ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಡಿಓಡಿ ಅಮೆರಿಕನ್ನಡಿಗ ದಂಪತಿಗಳಿಂದ ಲಿಮ್ಕಾ ರೆಕಾರ್ಡ್‌

By Staff
|
Google Oneindia Kannada News


Kiran and Padma, the Couple in Limca Records for most number of Marathons ಬೆಂಗಳೂರು : ಅಮೆರಿಕದಲ್ಲಿ ನೆಲೆಸಿರುವ ಕರ್ನಾಟಕ ಮೂಲದ ಸಾಫ್ಟ್‌ವೇರ್‌ ದಂಪತಿಗಳು, ತಮ್ಮ ಮ್ಯಾರಥಾನ್‌ ಓಟದಿಂದ ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದ್ದಾರೆ.

ಕಳೆದ ಐದಾರು ವರ್ಷಗಳ ಹಿಂದೆ ಐದು ಕಿ. ಮೀ ಕೂಡ ಓಡಿರದಿದ್ದ ಪದ್ಮಾ ಸುಬ್ಬರಾಯ ಹಾಗೂ ಕಿರಣ್‌.ಕೆ ದಂಪತಿಗಳು, ಇಂದು 42.2 ಕಿ.ಮೀ ಹಾಗೂ ಕ್ಲಿಷ್ಟಕರವಾದ ಅನೇಕ ಮ್ಯಾರಥಾನ್‌ ಓಟವನ್ನು ಪೂರೈಸಿ ದಾಖಲೆ ಮೆರೆದಿದ್ದಾರೆ.

ಸುಮಾರು 160 ಕಿ.ಮೀ(100ಮೈಲಿ) ದೂರವನ್ನು 29 ಘಂಟೆ, 40 ನಿಮಿಷಗಳ ಕಾಲ ಸತತ ಓಟದಿಂದ ಕ್ರಮಿಸಿದ ಮೊದಲ ಭಾರತೀಯ ಮಹಿಳೆ ಎಂಬ ಗೌರವಕ್ಕೆ ಪದ್ಮಾ ಪಾತ್ರರಾಗಿದ್ದಾರೆ.

ಮ್ಯಾರಥಾನ್‌ ದಂಪತಿಗಳು :

ಪದ್ಮಾ ಮೂಲತಃ ಶಿವಮೊಗ್ಗದವರು. ಕಿರಣ್‌ ಬಾಗಲಕೋಟೆಯವರು. ಬೆಳಗಾವಿಯ ಇಂಜಿನೀಯರಿಂಗ್‌ ಕಾಲೇಜಿನಲ್ಲಿ ಪದವಿ ಪಡೆದ ಈ ಇಬ್ಬರು ಈಗ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಪದ್ಮಾ ಅವರು ಮೈಕ್ರೊಸಾಫ್ಟ್‌ ಕಂಪೆನಿ ಹಾಗೂ ಕಿರಣ್‌ ಅವರು ಇನ್ಫೋಸಿಸ್‌ ಕಂಪೆನಿಯಲ್ಲಿ ಉದ್ಯೋಗಿಗಳು.

ಶಿಕ್ಷಣಕ್ಕಾಗಿ ಮ್ಯಾರಥಾನ್‌ :

ಪದ್ಮಾ ಅವರು ಇದುವರೆವಿಗೂ ಒಟ್ಟು 21 ಮ್ಯಾರಥಾನ್‌ , 10 ಅಲ್ಟ್ರಾ ಮ್ಯಾರಥಾನ್‌ ಮತ್ತು 2 ಟ್ರೆೃ ಮ್ಯಾರಥಾನ್‌ ಓಟವನ್ನು ಪೂರೈಸಿದ್ದಾರೆ. ಕಿರಣ್‌ ಅವರು 17 ಮ್ಯಾರಥಾನ್‌, 8 ಅಲ್ಟ್ರಾ ಮ್ಯಾರಥಾನ್‌ ಮತ್ತು 3 ಟ್ರೆೃ ಮ್ಯಾರಥಾನ್‌ ಓಟವನ್ನು ಪೂರೈಸಿದ್ದಾರೆ.

ಆಶಾ ಎಂಬ ಶಿಕ್ಷಣ ಸಂಸ್ಥೆಯ ಮೂಲಕ ಈ ದಂಪತಿಗಳು ಮ್ಯಾರಾಥಾನ್‌ ಓಟ ಪ್ರಾರಂಭಿಸಿದರು. ಮ್ಯಾರಥಾನ್‌ ಓಟದ ಮೂಲಕ ಸಾಮಾಜಿಕ , ಆರೋಗ್ಯ ಹಾಗೂ ಆರ್ಥಿಕ ಅಭಿವೃದ್ಧಿಯತ್ತ ಗಮನ ಹರಿಸಿದ್ದಾರೆ. ಕರ್ನಾಟಕವು ಸೇರಿದಂತೆ 9 ರಾಜ್ಯಗಳಲ್ಲಿ ಆಶಾ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.

ಗ್ರಾಮೀಣ ವಿಭಾಗದಲ್ಲಿನ ಶಿಕ್ಷಣ ಅಭಿವೃದ್ಧಿಗೆ ಶ್ರಮಿಸುವ ಸ್ವಾಮಿ ವಿವೇಕಾನಂದ ಸಂಸ್ಥೆಯ ಜತೆ ಜೈ ಜೋಡಿಸಿರುವ ಆಶಾ ಸಂಸ್ಥೆ , ಉತ್ತಮ ಶಿಕ್ಷಣವನ್ನು ಎಲ್ಲರಿಗೂ ತಲುಪಿಸುವ ಗುರಿ ಹೊಂದಿದೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X