• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂಟರ್ನೆಟ್‌ ಲೋಕದಲ್ಲಿ ಇ-ಕಾಮಣ್ಣರು

By Staff
|

ಇದು ಎನ್‌.ಬಿ.ಸಿ ಚಾನೆಲ್‌ನವರು ಲೋಕಲ್‌ ಪೋಲಿಸರೊಂದಿಗೆ ಸೇರಿಕೊಂಡು, ಅಪ್ರಾಪ್ತ ವಯಸ್ಸಿನ ಬಾಲಕಿಯರೊಂದಿಗೆ ಲೈಂಗಿಕ ಸಂಬಂಧ ಬೆಳೆಸಲು ಬರುವ ಇಂಟರ್ನೆಟ್‌ ಅತಿಥಿಗಳ ತಿಥಿ ಮಾಡಲು ತೋಡಿರುವ ಖೆಡ್ಡಾ. ಎನ್‌.ಬಿ.ಸಿ ಯವರು ಈ ಆಪರೇಷನ್‌ಗೆ ಇಟ್ಟಿರುವ ಹೆಸರು To catch a internet predator.

ಕ್ಯಾಲಿಪೊರ್ನಿಯಾ ಬೇ ಏರಿಯಾದಲ್ಲಿ ನಡೆದ ಇಂತಹ ಒಂದು ಆಪರೇಷನ್‌ನಲ್ಲಿ ವಿವಿಧ ದೇಶ ಮತ್ತು ಜನಾಂಗಕ್ಕೆ ಸೇರಿದ ಸುಮಾರು 29 ಮಂದಿ ಸಿಕ್ಕಿ ಬಿದ್ದಿದ್ದಾರೆ. ಇವರಲ್ಲಿ 7 ಜನ ಭಾರತೀಯರು. ಆ ಏಳುಜನ ಭಾರತೀಯರಲ್ಲಿ, ಒಬ್ಬನು ಅಮೆರಿಕಾದ ಪ್ರತಿಷ್ಠಿತ ಎಲೆಕ್ಟ್ರಾನಿಕ್ಸ್‌ ಕಂಪನಿಯಲ್ಲಿ ಸೆಲ್ಸ್‌-ಮ್ಯಾನೇಜರ್‌ ಆಗಿ ಕೆಲಸ ಮಾಡುತ್ತಿದ್ದಾನೆ.

ಇನ್ನೊಬ್ಬ ಆಸಾಮಿಯ ಕತೆ ಕೇಳಿ: ಅವನೊಬ್ಬನೇ ಬರವುದಲ್ಲದೆ ತನ್ನ ಸ್ನೇಹಿತನನ್ನು ಕೂಡ ಜೊತೆಗೆ ಕರೆದುಕೊಂಡು ಬಂದ ಈ ಭೂಪನಿಗೆ ‘ಡಬ್ಬಲ್‌ ಡೇಟಿಂಗ್‌’ ಮಾಡುವ ತವಕವಂತೆ. ಇವರಿಬ್ಬರು ಮೂರು ತಿಂಗಳಿಗೋಸ್ಕರ ಬಿಸ್‌ನೆಸ್‌ ವೀಸಾದಲ್ಲಿ ಅಮೆರಿಕಾಗೆ ಬಂದ ಭಾರತದ ಸಾಫ್ಟ್‌ವೇರ್‌ ಇಂಜಿನಿಯರುಗಳಂತೆ. ಇವರಲ್ಲಿ ಕೆಲವರು ವರದಿಗಾರನ ಮುಖ ನೋಡುತ್ತಿದ್ದಂತೆ ಇಂಗು ತಿಂದ ಮಂಗನ ಹಾಗೆ ಹ್ಯಾಪು ಮೋರೆ ಹಾಕಿಕೊಂಡು, ಕ್ಯಾಮರಾದಿಂದ ಮುಖ ಮುಚ್ಚಿಕೊಂಡು ಹೊರಗೆ ಓಡಲು ಪ್ರಯತ್ನಿಸುತ್ತಾರೆ. ಇನ್ನು ಕೆಲವರು ವರದಿಗಾರನೊಂದಿಗೆ ವಾದಕ್ಕೆ ಇಳಿಯುತ್ತಾರೆ, ಇಂತವರಲ್ಲಿ ಒಬ್ಬನು ಕಂಪ್ಯೂಟರ್‌ ವಿಜ್ಞಾನದಲ್ಲಿ ಪಿ.ಎಚ್‌.ಡಿ ಮಾಡುತ್ತಿರುವ ಪ್ರಬುದ್ಧ .

