ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಅಮೆರಿಕನ್ನಡಿಗರೇ, ಬನ್ನಿ ಪಿಕ್ಚರ್‌ಗೆ ಹೋಗೋಣ...’

By Staff
|
Google Oneindia Kannada News


ಅದೇ ಲಾಸ್‌ ಏಂಜಲಿಸ್‌ನ ಕರ್ನಾಟಕ ಸಾಂಸ್ಕೃತಿಕ ಸಂಘದ ಸಹಾಯದಿಂದ ಲಾಸ್‌ ಏಂಜಲಿಸ್‌ನಲ್ಲಿ ಕನ್ನಡ ಚಿತ್ರವನ್ನು ನೋಡುವ ಕನ್ನಡಿಗರಾದರೂ ಹುಟ್ಟಿಕೊಂಡಿದ್ದಾರೆ. ಇದರಿಂದ ಕನ್ನಡ ಸಂಘಕ್ಕೂ ಲಾಭವಾಗಿದೆ. ಸಂಘದ ಹೆಸರೇ ಕೇಳದವರು ಇಂತಹ ಸಂಘ ಇದೆಯೇ ಎಂದು ಚಿತ್ರ ನೋಡಲು ಬಂದವರು ಕನ್ನಡ ಸಂಘದ ಸದಸ್ಯರೂ ಆಗಿದ್ದಾರೆ.

ಇನ್ನು ಮಿಕ್ಕ ಊರಿನ ಕನ್ನಡ ಸಂಘಗಳನ್ನು ನೋಡೋಣ. ಬಹುತೇಕ ಇನ್ನೆಲ್ಲಾ ಕನ್ನಡ ಸಂಘಗಳು ತಾವೇ ಚಿತ್ರ ಪ್ರದರ್ಶಿಸುವ ಹೊಣೆ ಹೊತ್ತಿಕೊಳ್ಳುತ್ತಾರೆ. ಆದರೆ ಬರುವ ಹಣ? ಸಿಂಹ ಪಾಲು ಕನ್ನಡ ಸಂಘಕ್ಕೆ ಬೇಕು. ಇನ್ನು ಕೆಲವು ಕನ್ನಡ ಸಂಘದ ಅಧ್ಯಕ್ಷರುಗಳು ಪದಾಧಿಕಾರಿಗಳಿಗೆ ಉಚಿತ ಪ್ರವೇಶ ಬೇಕು ಹಾಗೂ ಹ್ಯಾಂಡಿ ಕ್ಯಾಮರ ಇಟ್ಟು ಚಿತ್ರ ಪ್ರದರ್ಶಿತವಾಗುತ್ತಿರುವಾಗ ಚಿತ್ರೀಕರಿಸಬೇಕು. ಸರಿಯಾಗಿ ಲೆಕ್ಕ ಕೊಡುವುದಿಲ್ಲ.

ನಾನು ಚಿತ್ರಗಳನ್ನು ವಿತರಿಸಿದಾಗ, ಯಾರಿಗೂ ಹಣದ ವಿಚಾರದಲ್ಲಿ ಹೊಣೆಯಾಗಬಾರದು ಅನ್ನುವ ಉದ್ಧೇಶದಿಂದ ನೀವು ಸಿನಿಮಾ ತೋರಿಸಿ, ಖರ್ಚನ್ನು ಕಳೆದು ಬರುವ ಹಣದಲ್ಲಿ 80:20 ಭಾಗ ಮಾಡಿ ಶೇ.20ನ್ನು ಸಂಘಕ್ಕೆ ಇಟ್ಟಿಕೊಳ್ಳಿ, ಇನ್ನು ಮಿಕ್ಕಿದ್ದನ್ನು ನಿರ್ಮಾಪಕರಿಗೆ ಕೊಡಿ ಎಂದು. ಹೀಗಿರುವಾಗ ಗ್ರೌಂಡನಲ್ಲಿ ಕಳಿಸಬೇಕಾದ ಕೊರಿಯರ್‌ನ್ನು ನೆಕ್ಸ್ಟ್‌ ಡೇ ಡೆಲಿವರಿ ಕಳುಹಿಸುತ್ತಾರೆ. ಖರ್ಚು ಹತ್ತರಷ್ಟಾಗುತ್ತದೆ. ಇನ್ನು ಹಂಚಿಕೊಳ್ಳಲು ಎಲ್ಲಿಂದ ಬರಬೇಕು ಹಣ?

