ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಅಮೆರಿಕನ್ನಡಿಗರೇ, ಬನ್ನಿ ಪಿಕ್ಚರ್‌ಗೆ ಹೋಗೋಣ...’

By Staff
|
Google Oneindia Kannada News


ಮೊದ ಮೊದಲು ಇವನೇನು ಹುಚ್ಚನೇ ಅಥವಾ ಒಳಗೊಳಗೆ ದುಡ್ಡುಮಾಡಲು ಹೀಗೆ ಮಾಡುತ್ತಿದ್ದಾನೆಯೇ ಎಂದು ಅನುಮಾನ ಬಂತು. ಆದರೂ ನನ್ನ ಸ್ನೇಹಿತರಿಗೆ ನನ್ನ ಮೇಲೆ ನಂಬಿಕೆ ಇತ್ತು. 18 ತಿಂಗಳುಗಳಲ್ಲಿ ಸದಸ್ಯರಿಗೆ 6ರ ಬದಲು 8 ಸಿನಿಮಾ ತೋರಿಸಿದೆ. ಸದಸ್ಯರೆಲ್ಲರೂ ಖುಷಿಯೋ ಖುಷಿ. ಮುಂದಿನ ಕಂತಿಗೆ ಅವರೇ ಬಂದು ಸದಸ್ಯರಾದರು. ಸದಸ್ಯರಬಲ ಹೆಚ್ಚಿತು. ಕ್ಲಬ್ಬಿಗೆ ಲಾಭಗಳಿಸುವ ಹೊಣೆ ಎಲ್ಲ ಸದಸ್ಯರ ಮೇಲೂ ಬಿತ್ತು. ಅವರೇ ತಮ್ಮ ತಮ್ಮ ಸ್ನೇಹಿತರಿಗೆ ಹೇಳಲು ಶುರುಮಾಡಿದರು. 40-50 ಜನ ಬರುತ್ತಿದ್ದ ಸ್ಥಳದಲ್ಲಿ ಈಗ 200 ಮಂದಿಯವರೆಗೂ ಬರುತ್ತಾರೆ. ಸದಸ್ಯರು ಬರಲಿಲ್ಲ ಎಂದರೆ ಅವರಿಗೆ ಹಣವನ್ನೇನು ವಾಪಸ್‌ ಕೊಡುವುದಿಲ್ಲ. ಹೀಗೆ ಬೆಳೆಸಿದೆ ಕನ್ನಡ ಪ್ರೇಕ್ಷಕರನ್ನು ಲಾಸ್‌ ಏಂಜಲಿಸ್‌ನಲ್ಲಿ.

ರಮೇಶ್‌ ಚಿತ್ರ ಕೈಕಚ್ಚಿತು!

Kamal in Rama Shama Bhamaಇನ್ನು ಪ್ರಸಾದ್‌ ಬೆಂಗಳೂರಿಗೆ ತಮ್ಮ ಕಾರ್ಯಸ್ಥಳವನ್ನು ವರ್ಗಾಯಿಸಿದರು. ಇನ್ನು ಕನ್ನಡ ಚಿತ್ರಗಳಿಗೆ ಬರಡಾಗುವ ಸ್ಥಿತಿ ಬಂದಿತ್ತು. ಎಲ್ಲೋ ಯಾವುದೋ ನಟರೋ ನಿರ್ಮಾಪಕರೋ ಸ್ನೇಹದ ನಂಟಿಗೆ ಒಂದಿಬ್ಬರು ಚಿತ್ರಗಳನ್ನು ತರಿಸಿದ್ದರೂ ಅವರಿಗೆ ಅಷ್ಟಾಗಿ ಅಮೆರಿಕೆಯಲ್ಲಿ ಪರಿಚಯವಿಲ್ಲದಿದ್ದರಿಂದಲೋ ಅಥವಾ ಚಿತ್ರಹಂಚಿಕೆ ಹೇಗೆ ನಡೆಯುತ್ತದೆ ಎಂದು ತಿಳಿಯದೆಯೋ ದುಡ್ಡುಹಾಕಿ ಕೈ ಸುಟ್ಟು ಕೊಂಡಿದ್ದಾರೆ.

ರಮೇಶ್‌ ಅರವಿಂದರ ಚೊಚ್ಚಲ ನಿರ್ದೇಶನದ ‘ರಾಮ ಶಾಮ ಭಾಮ’ ಬಂದಾಗ ರಮೇಶ್‌ರವರು ನನ್ನ ಮತ್ತು ಅವರ ಆಪ್ತ ಸ್ನೇಹಿತ ಅರುಣ್‌ ಮಾಧವರನ್ನು ಹುರಿದುಂಬಿಸಿ ನೀವು ಕನ್ನಡಕ್ಕಾಗಿ ಈ ಕೆಲಸ ಮಾಡಬೇಕು ಎನ್ನುತ್ತಾ ನಮಗೆ ಚಿತ್ರವನ್ನು ಅಮೆರಿಕೆಯಲ್ಲಿ ಹಂಚಲು ಕೊಟ್ಟರು. ಯಾವುದೇ ಮುಂಗಡ ಹಣವನ್ನಾಗಲಿ ನಮ್ಮಿಂದ ಪತ್ರವನ್ನಾಗಲಿ ಬರೆಸಿಕೊಳ್ಳಲಿಲ್ಲ.

