ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಞಾನ-ಮತಿ-ಸೃಷ್ಟಿ : ಏನಿದು ಇವೆಲ್ಲ?

By Staff
|
Google Oneindia Kannada News


ಮಾನವ ಚಟುವಟಿಕೆುುಂ ಎಲ್ಲಾ ಕ್ಷೇತ್ರಗಳಲ್ಲೂ, ಕ್ಷೇತ್ರಮಾಹಿತಿ ಇಲ್ಲದೇ, ಪ್ರವರ್ತಕರಾಗಿ, ಪ್ರಥಮಾನ್ವೇಷಕರಾಗಿ, ಸೃಷ್ಟಿರ್ಕಾುುಂ ಮಾಡಿದ ಮೇಧಾವಿಗಳ ನಿದರ್ಶನಗಳು ನಮಗೆ ಸಾಕಷ್ಟು ದೊರೆುುುಂತ್ತವೆ. ಇಲ್ಲಿ ಕ್ಷೇತ್ರಮಾಹಿತಿುುಂ ಅವಶ್ಯಕತೆುುಂನ್ನು ಸಂಪೂರ್ಣವಾಗಿ ತಳ್ಳಿಹಾಕಲೂ ಸಾಧ್ಯವಿಲ್ಲ. ಒಂದು ರೀತಿುುಂಲ್ಲಿ ಇಂಥ ಸೃಷ್ಟಿಕರ್ತರಲ್ಲಿ ಮಾನವಕುಲದ ಪರಂಪರೆಯಿಂದ ಬಂದ ಅಪ್ರಜ್ಞಾನ, ಪರಿಸರದಿಂದ ತಾನಾಗೇ ಗಳಿಸಿದ ಅಪ್ರಜ್ಞಾನ, ಮತ್ತು ಆ ವಿಷುುಂಕ್ಷೇತ್ರದ ಪರಿಸರದಿಂದ ಬಂದ ಮೂಲಭೂತವಾದ ಪ್ರಜ್ಞಾನ ಇವು ಮೈಗೂಡಿಕೊಂಡಿರಲೇಬೇಕು. ಹೀಗಾಗಿ ಮೇಲಿನ ಹೇಳಿಕೆುುಂಲ್ಲಿ ‘ಕ್ಷೇತ್ರಮಾಹಿತಿ ಇಲ್ಲದೇ’ ಅನ್ನುವುದಕ್ಕಿಂತ ‘ಆಳವಾದ ಕ್ಷೇತ್ರಮಾಹಿತಿ ಇಲ್ಲದೇ’ ಅನ್ನುವುದು ಹೆಚ್ಚು ಉಚಿತ. ಈ ಚರ್ಚೆ ಸ್ವಾಭಾವಿಕವಾಗಿ ‘ಸೃಷ್ಟಿರ್ಕಾುುಂಕ್ಕೆ (ಆಳವಾದ) ಕ್ಷೇತ್ರಮಾಹಿತಿ ಪೂರಕವೋ ಅಥವಾ ಹಾನಿಕಾರಕವೋ?’ ಎಂಬ ಪ್ರಮುಖವಾದ ಪ್ರಶ್ನೆುೊಂಂದನ್ನು ನಮ್ಮ ಮುಂದೆ ಒಡ್ಡುತ್ತದೆ.

