• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾನು ಕೈಲಾಸಕ್ಕೆ ಹೋಗಿದ್ದೆ : ಸೀತಾ ಕೇಶವ, ಸಿಡ್ನಿ

By Staff
|

Kailasa Parvataಮು0ದೆ 17,000 ಅಡಿ ಎತ್ತರದಲ್ಲಿರುವ ಡಾರ್ಚನ್‌ನಿ0ದ 53 ಕಿಲೋಮೀಟರಿನ ಪರಿಕ್ರಮ. ಮಾನಸ ಸರೋವರದಲ್ಲಿ ಸ್ನಾನಮಾಡಿ, ಕೈಲಾಸ ಪರ್ವತ ಪ್ರದಕ್ಷಿಣೆ ಮಾಡುವುದರಿಂದ ಜನ್ಮ ಜನ್ಮಾಂತರದ ಪಾಪಗಳು ನಾಶವಾಗುತ್ತೆಂದು ಒ0ದು ನ0ಬಿಕೆ. ಕೇವಲ ಈ ಜನ್ಮದ ಪಾಪಗಳನ್ನು ತೊಳೆಯಬೇಕಾದರೆ ಒಂದು ಸಾರಿ ಕೈಲಾಸ ಪರ್ವತ ಪರಿಕ್ರಮ ಮಾಡಿದರೆ ಸಾಕು. ನಮಗೆ ಮಾತ್ರವಲ್ಲ, ಜೈನರಿಗೆ, ಬೌದ್ಧರಿಗೆ, ಟಿಬೆಟಿಯನರಿಗೆ ಪರಿಕ್ರಮದಲ್ಲಿ ತಮ್ಮದೇ ಆದ ನ0ಬಿಕೆಗಳಿವೆ.

ಯಮದ್ವಾರದಿ0ದ ಪ್ರಾರ0ಭ; ಸರಿಯಾದ ರಸ್ತೆ ಇಲ್ಲದ ಕಾರಣ ಪ್ರದಕ್ಷಿಣೆ ಮಾಡಲು ಕಾಲ್ನಡಿಗೆ ಅಥವಾ ಕುದುರೆ ಸವಾರಿ ಮಾಡಬೇಕು. ನಮ್ಮ ಸಾಮಾನು, ಸರಜಾಮುಗಳನ್ನೆಲ್ಲಾ ಯಾಕ್ಸ್‌ ಹೊತ್ತು ತರುತ್ತದೆ. ಮೊದಲ ದಿವಸ 24 ಕಿ.ಮಿ, ಎರಡನೆಯ ದಿವಸ 9 ಕಿ.ಮಿ, ಮೂರನೆ ದಿವಸ 19 ಕಿ.ಮಿ. ಪರಿಕ್ರಮ ಮಾಡುವಾಗ ರಾವಣ ಪರ್ವತ, ಹನುಮಾನ್‌ ಪರ್ವತ, ಅಷ್ಟಪದ್‌, ನ0ದಿ ಶಿಖರ ಎಲ್ಲದರ ದರ್ಶನವಾಗುತ್ತೆ.

22 ಕಿಲೋಮೀಟರ್‌ ದಾರಿಸಾಗಿಸಿ ನಾವು ಧೀರಾಪುಕ್‌ಗೆ ಬ0ದೆವು. ನಮಗೆ ಸಹಾಯ ಮಾಡಿದ ಷರ್ಪಾಗಳಿ0ದ ನನ್ನ ನಡಿಗೆಗೆ ಪ್ರಶ0ಸೆಕೂಡ! ಎರಡು ಶಿಖರಗಳ ಮಧ್ಯೆ ಇರುವ ಇದು ಕೈಲಾಸ ಪರ್ವತಕ್ಕೆ ಅತಿ ಸಮೀಪ. ಎರಡನೆ ದಿವಸ ಬಹಳ ಕಠಿಣವಾದದ್ದು. ಮಳೆ, ಹಿಮ ಯಾವುದರ ತೊ0ದರೆಯೂ ಇಲ್ಲದೆ ನಾವು 19,600 ಅಡಿ ಎತ್ತರದ ಡ್ರೋಲ್ಮಾಲಾಪಾಸ್‌ ತಲಪಿದೆವು. ಇಲ್ಲಿ0ದ ಬರುತ್ತಾ ಗೌರಿ ಕು0ಡ್‌ (ಪಾರ್ವತಿ ಸ್ನಾನ ಮಾಡುತ್ತಿದ್ದ ಸ್ಥಳ) ದರ್ಶನ ವಾಯಿತು. ಈ ಮಾರ್ಗದ ಬಗ್ಗೆ ಹೇಳಲೇ ಬೇಕು. ಬ0ಡೆಗಳ ಮಧ್ಯೆ ನಾವೇ ದಾರಿ ಮಾಡಿಕೊಳ್ಳ ಬೇಕು. ಮಧ್ಯೆ ಯಾಕ್ಸ್‌ಗಳು ಬರುತ್ತಿರುತ್ತವೆ; ಅವಕ್ಕೆ ದಾರಿ ಬಿಡಬೇಕು. ಮತ್ತೆ ಹಿಮ ಬೇರೆ, ಜಾಗೃತರಾಗಿರಬೇಕು! ಅ0ತೂ ಸಟ್ಲೆಜ್‌ ನದಿಯ ತೀರದಲ್ಲಿ ನಮಗಾಗಿ ಕಾದಿದ್ದ ಟೆ0ಟ್‌ ಒ0ದನ್ನು ರಾತ್ರಿ ತಲುಪಿದೆವು.

