‘ಅಮೆರಿಕನ್ನಡಿಗರೇ, ಬನ್ನಿ ಪಿಕ್ಚರ್‌ಗೆ ಹೋಗೋಣ...’


ಅಮೆರಿಕಾದಲ್ಲಿ ಕನ್ನಡ ಸಿನಿಮಾ ತೋರಿಸೋರು ಯಾರು? ನೋಡೋರು ಯಾರು? ಇಲ್ಲಿನ ಕನ್ನಡ ಸಂಘಗಳು ಹೇಗಿವೆ? ಅಮೆರಿಕನ್ನಡಿಗರು ಹೇಗಿದ್ದಾರೆ? ಜೊತೆಗೆ ಅವರು ಹೇಗೆ ಯೋಚಿಸುತ್ತಾರೆ? -ಈ ಎಲ್ಲಾ ಪ್ರಶ್ನೆಗಳ ಸುತ್ತ ಮುತ್ತ ಒಂದು ಸುತ್ತು.

Ashok Patilಲಾಸ್‌ ಏಂಜಲಿಸ್‌ನಲ್ಲೇ ನೆಲೆಸಿ ದುಡಿಯುತ್ತಿರುವ ಅಚ್ಚ ಕನ್ನಡಿಗ ಅಶೋಕ್‌ ಪಾಟೀಲ್‌ ತಮ್ಮ ಬೇಸಿಗೆಯ ರಜೆಯಲ್ಲಿ ಕರ್ನಾಟಕಕ್ಕೆ ಬಂದು ಅಲ್ಲಿ ಒಂದು ಸಿನಿಮಾ ನಿರ್ದೇಶಿಸಿದರು. ಅದರ ಹೆಸರು ‘ಶಾಪ’. ಅದಕ್ಕೂ ಮುಂಚೆ ಇಲ್ಲೇ ಕೆಲಸ ಮಾಡಿಕೊಂಡು ಬಿಡುವಿನ ವೇಳೆಯಲ್ಲಿ ಸಿನಿಮಾ ಕಥೆ, ಸಂಭಾಷಣೆ ಬರೆದರು. ಅದನ್ನು ತಂದು ಹೆಮ್ಮೆಯಿಂದ ಲಾಸ್‌ ಏಂಜಲಿಸ್‌ನಲ್ಲಿ ತೋರಿಸಲು ಮುಂದಾದರು. ಸಾಕಷ್ಟು ಪ್ರಚಾರವನ್ನೂ ಕೊಟ್ಟರು. ‘ನಾನು ನಿಮ್ಮ ಊರಿನವ ನಾನೂ ಒಂದು ಕನ್ನಡ ಚಿತ್ರ ತೆಗಿದಿದ್ದೇನೆ. ಬಂದು ನೋಡಿ ಆಶೀರ್ವಾದ ಮಾಡಿ’ ಎಂದು ಕಳಕಳಿಯ ಮನವಿ ಮಾಡಿಕೊಂಡಿದ್ದರು.

ನಮ್ಮ ಊರಿನವ ಒಂದು ಚಿತ್ರ ತೆಗಿದಿದ್ದಾನೆ ಎಂದರೆ ಎಷ್ಟು ಹೆಮ್ಮೆ ಇರಬೇಕು. ಚಿತ್ರ ಹೇಗಾದರೂ ಇರಲಿ ಊರಿನ ಮಗನ ಕೆಲಸಕ್ಕಾದರೂ ಹುರಿದುಂಬಿಸಲು ಚಿತ್ರ ನೋಡಲು ಹೋಗಬೇಕಲ್ಲವೇ? ಬಂದ ಜನ 40ರಿಂದ 50 ಮಂದಿ. ಪಾಪ ಚಿತ್ರಮಂದಿರದ ಬಾಡಿಗೆ ಹುಟ್ಟಿತೋ ಇಲ್ಲವೋ? ಯಾಕೆ ಈ ಮಾತು ಹೇಳುತ್ತಿದ್ದೇನೆ ಎಂದರೆ ನಮ್ಮ ಅಮೆರಿಕನ್ನಡಿಗರ ಕನ್ನಡಾಭಿಮಾನ ಹೋಗಲಿ ನಮ್ಮೂರಿನ ಹುಡುಗ ಎನ್ನುವ ಅಭಿಮಾನವೂ ಇಲ್ಲವೇ?