ಕ್ಷೇತ್ರಮಾಹಿತಿ ಆಳವಾಗಿದ್ದಲ್ಲಿ, ಸಂಪೂರ್ಣವಾಗಿದ್ದಲ್ಲಿ, ಅದು ಒಂದು ರೀತಿುುಂ ಪಕ್ಷಪಾತವನ್ನು, ಪೂರ್ವಗ್ರಹವನ್ನು ವ್ಯಕ್ತಿುುಂ ಮನದಲ್ಲಿ ತಂದೊಡ್ಡಿ, ಬುದ್ಧಿ ಶಕ್ತಿುುಂ ಸ್ವೋಪಜ್ಞತೆುುಂನ್ನು ತೀಕ್ಷ್ಣತೆುುಂನ್ನು ಕುಂಠಿತಗೊಳಿಸುವ ಸಾಧ್ಯತೆ ಏಳುತ್ತದೆ. ಇಲ್ಲಿ ಪುನಃ ಶ್ರೀನಿವಾಸ ರಾಮಾನುಜನ್‌ ಅವರ ಉದಾಹರಣೆುುಂನ್ನು ಉಲ್ಲೇಖಿಸಬಹುದು (1). ಅವರು ಭಾರತದಲ್ಲಿ ಹೈಸ್ಕೂಲು ವಿದ್ಯಾಭ್ಯಾಸ ಮುಗಿಸಿದ ನಂತರ, ಅತ್ಯುನ್ನತ ಮಟ್ಟದ ವಿಶ್ವವಿದ್ಯಾನಿಲುುಂಗಳಲ್ಲೊಂದಾದ ಇಂಗ್ಲೆಂಡಿನ ಕೇಂಬ್ರಿಜ್ಜಿನಲ್ಲಿ ವ್ಯಾಸಂಗಿಕ ತರಪೇತು ಪಡೆದರು. ಇದರಿಂದಾಗಿ ಅವರ ಬುದ್ಧಿ ಮತ್ತೆುುಂ ಸ್ವಂತಿಕೆ ಮತ್ತು ತೀಕ್ಷ್ಣತೆ ಆ ತರಪೇತನ್ನು ಪಡೆುುುಂವ ಮುಂಚೆ ಅವರು ಭಾರತದಲ್ಲಿದ್ದಾಗಿನ ಮಟ್ಟಕ್ಕಿಂತ ಕ್ಷೀಣಿಸಿರಬಹುದೆಂದು ಅವರು ಸೃಷ್ಟಿಸಿದ ಸಿದ್ಧಾಂತಗಳಿಂದ ತಜ್ಞರು ತರ್ಕಿಸಿದ್ದಾರೆ.

ಕೇವಲ ಜ್ಞಾನದಿಂದೊಂದರಿಂದಲೇ ಸೃಷ್ಟಿರ್ಕಾುುಂ ಕಷ್ಟ. ವಿವೇಚನೆ ಮಾಡಿ ಹೊಸ ಪ್ರಜ್ಞಾನ ಬೆಳೆಸಿಕೊಳ್ಳಬೇಕಾದರೆ ಬುದ್ಧಿ ಶಕ್ತಿ ಬೇಕು. ಅಂದರೆ ಬುದ್ಧಿುುಂ ಬಲದಿಂದ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು. ಆದರೆ ಇದರ ವಿಲೋಮ ಪ್ರಾುುಂಶಃ ಅಸಾಧ್ಯವಾದುದು. ಬುದ್ಧಿ ಶಕ್ತಿಗೂ ಜ್ಞಾನಕ್ಕೂ ಇರುವ ಈ ಸಂಬಂಧ, ವ್ಯತ್ಯಾಸ, ಮತ್ತು ಸಹಕ್ರಿುೆುಂ ಕಂಪ್ಯೂಟರ್‌ ವಿಜ್ಞಾನದ ಒಂದು ಶಾಖೆುೂಂದ ಆರ್ಟಿಫಿ ಶಿಯಲ್‌ ಇಂಟೆಲಿಜನ್ಸ್‌ನ ಸಂಶೋಧಕರಿಗೆ ಅತಿ ಕಷ್ಟತರವಾದ ಸವಾಲುಗಳನ್ನು ತಂದೊಡ್ಡಿವೆ. ಹೆಚ್ಚಾಗಿ ಜ್ಞಾನ ಶಕ್ತಿುುಂ ಆಧಾರದ ಮೇಲೇ ಕೃತ್ರಿಮ ಬುದ್ಧಿ ಶಕ್ತಿುುಂನ್ನು ಬೆಳೆಸಲು ಹೊರಟ ಈ ಕ್ಷೇತ್ರದಲ್ಲಿನ ಪ್ರುುಂತ್ನಗಳು ಇಲ್ಲಿುುಂ ತನಕ ಅಷ್ಟೊಂದು ಂುುಶಸ್ಸನ್ನು ಕಂಡಿಲ್ಲ. ಏನೇ ಇರಲಿ, ಜ್ಞಾನ ಮತ್ತು ಬುದ್ಧಿ ಶಕ್ತಿಗಳೆರಡೂ ಒಟ್ಟಾಗಿ ಸಹಕ್ರಿುೆುುೊಂಂಂದಿಗೆ, ಸಮಷ್ಟಿ ಪರಿಣಾಮದೊಂದಿಗೆ ಕೆಲಸ ಮಾಡುವುದು ಸಾಮಾನ್ಯ ಬುದ್ಧಿಜೀವಿಗಳ ಸೃಜನ ಶೀಲತೆಗೆ ಅತ್ಯಗತ್ಯವೆನ್ನಬಹುದು.