ಈ ಭಾರತಿಯ ಕೊಟ್ಟ ಕಾರಣವೆಂದರೆ , ‘ಆ ಬಾಲಕಿ ನನ್ನ ತಂಗಿಯಿದ್ದ ಹಾಗೆ, ಅವಳು ಯಾವುದೋ ಕಷ್ಟಕ್ಕೆ ಸಿಲುಕಿರಬಹುದು ಎಂದುಕೊಂಡು ಸಹಾಯಕ್ಕೆ ಬಂದೆ’ ಎಂದು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ, ಈ ಮಹಾಶಯ ಇಂಟರ್ನೆಟ್‌ನಲ್ಲಿ ಆ ಬಾಲಕಿಯೂಂದಿಗೆ ಅಶ್ಲೀಲವಾಗಿ ಮಾತನಾಡಿದ ಸಾಲುಗಳನ್ನು ಆ ವರದಿಗಾರ ಓದುತ್ತಾ ಹೋದಾಗ ತಂಗಿಯ ಅಣ್ಣನ ಮುಖದ ಬಣ್ಣ ಡಾಂಬರಿನಂತೆ ಕಪ್ಪಿಟ್ಟು ಹೋಗುತ್ತದೆ. ವರದಿಗಾರನೊಂದಿಗೆ ವಿಚಾರಣೆ ಮುಗಿದೊಡನೆಯೆ ಇವರನ್ನು ಮನೆಯಿಂದ ಹೊರಗೆ ಕಳಿಸಲಾಗುತ್ತದೆ. ಸದ್ಯ ಬಜಾವಾದೆ ಎಂದುಕೊಂಡು ಇವರು ಮನೆ ಹೊರಗೆ ಕಾಲಿಡುವುದೇ ತಡ, ಹೊರಗೆ ನಿಂತ ಪೋಲಿಸರು ಆದರದಿಂದ ಸ್ವಾಗತಿಸಿ, ಇ-ಕಾಮಣ್ಣರಿಗೆ ಬೇಡಿ ಹಾಕಿ ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆ.

ಎನ್‌.ಬಿ.ಸಿ ಚಾನೆಲ್‌ ಪ್ರಕಾರ - ನ್ಯೂಯಾರ್ಕ್‌, ವಾಷಿಂಗ್ಟನ್‌ ಡಿ.ಸಿ, ಕ್ಯಾಲಿಪೋರ್ನಿಯಾ, ಓಹಾಯೋ , ಪ್ಲೋರಿಡಾ, ಜಾರ್ಜಿಯಾ, ಟೆಕ್ಸಸ್‌ ಮುಂತಾದ ಸ್ಥಳಗಳಲ್ಲಿ ಅಮೆರಿಕಾದ ಉದ್ದಗಲಕ್ಕೂ ನಡೆದ ಕಾರ್ಯಾಚರಣೆಯಲ್ಲಿ ವಿವಿಧದೇಶ ಮತ್ತು ಜನಾಂಗಕ್ಕೆ ಸೇರಿದ ಕಾಮಣ್ಣರನ್ನು ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಹಲವಾರು ವಿಚಾರಣೆಗಳು ಇನ್ನೂ ಲೋಕಲ್‌ ಕೋರ್ಟ್‌ಗಳಲ್ಲಿ ನಡೆಯುತ್ತಿದ್ದು, ಇಂತವರನ್ನು 20ರಿಂದ 30 ಸಾವಿರ ಡಾಲರ್‌ ಬೇಲ್‌ ಮೇಲೆ ಹೊರಗೆ ಬಿಡಲಾಗುತ್ತಿದೆಯಂತೆ. ಕಾನೂನು ಕ್ರಮಗಳನ್ನು ಮಾತ್ರ ಆಯಾ ಪ್ರದೇಶದ ಲೋಕಲ್‌ ಪೋಲಿಸರಿಗೆ ಬಿಟ್ಟಿದ್ದಾರಂತೆ.