ತೆಲುಗು ತಮಿಳು ಚಿತ್ರಗಳು ವಾರಗಟ್ಟಲೆ ತುಂಬಿದ ಚಿತ್ರಮಂದಿರದಲ್ಲಿ ಓಡುತ್ತವೆ. ಕನ್ನಡ ಚಿತ್ರವೇಕೆ ಓಡುವುದಿಲ್ಲ ಎನ್ನುವ ಕೊರಗು. ಹೀಗಾಗಿ ಇದೂ ಒಂದು ಕನ್ನಡ ಸೇವೆ ಎಂದು ಚಿತ್ರ ಹಂಚಿಕೆಗೂ ಕೈ ಹಾಕಿದೆ. ಆದರೆ ಯಾವುದೇ ವ್ಯಾಪಾರದ ದೃಷ್ಟಿಯಿಂದಲ್ಲ. ಕನ್ನಡ ಚಿತ್ರ ನೋಡುವವರನ್ನು ಅಮೆರಿಕೆಯಲ್ಲಿ ಬೆಳೆಸಬೇಕು ಅನ್ನುವ ಒಂದು ಉದ್ಧೇಶವಷ್ಟೆ. ನನ್ನ ಜೊತೆಗೆ ಕೈ ಜೋಡಿಸಿದವರು ಅಟ್ಲಾಂಟ ನಾಗೆಂದ್ರ.

ಆದರೆ ಅದರಿಂದಾದ ಅನುಭವ ಕಹಿ ಅನುಭವಗಳೇ. ಅಮೆರಿಕೆಯಲ್ಲಿ ಹೆಚ್ಚು ಕನ್ನಡಿಗರಿರುವ ಸ್ಥಳವೆಂದರೆ ಸಿಲಿಕಾನ್‌ ವ್ಯಾಲಿ ಪ್ರದೇಶ. ಒಂದು ಅಂದಾಜಿನ ಪ್ರಕಾರ ಸುಮಾರು 2000ಕ್ಕೂ ಹೆಚ್ಚು ಕನ್ನಡ ಮಾತನಾಡುವ ಸಂಸಾರಗಳಿವೆ. ಅಂದರೆ ಸುಮಾರು 4000 ಕನ್ನಡಿಗರಿದ್ದಾರೆ ಎಂದರ್ಥವಲ್ಲವೇ. ನೀವು ಜಾಹೀರಾತನ್ನು ಕೊಟ್ಟು ಚಿತ್ರವನ್ನು ಮೂರು ದಿನ ಪ್ರದರ್ಶಿಸಿದರೆ ಬರುವ ಜನ 150ರಿಂದ 300. ಇನ್ನು ಜಾಹೀರಾತು ಹೇಗೆ? ಟೀವಿಗಳಲ್ಲಿ ಪತ್ರಿಕೆಗಳಲ್ಲಿ ಜಾಹೀರಾತು ಕೊಡುವಷ್ಟು ದುಡ್ಡೇ ಬರುವುದಿಲ್ಲ. ಕನ್ನಡ ಸಂಘದ ಮೂಲಕ ಎಲ್ಲರಿಗೂ ಇ-ಮೇಲ್‌ ಕಳಿಸಬೇಕು. ಇದರ ವೈಚಿತ್ರವನ್ನು ನೋಡಿ.

ಕನ್ನಡ ಸಂಘಗಳು ಏನು ಮಾಡುತ್ತಿವೆ?

ಕನ್ನಡ ಸಂಘದ ಉದ್ದೇಶ ಕನ್ನಡ ಉಳಿಸುವುದು ಬೆಳೆಸುವುದು. ಆದರೆ ಕನ್ನಡ ಚಿತ್ರವೊಂದು ನಡೆಯುತ್ತಿದೆ ಎಂದು ನಮ್ಮ ಕನ್ನಡಿಗರಿಗೇ ಹೇಳಲು 100ರಿಂದ 250 ಡಾಲರ್‌ ತೆತ್ತಬೇಕು. ಅದಕ್ಕೆ ನನ್ನ ವಿರೋಧವೇನೂ ಇಲ್ಲ. ಆದರೆ ಒಮ್ಮೆ ಕನ್ನಡ ಚಿತ್ರ ನೋಡುವ ಕನ್ನಡಿಗರನ್ನು ಬೆಳಸಬೇಕಲ್ಲವೇ? ಅದೂ ಕನ್ನಡ ಸಂಘದ ಕರ್ತವ್ಯವಲ್ಲವೇ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X