ಜ್ಞಾನಕ್ಕೂ ಬುದ್ಧಿ ಶಕ್ತಿಗೂ ನಡುವೆ ನಡೆುುುಂವ ಅಂತರ್ಕ್ರಿುೆುಂಗಳಿಗೂ ನಮ್ಮ ವಿದ್ಯಾಭ್ಯಾಸದ ತರಪೇತಿನ ವ್ಯವಸ್ಥೆಗೂ ಒಂದು ರೀತಿುುಂ ಸಂಬಂಧವಿದೆ. ನಮ್ಮಲ್ಲಿ ಹೆಚ್ಚಿನ ವ್ಯಾಸಂಗಿಕ ವಿದ್ಯೆ ಸಾಮಾನ್ಯವಾಗಿ ಜ್ಞಾನಗಳಿಕೆಗೆ ಸಹಾುುಂವಾಗುತ್ತದೆ. ಅಂದರೆ ಅಂಥಾ ವಿದ್ಯೆುುಂ ಒತ್ತು ಹೆಚ್ಚಾಗಿ ನಮ್ಮ ತಿಳುವಳಿಕೆುುಂನ್ನು ಊರ್ಜಿತಗೊಳಿಸುವುದರಲ್ಲೇ ನೆಲೆಸಿರುತ್ತದೆ. ನಮ್ಮ ಸೃಷ್ಟಿಶಕ್ತಿುುಂನ್ನು ಪಳಗಿಸುವುದರ ಕಡೆಗೆ ಅದರ ಗಮನ ಅಷ್ಟಾಗಿರುವುದಿಲ್ಲ. ಮಾನವಕುಲದ ಅಭ್ಯುದುುಂಕ್ಕೆ ಸೃಷ್ಟಿಕ್ರಿುೆುಂ ಅಗತ್ಯವೆಂದಮೇಲೆ, ನಮ್ಮ ಸೃಜನ ಶೀಲತೆುುಂನ್ನು ಉತ್ತಮಗೊಳಿಸುವ ದಿಕ್ಕಿನಲ್ಲಿ ಬುದ್ಧಿ ಶಕ್ತಿುುಂ ಸರಿುೂಂದ ಉಪುೋಂಗದ ತರಪೇತನ್ನೂ ಕೊಡುವುದು ತುಂಬಾ ಮುಖ್ಯವೆನಿಸುತ್ತದೆ. ಅಂಥಾ ತರಪೇತು ಸಿಕ್ಕಿದಲ್ಲಿ ನಮ್ಮ ಸೃಷ್ಟಿಶಕ್ತಿುುಂನ್ನು ಹೆಚ್ಚಿಸಿಕೊಳ್ಳುವುದರ ಜತೆಗೇ, ನಮ್ಮ ನಮ್ಮ ಬುದ್ಧಿ ಶಕ್ತಿಗನುಗುಣವಾಗಿ, ಅದನ್ನು ಸರಿುೂಂಗಿ ಉಪುೋಂಗಿಸಿಕೊಳ್ಳುವ ಮಾಹಿತಿುುೂಂ ದೊರಕಿ, ಅದನ್ನು ನಮ್ಮ ದಿನ ಜೀವನದಲ್ಲಿ ಪ್ರಶಸ್ತ ಮಟ್ಟದಲ್ಲಿ ಬಳಸಿಕೊಳ್ಳಲೂ ಸಾಧ್ಯವಾಗಬಹುದೇನೋ.

ಗು3, ಗು1ಂ : ಪ್ರತಿಭೆುೊಂಂದರಿಂದಲೇ ಸೃಷ್ಟಿರ್ಕಾುುಂ ಸಾಧ್ಯವೆಂದು ಈ ಹಿಂದೆ ಚರ್ಚಿಸಿದೆವು. ಈ ದೃಷ್ಟಿುುಂಲ್ಲಿ ನೋಡಿದರೆ ಇದೊಂದು ಅನನ್ಯ ಶಕ್ತಿ. ಪ್ರತಿಭೆುುಂ ಜತೆ ಒಬ್ಬ ವ್ಯಕ್ತಿುುಂಲ್ಲಿ ಪ್ರಬಲವಾದ ಬುದ್ಧಿ ಶಕ್ತಿುುೂಂ ಸೇರಿದ್ದಲ್ಲಿ, ಆ ಪ್ರತಿಭೆಯಿಂದ ಹೊಮ್ಮುವ ಸೃಷ್ಟಿರ್ಕಾುುಂ ಇನ್ನೂ ವರ್ಧಿಸಿ, ಪರಿಷ್ಕಾರ ಪಡೆದು, ಆ ಪ್ರತಿಭೆುುಂ ಕ್ಷೇತ್ರದಲ್ಲಿ ಆ ವ್ಯಕ್ತಿ ಹೊಸ ಹೊಸ ಆಂುೂಮಗಳನ್ನು ಕಂಡುಕೊಳ್ಳುವ ಸಾಧ್ಯತೆ ಹೆಚ್ಚುವುದು.