ಕೆಳಗಿನ ಲೆಕ್ಕಚಾರ ನೋಡಿ(ಒಂದು ಅಂದಾಜಿನ ನೋಟ) :

ಒಂದು ಪ್ರಿಂಟ್‌(ಸಬ್‌ ಟೈಟಲ್‌ನೊಂದಿಗೆ) 1 ಲಕ್ಷ ರೂಪಾಯಿ(2500 ಡಾಲರ್‌ಗಳು)
ಒಂದು ಪ್ರಿಂಟ್‌(ಸಬ್‌ ಟೈಟಲ್‌ ಇಲ್ಲದೇ) 60 ಸಾವಿರ ರೂಪಾಯಿ(1500 ಡಾಲರ್‌ಗಳು)
ಬೆಂಗಳೂರಿನಿಂದ ಅಮೆರಿಕೆಗೆ ಬರಲು 500 ಡಾಲರ್‌ಗಳು
ಒಟ್ಟು 2000 ದಿಂದ 3000 ಡಾಲರ್‌ಗಳು
ಪ್ರತಿ ಊರಿನಲ್ಲೂ ಚಿತ್ರಮಂದಿರದ ಖರ್ಚು 300 ರಿಂದ 600 ಡಾಲರ್‌ಗಳು
ಒಂದು ಊರಿನಿಂದ ಇನ್ನೊಂದು ಊರಿಗೆ ಪ್ರಿಂಟ್‌ಕಳುಹಿಸಲು(ಸರಿಯಾಗಿ ಸೋಮವಾರವೇ ಕಳುಹಿಸಿದರೆ) 50ರಿಂದ 100 ಡಾಲರ್‌ಗಳು
ಪ್ರಿಂಟನ್ನು ಮಂಗಳವಾರ ಅಥವಾ ಬುಧವಾರ ಕಳುಹಿಸಿದರೆ... 250ರಿಂದ 300 ಡಾಲರ್‌

ಪೂರ್ತಿ ಖರ್ಚು ನೋಡಿದರೆ 400ರಿಂದ 900 ಡಾಲರವರೆವಿಗೂ ಖರ್ಚು ಬರುತ್ತದೆ. ಸ್ಯಾನ್‌ಹೊಸೆಯಂತ (ಅಮೆರಿಕನ್ನಡಿಗರ ಬೆಂಗಳೂರು ಅನ್ನಬೇಕು ಅಂತಹ ಸ್ಥಳ) ಸ್ಥಳದಲ್ಲೇ ಬರುವ ಜನ 200ರಿಂದ 300. ಇನ್ನು ಮಿಕ್ಕ ಸ್ಥಳಗಳಲ್ಲಿ ನೀವೇ ಲೆಕ್ಕಚಾರ ಹಾಕಿ. ಇನ್ನೆಷ್ಟು ಜನ ಬಂದಾರು ಎಂದು. ಪಾಪ ಬಡ ನಿರ್ಮಾಪಕನಿಗಾಗಲಿ ಅಥವಾ ಬೆಂಗಳೂರಿನಲ್ಲಿ ಕುಳಿತು ಅಮೆರಿಕೆಯಲ್ಲಿ ಡಾಲರ್‌ ಮರವಿದೆ, ಅಲ್ಲಿಗೆ ನನ್ನ ಸಿನಿಮಾ ಕಳುಹಿಸಿದರೆ ಡಾಲರ್‌ ಉದುರಬಹುದು ಎಂಬ ಕನಸುಕಾಣುವ ಹಂಚಿಕೆದಾರನಿಗಾಗಲಿ ಏನು ಪಾಲು ಬರುತ್ತದೆ ನೀವೆ ಊಹಿಸಿಕೊಳ್ಳಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X