ಹಾಗೆಂದು ಕನ್ನಡ ಚಿತ್ರರಂಗಕ್ಕೆ ಅಮೆರಿಕನ್ನಡಿಗರ ಕೊಡುಗೆ ಕಡಿಮೆ ಏನಿಲ್ಲ. ಅಶೋಕ್‌ ಪಾಟೀಲ್‌, ಮನೋಮೂರ್ತಿ, ಅಟ್ಲಾಂಟ ನಾಗೇಂದ್ರ, ಸೌಮ್ಯ, ರಾಮ್‌ಪ್ರಸಾದ್‌, ಅಮರನಾಥ ಗೌಡ, ಶಿಲ್ಪಾ ಜಗದೀಶ್‌ ಹೀಗೆ ಬಹುತೇಕ ಪ್ರತಿಭೆಗಳನ್ನು ನೀಡಿದೆ. ಕನ್ನಡ ಚಿತ್ರರಂಗದ ಆರತಿ, ಮಾಧವಿ, ಗೀತಾರಂತ ಮಾಜಿ ನಟಿಯರೂ ಇಲ್ಲಿದ್ದಾರೆ. ಆದರೆ ಇವರಲ್ಲಿ ಯಾರೂ ಅಮೆರಿಕೆಯಲ್ಲಿ ಯಾವ ಕನ್ನಡ ಸಿನಿಮಾಕ್ಕೆ ಬಂದ ಸುದ್ದಿ ನನಗೆ ಬಂದಿಲ್ಲ. ಸಿನಿಮಾಕ್ಕೆ ಹೋಗಲಿ ಕನ್ನಡ ಸಂಘದ ಸುದ್ಧಿಯನ್ನೇ ಕೇಳಿಲ್ಲವೆಂದರೆ ಆಶ್ಚರ್ಯವೇನಿಲ್ಲ.

ಕನ್ನಡ ಚಿತ್ರಗಳ ಪ್ರದರ್ಶನ ಮತ್ತು ಲಾಭ-ನಷ್ಟ

Chirag Entertainersನನಗೆ ಅಮೆರಿಕ ಬಂದು ಮೂರು ವರ್ಷದವರೆವಿಗೂ ಅಮೆರಿಕೆಯಲ್ಲೂ ಕನ್ನಡ ಚಿತ್ರ ತೋರಿಸುತ್ತಾರೆ ಎಂದು ಗೊತ್ತಿರಲಿಲ್ಲ. ಆದರೆ ಆ ಮೂರು ವರ್ಷ ಬಿಟ್ಟರೆ ಅಮೆರಿಕೆಯಲ್ಲಿ ಪ್ರದರ್ಶನಗೊಂಡ ಬಹುಶಃ ಎಲ್ಲಾ ಕನ್ನಡ ಚಿತ್ರಗಳನ್ನೂ ನೋಡಲು ಪ್ರಯತ್ನ ಪಟ್ಟಿದ್ದೇನೆ. ನನಗೆ ಅಮೆರಿಕೆಯಲ್ಲಿ ಚಿತ್ರ ಹಂಚಿಕೆ ಬಗ್ಗೆ ಏನೂ ತಿಳಿದಿರಲಿಲ್ಲ. ನಾನು ಮುಂಚೆ ಇದ್ದಿದ್ದು ನ್ಯೂಜೆರ್ಸಿ. ಅಲ್ಲಿ ಆಗಾಗ್ಗೆ ಒಂದೊಂದು ಚಿತ್ರ ಬರುತ್ತಿತ್ತು. ತಪ್ಪದೇ ಅದನ್ನು ವೀಕ್ಷಿಸುತ್ತಿದ್ದೆ. ಆದರೆ ಲಾಸ್‌ ಏಂಜಲಿಸ್‌ಗೆ ಬಂದಾಗ ಅಲ್ಲಿಗೆ ಚಿತ್ರ ಬರುವುದೇ ವಿರಳವಾಗಿತ್ತು. ಹೇಗೋ ಸ್ಯಾನ್‌ಹೊಸೆಯ ಬಳಿ ಇದ್ದ ಚಿರಾಗ ಎಂಟರ್‌ ಪ್ರೈಸಸ್‌ನ ಪ್ರಸಾದ್‌ರವರನ್ನು ಪರಿಚಯ ಮಾಡಿಕೊಂಡು ಲಾಸ್‌ ಏಂಜಲಿಸ್‌ನಲ್ಲಿ ಕನ್ನಡ ಚಿತ್ರ ಪ್ರದರ್ಶನಗೊಳ್ಳದಿರಲು ಕಾರಣವನ್ನು ಪತ್ತೆ ಹಿಡಿದೆ.