ಗು2, ಗು9 : ಅಂತರ್ಜ್ಞಾನಕ್ಕೆ ಸ್ವಲ್ಪ ಮಟ್ಟಿಗೆ ತನ್ನದೇ ಆದ ಸೃಷ್ಟಿಶಕ್ತಿ ಇರಬಹುದೆಂದು ಈ ಹಿಂದೆ ವಾದಿಸಿದೆವು. ಇದು ಬುದ್ಧಿ ಶಕ್ತಿುೊಂಂದಿಗೆ ಸೇರಿದಾಗ ಉಂಟಾಗುವ ಸುೋಂಂಜನೆ ಅತ್ಯಂತ ಪ್ರಬಲವೂ ಮತ್ತು ಸೃಷ್ಟಿುುಂ ದೃಷ್ಟಿಯಿಂದ ಹೇರಳ ಉತ್ಪಾದಕತೆುುಂ ಸಾಮರ್ಥ್ಯವುಳ್ಳದ್ದೂ ಆಗುವುದು ಸಾಧ್ಯ. ಸಂಶೋಧನಾ ಕ್ಷೇತ್ರಗಳಲ್ಲಂತೂ ಈ ಸುುುಂಂಕ್ತ ಶಕ್ತಿಯಿರುವ ವ್ಯಕ್ತಿಗೆ ಇದೊಂದು ವರವೇ ಸರಿ.

ಗು15: ಜ್ಞಾನ, ಅಂತರ್ಜ್ಞಾನ, ಮತ್ತು ಬುದ್ಧಿ ಶಕ್ತಿಗಳೊಂದಿಗೆ ಪ್ರತಿಭೆುುೂಂ ಸೇರಿ, ಎಲ್ಲಾ ಅಂಶಗಳೂ ಪ್ರಬಲವಾದ ಮಟ್ಟದಲ್ಲಿ ಒಬ್ಬ ವ್ಯಕ್ತಿುುಂಲ್ಲಿ ಇರುವುದಾದರೆ, ಆ ವ್ಯಕ್ತಿುೊಂಬ್ಬ ಮಹೋನ್ನತ ಮೇಧಾವಿುೂಂಗಿರುವುದರಲ್ಲಿ ಸಂದೇಹವಿಲ್ಲ. ಇಂಥ ವ್ಯಕ್ತಿಗಳು ನಮ್ಮಲ್ಲಿ ಬಹಳ ವಿರಳ.

ಸಾರಾಂಶ : ಜ್ಞಾನ ಮತ್ತು ಬುದ್ಧಿ ಮೂಲಭೂತವಾದ ಭಾವನಾರೂಪಗಳು. ಇವುಗಳಿಗೆ ಸಂಬಂಧಿಸಿದಂತೆ ಇರುವ ವಿಶಿಷ್ಟವಾದ ಉಪಕಲ್ಪನೆಗಳೆಂದರೆ ಅಂತರ್ಜ್ಞಾನ ಮತ್ತು ಪ್ರತಿಭೆ. ಮಾನವಕುಲದ ಸರ್ವತೋಮುಖದ ಏಳ್ಗೆುುಂಲ್ಲಿ ಸೃಷ್ಟಿುುಂ ಪಾತ್ರ ಅತ್ಯಂತ ಮೂಲಭೂತವಾದದ್ದು. ಸೃಷ್ಟಿಸುವುದು ಅತಿ ಮುಖ್ಯ ಕೆಲಸ; ಅದರಲ್ಲಿ ಸಿಗುವ ಅಂತರ್ತೃಪ್ತಿ ಅಪಾರ.