ವಿಶೇಷವಾದ ಅನುಭವ; ಹುಳು, ಹುಪ್ಪಟೆಗಳ ಕಾಟವಿಲ್ಲ. ಇನ್ನು ಕೊನೆಯ ದಿವಸ, ವಾಪಸ್ಸಾಗುವ ದಿನ. ನಮ್ಮಲ್ಲಿ ಐವರು ಮಿಕ್ಕ 17 ಕಿಲೋಮೀಟರ್‌ ಹಾದಿಯನ್ನು ಪೂರ್ತಿ ಕಾಲ್ನಡಿಗೆಯಲ್ಲೇ ಮಾಡಬೇಕೆ0ಬ ಹಟ ತೊಟ್ಟೆವು. ಏರಿಳಿತಗಳೇನೇ ಇದ್ದರೂ ಈ ನಡಿಗೆ ನಮಗೆ ಉಲ್ಲಾಸ, ತೄಪ್ತಿಗಳನ್ನು ನೀಡಿತು. ಹೀಗೆ ಹಿ0ತಿರುಗುವಾಗ ಹಾರ್ಚು ಎ0ಬಲ್ಲಿ ಒ0ದು ದಿನ ಇದ್ದೆವು.

ಒ0ದು ವಿಶೇಷ. ಯಾತ್ರೆಯಲ್ಲಿ ಹಸಿವು ಕಡಿಮೆ. ಆದರೆ ಕುಡಿದ ನೀರಿನ ಲೆಕ್ಕ ಯಾರು ಇಟ್ಟಿದ್ದಾರೊ? ಎಷ್ಟು ಲೀಟರ್‌ ಆದವೊ?ದಾಟಿ ಅಲ್ಲಿ ಅನ್ನಪೂರ್ಣ ಇ0ಡಿಯನ್‌ ರೆಸ್ಟೊರೆ0ಟ್‌ ಕ0ಡಾಗ ಹಸಿವು ತಾನಾಗೇ ಆಯಿತು; ತಾಲಿ ಊಟ ಸೊಗಸಾಗಿತ್ತು. ನಮ್ಮ ಮನೆಯಲ್ಲಿ ಸಾರಿನ ಊಟವಾದ ಮೇಲೆ ಅಲ್ಲಿಯ ದಾಲ್‌ ಬಾಯಿಗೆ ಹಿತವಾಗಿತ್ತು.

ದೂರದ ಸಿಡ್ನಿಯಲ್ಲಿರುವ ನಮ್ಮನ್ನು ಸೆಳೆಯುವ ಹಿಮಾಲಯಾ, ಗ0ಗೆ, ಬದರಿ, ಕೇದಾರಗಳನ್ನು ನೋಡುವ0ತಾಗಿದ್ದು ಆ0ತರಿಕವಾಗಿ ಸ0ತೋಷವನ್ನು ಸದಾ ನೀಡುತ್ತಿರುತ್ತದೆ. ಮು0ದೆ ಮತ್ತಾವ ಮೋಹನ ಮುರಲಿ ಎಲ್ಲಿಗೆ ನಮ್ಮನ್ನು ಕರೆಯುತ್ತದೆಯೋ ...ನೋಡಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more