ನನಗೆ ಲಾಸ್‌ ಏಂಜಲಿಸ್‌ ಬಳಿಯ ಒಂದು ಭಾರತೀಯ ಚಿತ್ರಗಳನ್ನೇ ತೋರಿಸುವ ಒಂದು ಚಿತ್ರಮಂದಿರವಿದೆ ಅಲ್ಲಿ ತುಂಬಿದ ಚಿತ್ರಮಂದಿರಗಳಲ್ಲಿ ಓಡುವ ತೆಲುಗು, ತಮಿಳು ಚಿತ್ರಗಳನ್ನು ನೋಡಿದಾಗಲೆಲ್ಲಾ ಹೊಟ್ಟೆ ಉರಿದು ಹೋಗುತ್ತಿತ್ತು. ಕನ್ನಡ ಚಿತ್ರವನ್ನು ತೋರಿಸಲೇಬೇಕೆಂಬ ಛಲ ಬಂತು. ಒಂದು ಯೋಜನೆಯನ್ನು ಹಾಕಿದೆ. ಆಗುವ ಖರ್ಚು, ಬರುವ ಲಾಭ ಎಲ್ಲಾ ಲೆಕ್ಕ ಹಾಕಿದೆ. ಆ ಬರುವ ಲಾಭದಿಂದ ನನ್ನ ಹೆಂಡತಿಗೆ ಸೀರೆಯನ್ನು ಕೊಡಿಸಲಾಗುವುದಿಲ್ಲ ಅಂದುಕೊಂಡೆ. ಆದ್ದರಿಂದ ಲಾಭದ ಹಣ ಮತ್ತೆ ವೀಕ್ಷಕರಿಗೇ ಹೋಗುವ ಹಾಗೆ ಯೋಜನೆ ಹಾಕಿದೆ. ಈ ಯೋಜನೆ ಹೀಗಿತ್ತು:

ಕನ್ನಡ ಪಿಕ್ಚರ್‌ ಕ್ಲಬ್‌ ಎಂಬ ಸಂಸ್ಥೆಯನ್ನು ತೆರೆದೆ. ಅದರಲ್ಲಿ ಸದಸ್ಯರಾಗಲು ಗಂಡ ಹೆಂಡತಿಗೆ 100 ಡಾಲರ್‌ ಹಾಗೂ ಒಂಟಿ ಸದಸ್ಯತ್ವಕ್ಕೆ 60 ಡಾಲರ್‌ ನಿಗದಿಪಡಿಸಿದೆ. ಅವರ ಹಣಕ್ಕೆ ಕನಿಷ್ಟಪಕ್ಷ 6 ಸಿನಿಮಾಗಳನ್ನು ಉಚಿತವಾಗಿ ತೋರಿಸುತ್ತೇನೆ ಮತ್ತು ಮಕ್ಕಳಿಗೆ ಪ್ರವೇಶ ಉಚಿತ ಎಂದೆ. ಯಾವುದೇ ಸಿನಿಮಾದಿಂದ ಬಂದ ಲಾಭ ಅಥವ ನಷ್ಟವನ್ನು ಸದಸ್ಯರ ಮೇಲೇ ಹಾಕುವೆ ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+