. ಮಾಯಾನಗರಿ ಮುಂಬಯಿಯಲ್ಲಿ ಜೀವನೋಪಾಯಕ್ಕಾಗಿ ಸಣ್ಣಪುಟ್ಟ ಕೆಲಸ ಮಾಡಿದರೂ, ವೇಳೆ ಸಿಕ್ಕಾಗ ಶೂಟಿಂಗ್‌ ನಡೆಯುವ ಸ್ಥಳಗಳಲ್ಲಿ, ಬಾಂಬೆ ಟಾಕೀಸಿನ ಆಫೀಸಿನ ಮುಂದೆ, ಫಿಲ್ಮ್‌ ಸಿಟಿಯ ಮುಂದೆ ಅವಕಾಶಕ್ಕಾಗಿ ಮಗಳೊಡನೆ ಕಾಯುವಿಕೆ ಕಾಯಕವಾಗಿತ್ತು.

ಅದೃಷ್ಟವಶಾತ್‌ ಬಸಂತ್‌ ಎನ್ನುವ ಚಿತ್ರಕ್ಕಾಗಿ ಬಾಲನಟಿಯ ಅವಶ್ಯಕತೆ ಇತ್ತು. ಮುದ್ದಾಗಿದ್ದ ಮುಮ್ತಾಜಳ ಅದೃಷ್ಟ ಖುಲಾಯಿಸಿತು. ಬಸಂತ್‌(1942) ಚಿತ್ರಕ್ಕೆ ಬಾಲನಟಿಯಾಗಿ ಆಯ್ಕೆಯಾದ ಮಮ್ತಾಜ್‌ ಮತ್ತೆ ಕಷ್ಟದತ್ತ ತಿರುಗಿ ನೋಡಲೇ ಇಲ್ಲ. ಫಕೀರನ ಭವಿಷ್ಯವಾಣಿ ಹುಸಿಯಾಗಲಿಲ್ಲ.

ಬೇಬಿ ಮಮ್ತಾಜ್‌ ಬಣ್ಣ ಹಚ್ಚಿದಳು!

ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಮುಮ್ತಾಜ್‌ ಅಲ್ಲಿನ ಬೆರಗಿಗೆ ಮರುಳಾದಳು. ತಾನೂ ದೊಡ್ಡ ತಾರೆಯಾಗುವ ಕನಸು ಕಂಡಳು. ಹಣ ತರುವ ನಟನೆಗೆ ಪಠಾಣ ತಂದೆ ಅತೌವುಲ್ಲಾಖಾನನ ಪ್ರೋತ್ಸಾಹವೂ ತುಂಬಿತ್ತು. 8 ವರುಷದ ಕನ್ಯೆಯ ಕನಸು ನನಸಾಗಲು ಕೆಲ ಕಾಲ ಕಾಯಬೇಕಿತ್ತು.

ಈ ಮಧ್ಯೆ ಬಾಲನಟಿಯಾಗಿ ಕೆಲವು ಚಿತ್ರಗಳಲ್ಲಿ ಅವಕಾಶ ಸಿಕ್ಕಿತು. ಬಸಂತ್‌ ಚಿತ್ರದಲ್ಲಿ ಬಾಲ ನಟಿಯ ರೂಪ, ನಟನೆ ಕಂಡಿದ್ದ ಅಂದಿನ ಹೆಸರಾಂತ ಚಿತ್ರನಟಿ ದೇವಿಕಾರಾಣಿ ಮುಮ್ತಾಜಳನ್ನು ‘ಜವರ್‌ ಭಾತ್‌’ಎಂಬ ಚಿತ್ರಕ್ಕಾಗಿ ಆಯ್ಕೆ ಮಾಡಿ ಮುಮ್ತಾಜಳಿಗೆ ಮಧುಬಾಲ ಎಂದು ನಾಮಕರಣ ಮಾಡಿದಳು. ಈ ಚಿತ್ರದ ಸೆಟ್ಟಿನಲ್ಲಿ ಮೊದಲ ಬಾರಿ ಮಧುಬಾಲ-ದಿಲೀಪರ ಭೇಟಿಯಾಯಿತು. ಆ ಚಿತ್ರ ಸೆಟ್ಟೇರಲೇ ಇಲ್ಲ. ಇತ್ತ ತಂದೆಯ ಅಂಕೆಯಲಿ, ಒಡಹುಟ್ಟಿದವರ ಪೋಷಣೆಗಾಗಿ ಬೇಬಿ ಮುಮ್ತಾಜಳ ನಟನೆ ಮುಂದುವರೆದಿತ್ತು.

ಚೆಲುವು ಕಂಡು ಮೂಕರಾದರು!

ಬಾಲ್ಯ ಕಳೆದು ಯೌವ್ವನ ಕಾಲಿಟ್ಟಿತು. ಕೇದಾರಶರ್ಮರ ನಿರ್ದೇಶನದಲ್ಲಿ ರಾಜ್‌ಕಪೂರ್‌ ಜೊತೆ ‘ನೀಲ್‌ ಕಮಲ್‌(1947)’ ಚಿತ್ರದಲ್ಲಿ 14ರ ಮಧುಬಾಲ ನಾಯಕಿಯಾದಳು. ಆ ಚಿತ್ರದಲ್ಲಿ ಅವಳ ನಟನೆ ಗಮನಕ್ಕೆ ಬರದಿದ್ದರೂ, ಅವಳ ಪುಟವಿಟ್ಟ ಚಿನ್ನದಂತ ಸೌಂದರ್ಯ ಚಿತ್ರರಂಗದ ನಿರ್ಮಾಪಕ, ನಿರ್ದೇಶಕರನ್ನು ಗಮನ ಸೆಳೆಯಿತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more