ಸೃಷ್ಟಿರ್ಕಾುುಂದಲ್ಲಿ ಬುದ್ಧಿುುಂ ಪಾತ್ರ ಕೇಂದ್ರೀುುಂ ಮತ್ತು ಮಹತ್ವಪೂರ್ಣ. ಜ್ಞಾನದಿಂದೊಂದರಿಂದಲೇ ಸೃಷ್ಟಿರ್ಕಾುುಂ ಕಷ್ಟ. ಜ್ಞಾನ ಮತ್ತು ಬುದ್ಧಿ ಶಕ್ತಿಗಳೆರಡೂ ಸಹಕ್ರಿುೆುುೊಂಂಂದಿಗೆ ಕೆಲಸಮಾಡುವುದು ಬುದ್ಧಿ ಜೀವಿಗಳ ಸೃಜನಶೀಲತೆಗೆ ಅತ್ಯಗತ್ಯ. ನಮ್ಮ ವ್ಯಾಸಂಗಿಕ ವಿದ್ಯೆ ಕೇವಲ ಜ್ಞಾನಗಳಿಕೆಗೇ ಸೀಮಿತವಾಗಿರದೆ, ಸೃಷ್ಟಿಶಕ್ತಿುುಂನ್ನು ಊರ್ಜಿತಗೊಳಿಸುವ ದಿಕ್ಕಿನಲ್ಲೂ ಗಮನ ಹರಿಸಿದರೆ, ಬುದ್ಧಿ ಶಕ್ತಿುುಂನ್ನು ಅತ್ಯುತ್ತಮ ಮಟ್ಟದಲ್ಲಿ ಬಳಸಿಕೊಳ್ಳುವ ತರಪೇತೂ ದೊರಕಿಸಿದಂತಾಗುತ್ತದೆ. ಜ್ಞಾನ, ಅಂತರ್ಜ್ಞಾನ, ಪ್ರತಿಭೆ, ಮತ್ತು ಬುದ್ಧಿ ಶಕ್ತಿ ಈ ಎಲ್ಲಾ ಅಂಶಗಳನ್ನೂ ಪ್ರಬಲವಾದ ಮಟ್ಟದಲ್ಲಿ ಹೊಂದಿರುವ ಮಹಾ ಮೇಧಾವಿಗಳು ಮಾನವಕುಲದಲ್ಲಿ ಅತ್ಯಂತ ದುರ್ಲಭ.

ಉಲ್ಲೇಖಗಳ ಪಟ್ಟಿ : (1) ರಾಬರ್ಟ್‌ ಕನೀಗಲ್‌, ‘ದ ಮ್ಯಾನ್‌ ಹೂ ನ್ಯೂ ಇನ್ಫ್‌ನಿಟಿ’, ಮ್ಯಾಕ್‌ಮಿಲ್ಲನ್‌ ಪಬ್ಲಿಶಿಂಗ್‌ ಕಂಪೆನಿ, ನ್ಯೂುೂಂರ್ಕ್‌, 1991.

(2) ಬ್ರೂಸ್‌ ಸಿ. ಬರ್ನ್ಡ್ಟ್‌, ‘ರಾಮಾನುಜನ್ಸ್‌ ನೋಟ್‌ಬುಕ್ಸ್‌, ಪಾರ್ಟ್ಸ್‌ 1-3’, ಸ್ಪ್ರಿಂಗರ್‌ ವರ್ಲಾಗ್‌, ನ್ಯೂುೂಂರ್ಕ್‌,1991.

(ನಹಿಜ್ಞಾನೇನ ಸದೃಶಂ ! ಹೌದು. ಮೇಲುನೋಟಕ್ಕೆ ಮೆಟಾ ಫಿಸಿಕ್ಸ್‌ನಂತೆ, ಒಮ್ಮೊಮ್ಮೆ ಇನ್‌ಆರ್‌ಗ್ಯಾನಿಕ್‌ ಕೆಮಿಸ್ಟ್ರಿಯಂತೆ ಕೆಲಮೊಮ್ಮೆ ಟ್ರಿಗ್ನಾಮಿಟ್ರಿಯಂತೆ ಭಾಸವಾಗುವ ; ಮನೊವ್ಯಾಪಾರಗಳನ್ನು ಪದರಪದರವಾಗಿ ಬಿಡಿಸಿನೋಡುವ ಈ ಪ್ರೌಢ ಪ್ರಬಂಧವನ್ನು ಆಸಕ್ತಿಯಿಂದ-ತಾಳ್ಮೆಯಿಂದ ಓದಿದ ಜ್ಞಾನದಾಹಿ ಆನ್‌ಲೈನ್‌ ಕನ್ನಡಿಗರಿಗೆ ಧನ್ಯವಾದಗಳು. ದಟ್ಸ್‌ಕನ್ನಡ ಅತರ್‌ಜಾಲ ವಾಹಿನಿಯಲ್ಲಿ ಇಂಥ ಲೇಖನ ಪ್ರಕಟಗೊಳ್ಳುತ್ತಿರುವುದು ಇದೇ ಮೊದಲು. ನಿಮ್ಮ ಅಮೂಲ್ಯ ಅಭಿಪ್ರಾಯ ಕಾಣಿಕೆಗಳು ನಮಗೆ ತೀರ ಅಗತ್ಯ. ದಯಮಾಡಿ ತಿಳಿಸಿ. - ಸಂಪಾದಕ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X