21ನೇ ಶತಮಾನದ ಡೊಡ್ಡ ಕ್ರಾಂತಿ ಇಂಟರ್ನೆಟ್‌ ಎನ್ನುವುದರಲ್ಲಿ ಸಂಶಯವಿಲ್ಲ. ಇಂದಿನ ಅನೇಕ ಮಕ್ಕಳು ಹೋಮ್‌ವರ್ಕ್‌ ಮಾಡಲೆಂದು, ಗೇಮ್ಸ್‌ ಆಡಲೆಂದು, ಸ್ನೇಹಿತರೊಂದಿಗೆ ಚಾಟಿಂಗ್‌ ಮಾಡಲೆಂದು, ಹೀಗೆ ಹತ್ತು ಹಲವಾರು ವಿಷಯಕ್ಕೆ ಇಂಟರ್ನೆಟ್‌ಗೆ ಹೋಗುವುದು ಸಾಮಾನ್ಯ, ನಮ್ಮೆಲ್ಲರಿಗೂ ಇಂಟರ್ನೆಟ್‌ ಅದ್ಭುತವಾದ ಜಗತ್ತು. ಆದರೆ ಇಂಟರ್ನೆಟ್‌ ಕೂಡಾ ನಿಜವಾದ ಹೊರ ಜಗತ್ತಿನಂತೆ ವಿವಿಧ ಆಸಕ್ತಿ- ಮನೋಭಾವದ ಜನಗಳಿಂದ ಕೂಡಿದೆ. ಇದರಲ್ಲಿ ಬಹುಪಾಲು ಜನ ಸಭ್ಯನಡುವಳಿಕೆಯ ಮಹನೀಯರಿದ್ದಾರೆ, ಆದರೆ ಕೆಲವೇ ಕೆಲವು ಜನ ಅಸಭ್ಯರು, ಅನಾಗರಿಕರು ಇಂತಹ ಹೇಯ ಕೃತ್ಯಗಳಲ್ಲಿ ಪಾಲುಗೊಳ್ಳುತ್ತಾರೆ.

ಹಾಗಂತ ಇದೇ ಒಂದು ಕಾರಣ ಮುಂದಿಟ್ಟುಕೊಂಡು, ಇಂಟರ್ನೆಟ್‌ಯೆಂಬ ಅಪೂರ್ವ ಜಗತ್ತಿನಿಂದ ನಮ್ಮ ಮಕ್ಕಳನ್ನು ದೂರವಿಡುವುದು ಸಮಂಜಸವಲ್ಲ. ಇಂಟರ್ನೆಟ್‌ಗೆ ಹೋಗುವ ಮಕ್ಕಳನ್ನು ಪೋಷಕರಾದ ನಾವು ಉಸ್ತುವಾರಿವಹಿಸಿ ಇಂತಹ ಅಪಾಯಗಳಿಂದ ಅವರನ್ನು ಕಾಪಾಡುವುದು ನಮ್ಮ ಮುಂದೆ ಇರುವ ದೊಡ್ಡ ಕೆಲಸ. ಹೀಗೆ ನಡೆದಿದೆ ನೋಡಿ ಸ್ವಾಮಿ, ಮಾನವ ನಿರ್ಮಿತ ಈ ಇಂಟರ್ನೆಟ್‌ಯೆಂಬ ಆಕಾಶಕ್ಕೆ ಬೇಲಿಹಾಕುವ ಕೆಲಸ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X